Breaking News

Yearly Archives: 2024

ಉತ್ತಮ ಸೇವೆ ಸಲ್ಲಿಸಲು ಸಹಕಾರ ಸಂಘಕ್ಕೆ ಸಲಹೆ: ಪವನ್ ಕತ್ತಿ

ಹುಕ್ಕೇರಿ: ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಉತ್ತಮ ಸೇವೆ ನೀಡುವ ಸಂಘ ಸಂಸ್ಥೆಗಳು ದೀರ್ಘಾವಧಿ ಸೇವೆ ಸಲ್ಲಿಸಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಹೇಳಿದರು. ಶುಕ್ರವಾರ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ‘ಶಿರಗಾಂವ ಸೌಹಾರ್ದ ಸಹಕಾರ ಸಂಘ’ ಉದ್ಘಾಟಿಸಿ ಮಾತನಾಡಿದರು.   ‘ಸಹಕಾರದಿಂದ ಆರ್ಥಿಕ ವ್ಯವಹಾರದ ಜತೆ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬೀಜ, ರಸಗೊಬ್ಬರ ಮತ್ತು ಕ್ರಮಿನಾಶಕ ಔಷಧ ಮಾರಾಟ ಪ್ರಾರಂಭಿಸಿರುವುದು ಶ್ಲಾಘನೀಯ’ ಎಂದರು. ಸಹಕಾರ ಸಂಘದ …

Read More »

ಹುಕ್ಕೇರಿ: ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐನಿಂದ ಪ್ರತಿಭಟನೆ

ಹುಕ್ಕೇರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಲು ಉದ್ಧೇಶಿಸಿರುವ ‘ವಕ್ಫ್‌ ತಿದ್ದುಪಡಿ ಮಸೂದೆ 2024’ ಅನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಮುಸ್ಲಿಮರು ಸೇರಿ ಎಸ್‌ಡಿಪಿಐ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ನೂರಾರು ಸದಸ್ಯರು ಮೆರವಣಿಗೆ ಮೂಲಕ ಪ್ರತಿಭಟಿಸುತ್ತ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.   ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಬಂದು ಕೆಲ ಸಮಯ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಟ್ರಾಫಿಕ್ ಜಾಂ ಆಗದಂತೆ ಪೊಲೀಸ್ …

Read More »

ರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌

ರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌ ಹುಬ್ಬಳ್ಳಿ: ರೈತರ ಹೆಸರು ಹೇಳಿ ಹಾಲಿನ‌ ದರ ಹಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ, ಇದೊಂದು ದಿವಾಳಿ ಸರ್ಕಾರವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ (Prahlada Joshi) ಆಕ್ರೋಶ‌ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ರೈತರಿಗೆ ಹಾಲು ಉತ್ಪಾದನೆ ಪ್ರೋತ್ಸಾಹ ಧನ ಸ್ಥಗಿತಗೊಳಿಸಿತು. ಇದೀಗ ರೈತರ ಹೆಸರಲ್ಲಿ ದರ‌ ಹಚ್ಚಿಸಿ ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿದೆ. ದರ ಹೆಚ್ಚಳದ …

Read More »

ತಾಯಂದಿರನ್ನೂ ಮಂಚಕ್ಕೆ ಕರೆಯುವ ಮುನಿರತ್ನ ನಾಯ್ಡು: ಡಿ.ಕೆ. ಸುರೇಶ್ ಆರೋಪ ಏನು?

ಮುನಿರತ್ನ ನಾಯ್ಡು ವಿರುದ್ಧ ಕ್ಷಣ ಕ್ಷಣಕ್ಕೂ ಆಕ್ರೋಶದ ಬಿರುಗಾಳಿ ಹೆಚ್ಚಾಗುತ್ತಿದ್ದು, ಈ ಮೂಲಕ ಕರ್ನಾಟಕದಲ್ಲಿ ಶಾಸಕ ಮುನಿರತ್ನ ನಾಯ್ಡು ಆಡಿಯೋ ಬಿರುಗಾಳಿ ಎಬ್ಬಿಸುತ್ತಿದೆ. ಇದೇ ಸಮಯದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ ಸಂಚಲನ ಸೃಷ್ಟಿಸುವ ಆರೋಪ ಮಾಡಿದ್ದು, ತಾಯಂದಿರನ್ನೂ ಮಂಚಕ್ಕೆ ಕರೆಯುವ ಮುನಿರತ್ನ ನಾಯ್ಡು? ಎಂಬ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಾಗಾದ್ರೆ ಈಗ ಮಾಜಿ ಸಂಸದ ಡಿ.ಕೆ. ಸುರೇಶ್ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ವಿರುದ್ಧ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಕಿಲ್ಲಾ ತೊರಗಲ್ಲ ಗ್ರಾಮದ ಶ್ರೀ ದುರ್ಗಾ ದೇವಿಯ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ …

Read More »

ದರ್ಶನ್​ ಬೆರಳ ಸನ್ನೆ ಹಿಂದಿರುವ ಸೀಕ್ರೆಟ್​ ಇದೇನಾ?; ಫ್ಯಾನ್ಸ್​ ಹೇಳ್ತಿರುವ ವಿಷಯ ಹೀಗಿದೆ ನೋಡಿ..

