Breaking News

Daily Archives: ಜುಲೈ 16, 2024

ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರೇ ಇಲ್ಲ

ಬೆಂಗಳೂರು,ಜು.16- ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದ್ದು, ವಿಧಾನ ಪರಿಷತ್ತಿಗೆ ಪ್ರತಿಪಕ್ಷದ ನಾಯಕನ ಆಯ್ಕೆಗೆ ಯಾವುದೇ ಹೆಸರನ್ನು ಅಂತಿಮ ಗೊಳಿಸದ ಕಾರಣ ವಿರೋಧ ಪಕ್ಷದ ನಾಯಕರೇ ಇಲ್ಲದೇ ಬಿಜೆಪಿ ಭಾಗಿಯಾಗುವಂತಾಗಿದೆ. ವಿರೋಧ ಪಕ್ಷದ ನಾಯಕನ ಆಸನ ಖಾಲಿಯಿಟ್ಟು ಕೇಸರಿ ಪಡೆ ಸದನದಲ್ಲಿ ಹಾಜರಾಗಿದ್ದು, ಯಾರ ನಾಯಕತ್ವದಲ್ಲಿ ಮುನ್ನಡೆಯಬೇಕು ಎನ್ನುವ ಗೊಂದಲದಲ್ಲೇ ಸದಸ್ಯರು ಕಲಾಪದಲ್ಲಿ ಮುಂದುವರೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ವಿರೋಧಪಕ್ಷ ನಾಯಕ ಸ್ಥಾನದ ಹುದ್ದೆ ಖಾಲಿ ಇರುವುದರಿಂದ ಮೊದಲ ದಿನದ ಕಲಾಪ ದಲ್ಲಿಯೇ …

Read More »

ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

ಪಣಜಿ: ಗೋವಾದಿಂದ ಬೆಳಗಾವಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಚೋರ್ಲಾ ಘಾಟ್ ರಸ್ತೆ ಅಂಜುಣೆ ಅಣೇಕಟ್ಟಿನ ಬಳಿ ಕುಸಿದಿದ್ದು, ಕೂಡಲೇ ಈ ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ. ಗೋವಾ ರಾಜ್ಯಾದ್ಯಂತ ಕಳೆದ ಸುಮಾರು ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಗೆ ಹಲವೆಡೆ ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ನಡೆದಿದೆ. ಗೋವಾದಿಂದ ಅನಮೋಡ ಮಾರ್ಗದ ರಸ್ತೆ ಸಂಪೂರ್ಣ …

Read More »

ಲೂಟಿಕೋರರ ಪಿತಾಮಹ ನೀನು: ವಿಧಾನಸಭೆಯಲ್ಲಿ ಅಶ್ವತ್ಥ್ ನಾರಾಯಣ ವಿರುದ್ಧ ಗುಡುಗಿದ ಡಿಸಿಎಂ ಡಿಕೆಶಿ

ಬೆಂಗಳೂರು : “ಬಿಜೆಪಿಯ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಲೂಟಿಕೋರರ ಪಿತಾಮಹ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ನಂತರ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆ ಮೇಲಿನ ಪ್ರಸ್ತಾಪ ಮುಂದುವರೆಸಲು ಮುಂದಾದರು. ಈ ವೇಳೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ದರೋಡೆ ಮಾಡಿರುವ ಮುಖ್ಯಮಂತ್ರಿಗಳು ಗೈರಾಗಿದ್ದಾರೆ. …

Read More »

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ; ಈಗ ಒಂದೇ ಕ್ಲಿಕ್, ಜಸ್ಟ್ 10 ನಿಮಿಷದಲ್ಲೇ ನಿಮ್ಮ ಮನೆಗೆ ಬರುತ್ತೆ ನಿಮ್ಮಷ್ಟದ ಎಣ್ಣೆ

