Breaking News

Monthly Archives: ಫೆಬ್ರವರಿ 2023

ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ದೇಗುಲ ಸಜ್ಜು

ಕೆಜಿಎಫ್‌: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಹಬ್ಬದ ದಿನ ಮತ್ತು ಮಾರನೆ ದಿನ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಪ್ರತಿ ವರ್ಷದ ಜನವರಿ ಒಂದನೇ ತಾರೀಖೀ ನಂದು ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮಹಾಶಿವರಾತ್ರಿ ಹಬ್ಬದಂದು ಆರು ದಿನ ಜಾತ್ರೆ ವೈಭವದಿಂದ ನಡೆಯಲಿದೆ. ಎರಡು ಮೂರು ತಿಂಗಳಿನಿಂದ ದೇವಾಲಯದ ಒಳ, ಹೊರಭಾಗದಲ್ಲಿರುವ ಶಿವಲಿಂಗಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ …

Read More »

ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ?

ಬೆಳಗಾವಿ: ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ? ಇದು ಪ್ರತಿಯೊಬ್ಬರನ್ನು ಕಾಡುತ್ತಿರುವ ಬಹಳ ದೊಡ್ಡ ಯಕ್ಷ ಪ್ರಶ್ನೆ. ಕೃಷ್ಣಾ ನದಿ ತೀರದ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಲಂತೂ ಇದು ಚುನಾವಣೆಯ ಬಹು ದೊಡ್ಡ ಅಸ್ತ್ರ. ಬೆಳಗಾವಿ ಜಿಲ್ಲೆಯ ವಿಭಜನೆ, ಚಿಕ್ಕೋಡಿ ನೂತನ ಜಿಲ್ಲಾ ರಚನೆ ಎಂಬ ಭರವಸೆ ಚಿಕ್ಕೋಡಿ ವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮಾನ್ಯದ …

Read More »

ಗೋಕಾಕ ಉದ್ಯಿಮಿ ಕೊಲೆ ಪ್ರಕರಣ ಭೇದಿಸಿದ ಎಲ್ಲ ಅಧಿಕಾರಿಗಳನ್ನು ಹೊಗಳಿದ ಎಸ್ಪಿ ಪಾಟೀಲ

ಗೋಕಾಕ: ಈಚೆಗೆ ಕೊಲೆಯಾದ ನಗರದ ಸಗಟು ವ್ಯಾಪಾರಿ ಶವ ಗುರುವಾರ ರಾತ್ರಿ ಪತ್ತೆಯಾಗಿದೆ. ತಾಲ್ಲೂಕಿನ ಪಂಚನಾಯಕನ ಹಟ್ಟಿ ಗ್ರಾಮದ ಹೊರವಲಯದಲ್ಲಿ, ಮಾರ್ಕಂಡೇಯ ನದಿ ಕಾಲುವೆಯಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ನಗರದ ಹಿಲ್‌ ಗಾರ್ಡನ್‌ ರಸ್ತೆಯ ನಿವಾಸಿ ರಾಜು ಝಂವರ (53) ಅವರನ್ನು ಫೆ.10ರಂದು ಅಪಹರಿಸಿ ಕೊಲೆ ಮಾಡಲಾಗಿತ್ತು. ಶವವನ್ನು ಗೋಕಾಕ ಫಾಲ್ಸ್‌ ಕಾಲುವೆಯಲ್ಲಿ ಎಸೆದಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದರು. ಪೊಲೀಸ್‌, ಅಗ್ನಿಶಾಮಕ ಸಿಬ್ಬಂದಿ ಸೇರಿ 350 ಮಂದಿಯ ತಂಡ ಶವಕ್ಕಾಗಿ …

Read More »

ಅಥಣಿ | ಟ್ರ್ಯಾಕ್ಟರ್‌ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಅಥಣಿ: ಪಟ್ಟಣದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಶುಕ್ರವಾರ ಪಲ್ಟಿಯಾಗಿದ್ದು, ವಾಹನದಡಿ ಸಿಲುಕಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅಗ್ರಾಣಿ ಇಂಗಳಗಾವಿಯ ಕಲ್ಪನಾ ಮಾದರ, ಬಣಜವಾಡದ ಶ್ರೀದೇವಿ ಮಾಂಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.   ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೊಡಿ, ಪಿಎಸ್‌ಐ ಶಿವಶಂಕರ ಮುಖರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಹಾಗೂ ಸ್ಥಳೀಯರು ಜೆಸಿಬಿ ಯಂತ್ರದ ನೆರವಿನಿಂದ ರಕ್ಷಣಾ …