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಸೇರಿ 17 ಮಂದಿ ಆರೋಪಿಗಳು ಪ್ರಸ್ತುತ ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್​​​ನನ್ನು ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು. ಬಳ್ಳಾರಿ ಜೈಲಿನಲ್ಲಿ ಇರಲು ನನಗೆ ಕಷ್ಟವಾಗುತ್ತಿದೆ ಎಂದು ನಟ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್​ ಅವರು ಇತ್ತೀಚೆಗೆ ನಡೆದುಕೊಂಡಿರುವ ರೀತಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ ಅವರ ಫ್ಯಾನ್ಸ್​​ ಅದಕ್ಕೊಂದು ವಿಶ್ಲೇಷಣೆ ನೀಡುತ್ತಿದ್ದಾರೆ. …

Read More »

ವಕ್ಫ್‌ ತಿದ್ದುಪಡಿ ಕಾಯ್ದೆ ರದ್ದುಪಡಿಸಿ: ಎಸ್‌ಡಿಪಿಐ

ಬೆಳಗಾವಿ: ವಕ್ಫ್‌ ಮಂಡಳಿಯ ಹಕ್ಕು ಮತ್ತು ಸ್ವಾತಂತ್ರ್ಯ ಮೊಟಕುಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಕ್ಫ್‌ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ಮುಸ್ಲಿಮರಿಗೆ ಮಾರಕವಾಗಿರುವ ಈ ಕಾಯ್ದೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಇದನ್ನು ರದ್ದುಪಡಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದರು. ತಮ್ಮ ಬೇಡಿಕೆ ಈಡೇರಿಸುವಂತೆ …

Read More »

ದೇವರಿಗೂ ಕಳ್ಳರ ಕಾಟ: ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖದೀಮರು

ಬೆಂಗಳೂರು: ಮನೆಗಳ್ಳತನ, ಸರಗಳ್ಳತನ, ಹಣ, ಬೈಕ್ ಕಳ್ಳತನ ಮಾಡುವವರನ್ನು, ದೇವರ ಮೂರ್ತಿ ಮೇಲಿನ ಚಿನ್ನಾಭರಣಗಳನ್ನು ಕದಿಯುವವರನ್ನು ನೊಡಿದ್ದೇವೆ. ಆದರೆ ಇದೀಗ ದೇವರ ಮೂರ್ತಿಯನ್ನೂ ಕಳ್ಳರು ಬಿಡುತ್ತಿಲ್ಲ. ಕಳ್ಳರಿಗೆ ದೇವರ ಮೇಲೂ ಸ್ವಲ್ಪವೂ ಭಯ-ಭಕ್ತಿ ಎಂಬುದು ಇದ್ದಂತಿಲ್ಲ. ದೇವರಾದರೇನು? ಯಾರಾದರೇನು? ಕದಿಯುವುದೇ ಕಾಯಕವನ್ನಾಗಿ ಮಾಡಿಕೊಂಡಿರುವ ಖದೀಮರು ಗಣಪತಿಯ ಮೂರ್ತಿಯನ್ನೇ ಕದ್ದು ಪರಾರುಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಡರಾಯನಹಳ್ಳಿಯ ಅಂದ್ರಳ್ಳಿ ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ರಾತ್ರೋರಾತ್ರಿ ಗಣಪತಿ ಮೂರ್ತಿಯನ್ನು …

Read More »

ಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ : ಯತ್ನಾಳ್‌

ಬೆಂಗಳೂರು,ಸೆ.13-ಪಕ್ಷದಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ಸಂಘ ಪರಿವಾರದ ನಾಯಕರು ಪರಿಹರಿಸಿದ್ದಾರೆ. ಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಪಷ್ಟಪಡಿಸಿದ್ದಾರೆ.   ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಭೆ ಬಳಿಕ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಪರಿವಾರದ ನಾಯಕರಿಗೆ ನಮ ತೀರ್ಮಾನವನ್ನು ತಿಳಿಸಿದ್ದೇವೆ. ನಮಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ಇಲ್ಲವೇ ಇಲ್ಲ. ನಾಯಕತ್ವ ಪ್ರಶ್ನೆಯೂ …

Read More »

ಕೇಜ್ರಿವಾಲ್ ಬಿಡುಗಡೆ: ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ AAP ಕಾರ್ಯಕರ್ತರು

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಎಎಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪಕ್ಷದ ಪ್ರಧಾನ ಕಚೇರಿ ಎದುರು ಜಮಾಯಿಸಿದ ಎಎಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ನರ್ತಿಸಿ ಸಂಭ್ರಮಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಎದುರು ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್‌ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸಿಹಿ ಹಂಚಿದ್ದಾರೆ. ಜತೆಗೆ ಕಾರ್ಯಕರ್ತರು ಕೂಗುತ್ತಿದ್ದ ‘ಬಂದರು, ಬಂದರು ಕೇಜ್ರಿವಾಲ್ ಬಂದರು. …

Read More »