Breaking News

Monthly Archives: ಜುಲೈ 2024

ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

ರಾಯಚೂರು: ತಡರಾತ್ರಿ ಭಕ್ತರ ಸೋಗಿನಲ್ಲಿ ಬಂದು ಮಠದಲ್ಲಿ ಲಕ್ಷಾಂತರ ಹಣ, ಚಿನ್ನಾಭರಣ ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಕಳ್ಳತನ ನಡದಿದೆ. ತಡರಾತ್ರಿ ಇಬ್ಬರು ಮಠಕ್ಕೆ ಬಂದಿದ್ದು, ನಾವು ಗುಲ್ಬರ್ಗದಿಂದ ಬಂದಿದ್ದು, ಮಠದ ಭಕ್ತರಾಗಿದ್ದೇವೆ ಎಂದು ಬಂದು ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಯ‌ನ್ನು ಬೆದರಿಸಿ ಚಿನ್ನಾಭರಣ, ನಗದು ಹಣ ದೋಚಿದ್ದಾರೆ. 20 ಲಕ್ಷ ನಗದು ಹಣ, 80 ಗ್ರಾಂ …

Read More »

ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಶುಕ್ರವಾರ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರವನ್ನು ಹಸ್ತಾಂತರಿಸಿದರು. 2015 ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು, ಈ ಮುನ್ನ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.   ಬಿ.ಟೆಕ್ ಹಾಗೂ ಎಂ.ಬಿ.ಎ.(ಫೈನಾನ್ಸ್), ಎಂ.ಎ.(ಪಬ್ಲಿಕ್ ಪಾಲಿಸಿ) ಪದವೀಧರರಾಗಿರುವ ರೋಷನ್, ಹಾವೇರಿ ಮತ್ತು ಉತ್ತಕ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ ಎರಡು …

Read More »

ಅಂಬೋಲಿ ಭಾಗದಲ್ಲಿ ಭಾರಿ ಮಳೆ; ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಐದಡಿ ನೀರು ಏರಿಕೆ

ಬೆಳಗಾವಿ: ಮಹಾರಾಷ್ಟ್ರದ ಸಾವಂತವಾಡಿ ಹಾಗೂ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಘಟಪ್ರಭಾ ನದಿಯ ಮೂಲಕ ಹಿಡಕಲ್ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಒಂದೇ ದಿನ ಜಲಾಶಯದ ಮಟ್ಟದಲ್ಲಿ ಐದು ಅಡಿ ಏರಿಕೆಯಾಗಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2122 ಅಡಿ ನೀರು ಸಂಗ್ರಹವಾಗಿದೆ. ಅದೇ ರೀತಿ …

Read More »

ಚಿಕ್ಕೋಡಿ: ₹18 ಲಕ್ಷಕ್ಕೆ ಎತ್ತು ಖರೀದಿ

ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ ಇಡ್ನಾಳ ಗ್ರಾಮದ ರೈತ ಸದಾಶಿವ ಢಾಂಗೆ ಅವರು ₹ 18 ಲಕ್ಷಕ್ಕೆ ಖರೀದಿಸಿದ್ದಾರೆ. ಆರು ವರ್ಷ ವಯಸ್ಸಿನ ಈ ಎತ್ತಿನ ಮೂಲ ಹೆಸರು ‘ಹಿಂದೂಸ್ತಾನ್‌’. ಈಗ ರೈತ ಇಟ್ಟ ಹೆಸರು ‘ಟೈಗರ್‌’. ಶರ್ಯತ್ತಿನಲ್ಲಿ ಇದರ ಹೆಸರು ಚಿರತೆ. ದ್ಯಾವನಗೌಡ ಅವರು ಇದನ್ನು ಮೂರು ವರ್ಷ ವಯಸ್ಸಿನ ಕರು ಇದ್ದಾಗ ₹1 ಲಕ್ಷಕ್ಕೆ ಖರೀದಿಸಿದ್ದರು. …

Read More »