ನವದೆಹಲಿ : ಆನ್‌ಲೈನ್ ವಿತರಣಾ ಪಾಲುದಾರ ಮತ್ತು ಇ-ಕಾಮರ್ಸ್ ಕಂಪನಿ ಸ್ವಿಗ್ಗಿ, ಬಿಗ್ ಬಾಸ್ಕೆಟ್ ಮತ್ತು ಜೊಮಾಟೊ ಶೀಘ್ರದಲ್ಲೇ ನಿಮ್ಮ ಮನೆಗೆ ಬಿಯರ್, ವೈನ್ ಮತ್ತು ಮದ್ಯ ಸೇರಿದಂತೆ ಕಡಿಮೆ-ಆಲ್ಕೋಹಾಲ್ ಪಾನೀಯಗಳನ್ನ ತಲುಪಿಸಲಾಗುತ್ತದೆ. ಈ ಕುರಿತು ವರದಿಯೊಂದು ಹೊರಬಿದ್ದಿದೆ. ಆದಾಗ್ಯೂ, ವರದಿಯ ಪ್ರಕಾರ, ಅಂತಹ ವಿತರಣೆಗಳು ನವದೆಹಲಿ, ಕರ್ನಾಟಕ, ಹರಿಯಾಣ, ಪಂಜಾಬ್, ತಮಿಳುನಾಡು, ಗೋವಾ ಮತ್ತು ಕೇರಳದಲ್ಲಿ ನಡೆಯಲಿವೆ. ಔಟ್‌ಲೆಟ್‌’ನಲ್ಲಿರುವ ಸರಕುಗಳ ಭಾಗವಾಗಿ ಅದನ್ನು ತಲುಪಿಸಲು ಅಧಿಕಾರಿಗಳು ಪರಿಗಣಿಸುತ್ತಿರುವುದು ಗಮನಾರ್ಹವಾಗಿದೆ. …

Read More »

ಜೈಲಿನಿಂದ ದರ್ಶನ್ ಬೇಗ ಬಿಡುಗಡೆಯಾಗಲಿ ಎಂದು ಗದಗದಲ್ಲಿ ಅಭಿಮಾನಿಗಳ ವಿಶೇಷ ಪೂಜೆ

ಗದಗ, ಜುಲೈ. 16: ಇತ್ತೀಚೆಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಪೋಸ್ಟರ್‌, ವಿಡಿಯೋಗಳ ಮೂಲಕ ಜೊತೆಗೆ ನಿಂತಿದ್ದಾರೆ.   ಇದರ ಜೊತೆಗೆ ದರ್ಶನ್ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನೆಚ್ಚಿನ ನಟನಲ್ಲಿ ತಮ್ಮ ನಂಬಿಕೆ ಕಳೆದುಕೊಳ್ಳದ ಅಭಿಮಾನಿಗಳು ಹಲವು ಭಾಗಗಳಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ …

Read More »

ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

ವಿಜಯಪುರ: ಸನ್ಮಾನ ಸ್ವೀಕರಿಸಿದ ವೇದಿಕೆಯಲ್ಲಿ ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ರಮೇಶ್ ಜಿಗಜಿಣಗಿ, ವೇದಿಕೆ ಇಳಿಯುತ್ತಲೇ ಯೂಟರ್ನ್ ಹೊಡೆದಿದ್ದಾರೆ. ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಿದ ಬಗ್ಗೆ ಏನನ್ನೂ ಹೇಳಲ್ಲ, ಈಗ ಅದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳಿ ಎಂದಿದ್ದಾರೆ.   ತಮಗೆ ಪಕ್ಷ ನೀಡಿದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಕೇಂದ್ರದಲ್ಲಿ ಸಂಪುಟ ರಚನೆ ಸಂದರ್ಭದಲ್ಲಿ ಸತತ 7 ಬಾರಿ ಗೆದ್ದಿರುವ ನನ್ನ ಹೆಸರನ್ನು ಹೇಳಲಿಲ್ಲ. ತಮ್ಮ …

Read More »

