ಕಳ್ಳತನಕ್ಕೆ ಬಂದಿದ್ದ ಕಳ್ಳನಿಗೆ ಸಾರ್ವಜನಿಕರು ಧರ್ಮದೇಟು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿಯಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದ ಆಗ ಅನುಮಾನಗೊಂಡ ಶಾಲಾ ಶಿಕ್ಷಕರು ವಿಚಾರಿಸಿದಾಗ ಅಸಂಬದ್ಧ ಹೇಳಿಕೆ ನೀಡಿದ್ದಾನೆ. ಆಗ ಸಾರ್ವಜನಿಕರು ಕಳ್ಳನಿಗೆ ಧರ್ಮದೇಟು ನೀಡಿದ ಬಳಿಕಕಳ್ಳತನ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೈದರಾಬಾದ್ ಮೂಲದ ಸೋಮನಾಥ ಎಂಬ ಕಳ್ಳನು ವಿಜಯಪುರ ನಗರದ ಗ್ಯಾಂಗ್ ಬೌಡಿಯಲ್ಲಿ ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ ನಡೆಯುತ್ತಿತ್ತು.
Read More »Daily Archives: ಸೆಪ್ಟೆಂಬರ್ 14, 2022
ನಟ ರಮೇಶ ಅರವಿಂದ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್
ಬೆಳಗಾವಿಯ ರಾಣಿ ಚನ್ನಮ್ಮ ವಿವಿಯ 10ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಭಾಗಿಯಾಗಿದ್ದಾರೆ. ಕನ್ನಡದ ಖ್ಯಾತ ನಟ ರಮೇಶ ಅರವಿಂದ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹೌದು ಇಂದು ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಸುವರ್ಣಸೌಧ ಸಭಾಭವನದಲ್ಲಿ ನಡೆಯುತ್ತಿರುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ …
Read More »ಮರಾಠಾ ಸಮಾಜ ಅಭಿವೃದ್ಧಿ ನಿಗಮದಿಂದ ಒಬ್ಬ ವಿದ್ಯಾರ್ಥಿಗೂ ಲಾಭ ಆಗಿಲ್ಲ: ಅಂಜಲಿ ನಿಂಬಾಳ್ಕರ್
ಮರಾಠಾ ಸಮಾಜ ಅಭಿವೃದ್ಧಿ ನಿಗಮದಿಂದ ಈವರೆಗೆ ಒಬ್ಬ ವಿದ್ಯಾರ್ಥಿಗೂ ಯಾವುದೇ ರೀತಿ ಉಪಯೋಗ ಆಗಿಲ್ಲ ಎಂದು ಸದನದಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು. ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಮಾಡಲಾಗಿದೆ. ಇದರಲ್ಲಿ ಎಷ್ಟು ಯೋಜನೆಗಳು ಇವೆ..? ಅವುಗಳಿಂದ ಎಷ್ಟು ಜನರಿಗೆ ಲಾಭ ಆಗಿದೆ ಎಂದು ನಾನು ಪ್ರಶ್ನೆ ಕೇಳಿದ್ದೆ. 2019-20ರಲ್ಲಿ ಮರಾಠಾ ಸಮಾಜ …
Read More »ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ತೀವ್ರ ನಿರಾಸೆ
ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ತೀವ್ರ ನಿರಾಸೆಯಾಗಿದೆ. ಇಂದು ನ್ಯಾಯಾಂಗ ಬಂಧನ ಅವಧಿ ಅಂತ್ಯಗೊಂಡಿದ್ದ ಹಿನ್ನಲೆಯಲ್ಲಿ ಚಿತ್ರದುರ್ಗ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆ ಸೆ.27 ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿ ಆದೇಶ ನೀಡಲಾಗಿದೆ. ಹೀಗಾಗಿ ಶ್ರೀಗಳಿಗೆ ಇನ್ನೂ 14 ದಿನಗಳ ಕಾಲ ಜೈಲು ವಾಸ ಮುಂದುವರೆಯುಂತಾಗಿದೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಲೇಡಿ ವಾರ್ಡನ್ ಅವರ ನ್ಯಾಯಾಂಗ …
Read More »ಹೃದಯಾಘಾತದಿಂದ ಯೋಧ ಸಾವು: ಗೋಕಾಕದ ಮೇಲ್ಮಟ್ಟಿಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ
ಗೋಕಾಕ (ಬೆಳಗಾವಿ ಜಿಲ್ಲೆ): ಹೃದಯಾಘಾತದಿಂದ ಮಂಗಳವಾರ ನಿಧನರಾದ ಯೋಧ ಬಾಳಪ್ಪ ಯಲಿಗಾರ (33) ಅವರ ಮೃತದೇಹವನ್ನು ಬುಧವಾರ ಅವರ ಹುಟ್ಟೂರಾದ ಗೋಕಾಕ ತಾಲ್ಲೂಕಿನ ಮೇಲ್ಮಟ್ಟಿಗೆ ತರಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಸುತ್ತಮುತ್ತಲಿನ ಗ್ರಾಮಗಳ ಜನ, ಯೋಧನ ಮೃತದೇಹಕ್ಕೆ ಗೌರವಪೂರ್ಣ ಸ್ವಾಗತ ಕೋರಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಹಾಗೂ ಡಿಎಆರ್ ಎಸ್ಪಿ ವೈ.ಕೆ. ಕಾಶಪ್ಪನವರ ಅವರು ಪುಷ್ಪಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಮಹಾರಾಷ್ಟ್ರದ ಔರಂಗಾಬಾದನಲ್ಲಿ ಮಂಗಳವಾರ ಮಧ್ಯಾಹ್ನ ಕೆಲಸದಲ್ಲಿ ಇದ್ದಾಗಲೇ …
Read More »ಕರ್ನಾಟಕದಲ್ಲಿ ಕನ್ನಡ ಕಡ್ಡಾಯ: ಶೀಘ್ರವೇ ಕಾನೂನು ಜಾರಿ:: ಸಿಎಂ ಬೊಮ್ಮಾಯಿ
