ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರ ಚುನಾವಣೆ ಪ್ರಚಾರಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಸೋಮವಾರ ಆಗಮಿಸಲಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿ ಜನಪ್ರಿಯಗಳಿಸಿದ ನಟ ಸುದೀಪ್ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಭಯ ಪಾಟೀಲ ಪರ ಚುನಾವಣೆ ಪ್ರಚಾರ ನಡೆಸಲಿದ್ದಾರೆ. ನಾಳೆ ಸಂಜೆ: 5 ಗಂಟೆಗೆ ಖಾಸಭಾಗ ಬಸವೇಶ್ವರ ಸರ್ಕಲ್ ದಿಂದ ಪ್ರಚಾರ ಪಾದಯಾತ್ರೆ …
Read More »Yearly Archives: 2023
ಬೆಳಗಾವಿಯ ವಿವಿಧೆಡೆಗಳಲ್ಲಿ ಮತದಾನದ ಬಗ್ಗೆ ವಿಶೇಷವಾಗಿ ಜಾಗೃತಿ ಅಭಿಯಾನ
ಬೆಳಗಾವಿ: ಬೆಳಗಾವಿಯ ವಿವಿಧೆಡೆಗಳಲ್ಲಿ ಮತದಾನದ ಬಗ್ಗೆ ವಿಶೇಷವಾಗಿ ಜಾಗೃತಿ ಅಭಿಯಾನ ನಡೆಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕಾ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ರವಿವಾರ ಏಪ್ರಿಲ್.30 ರಂದು ಕಂಗ್ರಾಳಿ ಬಿ.ಕೆ ಗ್ರಾಮದ ಚಾವಟ ವೃತದಲ್ಲಿ ಕಾಲ್ನಡಿಗೆ ಮತದಾನ ಜಾಗೃತಿ ಮತ್ತು ಬೀದಿ ನಾಟಕಕ್ಕೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರೆಪ್ಪನವರ ಅವರು ಚಾಲನೆ ನೀಡಿದರು. ಗ್ರಾಮದ ಚಾವಟ ವೃತ್ತದಿಂದ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆವರೆಗೆ ಮತದಾನ ಜಾಗೃತಿ …
Read More »ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ಅಭ್ಯರ್ಥಿ ಪಿ.ರಾಜೀವ್ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ, ಏ.30(ಕರ್ನಾಟಕ ವಾರ್ತೆ): ಕುಡಚಿ ಮತಕ್ಷೇತ್ರದಲ್ಲಿ ಏ.29 ರಂದು ನಡೆದ ಬಿಜೆಪಿ ಸಮಾವೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸೇರಿಸಲು ಹಣ ಹಂಚಿಕೆ ಮಾಡಿ ಆಮಿಷ ತೋರಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಿ.ರಾಜೀವ ಸೇರಿದಂತೆ ಇಬ್ಬರ ವಿರುದ್ಧ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿರುತ್ತದೆ. ಮಾನ್ಯ ಪ್ರಧಾನಮಂತ್ರಿಗಳು ಭಾಗವಹಿಸಿದ್ದ ಬಿಜೆಪಿ ಪಕ್ಷದ ಬಹಿರಂಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ಧೇಶದಿಂದ ಮುಗಳಖೋಡ ಪಟ್ಟಣದ ಬಳಿ ಏ.29 …
Read More »ದಳವಾಯಿಯನ್ನು ತಿರಸ್ಕರಿಸಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಗೆಲ್ಲಿಸಲು ಒಮ್ಮತದ ನಿರ್ಣಯ ಕೈಕೊಂಡ ಅರಭಾವಿ ಕ್ಷೇತ್ರದ ಹಾಲು ಮತ ಸಮಾಜ
ಮೂಡಲಗಿ: ನನ್ನ ರಾಜಕೀಯ ಏಳ್ಗೆಯಲ್ಲಿ ಹಾಲುಮತ ಸಮಾಜದ ಪಾತ್ರ ಮಹತ್ತರವಿದ್ದು, ೧೯೯೨ರಿಂದ ಈ ಸಮಾಜವು ನಮ್ಮ ಕುಟುಂಬದ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಹಾಲುಮತ ಸಮಾಜದವರು ಈ ಬಾರಿ ಪ್ರತಿಶತ ೯೫ರಷ್ಟು ಮತಗಳನ್ನು ನನಗೆ ನೀಡಿದರೆ ದೊಡ್ಡ ಪ್ರಮಾಣದಲ್ಲಿ ಗೆಲುವನ್ನು ದಾಖಲಿಸಲು ಅನುಕೂಲವಾಗುತ್ತದೆ ಎಂದು ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾಜ ಬಾಂಧವರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು. ಅವರು, ರವಿವಾರದಂದು ಪಟ್ಟಣದ ಹಂದಿಗುಂದ …
Read More »ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಶೋಭಾ ಕರಂದ್ಲಾಜೆ 1d
ಶಿವಮೊಗ್ಗ: ‘ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ಈ ಬಾರಿ ಭಾರತೀಯ ಜನತಾ ಪಾರ್ಟಿ ಪೂರ್ಣ ಬಹುಮತದ ಸರ್ಕಾರವನ್ನು ರಚನೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕಾರ್ಯಗಳು ಪ್ರಾರಂಭವಾಗಿದೆ. ಕೇಂದ್ರದ ನಮ್ಮ ನಾಯಕರು ರಾಜ್ಯದ ಎಲ್ಲಾ ನಾಯಕರು ಕೂಡ ರಾಜ್ಯಾದ್ಯಂತ ಪ್ರವಾಸ …
Read More »ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿರಬಹುದು : ಡಾ. ಜಿ ಪರಮೇಶ್ವರ್
