Breaking News

Yearly Archives: 2024

ಕಲಾಪವನ್ನು ಕೊಂದು ಹಾಕಿದ “ರಾಮ” ಬಾಣ – ಬಿಜೆಪಿ ಕಾಂಗ್ರೆಸ್‌ ನಡುವೆ ವಾಕ್ಸಮರ!

ಬೆಂಗಳೂರು : ಬುಧವಾರ ಬಜೆಟ್‌ ಅಧಿವೇಶನದ (Budget Session) ಮೂರನೇ ದಿನ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಭಾಷಣದ ವೇಳೆ ನಡೆದ ರಾಮಮಂದಿರದ ಪ್ರಸ್ತಾಪ ಕಾಂಗ್ರೆಸ್‌ (Congress) ಮತ್ತು ಬಿಜೆಪಿ(BJP) ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಎರಡೂ ಪಕ್ಷಗಳ ಸದಸ್ಯರು ತಮ್ಮ ಹತೋಟಿಯನ್ನು ಕಳೆದುಕೊಂಡು ಕೂಗಾಟದಲ್ಲಿ ತೊಡಗಿದ್ದ ಕಾರಣ ಸುಮಾರು ಒಂದು ತಾಸುಗಳ ಕಾಲ ಮಾರುಕಟ್ಟೆಯ ವಾತಾವರಣ ಉಂಟಾಗಿತ್ತು. ರಾಜ್ಯಪಾಲರ ಭಾ಼ಷಣದ ಮೇಲಿನ ವಂದನಾ ನಿರ್ಣಯವನ್ನು ಅರ್ಪಿಸುವ ವೇಳೆ …

Read More »

ಕುಕ್ಕರ್‌ ಬ್ಲಾಸ್ಟ್‌ ಮಾಡಿದ್ದ ಬ್ರದರ್‌ ಬಗ್ಗೆ ಹೇಳುತ್ತೀರಿ, ಹಾವೇರಿ ಸಿಸ್ಟರ್‌ ಬಗ್ಗೆಯೂ ಮಾತಾಡಿ: ಅಶೋಕ್!

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕರ್ನಾಟಕದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ (Moral Policing) ಬಗ್ಗೆ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ವಿಧಾನಸಭೆ ಕಲಾಪದ ವೇಳೆ ಪ್ರಶ್ನೆ ಮಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok), ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಬfgfge ಪ್ರಸ್ತಾಪ ಮಾಡಿದರು.   ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಹಾವೇರಿಯಲ್ಲಿ …

Read More »

ಗೋವಾ, ಗುಜರಾತ್​, ಅಸ್ಸಾಂನಲ್ಲಿ ಲೋಕಸಭಾ ಅಭ್ಯರ್ಥಿಗಳ ಘೋಷಿಸಿ ಕಾಂಗ್ರೆಸ್​ಗೆ ಸಂದೇಶ ರವಾನಿಸಿದ ಆಮ್​ ಆದ್ಮಿ ಪಕ್ಷ

Aam Aadmi Party)ವು ಮೂರು ರಾಜ್ಯಗಳಲ್ಲಿ ಲೋಕಸಭಾ ಅಭ್ಯರ್ಥಿ(Lok Sabha Candidates)ಗಳನ್ನು ಘೋಷಿಸುವ ಮೂಲಕ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ(I.N.D.I.A)ದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಆಮ್​ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಎರಡು ಸ್ಥಾನಗಳಿಗೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಗೋವಾದಲ್ಲಿ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಗೋವಾ ಮತ್ತು ಗುಜರಾತ್‌ನಲ್ಲಿ …

Read More »

ವಿನಯ ಕುಲಕರ್ಣಿ ಅರ್ಜಿ ವಿಚಾರಣೆ ಶೀಘ್ರ ಇತ್ಯರ್ಥಗೊಳಿಸುತ್ತೇನೆ: ನ್ಯಾಯಮೂರ್ತಿ

ಬೆಂಗಳೂರು: ‘ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿಪಡಿಸಿರುವಲ್ಲಿ ಸಾಕಷ್ಟು ದೋಷಗಳಿವೆ’ ಎಂದು ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಶಾಸಕ ವಿನಯ ಕುಲಕರ್ಣಿ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.   ‘ನನ್ನ ವಿರುದ್ಧ ಹೊರಿಸಲಾಗಿರುವ ದೋಷಾರೋಪಣೆ ಮತ್ತು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ …

Read More »

ಮಹದಾಯಿ ಯೋಜನೆಗಾಗಿ ಮತ್ತೆ ಹೋರಾಟ: ಸೊಬರದಮಠ

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿ ಮಾಡುವ ವಿಷಯವನ್ನು ರಾಜಕೀಯ ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರಗಳು ರೈತರ ಅಳಲು ಆಲಿಸುತ್ತಿಲ್ಲ. ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಎಲ್ಲ ರೀತಿಯಿಂದಲೂ ಮತ್ತೆ ತೀವ್ರ ಸ್ವರೂಪದ ಹೋರಾಟ ಆರಂಭಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.   ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಈ ಬಗ್ಗೆ ಚರ್ಚಿಸುವಾಗ ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ …

Read More »

ರಸ್ತೆ ಕಾಮಗಾರಿ | ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ; ಸಂಕಷ್ಟ!

