Breaking News

Yearly Archives: 2023

ಗುದ್ದಾಟ ಬಗೆಹರಿಸಲು ಮೋದಿಯೇ ಬರಬೇಕಂತೆ!

ಸಚಿವ ನಿರಾಣಿ-ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆ ವೈಮನಸ್ಸು-ಸಮರ ಜೋರಾಗಿ ನಡೆದಿದೆ. ಅದೇ ತೆರನಾಗಿ ಕಲಬುರಗಿ ಜಿಲ್ಲೆಯ ಒಬ್ಬರು ಬಿಜೆಪಿ ಶಾಸಕರ ನಡುವೆಯೂ ಆಂತರಿಕ ತಿಕ್ಕಾಟವೂ ಜೋರಾಗಿದೆ. ಶಾಸಕರ ತಾರಾಜೋಡಿ-ಸಹೋದರರಂತಿದ್ದ ಕೆಕೆಆರ್‌ಟಿಸಿ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ್‌ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ಪರಸ್ಪರ ಮುನಿಸಿಕೊಂಡಿದ್ದಾರೆ. ಕೆಲವು ತಿಂಗಳುಗಳಿಂದ ಮಾತುಕತೆ ನಡೆಯದೇ ಶೀತಲ ಸಮರ ನಡೆಯುತ್ತಿದೆ. ಕೋರ್‌ ಕಮಿಟಿ ಸಭೆಯಲ್ಲಂತೂ …

Read More »

ಆಸ್ಪತ್ರೆಯಲ್ಲಿ ಬೆಂಕಿ: ದಟ್ಟ ಹೊಗೆಗೆ ಉಸಿರುಗಟ್ಟಿ ವೈದ್ಯ ದಂಪತಿ ಸೇರಿ ಐವರ ಸಾವು

ಧನ್ಬಾದ್(ಜಾರ್ಖಂಡ್​​): ಇಲ್ಲಿನ ಎಕ್ಸ್‌ಚೇಂಜ್ ರಸ್ತೆಯಲ್ಲಿರುವ ಹಾಜ್ರಾ ಆಸ್ಪತ್ರೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು, ವೈದ್ಯ ದಂಪತಿ ಸೇರಿದಂತೆ ಐವರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಇನ್ನೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹಾಜ್ರಾ ಆಸ್ಪತ್ರೆಗೆ ಹೊಂದಿಕೊಂಡಂತೆ ವೈದ್ಯ ದಂಪತಿ ವಾಸಿಸುತ್ತಿದ್ದರು. ಆಸ್ಪತ್ರೆ ಮತ್ತು ವೈದ್ಯರ ಮನೆ ಮಧ್ಯೆ ಚಿಕ್ಕದಾದ ದಾರಿ ಇದೆ. ಆಸ್ಪತ್ರೆಯಲ್ಲಿ ಬೆಂಕಿ …

Read More »

ಜನ ಕಲ್ಯಾಣ ಹಾಗೂ ಲೋಕ ಕಲ್ಯಾಣಕ್ಕಾಗಿ ಬಲಭೀಮ ದೇವಸ್ಥಾನದಲ್ಲಿ ಹೋಮ ಪೂಜೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕುಲಗೋಡ (ತಾ.ಮೂಡಲಗಿ)- ಲೋಕ ಕಲ್ಯಾಣ ಹಾಗೂ ಜನರ ಏಳ್ಗೆಗಾಗಿ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಬೆಳಗಿನ ಜಾವ ಇಲ್ಲಿನ ಇತಿಹಾಸ ಪ್ರಸಿದ್ಧ ಬಲಭೀಮ ದೇವಸ್ಥಾನದಲ್ಲಿ ಹೋಮ- ಹವನ ನಡೆಸಿದರು. ಅರಭಾವಿ ಕ್ಷೇತ್ರದ ಜನರಿಗೆ ಸದಾಕಾಲವೂ ಒಳ್ಳೆಯದಾಗಬೇಕು. ಕಷ್ಟ ಕಾರ್ಪಣ್ಯಗಳು ದೂರ ಸರಿಯಬೇಕು. ಕಾಲ-ಕಾಲಕ್ಕೆ ಮಳೆ ಬಂದು ಉತ್ತಮ ಬೆಳೆ ಬಂದರೆ ರೈತನ ಮೊಗದಲ್ಲಿ ಸಂತಸ ಮೂಡುತ್ತದೆ. ರೈತ ಚೆನ್ನಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ. …