ತುಮಕೂರು : ಚುನಾವಣಾ ಪ್ರಚಾರದ ವೇಳೆ ತಮ್ಮ ಮೇಲೆ ಕಲ್ಲೆಸೆತ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ನನ್ನ ಮೇಲೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಎಂದು ಹೇಳಲಾಗುವುದಿಲ್ಲ. ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿರಬಹುದೆಂದು ಎಂದು ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಅದು ತುಂಬಾ ದಪ್ಪ ಇತ್ತು. ಯಾರೋ ದುಷ್ಕರ್ಮಿಗಳು ಕಲ್ಲೆಸೆದಿರಬಹುದು. …
Read More »ಚುನಾವಣಾ ಅಕ್ರಮದ ಅಬ್ಬರ: 300 ಕೋಟಿ ರೂ. ಗಡಿ ದಾಟಿದ ಒಟ್ಟು ಜಪ್ತಿ ಮೊತ್ತ
ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಚುನಾವಣಾ ಅಕ್ರಮಗಳು ಜೋರಾಗೆ ನಡೆಯುತ್ತಿವೆ. ಚುನಾವಣೆಗೆ ಇನ್ನು 12 ದಿನಗಳು ಬಾಕಿ ಇರುವಾಗಲೇ ಬರೋಬ್ಬರಿ 302 ಕೋಟಿ ರೂ. ಅಕ್ರಮ ನಗದು, ಮದ್ಯ, ಉಡುಗೊರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ಚುನಾವಣಾ ಆಯೋಗ ಸುಮಾರು 302.78 ಕೋಟಿ ರೂ. ಮೌಲ್ಯದ ನಗದು, ಮದ್ಯ ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಇದೇ …
Read More »ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿ
ಬಾಗಲಕೋಟೆ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗೆ ಚುನಾವಣೆ ಆಯೋಗದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದರೂ ಹಲವೆಡೆ ಇದುವರೆಗೂ ನೂರಾರು ಕೋಟಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಅಂತೆಯೇ ಜಿಲ್ಲೆಯ ಮುಧೋಳ ಮತಕ್ಷೇತ್ರದ ಲಕ್ಷಾನಟ್ಟಿ ಚೆಕ್ಪೋಸ್ಟ್ ಬಳಿ ಅಧಿಕಾರಿಗಳು ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 5 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಯಿಂದ ಮುಧೋಳಕ್ಕೆ ತೆರಳುತ್ತಿದ್ದ ವಾಹನವನ್ನು ಎಸ್ಎಸ್ಟಿ ತಂಡ ಪರಿಶೀಲನೆ ನಡೆಸಿದಾಗ ವಾಹನದಲ್ಲಿದ್ದ ವ್ಯಕ್ತಿಯು ಹಣವು ಯುನಿಯನ್ …
Read More »ಮಾಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಶನಿವಾರ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ನಡೆಸಿದರು.
ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಪ್ರಚಾರ ಅಖಾಡಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಳಿದಿದ್ದಾರೆ. ಅಂತೆಯೇ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಶನಿವಾರ ದೊಡ್ಡಗೌಡ್ರು ಭೇಟಿ ನೀಡಿ, ಕೆಂಪೇಗೌಡ ಕೋಟೆ ಮಾಗಡಿಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಅಭ್ಯರ್ಥಿ ಎ.ಮಂಜುನಾಥ್ ಪರ ಪ್ರಚಾರ ನಡೆಸಿದರು. ಹೆಲಿಕಾಪ್ಟರ್ ಮೂಲಕ ಮಾಗಡಿಗೆ ಬಂದಿಳಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ್ರು, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿದ ಮಾತನಾಡಿದ …
Read More »ಮನೆಯ ಅಂಗಳದ ಮುಂದೆ ಆಟವಾಡುತ್ತಿದ್ದ ಮಗು ಚರಂಡಿಯಲ್ಲಿ ಮುಳುಗಿ ದಾರುಣ ಸಾವು
ನೆಲಮಂಗಲ(ಬೆ.ಗ್ರಾಮಾಂತರ) : ನಗರದಲ್ಲಿ ಬೆಳಗ್ಗೆ ದುರಂತವೊಂದು ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ 11 ತಿಂಗಳ ಮಗು ಮನೆಯ ಮುಂಭಾಗದಲ್ಲಿದ್ದ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ರ್ದುಘಟನೆ ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಕಾಲೋನಿಯಲ್ಲಿ ನಡೆದಿದೆ. ಘಟನೆ ವಿವರ: ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಮನೆಯ ಅಂಗಳದಲ್ಲಿ ಮಗು ಆಟವಾಡಿ, ಮನೆಯ ಮುಂದೆ ನಿಂತಿದ್ದ ಕ್ಯಾಂಟರ್ ಕೆಳಗೆ ನುಸುಳಿ ಹೋಗಿದೆ. ಆದರೆ ಅಲ್ಲೇ ಸುಮಾರು 4 ಅಡಿಯ ಚರಂಡಿಯು ತೆರೆದಿತ್ತು, ಇದೇ ಚರಂಡಿಗೆ …
Read More »