Breaking News

Daily Archives: ಜುಲೈ 9, 2024

ಲೊಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ

ದಾವಣಗೆರೆ : ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದು, ಹರಿಹರ ನಗರಸಭೆ ಆಯುಕ್ತರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ನಗರಸಭೆ ಆಯುಕ್ತ ಬಸವರಾಜ್ ಐಗೂರು ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಬಸವರಾಜ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಗರಸಭೆಯ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಮಗ್ರಿ ಸರಬರಾಜು ‌ಗುತ್ತಿಗೆದಾರ ಕರಿಬಸಪ್ಪ ಎಂಬುವರಿಂದ 2 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

Read More »

ಮುಂಗಾರು ಬಿತ್ತನೆ: ಶೇ 95 ಗುರಿ ಸಾಧನೆ

ಗದಗ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ ಕೃಷಿ ಚಟುವಟಿಕೆಗಳಿಗೆ ಬೇಕಿರುವಷ್ಟು ಮಳೆ ಆಗಿದೆ. ಈಗ ಬಿತ್ತನೆ ಆಗಿರುವ ಬೆಳೆಗಳಿಗೆ ಮಳೆ ಕೊರತೆ ಇಲ್ಲವಾದರೂ ಒಂದು ಹದ ಮಳೆಯಂತೂ ಆಗಬೇಕಿದೆ. ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.02 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಈವರೆಗೆ 2.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 95ರಷ್ಟು ಗುರಿ ಸಾಧನೆಯಾಗಿದೆ. ಈ ಪೈಕಿ ಹೆಸರು ಬೆಳೆ ಅತಿ ಹೆಚ್ಚು …

Read More »

ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಕ್ತದಾನ.

ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಕ್ತದಾನ. ಯರಗಟ್ಟಿ : ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ, ಆದಕಾರಣ ಯುವ ನಾಯಕ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ನೂರಾರು ಅಭಿಮಾನಿಗಳು ರಕ್ತದಾನವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ

Read More »

ಮಹಾನ್‌ ನಾಯಕರ ಆದರ್ಶ ಅಳವಡಿಸಿಕೊಳ್ಳಿ: ಎಚ್.ಎಸ್.ಬಿಸ್ವಾಗರ

ಪರಮಾನಂದವಾಡಿ: ‘ವಿದ್ಯಾರ್ಥಿಗಳು ಮಹಾನ್‌ ನಾಯಕರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಾರೂಗೇರಿಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಎಸ್.ಬಿಸ್ವಾಗರ ಹೇಳಿದರು. ಸಮೀಪದ ಯಲ್ಪಾರಟ್ಟಿಯಲ್ಲಿ ಪರಮಾನಂದವಾಡಿಯ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏಳು ದಿನ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಹೊಂದಬೇಕು. ಅದನ್ನು ಸಾಕಾರವಾಗಿಸಲು ನಿರಂತರವಾಗಿ ಶ್ರಮಿಸಿದರೆ …

Read More »

2ಎ ಮೀಸಲಾತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಶಾಸಕ ರಾಜು ಕಾಗೆ

ಕಾಗವಾಡ: ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ‍‍ಪಡೆಯುವುದಕ್ಕಾಗಿ ನಾನು ಯಾವ ಹುದ್ದೆ ತ್ಯಜಿಸಲೂ ಸಿದ್ಧ’ ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿದರು. ಸಮೀಪದ ಉಗಾರ ಖುರ್ದ್‌ ಗ್ರಾಮದಲ್ಲಿ ಸೋಮವಾರ ನಡೆದ ಮೀಸಲಾತಿಗಾಗಿ ಹೋರಾಟ ಪೂರ್ವಭಾವಿ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯದ ಎಲ್ಲ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಿದರೆ, ಯಾವುದೇ ಸರ್ಕಾರವಿದ್ದರೂ ಮಂಡಿ ಊರಬೇಕಾಗುತ್ತದೆ. ಮೀಸಲಾತಿಗಾಗಿ ನಾನು ಎಂಥ ತ್ಯಾಗವನ್ನೂ ಮಾಡಲು ಸಿದ್ಧವಿದ್ದೇನೆ’ …

Read More »

ಮುಂದುವರೆದ ಭಾರೀ ಮಳೆ

ಬೆಳಗಾವಿ, ಜುಲೈ, 09: ಈಗಾಗಲೇ ರಾಜ್ಯದ ಹಲವು ಭಾಗಗಲ್ಲಿ ಭಾರೀ ಮಳೆಯಿಂದ ನದಿ-ಹಳ್ಳ ಕೊಳ್ಳಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂಡೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಕೂಡ ಹೆಚ್ಚಾಗುತ್ತಲಿದೆ. ಹಾಗೆಯೇ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹಿಡಕಲ್‌ ಜಲಾಶಯಕ್ಕೂ ಅಪಾರ ಪ್ರಮಾಣದಲ್ಲಿ ‌ನೀರು ಹರಿದುಬರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಹಾಗಾದರೆ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

