Breaking News

Daily Archives: ಜುಲೈ 9, 2024

ಎಸ್‌ಐಟಿ ಮುಂದೆ ಹಾಜರಾದ ಮಾಜಿ ಸಚಿವ ನಾಗೇಂದ್ರ

ಬೆಂಗಳೂರು,ಜು.9- ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಇಂದು ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರು ಎಸ್‌‍ಐಟಿ ಮುಂದೆ ವಿಚಾರಣೆಗೆ ಹಾಜರಾದರು. ಈ ಹಗರಣದಲ್ಲಿ ನಾಗೇಂದ್ರ ಅವರು ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ ನೋಟೀಸ್‌‍ ನೀಡಿತ್ತು. ಹಾಗಾಗಿ ಇಂದು ಸಿಐಡಿ ಕಚೇರಿಯಲ್ಲಿರುವ ಎಸ್‌‍ಐಟಿ ಮುಂದೆ ನಾಗೇಂದ್ರ ಅವರು ಹಾಜರಾಗಿದ್ದು, ತನಿಖಾಧಿಕಾರಿಗಳು ಅವರಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. …

Read More »

ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು

ಬೆಳಗಾವಿ, ಜು.09: ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ವೃದ್ಧೆಯರ ನರಳಾಟ ಮನಕಲಕುವಂತಿದೆ. ಹೌದು,  ಕೆಲ ದಿನಗಳ ಹಿಂದೆ ಮಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಹಿನ್ನಲೆ ಬೆಳಗಾವಿಯ ಕ್ಯಾಂಪ್​ನ ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪುಟ್ ಪಾತ್ ಮೇಲೆ ತಾಡಪಲ್ ಕಟ್ಟಿಕೊಂಡು ಅಕ್ಕ ಮಂಗಲಾ ಅಜ್ಗಾಂವಕರ್(75) ಮತ್ತು ಮನೋರಮಾ(70) ಎಂಬುವವರು ಜೀವನ ನಡೆಸುತ್ತಿದ್ದು, ಎಂತಹವರನ್ನಾದರೂ ಕರುಳು ಹಿಂಡುವಂತೆ ಮಾಡುತ್ತದೆ. ಪುಟ್​ಪಾತ್​ನಲ್ಲಿ ವಾಸ ಇನ್ನು ಇವರ ಸಾಮಾಗ್ರಿಗಳೆಲ್ಲವೂ ಬಿದ್ದ …

Read More »

ಸಾಮರಸ್ಯದ ನವಲಗುಂದ ನಾಗಲಿಂಗ ಅಜ್ಜ

ನವಲಗುಂದ: ಮನುಷ್ಯ ಮನುಷ್ಯರನ್ನು ದ್ವೇಷಿಸುವ ಇಂದಿನ ದಿನಮಾನದಲ್ಲಿ ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟು, ಗದ್ದುಗೆಯ ಮೇಲೆ ಬೈಬಲ್ ಇಟ್ಟು ಪೂಜೆ ಮಾಡುವ ಮೂಲಕ ಹಿಂದೂ-ಮುಸ್ಲಿಂ, ಕ್ರೈಸ್ತರಲ್ಲಿ ಸಾಮರಸ್ಯ ಮೂಡಿಸುತ್ತಿರುವ ನವಿಲುಗುಂದ ಶ್ರೀ ಅಜಾತನಾಗಲಿಂಗಸ್ವಾಮಿ ಮಠ ಈ ನಾಡಿನಲ್ಲಿ ಬೇರೆಡೆ ಇಲ್ಲ. ಹೌದು ಪಟ್ಟಣದ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠದಲ್ಲಿ ಬೈಬಲ್‍ಗೆ ಮಳೆ ಜಡಿದು ರಂಧ್ರ ಮಾಡಿ, ರಂಧ್ರ ಮುಚ್ಚಿದ ಮೇಲೆ ಮತ್ತೆ ಹುಟ್ಟಿ ಬರುವೇನೆಂದು ಹೇಳಿದ್ದ ಶ್ರೀಗಳು ಪವಾಡಗಳ ಮಹಿಮಾ …

Read More »

ಬೆಂಗಳೂರು ದಕ್ಷಿಣ ಜಿಲ್ಲೆ ರಚಿಸಿದರೆ ರಾಮನಗರವೇ ಹೆಡ್ ಕ್ವಾರ್ಟರ್!

ಬೆಂಗಳೂರು: ರಾಮನಗರವು ಮೊದಲು ಬೆಂಗಳೂರು ಜಿಲ್ಲೆಯಲ್ಲೇ ಇತ್ತು, ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಬಳಿಕ ಹೆಸರು ಬದಲಾವಣೆ ಆಗಲಿದೆ. ಈಗಿರುವ ರಾಮನಗರವೇ ಹೆಡ್ ಕ್ವಾರ್ಟರ್ ಆಗಿರಲಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕುಗಳು ಬೆಂಗಳೂರು ದಕ್ಷಿಣದ ವ್ಯಾಪ್ತಿಗೆ ಸೇರಲಿವೆ. ಈ …

Read More »

