ದಾವಣಗೆರೆ : ಬಸನಗೌಡ ಕುಸುಗೂರು ಮತ್ತು ವಿಜಯಲಕ್ಷ್ಮಿ ಬಿ.ಕುಸುಗೂರು ವೃತ್ತಿಯಲ್ಲಿ ವೈದ್ಯ ದಂಪತಿ. ವೃತ್ತಿ ಜೀವನದಲ್ಲಿ ಬಿಡುವು ಮಾಡಿಕೊಂಡು ತಮ್ಮ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಬಿಡಾಡಿ ದನಗಳನ್ನು ತಂದು ಪೋಷಣೆ ಮಾಡುತ್ತಿದ್ದಾರೆ. ಹೀಗೆ ಪೋಷಿಸಿದ ಜಾನುವಾರುಗಳನ್ನು ಬಡ ರೈತರಿಗೆ ಉಚಿತವಾಗಿ ಉಳುಮೆಗೆ ಕೊಡುತ್ತಿದ್ದಾರೆ. ಚನ್ನಗಿರಿ ತಾಲೂಕಿನ ಬಸವಪಟ್ಟಣ ಎಂಬ ಪುಟ್ಟ ಗ್ರಾಮದಲ್ಲಿ ಇವರು ಕುಸುಗೂರು ಡಾಕ್ಟರ್ ಎಂದೇ ಪರಿಚಿತರು. ದಶಕಗಳಿಂದ ವೈದ್ಯ ವೃತ್ತಿ ಮಾಡುತ್ತಾ ಅದರೊಂದಿಗೆ ಜಾನುವಾರುಗಳ …
Read More »Yearly Archives: 2023
ಬಾಂಗ್ಲಾ ವಿರುದ್ಧ ಸೋಲು ಕಂಡ ಭಾರತ…
ಕೊಲಂಬೊ (ಶ್ರೀಲಂಕಾ): ಯುವ ಆಟಗಾರ ಶುಭಮನ್ ಗಿಲ್ ಶತಕದ ಹೊರತಾಗಿಯೂ ಭಾರತ ತಂಡ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಮುಗ್ಗಿಸಿದೆ. ಪ್ರಿನ್ಸ್ ಗಿಲ್ ಶತಕವು ತಂಡದ ಜಯಕ್ಕೆ ಕೊಡುಗೆ ಆಗಲಿಲ್ಲ, ಅವರ ಆಟ ವ್ಯರ್ಥ ಪ್ರಯತ್ನದಂತಾಯಿತು. ಭಾರತ 49.5 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 259 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಬಾಂಗ್ಲಾ ಆರು ರನ್ಗಳ ಗೆಲುವು ದಾಖಲಿಸಿತು. ಏಷ್ಯಾ ಕಪ್ ಟೂರ್ನಿಯ ಆರನೇ ಸೂಪರ್ 4 ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದ …
Read More »5 ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ.
ಹೈದರಾಬಾದ್: 2024 ರ ಲೋಕಸಭಾ ಚುನಾವಣೆ ಸಮರಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ನಿರ್ಣಾಯಕ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಸಿದ್ಧತೆಗಳನ್ನು ಭರ್ಜರಿಯಾಗೇ ಆರಂಭಿಸಿದೆ. ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಮರು ಚೇತರಿಕೆ. ಮೈತ್ರಿಗಳೊಂದಿಗೆ ಸಮನ್ವಯ, ಇಂಡಿಯಾ ಒಕ್ಕೂಟದ ಬಲಪಡಿಸುವಿಕೆ ಸೇರಿದಂತೆ ಹಲವು ಮಹತ್ವದ ಅಂಶಗಳ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ …
Read More »ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಇಂದು ಭಾರತ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ
ಬೆಂಗಳೂರು : ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ಯ ಅಂಗವಾಗಿ ಇಂದು ಬೆಳಗ್ಗೆ 10:00 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಬಾಂಕ್ವೆಟ್ ಹಾಲ್‌ನಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಏಕಕಾಲದಲ್ಲಿ ಓದುವ ಕಾರ್ಯಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರಾಗಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಬಾಂಕ್ವೆಟ್ ಹಾಲ್‌ನಲ್ಲಿ ಭಾರತ …
Read More »ಕಾಂತಾರ 2′ ಚಿತ್ರಕ್ಕಾಗಿ 11 ಕೆ.ಜಿ ತೂಕ ಇಳಿಸಿಕೊಂಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