Read More »

ಕಾರ್ಕಳ, ಹೆಬ್ರಿ: ಆರು ತಿಂಗಳಲ್ಲಿ 51 ಮಂದಿಗೆ ಡೆಂಗ್ಯೂ

ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಲ್ಲಿ 51 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಡೆಂಗ್ಯೂ ಸೋಂಕಿತರಿದ್ದಾರೆ. ಪಶ್ಚಿಮ ಘಟ್ಟ ತಪ್ಪಲಿನ ಪ್ರದೇಶವಾದ ಈ ಎರಡು ತಾಲೂಕುಗಳಲ್ಲಿ ಕೆಲವು ಸಮಯಗಳ ಹಿಂದೆ ಮಂಗನ ಕಾಯಿಲೆ ಲಕ್ಷಣಗಳು ಕಂಡುಬಂದಿತ್ತು. ಅನಂತರದ ದಿನಗಳಲ್ಲಿ ಮಳೆ ಹಾಗೂ ಬಿಸಿಲಿನ ವಾತಾವರಣಕ್ಕೆ ಜ್ವರ ಲಗ್ಗೆಯಿಟ್ಟಿತ್ತು. ಈ ಪೈಕಿ ಹೆಚ್ಚು ಡೆಂಗ್ಯೂ ಪ್ರಕರಣ ಕಂಡು ಬಂದಿರುವುದು ಕಾರ್ಕಳ ಪುರಸಭೆ …

Read More »

ICC ಅಧ್ಯಕ್ಷ ಸ್ಥಾನಕ್ಕೆ ಜಯ್‌ ಶಾ ಅರ್ಜಿ?

ಹೊಸದಿಲ್ಲಿ: ಬಿಸಿಸಿಐ ಕಾರ್ಯದರ್ಶಿಯಾಗಿ ರುವ ಜಯ್‌ ಶಾ ತಮ್ಮ ಸ್ಥಾನ ತೊರೆದು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ವರ್ಷಾಂತ್ಯ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಸದ್ಯ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್‌ ಬಾಕ್ಲೆì ಅವರಿಗೆ ತನ್ನ ಅವಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಚುನಾವಣೆ ನಡೆದು ಅದರಲ್ಲಿ ಜಯ್‌ ಶಾ ಸ್ಪರ್ಧಿಸಿ ಗೆದ್ದರೆ, ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಅತ್ಯಂತ ಕಿರಿಯರೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Read More »

ಆಯುಷ್ಮಾನ್‌ ಭಾರತ್‌ ವಿಮೆ ಮೊತ್ತ ದುಪ್ಪಟ್ಟು?

ಹೊಸದಿಲ್ಲಿ: ನರೇಂದ್ರ ಮೋದಿ 3.0 ಸರಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದ್ದು, “ಆಯುಷ್ಮಾನ್‌ ಭಾರತ್‌’ ವಿಮೆ ಮೊತ್ತವನ್ನು ದುಪ್ಪಟ್ಟು ಅಂದರೆ 10 ಲಕ್ಷ ರೂ.ಗೆ ಹೆಚ್ಚಳದ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ! ಜತೆಗೆ, 70 ವರ್ಷ ಮೇಲ್ಪಟ್ಟ ಎಲ್ಲರನ್ನೂ ವಿಮೆ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳೂ ಇವೆ.   ಆಯುಷ್ಮಾನ್‌ ವಿಮೆ ಮೊತ್ತವನ್ನು ದುಪ್ಪಟ್ಟು ಮಾಡಿದರೆ ಸರಕಾರದ ಖಜಾನೆಗೆ ವರ್ಷಕ್ಕೆ 12,076 ಕೋಟಿ ರೂ. ಹೊರೆ ಯಾಗಲಿದೆ. ಈ ಕುರಿತು ರಾಷ್ಟ್ರೀಯ …

Read More »

ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ

ಹುಬ್ಬಳ್ಳಿ : ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಘಟಪ್ರಭಾ ಹಾಗೂ ಮಲಪ್ರಭಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಹಾನಿ ಸಂಭವಿಸಿದೆ. ಜಲದಿಗ್ಬಂಧನ ಉತ್ತರ ಕನ್ನಡದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದೆ. ಅಘನಾಶಿನಿ, ವಾಲಗಳ್ಳಿ-ಅರೋಡಿ ರಸ್ತೆಗಳು ಜಲಾವೃತವಾಗಿವೆ. ಅಂಕೋಲಾದ ಹಾರವಾಡದಲ್ಲಿ ಕಡಲ್ಕೊರೆತವಾಗಿದೆ. ಕಾರವಾರದ ಚೆಂಡಿಯಾ, …

Read More »