ನವದೆಹಲಿ : ಏ.20 ರ ನಾಳೆ 2023 ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಸೂರ್ಯಗ್ರಹಣವು ಬೆಳಗ್ಗೆ 7:04 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ಒಟ್ಟು ಸಮಯವು ಐದು ಗಂಟೆಗಳಿಗಿಂತ ಹೆಚ್ಚು ಇರುತ್ತದೆ. ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ? ಗ್ರಹಣವು ಆಸ್ಟ್ರೇಲಿಯಾ, ಪೂರ್ವ ಮತ್ತು ದಕ್ಷಿಣ ಏಷ್ಯಾ, ಪೆಸಿಫಿಕ್ ಮಹಾಸಾಗರ, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರದಿಂದ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಗೋಚರಿಸುವುದಿಲ್ಲ. ‘ವಾರ್ಷಿಕ ರಿಂಗ್ ಆಫ್ …
Read More »Monthly Archives: ಏಪ್ರಿಲ್ 2023
ಕಾಲೇಜು ಉಪನ್ಯಾಸಕಿಯ ಅನುಮಾನಾಸ್ಪದ ಸಾವು. ಅಂಕೋಲಾದಲ್ಲಿ ಪ್ರಕರಣ ದಾಖಲು
ಅಂಕೋಲಾ: ಯಾದಗಿರಿ ಜಿಲ್ಲೆಯ ಹುಣಸಗಿಯ ಎಸ್. ಕೆ.ಕಾಲೇಜಿನಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅಂಗಡಿಬೈಲ್ ನ ಯುವತಿ ಮೃತ ಪಟ್ಟಿದ್ದು ಸಾವಿನ ಕುರಿತಂತೆ ಸಂಶಯ ವ್ಯಕ್ತಪಡಿಸಿದ ಯುವತಿಯ ಮನೆಯವರು ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅಂಗಡಿಬೈಲ್ ನಾಕಮನೆ ನಿವಾಸಿ ನಿವೇದಿತಾ ನರಸಿಂಹ ಭಟ್ಟ (24) ಮೃತ ದುರ್ದೈವಿಯಾಗಿದ್ದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್. ಸಿ ಪದವಿ ಬಂಗಾರದ ಪದಕ ವಿಜೇತೆಯಾಗಿದ್ದ ಈಕೆ ಕಳೆದ …
Read More »ಬೆಳಗಾವಿ: ತೋಟಗಳು ಹೆಚ್ಚಿದರೂ ತಗ್ಗಿದ ಮಾವು ಇಳುವರಿ
ಬೆಳಗಾವಿ: ಜಿಲ್ಲೆಯಲ್ಲಿ ಮಾವಿನ ತೋಟಗಳ ವ್ಯಾಪ್ತಿ ಹೆಚ್ಚಾಗುತ್ತಿದ್ದರೂ ಈ ಬಾರಿ ಮಾವು ಇಳುವರಿಯಲ್ಲಿ ಇಳಿಕೆ ಆಗುವ ಸಾಧ್ಯತೆ ಇದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಬದಲಾದ ಹವಾಮಾನ ಹಾಗೂ ಇನ್ನೊಂದೆಡೆ ಗಾಳಿ-ಮಳೆಯ ರಭಸಕ್ಕೆ ಮಾವು ಇಳುವರಿ ಇಳಿಮುಖವಾಗಲಿದೆ. ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಗಳಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಉತ್ಪಾದನೆ ಕಡಿಮೆ ಆಗಲಿದೆ. ಕಳೆದ ಸಲಕ್ಕಿಂತಲೂ ಈ ಬಾರಿ ಶೇ. 30ರಿಂದ 40ರಷ್ಟು ಉತ್ಪಾದನೆ ಕಡಿಮೆ ಆಗಲಿದ್ದು, ಬಂಡವಾಳ …
Read More »ಬೆಳಗಾವಿ ಜಿಲ್ಲೆಯಲ್ಲಿ 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆದಿದ್ದು, ಈವರೆಗೆ ಒಟ್ಟು 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಶಿಕಲಾ ಜೊಲ್ಲೆ, ಜೆಡಿಎಸ್ ದಿಂದ ರಾಜಾರಾಮ ಪವಾರ, ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಮೋಹನ ಮೋಟನ್ನವರ, ರಿಪಬ್ಲಿಕ್ ಮೂಮೆಂಟ್ ಪಾರ್ಟಿಯಿಂದ ಅಪ್ಪಾಸಾಹೇಬ ಕುರಣೆ, ಕಾಂಗ್ರೆಸ್ ನಿಂದ ಗಣೇಶ ಹುಕ್ಕೇರಿ, ಅಥಣಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ನಾಮಪತ್ರ …
Read More »ಕಲಾಬಿಂಬ ವಸ್ತು ಪ್ರದರ್ಶನ ಮಹಾವೀರ ಭವನದಲ್ಲಿ ಯಶಸ್ವಿ
ಬೆಳಗಾವಿ: ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳು ದೇಶಪಾಂಡೆ ಸ್ಟಾರ್ಟ್ ಅಪ್ ಸಹಯೋಗದೊಂದಿಗೆ ಗೋವಾವೇಸದಲ್ಲಿರುವ ಮಹಾವೀರ ಭವನದಲ್ಲಿ ಕಲಾಬಿಂಬ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವಸ್ತು ಪ್ರದರ್ಶನ 15 ಮತ್ತು 16 ಎರಡು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿತು ಸುಮಾರು 40 ಮಾರಾಟ ಮಳಿಗೆಗಳು ಹಾಗೂ 10 ಉಪಹಾರ ಮಳಿಗೆಗಳು ಬಂದಿದ್ದವು ಈ ಕಲಾಬಿಂಬ ವಸ್ತು ಪ್ರದರ್ಶನದಿಂದ ಬಂದ ಹಣವನ್ನು ತಿಲಕವಾಡಿಯ ಮಂಡೋಳಿ ರಸ್ತೆಯ ಶಾಂತಿನಗರದ ಆಶ್ರಮದಲ್ಲಿ …
Read More »ಯಾದಗಿರಿ: 10 ಸಾವಿರ ಒಂದು ರೂಪಾಯಿ ನಾಣ್ಯಗಳಲ್ಲಿ ಚುನಾವಣಾ ಠೇವಣಿ ಕಟ್ಟಿದ ಸ್ವತಂತ್ರ ಅಭ್ಯರ್ಥಿ!