ಬಹುನಿರೀಕ್ಷೆಯ ಕಾಂತಾರ 2 ಸಿನಿಮಾಗಾಗಿ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಸುಮಾರು 11 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕಾಂತಾರ’. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಕಳೆದ ವರ್ಷ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿ, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಕರಾವಳಿ ಭಾಗದ ದೈವಾರಾಧನೆ ಕಥೆ ಹೊಂದಿರುವ …
Read More »ಬಿಜೆಪಿ-ಜೆಡಿಎಸ್ ಮೈತ್ರಿ ನೂರಕ್ಕೆ ನೂರರಷ್ಟು ನಡೆಯುತ್ತದೆ: ಜಿ.ಟಿ.ದೇವೇಗೌಡ
ಬೆಂಗಳೂರು : ಬಿಜೆಪಿ-ಜೆಡಿಎಸ್ ಮೈತ್ರಿ ನೂರಕ್ಕೆ ನೂರರಷ್ಟು ಆಗುತ್ತದೆ. ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಮೈತ್ರಿ ಆಗಲಿದೆ. ಆದರೆ ಕ್ಷೇತ್ರ ಹಂಚಿಕೆ …
Read More »ಉಪ್ಪಿ ಮನವಿ ಈ ವರ್ಷದ ಗಣೇಶ ಹಬ್ಬದಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಡಬಲ್ ಖುಷಿ. ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೆ ಎಂಟು ವರ್ಷಗಳ ಬಳಿಕ ಆಯಕ್ಷನ್ ಕಟ್ ಹೇಳಿರುವ ಯುಐ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮವಿದೆ. ಹೀಗಾಗಿ ಉಪ್ಪಿ ಸೆಪ್ಟೆಂಬರ್ 18ರಂದು ಫುಲ್ ಬ್ಯುಸಿಯಾಗಿರುತ್ತಾರೆ. ಈ ಕಾರಣಕ್ಕಾಗಿ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಬರ್ತ್ಡೇ ದಿನ ಮನೆಯಲ್ಲಿ ಸಿಗಲ್ಲ ಉಪ್ಪಿ!: “ಎಲ್ಲಾ ಅಭಿಮಾನಿ ದೇವರುಗಳಿಗೆ ನಮಸ್ಕಾರ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಪ್ಟೆಂಬರ್ 18 ಈ ವರ್ಷ ಬಾರಿ ವಿಶೇಷ. ಯಾಕಂದ್ರೆ ಗಣೇಶ ಚತುರ್ಥಿ ಹಬ್ಬ ಆ ದಿನಾನೇ. ಅಭಿಮಾನಿಗಳ ಹಬ್ಬನೂ ಅದೇ ದಿನ. ನಿಮ್ಮೆಲ್ಲರ ಬಹುನಿರೀಕ್ಷಿತ ‘ಯುಐ’ ಸಿನಿಮಾದ ಟೀಸರ್ ಕೂಡ ಅಂದೇ ಲಾಂಚ್ ಮಾಡುತ್ತಿದ್ದೇವೆ. ಈ ಪ್ರಯುಕ್ತ ನಾನು ತುಂಬಾ ಬ್ಯುಸಿ ಇರುತ್ತೇನೆ. ಸೆಪ್ಟೆಂಬರ್ 17ರ ರಾತ್ರಿ ಅಥವಾ 18ರ ಬೆಳಗ್ಗೆ ಕತ್ರಿಗುಪ್ಪೆ ಹಾಗೂ ಸದಾಶಿವನಗರದ ಮನೆಯಲ್ಲಿ ಸಿಗುವುದಿಲ್ಲ. ನನಗೆ ತುಂಬಾ ಕೆಲಸಗಳಿರುವುದರಿಂದ ಸೆಪ್ಟೆಂಬರ್ 18ರಂದು ಮಧ್ಯಾಹ್ನ 2 ಗಂಟೆಯ ಮೇಲೆ ಊರ್ವಶಿ ಥಿಯೇಟರ್ನಲ್ಲಿ ನಿಮಗಾಗಿ ಕಾಯುತ್ತಿರುತ್ತೇನೆ. ನೀವೆಲ್ಲರೂ ಅಲ್ಲೇ ಬನ್ನಿ. ಕೇಕ್ ಕತ್ತರಿಸೋಣ. ಎಲ್ಲ ಸಂಭ್ರಮವನ್ನು ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೂ ಈ ಸಂಭ್ರಮಾಚರಣೆ ಇರುತ್ತದೆ. 6 ಗಂಟೆಯ ನಂತರ ಥಿಯೇಟರ್ ಒಳಗಡೆ ‘ಯುಐ’ ಟೀಸರ್ ಲಾಂಚ್ ಮಾಡುತ್ತೇವೆ. ಬನ್ನಿ, ಎಲ್ಲರೂ ಪಾಲ್ಗೊಳ್ಳೋಣ” ಎಂದು ರಿಯಲ್ ಸ್ಟಾರ್ ಉಪೇಂದ್ರ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆಯಕ್ಷನ್ ಕಟ್ ಕೂಡ ಹೇಳಿದ್ದಾರೆ. ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್ ಸೆಪ್ಟಂಬರ್ 18ರಂದು ಅವರ ಹುಟ್ಟುಹಬ್ಬದ ದಿನವೇ ಅನಾವರಣಗೊಳ್ಳಲು ತಯಾರಾಗಿದೆ. ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಹೊಸ ತಂತ್ರಜ್ಞಾನವನ್ನು ಜೇಮ್ಸ್ ಕ್ಯಾಮರಾನ್ ‘ಅವತಾರ್ 2’ ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲ, ಸುಮಾರು 14 ಸಾವಿರ ವಿಎಫ್ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ. ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕು.
