ಬೆಂಗಳೂರು : ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೂಡಲೇ ಸಮಗ್ರ ಪರಿಶೀಲನೆ ನಡೆಸಿ ಅನರ್ಹ ಬಿಪಿಎಲ್ ಕಾರ್ಡ್ ಕೈಬಿಡಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಬಿಪಿಎಲ್ ಕುಟುಂಬಗಳಲ್ಲಿನ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಅವರ ಸಮಸ್ಯೆ, ದೂರುಗಳನ್ನು ಆಲಿಸಿ ಅಗತ್ಯ …
Read More »Monthly Archives: ಜುಲೈ 2024
ಅಣ್ಣಾ.. ಈ ಬಸ್ ಎಲ್ಲಿಗ್ ಹೋಗುತ್ತೆ.? ಶೆಡ್‌ಗೆ ಹೋಗುತ್ತೆ ಬರ್ತೀಯಾ?: ವಿಡಿಯೋ ಭಾರೀ ವೈರಲ್
ಬೆಂಗಳೂರು, ಜುಲೈ, 09: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾದಾಗಿನಿಂದ ಬಾ.. ಶೆಡ್‌ಗೆ ಹೋಗುವ.. ಕೊಂಟೆಬಿಲ್ಲೆ ಆಡುವ ಬಾ ಎನ್ನುವ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಲಾತಾಣಗಳಲ್ಲಿ ಫುಲ್ ಟ್ರೆಂಡ್ ಆಗಿಬಿಟ್ಟಿವೆ. ಇದೋಗ ಅದೇ ಶೈಲಿಯಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ವಿವಿಧ ಆಯಾಮಗಳಲ್ಲಿ ಈ ರೀಲ್ಸ್ ಮಾಡುತ್ತಿದ್ದಾರೆ. ಅದು ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ಕೆಣಕಿದಾಗಿನಿಂದ ಈ ರೀಲ್ಸ್‌ಗಳು …
Read More »ಮುಡಾ ಅಕ್ರಮ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ದೇವರಾಜು ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂಡಾಗೆ ವಂಚಿಸಿದ್ದಾರೆ ಎಂದು ದೂರಿದ್ದಾರೆ. ಮೂಡಾ …
Read More »ರಾಜ್ಯದಲ್ಲಿ ಸರ್ಕಾರ ಉಳಿದಿಲ್ಲ, ಮೂರು ಭಾಗಗಳಾಗಿದೆ:ಕಾರಜೋಳ
ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ವಿಚಾರಕ್ಕೆ ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ, ಸಿಎಂ ಸಿದ್ದರಾಮಯ್ಯ ಆಡಳಿತ ಕುರಿತು ವ್ಯಂಗ್ಯವಾಡಿದರು. ‘ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ. ಒಂದು ಸಿದ್ದರಾಮಯ್ಯನವರದ್ದು, ಎರಡನೆಯದು ಡಿ.ಕೆ. ಶಿವಕುಮಾರ್ ಗುಂಪು ಮತ್ತೊಂದು ವೀರಶೈವ ಲಿಂಗಾಯತರದೊಂದು ಗುಂಪು. ನಮಗೆ ಸಿದ್ದರಾಮಯ್ಯ ಸ್ಥಾನಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಅನೇಕ ಒತ್ತಾಯಗಳನ್ನು ಮಾಧ್ಯಮಗಳ ಮೂಲಕ ನಾನು ಕೂಡ ನೋಡಿದ್ದೇನೆ’ ಎಂದಿದ್ದಾರೆ. ‘ಸಿದ್ದರಾಮಯ್ಯನವರು ಆಡಳಿತದ …
Read More »ಲೊಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ
ದಾವಣಗೆರೆ : ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದು, ಹರಿಹರ ನಗರಸಭೆ ಆಯುಕ್ತರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ನಗರಸಭೆ ಆಯುಕ್ತ ಬಸವರಾಜ್ ಐಗೂರು ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಬಸವರಾಜ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಗರಸಭೆಯ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಮಗ್ರಿ ಸರಬರಾಜು ಗುತ್ತಿಗೆದಾರ ಕರಿಬಸಪ್ಪ ಎಂಬುವರಿಂದ 2 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
Read More »ಮುಂಗಾರು ಬಿತ್ತನೆ: ಶೇ 95 ಗುರಿ ಸಾಧನೆ
ಗದಗ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ ಕೃಷಿ ಚಟುವಟಿಕೆಗಳಿಗೆ ಬೇಕಿರುವಷ್ಟು ಮಳೆ ಆಗಿದೆ. ಈಗ ಬಿತ್ತನೆ ಆಗಿರುವ ಬೆಳೆಗಳಿಗೆ ಮಳೆ ಕೊರತೆ ಇಲ್ಲವಾದರೂ ಒಂದು ಹದ ಮಳೆಯಂತೂ ಆಗಬೇಕಿದೆ. ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈವರೆಗೆ 2.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 95ರಷ್ಟು ಗುರಿ ಸಾಧನೆಯಾಗಿದೆ. ಈ ಪೈಕಿ ಹೆಸರು ಬೆಳೆ ಅತಿ ಹೆಚ್ಚು …
Read More »ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಕ್ತದಾನ.
ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಕ್ತದಾನ. ಯರಗಟ್ಟಿ : ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ, ಆದಕಾರಣ ಯುವ ನಾಯಕ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ನೂರಾರು ಅಭಿಮಾನಿಗಳು ರಕ್ತದಾನವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ
Read More »ಮಹಾನ್ ನಾಯಕರ ಆದರ್ಶ ಅಳವಡಿಸಿಕೊಳ್ಳಿ: ಎಚ್.ಎಸ್.ಬಿಸ್ವಾಗರ
ಪರಮಾನಂದವಾಡಿ: ‘ವಿದ್ಯಾರ್ಥಿಗಳು ಮಹಾನ್ ನಾಯಕರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಾರೂಗೇರಿಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಎಸ್.ಬಿಸ್ವಾಗರ ಹೇಳಿದರು. ಸಮೀಪದ ಯಲ್ಪಾರಟ್ಟಿಯಲ್ಲಿ ಪರಮಾನಂದವಾಡಿಯ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏಳು ದಿನ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಹೊಂದಬೇಕು. ಅದನ್ನು ಸಾಕಾರವಾಗಿಸಲು ನಿರಂತರವಾಗಿ ಶ್ರಮಿಸಿದರೆ …
Read More »2ಎ ಮೀಸಲಾತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಶಾಸಕ ರಾಜು ಕಾಗೆ
ಕಾಗವಾಡ: ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ಪಡೆಯುವುದಕ್ಕಾಗಿ ನಾನು ಯಾವ ಹುದ್ದೆ ತ್ಯಜಿಸಲೂ ಸಿದ್ಧ’ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು. ಸಮೀಪದ ಉಗಾರ ಖುರ್ದ್ ಗ್ರಾಮದಲ್ಲಿ ಸೋಮವಾರ ನಡೆದ ಮೀಸಲಾತಿಗಾಗಿ ಹೋರಾಟ ಪೂರ್ವಭಾವಿ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯದ ಎಲ್ಲ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಿದರೆ, ಯಾವುದೇ ಸರ್ಕಾರವಿದ್ದರೂ ಮಂಡಿ ಊರಬೇಕಾಗುತ್ತದೆ. ಮೀಸಲಾತಿಗಾಗಿ ನಾನು ಎಂಥ ತ್ಯಾಗವನ್ನೂ ಮಾಡಲು ಸಿದ್ಧವಿದ್ದೇನೆ’ …
Read More »ಮುಂದುವರೆದ ಭಾರೀ ಮಳೆ
ಬೆಳಗಾವಿ, ಜುಲೈ, 09: ಈಗಾಗಲೇ ರಾಜ್ಯದ ಹಲವು ಭಾಗಗಲ್ಲಿ ಭಾರೀ ಮಳೆಯಿಂದ ನದಿ-ಹಳ್ಳ ಕೊಳ್ಳಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂಡೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಕೂಡ ಹೆಚ್ಚಾಗುತ್ತಲಿದೆ. ಹಾಗೆಯೇ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹಿಡಕಲ್ ಜಲಾಶಯಕ್ಕೂ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಹಾಗಾದರೆ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
Read More »