ಬೆಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಡಿಐಜಿ ರೈಲ್ವೆ ಹುದ್ದೆಗೆ ನಿಯೋಜಿಸಿದ ಸರ್ಕಾರ, ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಎಸ್‌ಪಿ ಕುಲದೀಪ್ ಕುಮಾರ್ ಜೈನ್ ಅವರನ್ನು ನೇಮಿಸಿದೆ. ಬೆಂಗಳೂರು ನಗರಕ್ಕೆ ಹೊಸದಾಗಿ ದಕ್ಷಿಣ (ಸಂಚಾರ) ವಿಭಾಗವನ್ನು ಸೃಜಿಸಿ ಮಹಮ್ಮದ್ ಸುಜೀತಾ ನೇಮಕ ಮಾಡಿದೆ. …
Read More »Daily Archives: ಫೆಬ್ರವರಿ 23, 2023
ಬದುಕಿರುವಾಗಲೇ 2 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ತಾಯಿ,ಮಗನ ಮಾಸ್ಟರ್ ಪ್ಲ್ಯಾನ್: ಬಯಲಾಯ್ತು ಅಸಲಿ ಕಥೆ
ಮಹಾರಾಷ್ಟ್ರ: ಮಹಿಳೆಯೊಬ್ಬರು ತನ್ನ 29 ವರ್ಷದ ಮಗ ಸಾವನ್ನಪ್ಪಿದ್ದಾನೆಂದು ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ ವಿಮೆ ಪಡೆಯಲು ಪ್ರಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದಿನೇಶ್ 2015ರಲ್ಲಿ ಎಲ್ಐಸಿ ಪಾಲಿಸಿಯನ್ನು ಖರೀದಿಸಿ ಪ್ರೀಮಿಯಂ ಪಾವತಿಸಿದ್ದರು. ದಿನೇಶ್ 2016 ಡಿಸೆಂಬರ್ 25 ರಂದು ಅಹಮದ್ ನಗರ ಜಿಲ್ಲೆಯ ನಗರ ಪುಣೆ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು 2017 ಮಾರ್ಚ್ 14 ರಂದು ಆತನ ತಾಯಿ ನಂದಾಬಾಯಿ ತಕ್ಸಾಲೆ ಇನ್ಶೂರೆನ್ಸ್ ಹಣಕ್ಕೆ ಅರ್ಜಿಸಲ್ಲಿಸಿದ್ದರು. ವಿಮೆ …
Read More »ಸಾಲದ ಹೊರೆಗೆ ಒಂದೇ ಕುಟುಂಬದ ಮೂವರು ಪ್ರಾಣ ತ್ಯಾಗ
ಹಾವೇರಿ : ತರಕಾರಿ ಮಾರಾಟ ಮಾಡಿ ಮಗಳನ್ನು ಸಾಕಿ ವಿದ್ಯಾಭ್ಯಾಸ ನೀಡಿ ಮದುವೆ ಮಾಡಿಕೊಟ್ಟಿದ್ದ ಕುಟುಂಬ ಇದೀಗ ಮಗಳ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದೆ. ಒಂದೇ ಕುಟುಂಬದ ಮೂವರು ಸದಸ್ಯರ ಆತ್ಮಹತ್ಯೆಗೆ ಕಾರಣ ಹೊಸ ಮನೆ, ಮಗಳ ಮದುವೆ ಎನ್ನಲಾಗಿದೆ. ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಮೃತರು. ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ …
Read More »ಸೈಬರ್ ಅಪರಾಧಗಳಿಂದಾಗಿ ಪ್ರತಿ ದಿನ ಕೋಟಿ-ಕೋಟಿ ಹಣ ಕಳೆದುಕೊಳ್ಳುತ್ತಿರುವ ಕರ್ನಾಟಕದ ಜನ
ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಕರ್ನಾಟಕವು ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಕಳೆದುಕೊಳ್ಳುತ್ತಿದೆ. ಇದರಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮೈಸೂರು ಹಾಗೂ ಮಂಡ್ಯ ನಂತರದ ಸ್ಥಾನದಲ್ಲಿವೆ. ಬೆಚ್ಚಿಬೀಳಿಸುವ ಈ ಮಾಹಿತಿಯನ್ನು ರಾಜ್ಯ ಗೃಹ ಇಲಾಖೆ ನೀಡಿದೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಅಪರಾಧ ವರದಿ ಮಾಡುವಲ್ಲಿ ವಿಳಂಬವಾಗುತ್ತಿದೆ. ರಾಜ್ಯಗಳ ನಡುವೆ ಸಮನ್ವಯದ ಕೊರತೆ ಇದೆ. ಇದೆಲ್ಲ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸೈಬರ್ …
Read More »ಅಥಣಿಯ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ರಾಜಕಾರಣದ ಅಖಾಡಕ್ಕೆ ಎಂಟ್ರಿ
ಬೆಳಗಾವಿ: ಕುಡಚಿ ಶಾಸಕ ಪಿ.ರಾಜೀವ್ ಮಾದರಿಯಲ್ಲೇ ಅಥಣಿ ಮತಕ್ಷೇತ್ರಕ್ಕೆ ಮತ್ತೋರ್ವ ಪೋಲಿಸ್ ಅಧಿಕಾರಿ ರಾಜಕಾರಣದ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯಾರಂತೀರಾ ಇಲ್ಲಿದೆ ನೋಡಿ ಡೀಟೇಲ್ಸ್. ಅಥಣಿಯಲ್ಲಿ ಪಿಎಸ್ ಐ(PSI) ಆಗಿದ್ದಾಗ ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರಿತಿಸಿಕೊಂಡಿದ್ದ ಸದ್ಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬೀಸನಕೊಪ್ಪ ಈಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ …
Read More »ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ: ಸಚಿವೆ ಶೋಭಾ ಕರಂದ್ಲಾಜೆ
