ಕಲಬುರಗಿ: ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ವನ್ಯ ಪ್ರಾಣಿಗಳ ಚರ್ಮ, ದಂತ, ಕೊಂಬು ಸಂಗ್ರಹ ಅಥವಾ ಸಾಗಾಣಿಕೆಗೆ ಅವಕಾಶ ಇಲ್ಲ. ಅದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಯಾವುದೇ ಪ್ರಕರಣಗಳಲ್ಲಿ ಭಾಗಿಯಾದರೆ, ಅವರ ಹಿಂದೆ ಎಂತಹ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಇತ್ತೀಚೆಗೆ ಹುಲಿ ಉಗುರು ಧರಿಸಿರುವ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಲಬುರಗಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಹುಲಿ …
Read More »Yearly Archives: 2023
ಹೆಸರಿಡದ ಸಿನಿಮಾಗೆ ದೊಡ್ಮನೆ ಕುಡಿ ರೆಡಿ: ಧೀರೇನ್ ರಾಮ್‌ಕುಮಾರ್ ಕಟ್ಟುಮಸ್ತ್ ದೇಹ ನೋಡಿ
ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಧೀರೇನ್ ರಾಮ್‌ಕುಮಾರ್ ಸದ್ಯ ತಮ್ಮ ಎರಡನೇ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. 2020ರಲ್ಲಿ ಶಿವ 143 ಎಂಬ ಚಿತ್ರದಿಂದ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೊಡ್ಮನೆ ಕುಡಿ ಧೀರೇನ್ ರಾಮ್‌ಕುಮಾರ್ ಬಾಡಿ ಬಿಲ್ಡ್ ಮಾಡಿರುವ ಫೋಟೊಗಳು ಇದೀಗ ಚಿತ್ರರಂಗದಲ್ಲಿ ಸುದ್ದಿಯಾಗುತ್ತಿದೆ. ಹೆಸರಿಡದ ಎರಡನೇ ಸಿನಿಮಾಗೆ ಭರ್ಜರಿಯಾಗಿ ತಯಾರಾಗಿದ್ದಾರೆ. ಧೀರೇನ್ ರಾಮ್‌ಕುಮಾರ್ಇವರ ಮೊದಲ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದರು. ಜಯಣ್ಣ ಭೋಗೆಂದ್ರ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ …
Read More »ಒಂದು ಕೆಜಿ ಅಧಿಕ ತೂಕದ 80 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ
ದೇವನಹಳ್ಳಿ (ಬೆಂಗಳೂರು) : ವಿಮಾನದ ವಾಶ್ ರೂಮ್ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಒಂದು ಕೆಜಿ ಅಧಿಕ ತೂಕದ 80 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಕ್ಟೋಬರ್ 24ರಂದು ಅಬುಧಾಬಿಯಿಂದ ಬಂದ ಇವೈ 238 ವಿಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಿಮಾನದ ವಾಶ್ ರೂಮ್ನಲ್ಲಿ ಕಪ್ಪು ಬಣ್ಣದ ಚೀಲದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ಒಟ್ಟು 1331.66 …
Read More »ವಿಜಯ ದಶಮಿ ಹಬ್ಬದಂದೇ ಯುವಕನನ್ನು ಕೊಚ್ಚಿ ಕೊಲೆ
