ಬೆಂಗಳೂರು: “ಬುಧವಾರದಿಂದ ಮುಷ್ಕರ ನಡೆಯುವುದು ಶತಸಿದ್ಧ. ಯಾವ ಕಾರಣಕ್ಕೂ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ,ಈ ವಿಷಯದಲ್ಲಿ ರಾಜ್ಯ ಸರಕಾರಿ ನೌಕರರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು” ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಹಿರಿಯ ಅಧಿಕಾರಿಗಳೂ ಸೇರಿದಂತೆ ರಾಜ್ಯ ಸರಕಾರದ ಎಲ್ಲ ನೌಕರರು ಈ ಮುಷ್ಕರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಅವರು …
Read More »Yearly Archives: 2023
ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳು ಬಂದ್?
ಬೆಂಗಳೂರು: 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಕರೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರಿ ಶಾಲಾ ಶಿಕ್ಷಕರು ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇದ್ದು ಮುಷ್ಕರದಲ್ಲಿ ಭಾಗಿಯಾಗುವಂತೆ ಷಡಕ್ಷರಿ …
Read More »ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ಧತೆ ಆರಂಭ
2023ರ ಡಿಸೆಂಬರ್ ತಿಂಗಳಿನಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಮೈಸೂರು: 2023ರ ಡಿಸೆಂಬರ್ ತಿಂಗಳಿನಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ …
Read More »ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲು
ಕಲಬುರಗಿ: ಬಹು ದಿನಗಳ ಬೇಡಿಕೆಯಾಗಿದ್ದ ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ಡಾ. ಉಮೇಶ ಜಾಧವ್ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಒಂದೇ ಡೆಮು ರೈಲು ಇದ್ದು, ನಿತ್ಯ ಎರಡು ಬಾರಿ ಸಂಚರಿಸುತ್ತದೆ. ಹೊಸದಾಗಿ ಆರಂಭವಾಗುವ ಡೆಮು ರೈಲು ನಿತ್ಯ ಬೆಳಿಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 10.15ಕ್ಕೆ ಬೀದರ್ …
Read More »ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನೂರಾರು ಉದ್ಯಾನಗಳು ಈಗ ನಿರ್ವಹಣೆ ಇಲ್ಲದೇ ಸೊರಗಿವೆ.
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನೂರಾರು ಉದ್ಯಾನಗಳು ಈಗ ನಿರ್ವಹಣೆ ಇಲ್ಲದೇ ಸೊರಗಿವೆ. ಮಳೆಗಾಲದಲ್ಲಿ ನೈಸರ್ಗಿಕ ನೀರಿನ ಕಾರಣ ದಟ್ಟ ಹಸಿರು, ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸುತ್ತಿದ್ದ ಉದ್ಯಾನಗಳು ಈಗ ಹಾಳು ಕೊಂಪೆ ಯಾಗಿವೆ. ನೆರಳು, ನೆಮ್ಮದಿ ಹುಡುಕಿ ಬಂದವರಿಗೆ ಮುಳ್ಳು-ದಾರಿಗಳಾಗಿವೆ. ‘ಸ್ಮಾರ್ಟ್‌ಸಿಟಿ’ ಯೋಜನೆ ಕಾರ್ಯಗತವಾಗಿರುವ ಬೆಳಗಾವಿ ನಗರದಲ್ಲಿ 120ಕ್ಕೂ ಹೆಚ್ಚು ಉದ್ಯಾನಗಳಿವೆ. ಇವುಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 88 ಉದ್ಯಾನಗಳಿವೆ. ಅದರ ಪೈಕಿ 60 ಉದ್ಯಾನಗಳು ಸುಸ್ಥಿತಿಯಲ್ಲಿದ್ದು, ಉಳಿದವು ಮೂಲಸೌಕರ್ಯಗಳಿಂದ …
Read More »ಖಾನಾಪುರ: ಕ್ರೀಡಾ ವಿಜೇತರಿಗೆ ನಗದು ಬಹುಮಾನ
ಖಾನಾಪುರ: ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗನಮಠ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಿಗೆ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಭಾನುವಾರ ನಗದು ಬಹುಮಾನ ವಿತರಿಸಿದರು. ಚಾಂಪಿಯನ್ ತಂಡಕ್ಕೆ ₹50 ಸಾವಿರ, ದ್ವಿತೀಯ ಸ್ನಾನ ಪಡೆದ ತಂಡಕ್ಕೆ ₹ 25 ಸಾವಿರ, ತೃತೀಯ ಸ್ಥಾನದ ಆಟಗಾರರಿಗೆ ₹ 10 ಸಾವಿರದ ಚೆಕ್‌ಗಳನ್ನು ಅವರು ನೀಡಿದರು. ನಂತರ ಮಾತನಾಡಿ, ‘ಮುಂದಿನ ವರ್ಷದಿಂದ ಈ ನಗದು ಬಹುಮಾನ ಮೊತ್ತವನ್ನು ₹ 5 ಲಕ್ಷಕ್ಕೆ ಏರಿಸಲಾಗುವುದು. …
Read More »ವಿದ್ಯಾರ್ಥಿಗಳಿಗೆ ವಿಎಸ್‍ಎಂ ಫೌಂಡೇಷನ್ ನೆರವು
ನಿಪ್ಪಾಣಿ: ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅವರು ತಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಡ ವಿದ್ಯಾರ್ಥಿಗಳ ಮನೆಗಳಿಗೆ ಶನಿವಾರ ತೆರಳಿ ಆರೋಗ್ಯ ವಿಚಾರಿಸಿ, ವಿಎಸ್‍ಎಂ ಫೌಂಡೇಷನ್‍ನಿಂದ ₹21 ಸಾವಿರ ಧನಸಹಾಯ ಮಾಡಿದರು. 5ನೇ ತರಗತಿಯ ಅಭಿಷೇಕ ವಿಕ್ರಮ ಕದಮ, 6ನೇ ತರಗತಿ ಆರ್ಯನ್ ಕುಂದನ್ ಖೋತ ಶಸ್ತ್ರಚಿಕಿತ್ಸೆಗೆ ಒಳಗಾದವರು.