ಬೆಳಗಾವಿ: ಫೆ.27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಪ್ರಧಾನಮಂತ್ರಿಗಳ ಕಾರ್ಯಕ್ರಮ ನಡೆಯಲಿರುವ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ವೇದಿಕೆ ನಿರ್ಮಾಣ ಮತ್ತಿತರ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, ಇದು ಸಂಪೂರ್ಣ ರೈತರ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು …
Read More »ಬಿಸಿಯನ್ನು ತಾಳಿಕೊಳ್ಳಬಲ್ಲ ಗೋಧಿ ತಳಿ ಅಭಿವೃದ್ಧಿ: ಐಸಿಎಆರ್‌ನ ಹೊಸ ಸಂಶೋಧನೆ
ನವದೆಹಲಿ: ಬಿಸಿಯನ್ನೂ ತಾಳಿಕೊಳ್ಳಲು ಸಾಧ್ಯವಿರುವ ಗೋಧಿ ತಳಿಯನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು(ಐಸಿಎಆರ್) ಅಭಿವೃದ್ಧಿಪಡಿಸಿದೆ. ಬೇಸಿಗೆ ಸಮೀಪಿಸುತ್ತಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಗೋಧಿ ಬೆಳೆಯುವ ಪ್ರದೇಶಗಳಲ್ಲಿ ತಾಪಮಾನ ಸರಾಸರಿ 3-5 ಸೆಲಿÏಯಸ್ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದ ಗೋಧಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಐಸಿಎಆರ್ ವಿಜ್ಞಾನಿಗಳು ಬಿಸಿಯನ್ನೂ ತಾಳಿಕೊಳ್ಳುವ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಜನವರಿಯಲ್ಲಿ ಏಕದಳ ಧಾನ್ಯಗಳ ಕೊರತೆ ದಾಖಲೆಯ ಶೇ. …
Read More »ಸಿದ್ದರಾಮಯ್ಯ ಜಾತಿ ಧರ್ಮದ ರಾಜಕಾರಣ ಬಿಟ್ಟು ಬೇರೆ ಏನೂ ಮಾಡಿಲ್ಲ: ಶೋಭಾ ಕರಂದ್ಲಾಜೆ
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಜಾತಿ ಮತ್ತು ಧರ್ಮದ ರಾಜಕಾರಣ ಬಿಟ್ಟು ಬೇರೆ ಏನೂ ಮಾಡಲಿಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತೀವ್ರ ಟೀಕಾಪ್ರಹಾರ ನಡೆಸಿದರು. ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಚುನಾವಣೆ ಬಂದಾಗಲೊಮ್ಮೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರು ರೈತರಿಗೆ ಏನೂ ಮಾಡಲಿಲ್ಲ ಎಂದು ನಿರಾದಾರ ಆರೋಪ ಮಾಡುತ್ತಾರೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕಟುಕಿದರು. …
Read More »ಲಂಚಕ್ಕೆ ಕೈಯೊಡ್ದಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ
ಹರಿಹರ: ಲಂಚಕ್ಕೆ ಕೈಯೊಡ್ದಿದ್ದ ಹರಿಹರ ತಾಲೂಕಿನ ಬೆಸ್ಕಾಂ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಡೆ ಇಂಜಿನಿಯರ್ ಬಿ.ಎಂ.ಕರಿಬಸವಯ್ಯ ಲೋಕಾಯುಕ್ತ ಬಲೆಗೆ ಬಿದ್ದವರು. ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ ಮಹೇಶ್ವರಪ್ಪನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಇಂಜಿನಿಯರ್ ಕರಿಬಸವಯ್ಯನನ್ನು ಬಂಧಿಸಿದ್ದಾರೆ. ಕಡತ ವಿಲೇವಾರಿಗಾಗಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರಿಬಸವಯ್ಯ, ಅದಾಗಲೇ 9ಸಾವಿರ ರೂಪಾಯಿ ಪಡೆದಿದ್ದ. ಉಳಿದ …
Read More »ಯುವತಿಯ ಸೀಟಿನ ಮೇಲೆ ಸಹ ಪ್ರಯಾಣಿಕನಿಂದ ಮೂತ್ರ ವಿಸರ್ಜನೆ
ಹುಬ್ಬಳ್ಳಿ: ಮಹಿಳಾ ಪ್ರಯಾಣಿಕಳ ಸೀಟಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವಿಜಯಪುರ ಮತ್ತು ಮಂಗಳೂರು ನಡುವೆ ಸಂಚರಿಸುವ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಡಾಬಾ ಬಳಿ ಮಂಗಳೂರು-2ನೇ ಘಟಕಕ್ಕೆ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ನಡೆದಿದೆ. ಪ್ರಯಾಣಿಕರ ಊಟ, ತಿಂಡಿಗಾಗಿ ಡಾಬಾ ಬಳಿ ಬಸ್ ನಿಲ್ಲಿಸಿದಾಗ ಎಲ್ಲ ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ 30 ವರ್ಷದ ವ್ಯಕ್ತಿ ಮೂತ್ರ …
Read More »