ಹೈಕೋರ್ಟ್‌ ಗೆ ನಟ ದರ್ಶನ್‌ ʻರಿಟ್‌ ಅರ್ಜಿ ಸಲ್ಲಿಕೆ

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಇದೀಗ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ತಮಗೆ ಊಟ, ಹಾಸಿಗೆ, ಪುಸ್ತಕಗಳನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಹೈಕೋರ್ಟ್‌ ಗೆ ನಟ ದರ್ಶನ್‌ ಅವರು ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾಗೌಡ …

Read More »

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಸ್ಪೋಟದಂತ ಶಬ್ದ ಕೇಳಿಬಂದು ಭೂಮಿ ನಡುಗುವ ಅನುಭವವಾಗಿದೆ. ವಿಜಯಪುರ ಜಿಲ್ಲೆಯ ಇಂಡಿಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇಂದು ಬೆಳಗ್ಗೆ 10.53 ರ ಸುಮಾರಿಗೆ ಇಂಡಿ, ತಡವಲಗಾ, ಇಂಗಳಗಿ, ಹಂಗಳಗಿ, ನಿಂಬಾಳ, ಹೊರ್ತಿ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲು ಸ್ಪೋಟದಂತಹ ಶಬ್ದ ಕೇಳಿಬಂದಿದ್ದು, ಬಳಿಕ ಭೂಮಿ ನಡುಗಿದ ಅನುಭವವಾಗಿದೆ …

Read More »

ಅನರ್ಹ ʻBPLʼ ಕಾರ್ಡ್‌ ರದ್ದು : ʻCMʼ ಸಿಎಂ

ಬೆಂಗಳೂರು : ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೂಡಲೇ ಸಮಗ್ರ ಪರಿಶೀಲನೆ ನಡೆಸಿ ಅನರ್ಹ ಬಿಪಿಎಲ್‌ ಕಾರ್ಡ್‌ ಕೈಬಿಡಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಬಿಪಿಎಲ್‌ ಕುಟುಂಬಗಳಲ್ಲಿನ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಅವರ ಸಮಸ್ಯೆ, ದೂರುಗಳನ್ನು ಆಲಿಸಿ ಅಗತ್ಯ …

Read More »

ಅಣ್ಣಾ.. ಈ ಬಸ್‌ ಎಲ್ಲಿಗ್‌ ಹೋಗುತ್ತೆ.? ಶೆಡ್‌ಗೆ ಹೋಗುತ್ತೆ ಬರ್ತೀಯಾ?: ವಿಡಿಯೋ ಭಾರೀ ವೈರಲ್‌

ಬೆಂಗಳೂರು, ಜುಲೈ, 09: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಪಾಲಾದಾಗಿನಿಂದ ಬಾ.. ಶೆಡ್‌ಗೆ ಹೋಗುವ.. ಕೊಂಟೆಬಿಲ್ಲೆ ಆಡುವ ಬಾ ಎನ್ನುವ ರೀಲ್ಸ್‌ ವಿಡಿಯೋಗಳು ಸಾಮಾಜಿಕ ಜಲಾತಾಣಗಳಲ್ಲಿ ಫುಲ್‌ ಟ್ರೆಂಡ್‌ ಆಗಿಬಿಟ್ಟಿವೆ. ಇದೋಗ ಅದೇ ಶೈಲಿಯಲ್ಲಿ ಮತ್ತೊಂದು ವಿಡಿಯೋ ವೈರಲ್‌ ಆಗುತ್ತಿದೆ. ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ವಿವಿಧ ಆಯಾಮಗಳಲ್ಲಿ ಈ ರೀಲ್ಸ್‌ ಮಾಡುತ್ತಿದ್ದಾರೆ. ಅದು ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ಕೆಣಕಿದಾಗಿನಿಂದ ಈ ರೀಲ್ಸ್‌ಗಳು …

Read More »

ಮುಡಾ ಅಕ್ರಮ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ದೇವರಾಜು ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂಡಾಗೆ ವಂಚಿಸಿದ್ದಾರೆ ಎಂದು ದೂರಿದ್ದಾರೆ. ಮೂಡಾ …

Read More »

ರಾಜ್ಯದಲ್ಲಿ ಸರ್ಕಾರ ಉಳಿದಿಲ್ಲ, ಮೂರು ಭಾಗಗಳಾಗಿದೆ:ಕಾರಜೋಳ

ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ವಿಚಾರಕ್ಕೆ ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ, ಸಿಎಂ ಸಿದ್ದರಾಮಯ್ಯ ಆಡಳಿತ ಕುರಿತು ವ್ಯಂಗ್ಯವಾಡಿದರು. ‘ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ. ಒಂದು ಸಿದ್ದರಾಮಯ್ಯನವರದ್ದು, ಎರಡನೆಯದು ಡಿ.ಕೆ. ಶಿವಕುಮಾರ್ ಗುಂಪು ಮತ್ತೊಂದು ವೀರಶೈವ ಲಿಂಗಾಯತರದೊಂದು ಗುಂಪು. ನಮಗೆ ಸಿದ್ದರಾಮಯ್ಯ ಸ್ಥಾನಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಅನೇಕ ಒತ್ತಾಯಗಳನ್ನು ಮಾಧ್ಯಮಗಳ ಮೂಲಕ ನಾನು ಕೂಡ ನೋಡಿದ್ದೇನೆ’ ಎಂದಿದ್ದಾರೆ. ‘ಸಿದ್ದರಾಮಯ್ಯನವರು ಆಡಳಿತದ …

Read More »