Read More »ಚಿಕ್ಕೋಡಿ: ಆಲಿಸಿದ ಪಾಠ ಅರಿತು ಬಾಳಿರಿ
ಚಿಕ್ಕೋಡಿ: ‘ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಕೇವಲ ಉತ್ಸವವಾಗದೇ, ಇಲ್ಲಿ ಆಲಿಸಿದ, ವೀಕ್ಷಿಸಿದ ಎಲ್ಲ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಮತೋಲನ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಬೇಕು’ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಮಠದಲ್ಲಿ ಭಾನುವಾರ ಉತ್ಸವದ ಸಮಾರೋಪದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಮನುಷ್ಯನಿಗಿಂತ ಮರೆಗುಳಿತನ ಹೊಂದಿರುವ ಜೀವಿ ಇನ್ನೊಂದಿಲ್ಲ. ವಿನಾಶ ಕಾಲ ಸಮೀಪಿಸುತ್ತಿದೆ ಎಂಬುದು ಮನುಕುಲ …
Read More »ನಿಪ್ಪಾಣಿ: ‘ನಿರ್ಲಕ್ಷಿತ ಗ್ರಾಮದಲ್ಲಿ ಅಭಿವೃದ್ಧಿ’
ನಿಪ್ಪಾಣಿ: ‘ರಾಜ್ಯದ ಕಟ್ಟಕಡೆಯ ಗಾಯಕವಾಡಿ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ನನ್ನ ಆಡಳಿತಾವಧಿಯಲ್ಲಿ ಗ್ರಾಮದಲ್ಲಿ ಈವರೆಗೆ ₹8.4 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾಲ್ಲೂಕಿನ ಗಾಯಕವಾಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಮೋದನೆಗೊಂಡ ₹ 85 ಲಕ್ಷ ಅನುದಾನದ ಗಾಯಕವಾಡಿ-ಕೋಡಣಿ ಗ್ರಾಮಗಳ ನಡುವಿನ ಹಳ್ಳದ ಬ್ರಿಜ್ ಕಂ ಬ್ಯಾರೇಜ್ ಮತ್ತು ಲೋಕೋಪಯೋಗಿ ಇಲಾಖೆಯಿಂದ ವಿವೇಕ ಶಾಲಾ ಯೋಜನೆಯಡಿ ಅನುಮೋದನೆಗೊಂಡ ₹15 …
Read More »ಬೆಳಗಾವಿಗರ ಪ್ರೀತಿ ಬಡ್ಡಿ ಸಮೇತ ವಾಪಸ್ : ಪ್ರಧಾನಿ ನರೇಂದ್ರ ಮೋದಿ
ಬೆಳಗಾವಿ: ‘ಬೆಳಗಾವಿ ಜನ ತೋರಿದ ಪ್ರೀತಿ, ಮಾಡಿದ ಆಶೀರ್ವಾದ ನನಗೆ ಸ್ಫೂರ್ತಿ ನೀಡಿದೆ. ಬೆಳಗಾವಿ ಕುಂದಾ, ಬೆಳಗಾವಿ ಮಂದಿ ಎರಡೂ ಬಹಳ ಸಿಹಿ. ನಿಮ್ಮ ಈ ಪ್ರೀತಿಯನ್ನು ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು. ನಗರದಲ್ಲಿ ಸೋಮವಾರ ₹2,240 ಕೋಟಿ ವೆಚ್ಚದ ರೈಲ್ವೆ ಕಾಮಗಾರಿ, ಜಲಜೀವನ್ ಮಿಷನ್ ಯೋಜನೆಗಳ ಉದ್ಘಾಟನೆ- ಶಂಕುಸ್ಥಾಪನೆ ನೆರವೇರಿಸಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹16 ಸಾವಿರ ಕೋಟಿಯನ್ನು …
Read More »