ಕನ್ನಡಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಕನ್ನಡವನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ಬರಲಿದ್ದು, ಈ ಸಂಬಂಧ ವಿಧೇಯಕವು ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಇದರಿಂದ ನಾಡು-ನುಡಿಗೆ ಕಾನೂನು ಬದ್ಧ ಸಂರಕ್ಷಣೆ ಸಿಗುವಂತಾಗುತ್ತದೆ ಎಂದು ಸದನದಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ಬುಧವಾರ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಿಂದಿ ದಿವಸ್ ಹೆಸರಿನಲ್ಲಿ ಆ ಭಾμÉಯನ್ನು ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದನ್ನು ಖಂಡಿಸಿ ಕನ್ನಡ …
Read More »ದಿ.ಉಮೇಶ ಕತ್ತಿ ಮನೆಗೆ ರಾಜ್ಯಪಾಲರ ಭೇಟಿ,
ದಿವಂಗತ ಉಮೇಶ್ ಕತ್ತಿ ಅವರ ಮನೆಗೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಆಗಮಿಸಿ ಕತ್ತಿಯವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ದಿ.ಉಮೇಶ್ ಕತ್ತಿ ನಿವಾಸಕ್ಕೆ ಆಗಮಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಉಮೇಶ ಕತ್ತಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ದಿ, ಉಮೇಶ ಕತ್ತಿಯವರ ಪತ್ನಿ ಶೀಲಾ ಕತ್ತಿ ಪುತ್ರ ನಿಖೀಲ ಸಹೋದರ ರಮೇಶ ಕತ್ತಿ ಹಾಗೂ ಪುತ್ರರಾದ ಪ್ರಥ್ವಿ, ಪವನ ರವರಿಗೆ ಸಾಂತ್ವನ ಹೇಳಿದರು.ರಾಜ್ಯ ಪಾಲರಿಗೆ …
Read More »ಕಾಕತಿ ಸಿಪಿಐ ಮೇಲೆ ಈ ವೇಳೆ ಕೆಂಡ ಕಾರಿದ ಹುಲ್ಲಿಯಾನೂರು ಗ್ರಾಮಸ್ಥರು
ಕಳೆದ ಭಾನುವಾರ ವರುದಕ್ಷಣೆ ತರುವಂತೆ ಒತಾಯಿಸಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತೆ ರೇಣುಕಾಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಹುಲ್ಲಿಯಾನೂರು ಗ್ರಾಮಸ್ಥರು ಬುಧವಾರ ಪೆÇಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೌದು ಕಳೆದ ಭಾನುವಾರ ಕಾಕತಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ನವ ವಿವಾಹಿತೆ ರೇಣುಕಾ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಪತಿಯ ಕುಟುಂಬ ಹಾಗೂ ಪ್ರಭಾವಿ ಬಿಜೆಪಿ ಮುಖಂಡರ ಅಣತೆಗೆ …
Read More »ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬೆಳಗಾವಿಯಲ್ಲಿ ಕರವೆ ಕಾರ್ಯಕರ್ತರು ಪ್ರತಿಭಟನೆ
ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬೆಳಗಾವಿಯಲ್ಲಿ ಕರವೆ ಕಾರ್ಯಕರ್ತರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಹೌದು ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬೆಳಗಾವಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಸಂವಿಧಾನದಲ್ಲಿರುವ ಎಲ್ಲಾ ಭಾಷೆಗಳಿಗೆ ಸಮಾನ ಸ್ಥನಮಾನಗಳನ್ನು ನೀಡಬೇಕು. ಶಿಕ್ಷಣ ಹಾಗೂಐ ಉದ್ಯೋಗಗಳಲ್ಲಿ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನ …
Read More »ಹಿಂದಿ ದಿವಸ್ ಸದ್ದು ಗದ್ದಲ: ಹುಚ್ಚಾಸ್ಪತ್ರೆಯಲ್ಲಿ ಮಾತನಾಡಿದಂತೆ ಮಾತಾಡ್ತೀರಾ?: ಸ್ಪೀಕರ್
ಬೆಂಗಳೂರು: ಹಿಂದಿ ದಿವಸ್ ಆಚರಣೆ ವಿಚಾರ ವಿಧಾನಸಭೆಯಲ್ಲೂ ಗದ್ದಲಕ್ಕೆ ಕಾರಣವಾಗಿದ್ದು, ಜೆಡಿಎಸ್ ಶಾಸಕರು ಕನ್ನಡ ಶಾಲು ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಡಾ. ಅನ್ನದಾನಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಎದ್ದು ನಿಂತ ಜೆಡಿಎಸ್ ಶಾಸಕರು ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದರು. ಇದು ಸ್ಪೀಕರ್ ಕಾಗೇರಿ ಅವರನ್ನು ಕೆರಳಿಸಿತು.ಏನಿದು ಜಾತ್ರೆನಾ ? ಸಂತೆನಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಏನಿದು ಹುಚ್ಚಾಸ್ಪತ್ರೆಯಲ್ಲಿ ಮಾತನಾಡಿದ ಹಾಗೆ ಮಾತನಾಡುತ್ತೀರಿ ಎಂದು ಸ್ಪೀಕರ್ ಕಾಗೇರಿ ಗರಂ …
Read More »
Laxmi News 24×7