ಹುಬ್ಬಳ್ಳಿ: ನಗರದಲ್ಲಿ ಪ್ರಮುಖ ರಸ್ತೆಗಳು ಸಂಧಿಸುವ ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧೆಡೆ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸಲಾಗಿದೆ. ಇದರಿಂದ ಚನ್ನಮ್ಮ ವೃತ್ತದಲ್ಲಿ ಸೋಮವಾರ ದಿನವಿಡೀ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು.   ಚನ್ನಮ್ಮ ವೃತ್ತದಿಂದ ಯುರೇಕಾ ಟವರ್‌ ಪಕ್ಕದಿಂದ ನವಲಗುಂದದತ್ತ ವಾಹನಗಳು ಸಂಚರಿಸುವುದನ್ನು ಬಂದ್‌ ಮಾಡಲಾಗಿದ್ದು, ಪರ್ಯಾಯವಾಗಿ ಕಾಮತ್‌ ಹೋಟೆಲ್‌ ಎದುರು ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಕ್ಕಟ್ಟಿನಲ್ಲಿ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತಿದ್ದು, …

Read More »

ಅತಿಯಾದ ಬಿಸಿಲಿಗೆ ಹೈರಾಣಾದ ಜನರು

ಹುಬ್ಬಳ್ಳಿ: ಪ್ರಸಕ್ತ ವರ್ಷ ಬೇಸಿಗೆಗೂ ಮುನ್ನ ಫೆಬ್ರುವರಿಯಲ್ಲೇ ಬಿಸಿಲು ಹೆಚ್ಚಾಗಿದ್ದು, ಅತಿ ತಾಪಮಾನವು ಜನರನ್ನು ಹೈರಾಣಾಗಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 36.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾವೇರಿಯಲ್ಲಿ ದಾಖಲಾಗಿದೆ. ಕೋಲಾರದಲ್ಲಿ ಅತಿ ಕಡಿಮೆ 30.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಫೆಬ್ರುವರಿ 9ರಂದು 34.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. …

Read More »

ಸಮಸ್ಯೆಗಳ ಆಗರವಾದ ಹೊಸೂರ ಪ್ರಾದೇಶಿಕ ಬಸ್‌ ನಿಲ್ದಾಣ

ಹುಬ್ಬಳ್ಳಿ: ‘ಹೊಸ ಕೋರ್ಟ್‌ ಕಡೆಯಿಂದ ಹೊಸೂರ ಬಸ್‌ ನಿಲ್ದಾಣದೊಳಗೆ ಬಂದು ಗ್ರಾಮೀಣ ಬಸ್‌ಗಳ ಕಡೆ ಹೋಗಲು ವೃದ್ಧರಿಗೆ ಮತ್ತು ಅಂಗವಿಕಲರಿಗೆ ತುಂಬಾ ಕಷ್ಟವಾಗುತ್ತಿದೆ. ಮೇಲಿನ ಅಂತಸ್ತಿಗೆ ಹೋಗಲು ನಿಲ್ದಾಣದಲ್ಲಿ ಲಿಫ್ಟ್‌ ಮಾಡಿದ್ದು, ಅದು ಕೆಟ್ಟು ನಿಂತು ವರ್ಷವಾಗಿದೆ. ಈವರೆಗೆ ದುರಸ್ತಿಯಾಗಿಲ್ಲ. ನಮ್ಮ ಸಂಕಷ್ಟ ಯಾರೂ ಕೇಳುತ್ತಿಲ್ಲ’. ಇಲ್ಲಿನ ಹೊಸೂರ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಅದರಲ್ಲೂ ವೃದ್ಧರು, ಅಂಗವಿಕಲರು, ಅನಾರೋಗ್ಯಪೀಡಿತರು, ಮಹಿಳೆಯರು ತೋಡಿಕೊಳ್ಳುವ ಸಂಕಷ್ಟವಿದು. ‘ಹೆಸರಿಗೆ ಮಾತ್ರ ಲಿಫ್ಟ್ ಇದೆಯೇ ಹೊರತು …

Read More »

ಕ್ರೀಡಾ ವಸತಿ ಶಾಲೆಗೆ ಕೋಸಂಬೆ ಭೇಟಿ; ಅವ್ಯವಸ್ಥೆಗೆ ತೀವ್ರ ಅಸಮಾಧಾನ

ಬೀದರ್‌: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಸೋಮವಾರ ಸಂಜೆ ನಗರದ ನೆಹರೂ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ನೆರವಿಗೆ ಕಾಯುತ್ತಿದೆ ಆಟ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಭಾನುವಾರ ವರದಿ ಪ್ರಕಟಿಸಿ, ಕ್ರೀಡಾ ವಸತಿ ಶಾಲೆಯಲ್ಲಿ ಸೌಕರ್ಯಗಳ ಕೊರತೆ ಇದೆ ಎಂಬ ಅಂಶ ಉಲ್ಲೇಖಿಸಿತ್ತು. ವರದಿ ಆಧರಿಸಿ ಕೋಸಂಬೆ ಅವರು ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ …

Read More »

ಮನಸೂರೆಗೊಂಡ ನೂಪುರ ನೃತ್ಯೋತ್ಸವ

ಬೀದರ್‌: ಇಲ್ಲಿನ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿಏರ್ಪಡಿಸಿದ್ದ ನೂಪುರ ನೃತ್ಯ ಅಕಾಡೆಮಿಯ 24ನೇ ರಾಜ್ಯ ‘ನೂಪುರ ನೃತ್ಯೋತ್ಸವ’ ಸಭಿಕರ ಮನಸೂರೆಗೊಳಿಸಿತು. ಅಕಾಡೆಮಿಯ ನಿರ್ದೇಶಕಿ ಉಷಾ ಪ್ರಭಾಕರ ಹಾಗೂ ಅವರ ತಂಡದವರು ಪ್ರಸ್ತುತಪಡಿಸಿದ ಸಮೂಹ ನೃತ್ಯ, ರಾಮಾಯಣದ ಸನ್ನಿವೇಶಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನೃತ್ಯ, ಸಂಗೀತ, ಜಾನಪದ ಕಲೆಗಳ …

Read More »