ಕಲ್ಯಾಣ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಲಿ: ಶ್ರೀಧರ ಬಳಿಗಾರ ಹಳಿಯಾಳ: ‘ಕಲ್ಯಾಣ ರಾಜ್ಯ ಎಂಬುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಕಾವ್ಯ ರಚನೆಯ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು. ರಾಜ ಮಾರ್ಗವು ಸಾಂಸ್ಕೃತಿಕ ಅಂತಃಕರಣದಿಂದ ಕೂಡಿರಬೇಕು’ ಎಂದು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಲಹಾ ಮಂಡಳಿಯ ಸದಸ್ಯರಾದ ಶ್ರೀಧರ ಬಳಿಗಾರ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ …
Read More »Monthly Archives: ಜುಲೈ 2024
ಬೀದಿ ಬದಿ ಹೊಟೇಲ್, ಕಿರಾಣಿ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ
ಚಿಕ್ಕೋಡಿ: ನಗರದ ಬೀದಿ ಬದಿ ಗಾಡಾ ಅಂಗಡಿ ಮತ್ತು ಹೊಟೇಲ್ ನಲ್ಲಿ ಆಹಾರದಲ್ಲಿ ಟೇಸ್ಟಿಂಗ್ ಪೌಡರ್ ಕಲಬೆರಕೆ ಮಾಡಿ ಆಹಾರ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಮತ್ತು ಟೇಸ್ಟಿಂಗ್ ಪೌಡರ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 17 ಕೆಜಿ ಟೇಸ್ಟಿಂಗ್ ಪೌಡರ್ ವಶಪಡಿಸಿಕೊಂಡಿದ್ದಾರೆ. ಆಹಾರದಲ್ಲಿ ವಿಷ ಪದಾರ್ಥಗಳು ಕಲಬೆರಕೆ ಕುರಿತು ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆ ನಗರದ ರಾಜಸ್ತಾನಿ ಕಿರಾಣಿ ಅಂಗಡಿ ಮೇಲೆ ದಾಳಿ …
Read More »ನಿಂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಹೋಮ್ ಗಾರ್ಡ್
ಪೊಲೀಸ್ ಠಾಣೆ ಬಳಿ ಕೆಲಸ ನಿರ್ವಹಿಸುತ್ತಿದ್ದ ಹೋಮ್ ಗಾರ್ಡ್ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ಇಲ್ಲಿದೆ ನೋಡಿ. ಹೋಮ್ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ನಿಂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ …
Read More »ಬೆಳಗಾವಿ ಪಾಲಿಕೆಯ 4 ಸ್ಥಾಯಿ ಸಮಿತಿಗಳಿಗೂ ಅವಿರೋಧ ಆಯ್ಕೆ
ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ 22ನೇ ಅವಧಿಗೆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಮಂಗಳವಾರ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇತ್ರಾವತಿ ಭಾಗವತ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಶೈಲ ಕಾಂಬಳೆ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಯತೀರ್ಥ ಸವದತ್ತಿ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರೇಷ್ಮಾ …
Read More »ಎಸ್‌ಐಟಿ ಮುಂದೆ ಹಾಜರಾದ ಮಾಜಿ ಸಚಿವ ನಾಗೇಂದ್ರ
ಬೆಂಗಳೂರು,ಜು.9- ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಇಂದು ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾದರು. ಈ ಹಗರಣದಲ್ಲಿ ನಾಗೇಂದ್ರ ಅವರು ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ ನೋಟೀಸ್ ನೀಡಿತ್ತು. ಹಾಗಾಗಿ ಇಂದು ಸಿಐಡಿ ಕಚೇರಿಯಲ್ಲಿರುವ ಎಸ್‌ಐಟಿ ಮುಂದೆ ನಾಗೇಂದ್ರ ಅವರು ಹಾಜರಾಗಿದ್ದು, ತನಿಖಾಧಿಕಾರಿಗಳು ಅವರಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. …