ವಾಲ್ಮೀಕಿ ನಿಗಮದ ಹಗರಣವಲ್ಲ, ಇದು ಅಕ್ಷಮ್ಯ ಅಪರಾಧ:ವಿಜಯೇಂದ್ರ

ಬೆಂಗಳೂರು: ರಾಜ್ಯ ಸರಕಾರದ ಕೆಲವರ ಬೆದರಿಕೆ ಮತ್ತು ಒತ್ತಡವೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿಯನ್ನು ಹಗರಣಕ್ಕೆ ಬಳಸಿಕೊಂಡಿದ್ದಾರೆ. ಹಣವನ್ನು ಹೊರರಾಜ್ಯಕ್ಕೆ ಕಳುಹಿಸುವ ಕೆಲಸ ಮಾಡಿದ್ದಾರೆ. ಇದು ಕೇವಲ ಹಗರಣವಲ್ಲ; ಇದು ಅಕ್ಷಮ್ಯ ಅಪರಾಧ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಅಲ್ಲದೆ, …

Read More »

ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

ನವದೆಹಲಿ: ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧ ಜುಲೈ 27ರಂದು ಆರಂಭವಾಗುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ನಾಯಕರಾಗಿದ್ದಾರೆ. ಆದರೆ ನಂತರ ನಡೆಯುವ ಏಕದಿನ ಸರಣಿಗೆ ಅವರು ಲಭ್ಯರಿರುವುದಿಲ್ಲ. ‌ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪೆಲ್ಲೆಕೆಲ್ಲೆಯಲ್ಲಿ ನಡೆಯಲಿವೆ. ಮೂರು ಏಕದಿನ ಪಂದ್ಯಗಳು, ಆಗಸ್ಟ್‌ 2, 4 ಮತ್ತು 7ರಂದು ನಿಗದಿಯಾಗಿವೆ. ಟಿ20 ವಿಶ್ವಕಪ್‌ ಗೆದ್ದ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಪಾಂಡ್ಯ, ಏಕದಿನ …

Read More »

ಬೆಳಗಾವಿ: 18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದ್ದು, ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು’ ಎಂದು ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ತಿಳಿಸಿದರು. ಚಿಕ್ಕಬಳ್ಳಾಪುರದ ಮಧುಸೂದನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸದ್ಗುರು ಮಧುಸೂದನ್‌ ಸಾಯಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್‌.ಸೋಮನಾಥ್‌ ಸೇರಿದಂತೆ ಮೂವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಲಾಗುವುದು. ಉನ್ನತ ಶಿಕ್ಷಣ …

Read More »

ಹಾಡು ಮುಗಿಸಿದ ಹುಲ್ಯಾಳ ಮಹಾದೇವಪ್ಪ

ಮೂಡಲಗಿ: ‘ಹಾರ್ಮೋನಿಯಂ ಮುಂದೆ ಕುಳಿತು ಹಾಡಲು ಶುರು ಮಾಡಿದರೆ ಮುಂದೆ ಕುಳಿತ ಶ್ರೋತೃಗಳೆಲ್ಲ ತಲೆದೂಗುತ್ತ ಜಗತ್ತನ್ನೇ ಮರೆಯುತ್ತಿದ್ದರು. ಅಂಥ ಅದ್ಭುತ ಭಜನಾ ಗಾಯನವನ್ನು ಶೃತಿಬದ್ಧವಾಗಿ ಮಾಡುತ್ತಿದ್ದ ತಾಲ್ಲೂಕಿನ ನಾಗನೂರ ಗ್ರಾಮದ ಹುಲ್ಯಾಳ ಮಹಾದೇವಪ್ಪ ಎಂದೇ ಗುರುತಿಸಿಕೊಂಡಿದ್ದ ಮಹಾದೇವಪ್ಪ ವೀರಭದ್ರಪ್ಪ ಚಿಮ್ಮಡ ಅವರು ಇತ್ತೀಚೆಗೆ ನಿಧನರಾದರು. ಅವರ ಅಭಿಮಾನಿಗಳು ಸ್ವರಶ್ರದ್ಧಾಂಜಲಿ ಸ್ಮರಣೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದ ಶಿವಲಿಂಗಪ್ಪ ಚಪ್ಪರ ತೋಟದಲ್ಲಿ ಏರ್ಪಡಿಸಿದ್ದಾರೆ. ಉತ್ತರ ಕರ್ನಾಟದಕ ಬೆಳಗಾವಿ, ವಿಜಯಪುರ, …

Read More »