ಯಾದಗಿರಿ, ಏಪ್ರಿಲ್. 18: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಸುತ್ತಿ ಬಿದ್ದರೇ, ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಸೋಮವಾರವಷ್ಟೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು ಬುಟ್ಟಿಯಲ್ಲಿ ರಾಶಿ …
Read More »ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ದೀಪಕ್ ಚಿಂಚೋರೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ
ಧಾರವಾಡ, ಏಪ್ರಿಲ್, 18: ರಾಜ್ಯ ವಿಧಾನಸಭೆಗೆ ಮೇ 10ರಂದು ಚುನಾಚಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬಿಳಲಿದೆ. ಈ ಹಿನ್ನೆಲೆ ಮಂಗಳವಾರ (ಏಪ್ರಿಲ್ 18) ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ತೀವ್ರ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ದೀಪಕ್ ಚಿಂಚೋರೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಹಾಲಿಬಿಜೆಪಿಶಾಸಕ ಅರವಿಂದ ಬೆಲ್ಲದ್ ಅವರ ವಿರುದ್ಧ ದೀಪಕ್ ಚಿಂಚೋರೆ …
Read More »ಶೆಟ್ಟರ್, ಸವದಿ ಸೋಲಿಗೆ ಯಡಿಯೂರಪ್ಪ ಶಪಥ!
ಬೆಂಗಳೂರು: ಬಿಜೆಪಿ ನಾಯಕರಿಗೆ ತಮ್ಮದೇ ನಿರ್ಧಾರ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶಾಸಕರು ಒಬ್ಬರಾದ ನಂತರ ಮತ್ತೊಬ್ಬರು ಪಕ್ಷ ತೊರೆದು ಹೊರ ಹೋಗುತ್ತಿದ್ದಾರೆ. ಈ ಹೊತ್ತಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಸೋಲಿಗೆ ಬಿ.ಎಸ್. ಯಡಿಯೂರಪ್ಪ ಪಣತೊಟ್ಟಿದ್ದಾರೆ. ಇಬ್ಬರ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಒಂದೇ ಪಕ್ಷದಲ್ಲಿದ್ದ ಮಾಜಿ ಸಿಎಂಯಡಿಯೂರಪ್ಪಹಾಗೂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಆಪ್ತರಾಗಿದ್ದರು. ಆದರೆ ಯಾವಾಗ ಜಗದೀಶ್ …
Read More »ಕಾಂಗ್ರೆಸ್‌ಗೆ ಗೆಲುವಿನ ಮುನ್ಸೂಚನೆ ನೀಡಿದ ಮಹತ್ವದ ಸಮೀಕ್ಷೆ- ಯಾವ ಭಾಗದಲ್ಲಿ ಎಷ್ಟು ಸ್ಥಾನ ತಿಳಿಯಿರಿ
ಬೆಂಗಳೂರು, : ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣಾ ( Karnataka Assembly Election 2023 ) ಪೂರ್ವ ಸಮೀಕ್ಷೆಗಳು ಹೊರಬರುತ್ತಿವೆ. ಈ ಹಿಂದೆ ಬಂದಿರುವ ಸಮೀಕ್ಷೆಗಳನ್ನು ನೋಡುವುದಾದರೆ, ಕರ್ನಾಟಕದ ಮತದಾರರು ಆಡಳಿತಾರೂಢ ಬಿಜೆಪಿಗೆ ( BJP ) ಹೆಚ್ಚಿನ ಮನ್ನಣೆ ನೀಡುತ್ತಿಲ್ಲ ಎನ್ನುವುದು ತಿಳಿದುಬರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ( Congress ) ಲಾಭವಾಗಬಹುದು ಎಂಬುದನ್ನು ಮಹತ್ವದ ಚುನಾವಣಾ ಸಮೀಕ್ಷೆಗಳು ಬಹಿರಂಗ ಪಡಿಸಿವೆ. ಸೋಮವಾರ ಹೊರ …
Read More »ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ
ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲಿ ಎಐಸಿಸಿ, ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕನೇ ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ 7 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ- ದೀಪಕ್ ಚ್ಂಚೋರೆ ಲಿಂಗಸಗೂರು- ದುರ್ಗಪ್ಪ ಎಸ್ ಹುಲಗೇರಿ ಶಿಗ್ಗಾವಿ-ಮೊಹಮ್ಮದ್ ಯೂಸೂಫ್ ಸವಣೂರು ಹರಿಹರ- ನಂದಗಾವಿ ಶ್ರೀನಿವಾಸ್ ಚಿಕ್ಕಮಗಳೂರು-ಹೆಚ್.ಡಿ.ತಮ್ಮಯ್ಯ ಶ್ರವಣಬೆಳಗೊಳ-ಎಂ.ಎ.ಗೋಪಾಲಸ್ವಾಮಿ
Read More »