Read More »ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು
ಬೆಳಗಾವಿ, ಜು.09: ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ವೃದ್ಧೆಯರ ನರಳಾಟ ಮನಕಲಕುವಂತಿದೆ. ಹೌದು, ಕೆಲ ದಿನಗಳ ಹಿಂದೆ ಮಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಹಿನ್ನಲೆ ಬೆಳಗಾವಿಯ ಕ್ಯಾಂಪ್ನ ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪುಟ್ ಪಾತ್ ಮೇಲೆ ತಾಡಪಲ್ ಕಟ್ಟಿಕೊಂಡು ಅಕ್ಕ ಮಂಗಲಾ ಅಜ್ಗಾಂವಕರ್(75) ಮತ್ತು ಮನೋರಮಾ(70) ಎಂಬುವವರು ಜೀವನ ನಡೆಸುತ್ತಿದ್ದು, ಎಂತಹವರನ್ನಾದರೂ ಕರುಳು ಹಿಂಡುವಂತೆ ಮಾಡುತ್ತದೆ. ಪುಟ್ಪಾತ್ನಲ್ಲಿ ವಾಸ ಇನ್ನು ಇವರ ಸಾಮಾಗ್ರಿಗಳೆಲ್ಲವೂ ಬಿದ್ದ …
Read More »ಸಾಮರಸ್ಯದ ನವಲಗುಂದ ನಾಗಲಿಂಗ ಅಜ್ಜ
ನವಲಗುಂದ: ಮನುಷ್ಯ ಮನುಷ್ಯರನ್ನು ದ್ವೇಷಿಸುವ ಇಂದಿನ ದಿನಮಾನದಲ್ಲಿ ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟು, ಗದ್ದುಗೆಯ ಮೇಲೆ ಬೈಬಲ್ ಇಟ್ಟು ಪೂಜೆ ಮಾಡುವ ಮೂಲಕ ಹಿಂದೂ-ಮುಸ್ಲಿಂ, ಕ್ರೈಸ್ತರಲ್ಲಿ ಸಾಮರಸ್ಯ ಮೂಡಿಸುತ್ತಿರುವ ನವಿಲುಗುಂದ ಶ್ರೀ ಅಜಾತನಾಗಲಿಂಗಸ್ವಾಮಿ ಮಠ ಈ ನಾಡಿನಲ್ಲಿ ಬೇರೆಡೆ ಇಲ್ಲ. ಹೌದು ಪಟ್ಟಣದ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠದಲ್ಲಿ ಬೈಬಲ್‍ಗೆ ಮಳೆ ಜಡಿದು ರಂಧ್ರ ಮಾಡಿ, ರಂಧ್ರ ಮುಚ್ಚಿದ ಮೇಲೆ ಮತ್ತೆ ಹುಟ್ಟಿ ಬರುವೇನೆಂದು ಹೇಳಿದ್ದ ಶ್ರೀಗಳು ಪವಾಡಗಳ ಮಹಿಮಾ …
Read More »ಬೆಂಗಳೂರು ದಕ್ಷಿಣ ಜಿಲ್ಲೆ ರಚಿಸಿದರೆ ರಾಮನಗರವೇ ಹೆಡ್ ಕ್ವಾರ್ಟರ್!
ಬೆಂಗಳೂರು: ರಾಮನಗರವು ಮೊದಲು ಬೆಂಗಳೂರು ಜಿಲ್ಲೆಯಲ್ಲೇ ಇತ್ತು, ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಬಳಿಕ ಹೆಸರು ಬದಲಾವಣೆ ಆಗಲಿದೆ. ಈಗಿರುವ ರಾಮನಗರವೇ ಹೆಡ್ ಕ್ವಾರ್ಟರ್ ಆಗಿರಲಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕುಗಳು ಬೆಂಗಳೂರು ದಕ್ಷಿಣದ ವ್ಯಾಪ್ತಿಗೆ ಸೇರಲಿವೆ. ಈ …
Read More »ಹೈಕೋರ್ಟ್ ಗೆ ನಟ ದರ್ಶನ್ ʻರಿಟ್ ಅರ್ಜಿ ಸಲ್ಲಿಕೆ
ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಇದೀಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತಮಗೆ ಊಟ, ಹಾಸಿಗೆ, ಪುಸ್ತಕಗಳನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ನಟ ದರ್ಶನ್ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ …
Read More »ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ
ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಸ್ಪೋಟದಂತ ಶಬ್ದ ಕೇಳಿಬಂದು ಭೂಮಿ ನಡುಗುವ ಅನುಭವವಾಗಿದೆ. ವಿಜಯಪುರ ಜಿಲ್ಲೆಯ ಇಂಡಿಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇಂದು ಬೆಳಗ್ಗೆ 10.53 ರ ಸುಮಾರಿಗೆ ಇಂಡಿ, ತಡವಲಗಾ, ಇಂಗಳಗಿ, ಹಂಗಳಗಿ, ನಿಂಬಾಳ, ಹೊರ್ತಿ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲು ಸ್ಪೋಟದಂತಹ ಶಬ್ದ ಕೇಳಿಬಂದಿದ್ದು, ಬಳಿಕ ಭೂಮಿ ನಡುಗಿದ ಅನುಭವವಾಗಿದೆ …
Read More »