ಭಾರೀ ಮಳೆ ಹಿನ್ನೆಲೆ : ದಕ್ಷಿಣ ಕನ್ನಡ ಜಿಲ್ಲೆಯ ಈ ತಾಲ್ಲೂಕುಗಳ ಶಾಲೆಗಳಿಗೆ ರಜೆ

ಉಡುಪಿ : ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಆದೇಶಿಸಲಾಗಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಳ್ತಂಗಡಿ ಹಾಗೂ ಬಂಟ್ವಾಳ ಶಾಲೆಗಳಿಗೆ ಜು.4ರ ಇಂದು ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಬಂಟ್ವಾಳ ತಾಲೂಕಿನ ಎಲ್ಲ ಶಾಲೆಗಳಿಗೆ ತಹಶೀಲ್ದಾರ್ ರಜೆ …

Read More »

ಪವರ್‌ ಟಿವಿ ಪ್ರಸಾರ ಆರಂಭಕ್ಕೆ ಅನುಮತಿ ನೀಡದ ಕೋರ್ಟ್

ಬೆಂಗಳೂರು, ಜುಲೈ 04: ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರ ಮತ್ತೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿಲ್ಲ. ಪರವಾನಿಗೆ ನವೀಕರಿಸುವವರೆಗೂ ಪ್ರಸಾರ ರದ್ದು ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಲಾಗಿದೆ. ಪವರ್ ಟಿವಿ ಕಡೆಯಿಂದ ಶೋಕಾಸ್ ನೋಟಿಸ್‌ಗೆ ಸಲ್ಲಿಸಿರುವ ಉತ್ತರವನ್ನು ಪರಿಗಣಿಸಿ ಪರವಾನಿಗೆ ನವೀಕರಿಸುವ ಕುರಿತು 6 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಕರಣ ಸ್ಥಗಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ …

Read More »

ರಸ್ತೆಗಿಳಿಯಲಿವೆ ‘ವಿಮಾನ ಮಾದರಿ ಬಸ್’

ನವದೆಹಲಿ: ಶೀಘ್ರದಲ್ಲಿಯೇ ವಿಮಾನ ಮಾದರಿಯ ಬಸ್ ಗಳನ್ನು ರಸ್ತೆಗಿಳಿಸಲಾಗುವುದು. ಈ ಬಸ್ ಗಳ ಪ್ರಯಾಣ ದರ ಮಾಮೂಲಿ ಬಸ್ ಗಳಿಗಿಂತಲೂ ಶೇಕಡ 30ರಷ್ಟು ಕಡಿಮೆ ಇರಲಿದೆ. ಸಧ್ಯವೇ ನಾಗಪುರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.   ಮಹಾರಾಷ್ಟ್ರದ ನಾಗಪುರದಲ್ಲಿ 132 ಸೀಟ್ ಗಳ ವಿಮಾನ ಮಾದರಿಯ ಬಸ್ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಬಸ್ ಸಖಿಯರು ಕೂಡ ಇರಲಿದ್ದು, ಪ್ರಯಾಣಿಕರಿಗೆ ನೆರವು …

Read More »

ಡಿಸ್ಚಾರ್ಜ್​ ಆದ ಬೆನ್ನಲ್ಲೇ ಮತ್ತೆ ಆಸ್ಪತ್ರೆಗೆ ದಾಖಲಾದ ಬಿಜೆಪಿ ಹಿರಿಯ ನಾಯಕ

ಡಿಸ್ಚಾರ್ಜ್​ ಆದ ಬೆನ್ನಲ್ಲೇ ಮತ್ತೆ ಆಸ್ಪತ್ರೆಗೆ ದಾಖಲಾದ ಬಿಜೆಪಿ ಹಿರಿಯ ನಾಯಕ ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿಯ ಹಿರಿಯ ನಾಯಕ ಲಾಲ್​ ಕೃಷ್ಣ ಅಡ್ವಾಣಿ ಅವರು ಮತ್ತೊಮ್ಮೆ ಇಂದು (ಜುಲೈ 04) ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ವಾರದ ಹಿಂದಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್​) ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಸ್ತುತ ಅಡ್ವಾಣಿ ಅವರು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದೆ. ಅವರನ್ನು ನಿಗಾದಲ್ಲಿ ಇರಿಸಲಾಗಿದ್ದು, ಅವರ …

Read More »