Read More »

ಜಲ ಜೀವನ ಮಿಷನ್‌ ಕಾಮಗಾರಿಗೆ ₹88.05 ಕೋಟಿ ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ‘ಆರ್‌ಡಿಪಿಆರ್‌ ಇಲಾಖೆಯಿಂದ ಅರಭಾವಿ ಮತಕ್ಷೇತ್ರದ ಜಲ ಜೀವನ್ ಮಿಷನ್‌ (ಜೆಜೆಎಂ) ಕಾಮಗಾರಿಗೆ ₹88.05 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಮುನ್ಯಾಳ ತೋಟದಲ್ಲಿ ಜಲ ಜೀವನ ಮಿಷನ್‌ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮದಲಮಟ್ಟಿ, ಶಿವಾಪೂರ, ರಂಗಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ ತೋಟ, ಶಿವಾಪೂರ ತೋಟ, ಡೋಣಿ ತೋಟ, ಸ್ವಾಮಿ ತೋಟ ಮುನ್ಯಾಳ ಗ್ರಾಮದ ಸಾರ್ವಜನಿಕರಿಗೆ ಜೆಜೆಎಂ ಅಡಿಯಲ್ಲಿ …

Read More »

ಬಜೆಟ್ ನಲ್ಲಿ ಬೆಳಗಾವಿಗೆ ಹೇಳಿಕೊಳ್ಳುವ ಕೊಡುಗೆ ಯಾವವು ಇಲ್ಲ, ಹಳೆ ಯೋಜನೆಗಳನ್ನು ಮತ್ತೆ ಹೇಳಿದ ಸಿ ಎಂ..

ಬೆಳಗಾವಿ: ‘ಪ್ರಸಕ್ತ ಬಜೆಟ್‌ನಲ್ಲಿ ಕೂಡ ಬೆಳಗಾವಿ ಜಿಲ್ಲೆಗೆ ಹೇಳಿಕೊಳ್ಳುವಂಥ ಯಾವುದೇ ಕೊಡುಗೆ ನೀಡಿಲ್ಲ. ಹಳೆ ಪ್ರಸ್ತಾವಗಳನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಬಡಬಡಿಸಿದ್ದಾರೆ’ ಎಂದು ಜಿಲ್ಲೆಯ ಮುಖಂಡರು ವಿಶ್ಲೇಷಿಸಿದ್ದಾರೆ.   ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬಜೆಟ್‌ ನಿರಾಶಾದಾಯಕ ಎಂದು ಟೀಕಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹಾಗೂ ವಾಣಿಜ್ಯ ಸಂಘಟನೆಗಳ ಕೆಲ …

Read More »

ಸಾಧನೆಗೆ ತಾಳ್ಮೆ, ಏಕಾಗ್ರತೆ ಅವಶ್ಯ: ಜಿ. ಎಂ. ಗಣಾಚಾರಿ

ಕಿತ್ತೂರು: : ಕಾಲೇಜು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದವರು ಹೆಚ್ಚಾಗಿ ಉತ್ತರ ಕರ್ನಾಟಕದವರೆ ಆಗಿದ್ದಾರೆ. ಇಲ್ಲಿಂದ ವಲಸೆ ಹೋಗಿ ಅಲ್ಲಿ ನೆಲೆಸಿದವರಾಗಿದ್ದಾರೆ ಎಂದು ಆರ್‌ಜಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಣಾಚಾರಿ ತಿಳಿಸಿದರು.   ಇಲ್ಲಿನ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸಾಧನೆಗೆ ಏಕಾಗ್ರತೆ ಮತ್ತು ತಾಳ್ಮೆ ಬೇಕು. ಪ್ರಾಮಾಣಿಕತೆ ಇರುವವ ಸಾಧಕ ಆಗುತ್ತಾನೆ. ಪ್ರಾಮಾಣಿಕತೆ ಇಲ್ಲದ …