ಹುಬ್ಬಳ್ಳಿ: ವಿಜಯ ದಶಮಿ ಹಬ್ಬದಂದೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿದಿದೆ. ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಹೊರವಲಯದ ಶಿವಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ. ಸುಮಾರು 30 ವರ್ಷದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಕುತ್ತಿಗೆ, ಮುಖ ಹಾಗೂ ದೇಹದ ಹಲವೆಡೆ ಗಾಯಗಳಿವೆ. ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »ಧಾರವಾಡ ವಿವಿಯಿಂದ ನೇಮಕಾತಿ: 14 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವ್ಯಾಪ್ತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಈ ನೇಮಕಾತಿ ನಡೆಯಲಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಶಿಕ್ಷಕರು ಸೇರಿದಂತೆ ಒಟ್ಟು 14 ಹುದ್ದೆಗಳಿವೆ. ಅಧಿಸೂಚನೆಹುದ್ದೆಗಳ ವಿವರ: ಸಹಾಯಕ ಶಿಕ್ಷಕರು- 9 ಸಂಗೀತ ಶಿಕ್ಷಕ- 1 ಸಹಾಯಕ ಹೌಸ್ ಮಾಸ್ಟರ್ ಹಾಗು ಸಹಾಯಕ ಶಿಕ್ಷಕ- 1 ಸಹಾಯಕ ಹೌಸ್ ಮಾಸ್ಟರ್- 1 …
Read More »ಮಂಗಳೂರು ದಸರಾ ಸಂಪನ್ನ: ಶ್ರೀ ಶಾರದೆ, ನವದುರ್ಗೆಯರ ವೈಭವದ ಮೆರವಣಿಗೆ
ಮಂಗಳೂರು: ಪ್ರಸಿದ್ಧ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಶಾರದಾಮಾತೆ, ನವದುರ್ಗೆಯರು ಹಾಗೂ ಶ್ರೀ ಮಹಾಗಣಪತಿ ದೇವರ ಆರಾಧನೆ ಸಂಪನ್ನಗೊಂಡು ಇದೀಗ ವೈಭವದ ಮೆರವಣಿಗೆ ಆರಂಭಗೊಂಡಿದೆ. ಕಳೆದ 9 ದಿನಗಳಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಶ್ರೀ ದೇವರ ಆರಾಧನೆ ಅದ್ಧೂರಿಯಾಗಿ ನಡೆದುಕೊಂಡು ಬಂದಿತ್ತು. ಮೊಗ್ಗು ಮಲ್ಲಿಗೆಯ ಶಾರದಾ ಜಲ್ಲಿ, ವಿಶೇಷ ಪಟ್ಟೆ ಸೀರೆ, ವಿವಿಧ ಆಭರಣಗಳೊಂದಿಗೆ ಅಲಂಕೃತಳಾದ ಶಾರದಾ ಮಾತೆಗೆ ಮಧ್ಯಾಹ್ನದ ಬಳಿಕ ನಿಮಜ್ಜನಾ ಪೂಜೆ ನೆರವೇರಿತು. ಸಂಜೆಯಾಗುತ್ತಿದ್ದಂತೆ ಶೋಭಾಯಾತ್ರೆಗೆ ಸಿದ್ಧತೆ …
Read More »ಆಯುಧ ಪೂಜೆ, ವಿಜಯದಶಮಿ ಹಬ್ಬ: ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ತ್ಯಾಜ್ಯ
ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಬಹುತೇಕ ಕಡೆ ಕಸ ರಾಶಿ ಬಿದ್ದಿರುವುದು ಕಂಡುಬರುತ್ತಿದೆ. ಮಾರುಕಟ್ಟೆ, ಜನಸಂದಣಿಯಿದ್ದ ಪ್ರದೇಶದಲ್ಲಿ ಮಾರಾಟವಾಗದೇ ಉಳಿದ ಬಾಳೆಕಂಬ, ಬೂದುಗುಂಬಳ ಅಲ್ಲಲ್ಲೇ ಬಿದ್ದಿದ್ದು, ಶೀಘ್ರ ವಿಲೇವಾರಿಯಾಗದೇ ಇದ್ದಲ್ಲಿ ಕೊಳೆತು ಗಬ್ಬು ನಾರುವ ಸ್ಥಿತಿಗೆ ತಲುಪಲಿದೆ. ಸಾಮಾನ್ಯ ದಿನಗಳಲ್ಲಿ ನಗರದಲ್ಲಿ 4,000 ಟನ್ ತ್ಯಾಜ್ಯ ಉತ್ಪತ್ತಿಯಾದರೆ, ಹಬ್ಬದ ಸಂದರ್ಭದಲ್ಲಿ ಶೇ. 20ರಿಂದ ಶೇ. 30ರಷ್ಟು ಹೆಚ್ಚುವರಿ ತ್ಯಾಜ್ಯ …
Read More »ಒಂದೇ ಜಾತಿಗೆ ರಾಣಿ ಚನ್ನಮ್ಮಳನ್ನು ಸೀಮಿತಗೊಳಿಸಬೇಡಿ: ಸಂಶೋಧಕ ಸಂತೋಷ ಹಾನಗಲ್