ಉಪ್ಪಿ ಮನವಿಈ ವರ್ಷದ ಗಣೇಶ ಹಬ್ಬದಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಡಬಲ್ ಖುಷಿ. ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೆ ಎಂಟು ವರ್ಷಗಳ ಬಳಿಕ ಆಯಕ್ಷನ್ ಕಟ್ ಹೇಳಿರುವ ಯುಐ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮವಿದೆ. ಹೀಗಾಗಿ ಉಪ್ಪಿ ಸೆಪ್ಟೆಂಬರ್ 18ರಂದು ಫುಲ್ ಬ್ಯುಸಿಯಾಗಿರುತ್ತಾರೆ. ಈ ಕಾರಣಕ್ಕಾಗಿ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಬರ್ತ್ಡೇ …
Read More »ಟೈಮ್ ಮ್ಯಾಗಜೀನ್ನ ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ.
ನವದೆಹಲಿ : ಟೈಮ್ ಮ್ಯಾಗಜೀನ್ ಬಿಡುಗಡೆ ಮಾಡಿರುವ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿ ಇನ್ಪೋಸಿಸ್ ಆಗಿದೆ. ಬೆಂಗಳೂರು ಮೂಲದ ಇನ್ಪೋಸಿಸ್ ಟಾಪ್ 100 ಪಟ್ಟಿಯಲ್ಲಿ 64 ನೇ ಸ್ಥಾನದಲ್ಲಿದೆ. “ಟೈಮ್ ಮ್ಯಾಗಜೀನ್ನ ವಿಶ್ವದ ಅತ್ಯುತ್ತಮ ಕಂಪನಿಗಳ 2023ರ ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. ನಾವು ಅಗ್ರ 3 ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದೇವೆ ಮತ್ತು …
Read More »ವೈಭವದ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ
ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಇಂದು ಮರಳು ಮೂಟೆ ಹೊರಿಸುವ ಮೂಲಕ ಭಾರ ಹೊರುವ ತಾಲೀಮನ್ನು ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ಆರಂಭಿಸಲಾಯಿತು. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಮಧ್ಯಾಹ್ನ 12:30 ರಿಂದ 1 ಗಂಟೆಯ ಒಳಗಿನ ಶುಭ ಮುಹೂರ್ತದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ನಂತರ 1 ಗಂಟೆಯಿಂದ 1:45 ರವರೆಗೆ …
Read More »S.P. ಡಾ: ಭೀಮಾಶಂಕರ ಎಸ್ ಗುಳೇದ ಅವರಿಗೆ ಪುಷ್ಪಗುಚ್ಛ ನೀಡಿ ಸನ್ಮಾನಿಸಿದ: ಸೋಮಶೇಖರ್ ಹುಡೆದ
ಅಲಿಯನ್ಸ್ ಕ್ಲಬ್ ಬೆಳಗಾವಿ ಸ್ಮಾರ್ಟ್ ಸಿಟಿ,ಅಲಿಯನ್ಸ್ ಅಂತರಾಷ್ಟ್ರೀಯ ಸೇವಾ ಸ್ಥಾಪಕ ಜಿಲ್ಲಾ ಗವರ್ನರ್ ದಿನಕರ್ ಶೆಟ್ಟಿ ಹಾಗೂ ಅಲಯನ್ಸ್ ಕ್ಲಬ್ ಸದಸ್ಯರಾದ ಸೋಮಶೇಖರ್ ಹುಡೆದ ಮತ್ತು ಬೈಲಹೊಂಗಲ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿ ಸುಧಾಕರ್ ಶೆಟ್ಟಿ ಮತ್ತು ಅಲಿಯನ್ಸ್ ಕ್ಲಬ್ ಬೆಳಗಾವಿ ಸ್ಮಾರ್ಟ್ ಅಧ್ಯಕ್ಷರಾದ ಹೋಟೆಲ್ ಉದ್ಯಮಿ ಪ್ರಭಾಕರ್ ಶೆಟ್ಟಿ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ: ಭೀಮಾಶಂಕರ ಎಸ್ ಗುಳೇದ ಅವರಿಗೆ ಪುಷ್ಪಗುಚ್ಛ …
Read More »