ಮಂಡ್ಯ: ವಿಧನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸಿದ್ದಾರೆ. ಜೆಡಿಎಸ್ ಭದ್ರ ಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಮಂಡ್ಯ ಬಿಜೆಪಿ ಅಭ್ಯರ್ಥಿ ಪರ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಮತ ಬೇಟೆ ಆರಂಭಿಸಿದ್ದಾರೆ. ಸಂಜಯ ವೃತ್ತದಿಂದ ಮಹಾವೀರ ಥಿಯೆಟರ್ ವರೆಗೆ ಯೋಗಿ ಆದಿತ್ಯನಾಥ್ ರೋಡ್ ಶೋ ಸಾಗಿದ್ದು, ಮೆರವಣಿಗೆಯುದ್ದಕ್ಕೂ ಜನರು ಹೂವಿನ ಮಳೆಗರೆದು …
Read More »Daily Archives: ಏಪ್ರಿಲ್ 26, 2023
ಈ ಬಾರಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್
ಮಂಗಳೂರು: ಬಿಜೆಪಿಯ ಅಭಿವೃದ್ಧಿ ಓಟಕ್ಕೆ ಜನತೆ ಜತೆಗೂಡಿದ್ದು ಈ ಬಾರಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಮಂಗಳ ವಾರ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾ ಚಾರವಿಲ್ಲದೆ ಜನಪರ ಆಡಳಿತ ನೀಡಿದ ಬಿಜೆಪಿ ಸರಕಾರದ ಪರ ಮತದಾರ ಒಲವು ತೋರಿಸು ತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಜನರೇ ಮುನ್ನುಡಿ ಬರೆಯಲಿದ್ದಾರೆ …
Read More »ಸಿಂಗಾಪುರದಲ್ಲಿ ಮಾದಕವಸ್ತು ಕಳ್ಳಸಾಗಣೆ: ಭಾರತ ಮೂಲದ ತಂಗರಾಜುಗೆ ಇಂದು ಗಲ್ಲು
ಸಿಂಗಾಪುರ: ಸಿಂಗಾಪುರದಲ್ಲಿ ಮಾದಕವಸ್ತು ಕಳ್ಳಸಾಗಣೆ ಉತ್ತೇಜಿಸಿದ್ದಲ್ಲದೇ, 1 ಕೆಜಿ ಗಾಂಜಾವನ್ನು ಅಕ್ರಮವಾಗಿ ಸಾಗಿಸಿರುವ ಅಪರಾಧದ ಮೇರೆಗೆ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು ಬುಧವಾರ ಗಲ್ಲಿಗೇರಿಸಲು ಸರ್ಕಾರ ನಿರ್ಧರಿಸಿದೆ. ನಾರ್ವೆ, ಸ್ವಿಜರ್ಲೆಂಡ್ ಸೇರಿದಂತೆ ಕೆಲ ರಾಷ್ಟ್ರಗಳು ಹಾಗೂ ಸ್ಥಳೀಯ ಮರಣದಂಡನೆ ವಿರೋಧಿ ಸಂಘಟನೆಗಳು ತಂಗರಾಜು ಗಲ್ಲು ಶಿಕ್ಷೆಯನ್ನು ಆಕ್ಷೇಪಿಸಿದ ಹೊರತಾಗಿಯೂ, ಸಿಂಗಾಪುರ ಸರ್ಕಾರ ಬುಧವಾರ ಗಲ್ಲಿಗೇರಿಸಲು ನಿರ್ಧರಿಸಿದೆ. ಅಲ್ಲದೇ, ದೇಶದ ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಧೀಶರ ತೀರ್ಮಾನ ಗೌರವಿಸುವುದು ಅಗತ್ಯವಾಗಿದೆ …
Read More »BJPಗೆ 140ಕ್ಕೂ ಹೆಚ್ಚು ಸ್ಥಾನ ಖಚಿತ: ಬಿಎಸ್‌ವೈ
ಜಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಸಾಮೂಹಿಕ ನಾಯಕತ್ವದ ಮುಂದೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಯ ಚುನಾವಣ ರಣತಂತ್ರ ಏನೂ ನಡೆಯದು. ದೇಶದಲ್ಲಿ ಹಾಗೂ ರಾಜ್ಯದಲ್ಲಿ …
Read More »ಭ್ರಷ್ಟ BJP ಸರಕಾರ ಕಿತ್ತೂಗೆಯಿರಿ: ಪ್ರಿಯಾಂಕಾ
ಹೆಳವರಹುಂಡಿ/ಹನೂರು: ಮೈಸೂರು ಜಿಲ್ಲೆಯ ವರುಣಾ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ ಚುನಾವಣ ಪ್ರಚಾರ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು, ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರಲ್ಲದೆ, ರಾಜ್ಯ ಬಿಜೆಪಿ ಸರಕಾರದ ರಚನೆಯೇ ದುರಾಸೆ, ಆಮಿಷದಿಂದ ಕೂಡಿತ್ತು. ಇಂತಹ ಸರಕಾರವನ್ನು ಈ ಚುನಾವಣೆಯಲ್ಲಿ ಕಿತ್ತೂಗೆಯಬೇಕು ಎಂದು ಕರೆ ನೀಡಿದರು. ತಿ.ನರಸೀಪುರದ ಹೆಳವರಹುಂಡಿ ಗ್ರಾಮದಲ್ಲಿ ಮಾತನಾಡಿದ ಪ್ರಿಯಾಂಕಾ, ರಾಜ್ಯ ಬಿಜೆಪಿ ಸರಕಾರ 1.5 ಲಕ್ಷ …
Read More »ಸರಕಾರಕ್ಕೆ ಕೇಳಿಸದಾಯಿತೇ ಸಂತ್ರಸ್ತ ಕುಸ್ತಿಪಟುಗಳ ಆರ್ತನಾದ?
ಕ್ರೀಡಾ ಕ್ಷೇತ್ರ ರಾಜಕೀಯದಿಂದ ಹೊರತಾಗಿರಬೇಕು ಎಂಬ ಮಾತು ಸಾರ್ವತ್ರಿಕವಾಗಿದ್ದರೂ ದೇಶದಲ್ಲಿ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿಲ್ಲ. ಪ್ರತಿಯೊಂದೂ ಕ್ರೀಡೆಯಲ್ಲೂ ರಾಜಕೀಯದ್ದೇ ಕೈ ಮೇಲಾಗುತ್ತಿದ್ದು ಇದರ ನೇರ ಪರಿಣಾಮ ದೇಶದ ಕ್ರೀಡಾಪಟುಗಳು ಮತ್ತು ಕ್ರೀಡಾ ಕ್ಷೇತ್ರದ ಮೇಲಾಗುತ್ತಿದೆ. ದಶಕಗಳಿಂದಲೂ ದೇಶದ ಕ್ರೀಡಾರಂಗ ಇಂಥದ್ದೇ ಬೆಳವಣಿಗೆಗೆ ಸಾಕ್ಷಿಯಾಗುತ್ತಾ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದ ಕ್ರೀಡಾರಂಗ ಸಂಪೂರ್ಣವಾಗಿ ಅಲ್ಲದಿದ್ದರೂ ಒಂದಿಷ್ಟು ರಾಜಕೀಯರಹಿತವಾಗಿ ಮುನ್ನಡೆಯುತ್ತ ಬಂದಿದ್ದರ ಪರಿಣಾಮ ದೇಶದ ಕ್ರೀಡಾಳುಗಳು ಹಲವಾರು ಕ್ರೀಡೆಗಳಲ್ಲಿ ತಮ್ಮ …
Read More »