Read More »

ಸಂಕೇಶ್ವರ: ಶಿವಾಜಿ ಪ್ರತಿಮೆ ಬೃಹತ್‌ ಮೆರವಣಿಗೆ

ಸಂಕೇಶ್ವರ: ಪಟ್ಟಣದಲ್ಲಿ ಫೆ.19ರಂದು ಅನಾವರಣಗೊಳ್ಳಲಿರುವ ಅಶ್ವಾರೂಢ ಶಿವಾಜಿ ಮಹಾರಾಜರ ಪ್ರತಿಮೆಯ ಬೃಹತ್‌ ಮೆರವಣಿಗೆ ಹಾಗೂ ಶೋಭಾ ಯಾತ್ರೆಯು ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು. ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೋಡ ಪ್ರತಿಮೆಗೆ ಪಟ್ಟಣದ ಶಂಕರಾಚಾರ್ಯರ ಸಂಸ್ಥಾನ ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿಯ ಸ್ವಾಮೀಜಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.   ಡೊಳ್ಳು ಕುಣಿತ, ಜಾಂಜ ಪದಕ, ಡೋಲ್ ತಾಶ ಸೇರಿದಂತೆ ಅನೇಕ …

Read More »

ಅದ್ದೂರಿಯಾಗಿ ಮಹಾಶಿವರಾತ್ರಿ ಉತ್ಸವ ಆಚರಣೆಗೆ ರಾಮದುರ್ಗ ಸಜ್ಜು: ಅಶೋಕ ಪಟ್ಟಣ 

ರಾಮದುರ್ಗ: ಸಮೀಪದ ಮುಳ್ಳೂರು ಬೆಟ್ಟದಲ್ಲಿ ಶಿವನ ಮೂರ್ತಿ ಸ್ಥಾಪನೆಯಾಗಿ 6 ವರ್ಷ ಕಳೆದಿದ್ದು, ಈ ಬಾರಿ ಫೆ.18ರಂದು ಅದ್ದೂರಿಯಾಗಿ ಮಹಾಶಿವರಾತ್ರಿ ಉತ್ಸವ ಆಚರಣೆಗೆ ಶಿವಪ್ರತಿಷ್ಠಾನ ಸೇವಾ ಸಮಿತಿ ಮುಂದಾಗಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸರಳವಾಗಿ ಮಹಾಶಿವರಾತ್ರಿ ಆಚರಿಸಲಾಗಿತ್ತು. ಈ ಬಾರಿ ಕೊರೊನಾ ಕಾರ್ಮೋಡ ಸರಿದಿರುವುದರಿಂದ ಸಂಭ್ರಮ ಇಮ್ಮಡಿಗೊಂಡಿದೆ. 72 ಅಡಿ ಎತ್ತರದಲ್ಲಿರುವ ಶಿವನ ಮೂರ್ತಿ ಮತ್ತು ಅದರ ಮುಂಭಾಗದಲ್ಲಿರುವ ನಂದಿ ವಿಗ್ರಹ ದರ್ಶನಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ 1 …

Read More »

‘ಮಠ, ಮಂದಿರ ನಿರ್ಮಾಣದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಬೆಳೆಯುತ್ತದೆ’:ಶಿಂದೊಗಿ ಮುಕ್ತಾನಂದ ಸ್ವಾಮೀಜಿ

ಯರಗಟ್ಟಿ: ‘ಮಠ, ಮಂದಿರ ನಿರ್ಮಾಣದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಪೂಜಾ ಭಾವನೆ ಬೆಳೆಯುತ್ತದೆ’ ಎಂದು ಶಿಂದೊಗಿ ಮುಕ್ತಾನಂದ ಸ್ವಾಮೀಜಿ ಹೇಳಿದರು. ಸಮೀಪದ ರೈನಾಪೂರದಲ್ಲಿ ಗುರುವಾರ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ, ಟ್ರಸ್ಟ್ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಸಾಮೂಹಿ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ನಿವೃತ್ತ ಬಸವೇಶ್ವರ ಪೌಢ ಶಾಲೆ ಮುಖ್ಯ ಶಿಕ್ಷಕ ರಂಗಪ್ಪ ಜೂಗನವರ …

Read More »