ಬೆಳಗಾವಿ: “ವೀರರಾಣಿ ಕಿತ್ತೂರು ಚನ್ನಮ್ಮಾಜಿಯನ್ನು ಒಂದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿತ್ತಿರುವ ವಿಚಾರ ಕಳೆದ ಐದು ವರ್ಷಗಳಿಂದ ಶುರುವಾಗಿದೆ. ಮೊಳಕೆಯೊಡೆಯುವ ಮೊದಲೇ ಚಿವುಟಿ ಹಾಕುವ ಅವಶ್ಯಕತೆಯಿದೆ” ಎಂದು ಸಂಶೋಧಕ ಸಂತೋಷ ಹಾನಗಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಿತ್ತೂರು ಉತ್ಸವದ ಅಂಗವಾಗಿ ಮಂಗಳವಾರ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಣಿ ಚನ್ನಮ್ಮಾಜಿ ಜತೆ ಸೇರಿಕೊಂಡು ಎಲ್ಲ ಸಮುದಾಯದ ವೀರರು ಸಂಸ್ಥಾನದ ಉಳಿವಿಗಾಗಿ ಹೋರಾಡಿದ್ದಾರೆ. ಅವರೆಲ್ಲ ಇಡೀ ದೇಶಕ್ಕೆ ಸೇರಿದ ಮಹಾಪುರುಷರು. ಅಂತಹವರನ್ನು ಒಂದೇ ಜಾತಿ, …
Read More »ಕಿತ್ತೂರು ಉತ್ಸವದಲ್ಲಿ ತೋಟಗಾರಿಕಾ ಇಲಾಖೆ, ಬೆಳಗಾವಿ ಜಿ.ಪಂ. ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯುತ್ತಿದೆ.
ಬೆಳಗಾವಿ: ಸಿರಿಧಾನ್ಯಗಳಲ್ಲಿ ತಯಾರಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಶ್ವಾರೂಢ ಮೂರ್ತಿ ಕಿತ್ತೂರು ಉತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ. ತರಕಾರಿ, ಹೂವುಗಳಿಂದ ತಯಾರಿಸಿದ ನಾನಾ ರೀತಿಯ ಕಲಾಕೃತಿಗಳು ಜನರ ಕುತೂಹಲ ಕೆರಳಿಸಿವೆ. ಸಿರಿಧಾನ್ಯಗಳಾದ ಜೋಳ, ಸಜ್ಜೆ, ನವನೆ, ರಾಗಿ, ಚನ್ನಂಗಿ ಬೇಳೆಗಳನ್ನು ಬಳಸಿ ತಯಾರಿಸಿರುವ 6.5 ಅಡಿ ಎತ್ತರದ ಚನ್ನಮ್ಮಾಜಿ ವಿಗ್ರಹವನ್ನು ಕಲಾವಿದ ಶಿವಲಿಂಗಪ್ಪ ಬಡಿಗೇರ ರಚಿಸಿದ್ದಾರೆ. ಕಲ್ಲಂಗಡಿಯಲ್ಲಿ ಮಹನೀಯರ ಚಿತ್ರಗಳು: ಕಲ್ಲಂಗಡಿ ಹಣ್ಣಿನಲ್ಲಿ ಅರಳಿರುವ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, …
Read More »ದಾವಣಗೆರೆಯ ಕನ್ನಿಕಾ ಪರಮೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ
ದಾವಣಗೆರೆ: ದಸರಾ ಪ್ರಯುಕ್ತ ದಾವಣಗೆರೆಯಾದ್ಯಂತ ಬಹುತೇಕ ಎಲ್ಲಾ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಾಲಯಗಳಲ್ಲಿ ಹೂವು, ಕುಂಕುಮ, ಎಲೆ, ಉತ್ತುತ್ತಿ, ತರಕಾರಿ, ಹಣ್ಣು-ಹಂಪಲುಗಳಿಂದ ತರಹೇವಾರಿ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ದಾವಣಗೆರೆ ನಗರದ ಕನ್ನಿಕಾ ಪರಮೇಶ್ವರಿ ದೇವಿಗೆ ಕರೆನ್ಸಿ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ. ದೊಡ್ಡಪೇಟೆಯ ಕನ್ನಿಕಾ ಪರಮೇಶ್ವರಿ ದೇವಿಗೆ ನವರಾತ್ರಿಯ ಒಂಭತ್ತು ದಿನಗಳ ಕಾಲ ವಿವಿಧ ಅಲಂಕಾರ ಮಾಡಲಾಗಿತ್ತು. ಹತ್ತನೇ ದಿನವಾದ ಇಂದು ಲಕ್ಷಾಂತರ ರೂಪಾಯಿ …
Read More »