Breaking News

Daily Archives: ಫೆಬ್ರವರಿ 21, 2023

ಇಷ್ಟಪಟ್ಟಿದ್ದರೆ ಇಬ್ಬರೂ ಮದುವೆ ಆಗಬಹುದಿತ್ತು; ರೋಹಿಣಿ ಬಗ್ಗೆ ಡಿಕೆ ರವಿ ತಾಯಿ ಹೇಳಿದ್ದೇನು?

ರಾಮನಗರ: ಡಿ.ರೂಪಾ ಮೌದ್ಗಿಲ್‌ ಹಾಗೂ ರೋಹಿಣಿ ಸಿಂಧೂರಿ ಇಬ್ಬರೂ ಕೂಡ ತಮ್ಮ ಜಗಳದಲ್ಲಿ ನನ್ನ ಮಗ ಹೆಸರು ತರಬೇಡಿ. ನನ್ನ ಮಗ ಮೃತಪಟ್ಟ 8 ವರ್ಷ ಕಳೆದಿದೆ. ಆತನ ಹೆಸರಿಗೆ ಕಳಂಕ ಹಚ್ಚಬೇಡಿ ಎಂದು ದಿವಂಗತ ಐಪಿಎಸ್‌ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಮನವಿ ಮಾಡಿದ್ದಾರೆ.     ಜಿಲ್ಲೆಯ ಕದರಮಂಗಲ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೌರಮ್ಮ, ನನ್ನ ಮಗ ಡಿ.ಕೆ.ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ, ಅವರಿಬ್ಬರು ಸ್ನೇಹಿತರು, ಅವರಿಬ್ಬರು …

Read More »

ಏ.1ರಿಂದಲೇ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್: ಸಿಎಂ ಬೊಮ್ಮಾಯಿ

ಬೆಂಗಳೂರು: ಏಪ್ರಿಲ್ 1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಅವರು ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.   ಮಹಿಳೆಯರಿಗೆ ಗೌರವದ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ರೂಪಿಸಲಾಗಿದೆ. ಮಿನಿ ಸ್ಕೂಲ್ …

Read More »

ಕಾಂತಾರ ಖ್ಯಾತಿಯ ರಿಷಭ್​ ಶೆಟ್ಟಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ!

ಬೆಂಗಳೂರು: ಸೋಮವಾರ ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2023ರಲ್ಲಿ ಕಾಂತಾರ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ‘MOst Promising Actor’ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕಪ್ಪು ಶರ್ಟ್ ಮತ್ತು ಬಿಳಿ ಪಂಚೆಯೊಂದಿಗೆ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡ ಶೆಟ್ರು ರೆಡ್ ಕಾರ್ಪೆಟ್ ಮೇಲೆ ಪ್ರಶಸ್ತಿಯೊಂದಿಗೆ ಪೋಸ್ ನೀಡಿದ್ದಾರೆ. ರಿಷಭ್​ ಶೆಟ್ರು ತಮಗೆ ಸಿಕ್ಕ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಎಸ್‌ಕೆ ಭಗವಾನ್ ಅವರಿಗೆ ಅರ್ಪಿಸಿದ್ದಾರೆ. ‘ಪ್ರತಿಷ್ಠಿತ …

Read More »

ಬಸ್​ ನಿಲ್ದಾಣದಲ್ಲಿ‌ದ್ದ KSRTC ಬಸ್ಸನ್ನೇ ಕದ್ದ ಕಿಲಾಡಿಗಳು!

ಕಲಬುರಗಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್‌ಆರ್​ಟಿಸಿ ಬಸ್ಸನ್ನೆ ಈ ಖತರ್ನಾಕ್ ಕಳ್ಳರು ಎಗರಿಸಿದ್ದಾರೆ! ಈ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ 3:30ಕ್ಕೆ ನಡೆದಿದೆ. ಬೀದರ್​ನ ಬಸ್ ಡಿಪೋ ನಂಬರ್ 2ಗೆ ಸೇರಿದ ಸರ್ಕಾರಿ ಬಸ್ಸನ್ನು ಕಳ್ಳರು ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಿಂದ ಕದ್ದೊಯ್ದಿದ್ದಾರೆ. ಇವರು ಕದ್ದೊಯ್ದ ಬಸ್​ನ ಸಂಖ್ಯೆ KA38 F 971 ಆಗಿದೆ. ನಸುಕಿನ ಜಾವ 3:30 ರ ಸುಮಾರಿಗೆ ಚಾಲಕ …

Read More »

ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬೇಡಿಕೆ ಮಾತುಕತೆ

ಬೆಂಗಳೂರು: ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಪರಿಷ್ಕರಣೆ ನಡೆಸುವಂತೆ ಬೇಡಿಕೆ ಇಟ್ಟಿರುವ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ, ಹಣಕಾಸಿನ ಇತಿಮಿತಿಯೊಳಗೆ ಅನುಕೂಲ ಮಾಡಿಕೊಡುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.   ವಿಧಾನಸೌಧದ ಮಹಾದ್ವಾರದ ಬಳಿ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಗಳ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ‌ ಈ ವರ್ಷ ಒಂದು ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಬಜೆಟ್ ನಲ್ಲಿ ಘೋಷಿಸಿರುವ ದುಡಿಯುವ ಮಹಿಳೆಯರಿಗೆ …

Read More »

ಬಬಲೇಶ್ವರ ಕ್ಷೇತ್ರದಲ್ಲಿ ಎಂಎಚ್ ತೇರಾ-ಬಾರಾ ವಾಹನ, ಚುನಾವಣೆಗೆ ಮುನ್ನವೇ ಭರಪೂರ ಆಮಿಷ; ಪ್ರಜಾಧ್ವನಿಯಲ್ಲಿ ಸೀರೆ-ಮೊಬೈಲ್ ಪ್ರತಿಧ್ವನಿ !