Read More »

ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್​ಇ ಕಾರಣ: ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯ0

ಹುಬ್ಬಳ್ಳಿ: ಗಡಿ ಜಿಲ್ಲೆ ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್​ಇ ಸಂಸ್ಥೆ ಕಾರಣ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂ.ಆರ್. ಸಾಖರೆ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಕೆಎಲ್​ಇ ಸಂಸ್ಥೆ ಬೆಳಗಾವಿ ಮತ್ತು ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿದ್ದ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸುವರ್ಣ ವಿಧಾನಸೌಧ ನಿರ್ವಣಕ್ಕೂ ಪೂರ್ವ ಬೆಳಗಾವಿಯ ಕೆಎಲ್​ಇ ಕಾಲೇಜಿನಲ್ಲಿ 2 ಬಾರಿ ವಿಧಾನ ಮಂಡಲ ಅಧಿವೇಶನ …

Read More »

ತಡರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮನ.. ಸಿಎಂ, ಬಿಜೆಪಿ ನಾಯಕರಿಂದ ಸ್ವಾಗತ

ಹುಬ್ಬಳ್ಳಿ/ಧಾರವಾಡ/ಬೆಳಗಾವಿ: ವಿಶೇಷ ವಿಮಾನದ ಮೂಲಕ ದೆಹಲಿಯಿಂದ ವಾಣಿಜ್ಯನಗರಿ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದರು. ತಡರಾತ್ರಿ ನಗರಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ವಾಗತ ಕೋರಿದರು. ಇಲ್ಲಿನ ಡೆನಿಸನ್ ಹೋಟೆಲ್​ನಲ್ಲಿ ಅಮಿತ್ ಶಾ ಅವರು ವಾಸ್ತವ್ಯ ಹೂಡಿದ್ದು ಹುಬ್ಬಳ್ಳಿ, ಧಾರವಾಡ, ಕುಂದಗೋಳ ಮತ್ತು ಬೆಳಗಾವಿಯಲ್ಲಿ …

Read More »

ಗಮನ ಸೆಳೆಯುತಿದೆ ನರೇಗಾ ಮಾದರಿ ಗ್ರಾಮ

ಕಾರ್ಕಳ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ವಿವಿಧ ಇಲಾಖೆಗಳು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮಾದರಿ ಹಾಗೂ ಅದರ ಮಾಹಿತಿಯನ್ನು ಒಂದೇ ಸೂರಿನಡಿ ರೈತರಿಗೆ ಒದಗಿಸುವ ಕೆಲಸ ಪರಶುರಾಮ ಥೀಂ ಪಾರ್ಕ್‌ ಲೋಕಾರ್ಪಣೆ ವೇಳೆಗೆ ಜಿಲ್ಲಾ ಪಂಚಾಯತ್‌ ಮಾಡಿದೆ. ಬೈಲೂರಿನಲ್ಲಿರುವ ಪರಶುರಾಮ ಥೀಂ ಪಾರ್ಕ್‌ ಪರಿಸರದಲ್ಲಿ ಮಾದರಿ ಗ್ರಾಮ ನಿರ್ಮಿಸಲಾಗಿದ್ದು ರಾಜೀವ್‌ ಗಾಂಧಿ ಸೇವಾ ಕೇಂದ್ರ, ಪಂ. ಕಟ್ಟೆ, ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾದರಿ, ಕಾಲುಸಂಕ, ಅಮೃತ ಸರೋವರ, ಕುರಿ, …

Read More »

ಕಲ್ಲೋಳಿಯಲ್ಲಿ 5.50 ಕೋಟಿ ರೂಗಳ ವೆಚ್ಚದ ನಗರೋತ್ಥಾನ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