ವಿಜಯಪುರ: ವಿಧಾನ ಸಭೆ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಸೀರೆ-ಮೊಬೈಲ್‌ಗಳ ಸದ್ದು ಪ್ರತಿಧ್ವನಿಸುತ್ತಿದೆ ! ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲರ ಕ್ಷೇತ್ರ ಬಬಲೇಶ್ವರದಲ್ಲಿ ಇಂಥದ್ದೊಂದು ಪ್ರತಿಧ್ವನಿ ಕೇಳಿ ಬರುತ್ತಿದ್ದು, ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ನೋಂದಣಿಯಾಗಿರುವ ಎಂಎಚ್-ತೇರಾ, ಎಂಎಚ್-ಬಾರಾ ವಾಹನಗಳು ಬಬಲೇಶ್ವರದಲ್ಲಿ ಕಾರ್ಯಾಚರಿಸುತ್ತಿದ್ದು, ಸೀರೆ ಹಾಗೂ ಮೊಬೈಲ್‌ಗಳನ್ನು ಹಂಚಿ ಜನರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ …

Read More »

ತಂದೆಗೆ ಜೀವದಾನ ಮಾಡಿದ ಮಗಳು!

ಕೇರಳದ 17 ವರ್ಷದ ಬಾಲಕಿಯೊಬ್ಬಳು ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡಿ ತಂದೆಯ ಪ್ರಾಣ ಉಳಿಸಲು ನೆರವಾದ ಪ್ರಕರಣವೊಂದು ನಡೆದಿದೆ. ಈ ಮೂಲಕ, 17 ವರ್ಷದ ದೇವನಂದ ಎಂಬ 12ನೇ ತರಗತಿಯ ಬಾಲಕಿ ಅಂಗಾಂಗ ದಾನ ಮಾಡಿದ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.   ಕಾನೂನು ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಆದರೆ ಅದರಿಂದ ವಿನಾಯಿತಿ ನೀಡುವಂತೆ ಕೋರಿ ದೇವನಂದ ಕೇರಳ ಹೈಕೋರ್ಟ್​ಗೆ ಮೊರೆ …

Read More »

ರೋಹಿಣಿ ವಿರುದ್ಧ 3 ಪುಟಗಳ ದೂರು ನೀಡಿದ ಡಿ.ರೂಪಾ; ತನಿಖೆಗೆ ಆಗ್ರಹಿಸಿದ ಆ ಏಳು ಪ್ರಕರಣಗಳು ಇಂತಿವೆ.

ಬೆಂಗಳೂರು: ಐಪಿಎಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿಧಾನ ಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿಯಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೂರು ಪುಟಗಳ ದೂರು ನೀಡಿದ್ದಾರೆ. ಇದಕ್ಕೂ ಮೊದಲು ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ, ನನ್ನ ಮೇಲೆ ಡಿ.ರೂಪ ಮೌದ್ಗಿಲ್ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಹೆಚ್ಚಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದರು. …

Read More »

ಸಂಗೀತ ಕಛೇರಿಯಲ್ಲಿ ಶಾಸಕರ ಪುತ್ರನಿಂದ ಸೋನು ನಿಗಮ್​ ಮೇಲೆ ದಾಳಿ!

ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ ಅವರ ಭದ್ರತಾ ಸಿಬ್ಬಂದಿ ಮತ್ತು ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಮಗ ಹಾಗೂ ಸೋದರಳಿಯ ನಡುವೆ ತಳ್ಳಾಟ ನಡೆದಿದ್ದು ಜಗಳದ ನಂತರ ಗಾಯಕ ಸೋನು ನಿಗಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.   ಮುಂಬೈನ ಚೆಂಬೂರ್‌ನಲ್ಲಿ ಸೋನು ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಇದು ಸಂಭವಿಸಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ, ಸೋನು ಸುರಕ್ಷಿತವಾಗಿದ್ದಾರೆ. ಆದರೆ ಅವರ ಸಂಗೀತ …

Read More »

ಹಾರೂಗೇರಿ ಪೊಲೀಸರ ಕಾರ್ಯಾಚರಣೆ ಯಿಂದ ಅಪಹರಣ ಪ್ರಕರಣ ಭೇದಿಸಲು ಯಶಸ್ವಿ ಯಾದ ತಂಡ

ರಾಯಬಾಗ :ತಾಲೂಕಿನ ಖನದಾಳ ಗ್ರಾಮದ ಅಪಹರಣ ಪ್ರಕರಣ ಭೇದಿಸಲಾಗಿದ್ದು ಈ ಸಂಬಂಧ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ನಾಲ್ಕು ಲಕ್ಷ ಹತ್ತು ಸಾವಿರ ನಗದು ಕೃತಕ್ಕೆ ಬಳಸಿದ್ದ ಎರಡು ಕಾರು ಒಂದು ತಲವಾರ ಚಾಕು ಅಪಹರಣ ಮಾಡಿದವನಿಗೆ ಹಾಕುವ ಕರಿ ಬಣ್ಣದ ಕನ್ನಡಕಾ ಆರೋಪಿತದ ಎಳು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾರೂಗೇರಿ ಪೋಲಿಸ ತಂಡ ಯಶಸ್ವಿ ಆಗಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಳಗಾವಿ ಪೋಲಿಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ …

Read More »