*ಮೂಡಲಗಿ:* ನಗರೋತ್ಥಾನ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಕಲ್ಲೋಳ್ಳಿ ಪಟ್ಟಣದಲ್ಲಿ 5.50ಕೋಟಿ ರೂಗಳ ವೆಚ್ಚದ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ಕಾಮಗಾರಿಗಳು ಆದಷ್ಟು ಬೇಗನೇ ಪೂರ್ಣ ಮಾಡುವಂತೆ ಸೂಚಿಸಿದರು. ಕಲ್ಲೋಳಿ ಪಟ್ಟಣದ ನಾಗರೀಕರಿಗೆ …

Read More »

ಮಂಜೂರಾದ ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ವಿಳಂಬ:ಪ್ರಕಾಶ ಹುಕ್ಕೇರಿ

ಚಿಕ್ಕೋಡಿ: ಕಳೆದ 2014ರಲ್ಲಿ ಮಂಜೂರಾದ ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ವಿಳಂಬವಾಗುತ್ತಿದ್ದು, ಬರುವ ಒಂದು ವರ್ಷದ ಒಳಗೆ ರೈತರಿಗೆ ಸೂಕ್ತ ಪರಿಹಾರ ನೀಡಿ ರೈಲ್ವೆ ಲೈನ್ ಕಾಮಗಾರಿ ಮುಕ್ತಾಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸರ್ಕಾರವನ್ನು ಒತ್ತಾಯಿಸಿದರು.   ಚಿಕ್ಕೋಡಿ ನಗರದಲ್ಲಿ ಮಾತನಾಡಿದ ಅವರು, ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಬಾಗಲಕೋಟ ಜಿಲ್ಲೆಯ ಹದ್ದಿಯಲ್ಲಿ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ …

Read More »

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಪ್ರತೀ ಸರಕಾರಿ ಕಾಲೇಜಿನಲ್ಲೂ ಸಂಗೊಳ್ಳಿ ರಾಯಣ್ಣ ಹಾಗೂ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆ ಸ್ಥಾಪನೆಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 192ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಯಾರು ನಿಜವಾಗಿಯೂ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂಬುದು ನಮ್ಮ ಮಕ್ಕಳಿಗೆ ತಿಳಿಯಬೇಕು. ಅದಕ್ಕಾಗಿ ಈ ವೀರರ ಪ್ರತಿಮೆಗಳನ್ನು ಸ್ಥಾಪಿಸಲು ಸೂಚಿಸುವುದಾಗಿ …

Read More »

ಬೆಳಗಾವಿ ಮಹಿಳೆಯರಿಗಾಗಿ ಬಂತು ಪಿಂಕ್ ಬಸ್ ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ

ಬೆಳಗಾವಿ: ವಾಕರಸಾ ಸಂಸ್ಥೆ, ಬೆಳಗಾವಿ ವಿಭಾಗದಿಂದ  ಬೆಳಗಾವಿ ಸಿಬಿಟಿ-ಮಜಗಾಂವ, ಸಿಬಿಟಿ-ವಡಗಾಂವ, ಸಿಬಿಟಿ-ಅನಗೋಳ ಮಾರ್ಗಗಳಲ್ಲಿ ‘ಪಿಂಕ್ ಬಸ್’ (ಮಹಿಳಾ ವಿಶೇಷ ವಾಹನ)ಗಳನ್ನು ಪ್ರಾರಂಭಿಸಲಾಗಿದೆ. ಬೆಳಗಾವಿ ಉತ್ತರ ಮತಕ್ಷೆತ್ರ ಶಾಸಕ ಅನಿಲ ಬೆನಕೆ,  ಅವರು ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಮಹಿಳಾ ಕ್ಲಬ್‌ನ ಪ್ರೆಸಿಡೆಂಟ್ ಶಾಲಿನಿ ಚೌಗಲಾ, ಕಾರ್ಯದರ್ಶಿ ಪುಷ್ಪಾಂಜಲಿ ಹಾಗೂ ಚೇರ್ ಪರ್ಸನ್‌ ಸುನಂದಾ ಕರಲಿಂಗನ್ನವರ ಉಪಸ್ಥಿತರಿದ್ದರು. ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾ  …

Read More »