Breaking News

Daily Archives: ಜುಲೈ 28, 2022

ಕುಂದಾನಗರಿಯಲ್ಲಿ ಕಿಚ್ಚ ಸುದೀಪ್ “ವಿಕ್ರಾಂತ ರೋಣ”ನ ಅಬ್ಬರ:

ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಬೆಳಗಾವಿಯಲ್ಲಿ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಕಿಚ್ಚನ ಅಭಿಮಾನಿಗಳು ಭರ್ಜರಿ ಬೈಕ್ ರ್ಯಾಲಿ ನಡೆಸಿದ್ದು, ಚಿತ್ರ ಮಂದಿರ ಮುಂದೆ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದ್ದಾರೆ. ಹೌದು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ ರೋಣ ಸಿನಿಮಾ ಗುರುವಾರ ವಿಶ್ವದಾಧ್ಯಂತ ರಿಲೀಸ್ ಆಗಿರುವ ಹಿನ್ನೆಲೆ ಬೆಳಗಾವಿ ಚೆನ್ನಮ್ಮ ವೃತ್ತದಿಂದ ಚಿತ್ರಾ ಟಾಕೀಸ್‍ವರೆಗೂ ಕಿಚ್ಚ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಿದರು. ಕಿಚ್ಚ ಸುದೀಪ್ ಸೇನಾ …

Read More »

ಹೂಲಿಕಟ್ಟಿಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ

ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ‌ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ‌ ಆತಂಕ ಮನೆ ಮಾಡಿದೆ. ಹೂಲಿಕಟ್ಟಿ ಗ್ರಾಮದಲ್ಲಿ ನೆಲದ ಮೇಲೆ ಚಿರತೆ ಹೆಜ್ಜೆ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸವದತ್ತಿ ವಲಯ ಅರಣ್ಯ ಅಧಿಕಾರಿಗಳು ಚಿರತೆಯ ಹೆಜ್ಜೆಯನ್ನು ಗುರುತು ಮಾಡಿದ್ದಾರೆ. ವಿಶೇಷ ತಂಡ ರಚಿಸಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ …

Read More »

ವಿವಿಧ ಬೇಡಿಕೆ ಈಡೇರಿಸುವಂತೆ ಬೆಳಗಾವಿಯಲ್ಲಿ ಕೂಲಿ ಕಾರ್ಮಿಕ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕಾರ್ಮಿಕ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಗುರುವಾರ ಬೆಳಗಾವಿಯ ಡಿಸಿ ಕಚೇರಿ ಮುಂಭಾಗದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕೂಲಿ ಕಾರ್ಮಿಕರು 2021ರ ಫೆಬ್ರುವರಿ, ಮಾರ್ಚ ಹಾಗೂ 2022ರ ಏಪ್ರೀಲ್, ಮೇ, ಜೂನ್ ತಿಂಗಳ ಕೂಲಿ ಹಣ ಈವರೆಗೂ ಬಿಡುಗಡೆ ಆಗಿಲ್ಲ. ತಕ್ಷಣವೇ ಈ ಕೂಲಿ ಹಣ ಬಿಡುಗಡೆ ಮಾಡುವುದು …

Read More »

ಯಕ್ಸಂಬಾ ಪಟ್ಟಣದ ಜನರ ಅನುಕೂಲಕ್ಕಾಗಿ ಉಚಿತ ಆ್ಯಂಬುಲೆನ್ಸ್ ಸೇವೆ ಬಸವಪ್ರಸಾದ

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ವಿಶೇಷ ಪ್ರಯತ್ನದಿಂದ ೨೦೧೯ – ೨೦ ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ೧೬.೫೦ ಲಕ್ಷ ರೂ ಮೊತ್ತದಲ್ಲಿ ಸುಸಜ್ಜಿತವಾದ ಜನರ ಹಿತಕ್ಕಾಗಿ ಉಚಿತ ಆಂಬುಲೆನ್ಸ್ ಸೇವೆಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಚಾಲನೆಯನ್ನು ನೀಡಿದರು. ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಮಾತನಾಡಿ, ಚಿಕ್ಕೋಡಿ …

Read More »

ಕುಸಿದ ಸದಲಗಾ ಹಳೆ ಬಾಂಧಾರ..!

ಚಿಕ್ಕೋಡಿತಾಲೂಕಿನ ಸದಲಗಾ ಪಟ್ಟಣದ ಹತ್ತಿರದೂಧಗಂಗಾ ನದಿಗೆ ಕಳೆದ 60 ವರ್ಷಗಳ ಹಿಂದೆಕಟ್ಟಿರುವ ಬಾಂಧಾರ ನಿನ್ನೆರಾತ್ರಿ ಕುಸಿದು ಬಿದ್ದಿದ್ದು, ಈ ಘಟನೆರಾತ್ರಿ ಸಂಭವಿಸಿರುವುದರಿಂದ ಯಾವುದೇಅನಾಹುತ ಸಂಭವಿಸಿಲ್ಲ. ಚಿಕ್ಕೋಡಿ-ಇಚಲಕರಂಜಿಅಂತರಾಜ್ಯ ಮಾರ್ಗದಲ್ಲಿ ಸದಲಗಾ ಪಟ್ಟಣದ ಬಳಿ ಈ ಬಾಂಧಾರವನ್ನು 60 ವರ್ಷಗಳ ಹಿಂದೆಕಟ್ಟಲಾಗಿದೆ. ಕಳೆದ ಅನೇಕ ವರ್ಷಗಳಿಂದ ಅನ್ನುಉಪಯೋಗಿಸದೇಇದ್ದು, ಅದರ ಪಕ್ಕದಲ್ಲಿಯೇ ನೂತನ ಸೇತುವೆ ನಿರ್ಮಿಸಿ, ಸುಗಮ ಸಂಚಾರಕ್ಕೆದಾರಿ ಮಾಡಲಾಗಿದ್ದು, ಹಳೆ ಬಾಂಧಾರವು ಪಾಳು ಬಿದ್ದಂತಾಗಿತ್ತು.ಕಳೆದ 60 ವರ್ಷಗಳ ಹಿಂದೆ ನಿರ್ಮಿಸಿದ್ದ , ಈ …

Read More »

ನೇಜ್ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಗಣೇಶ ಹುಕ್ಕೇರಿ

ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಮೂಲಕ ನೇಜ್ ಗ್ರಾಮದ ಕೆರೆಗೆ ನೀರು ತುಂಬಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರು ಕೆರೆಗೆ ಗ್ರಾಮದ ಮುಖಂಡರೊಂದಿಗೆ ಸೇರಿ ಬಾಗಿನ ಅರ್ಪಿಸಿದರು. ಕೃμÁ್ಣ ನದಿಯಿಂದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ನೀರಾವರಿ ವಂಚಿತ ಅಚ್ಚುಕಟ್ಟು ಹೀರೆಕೊಡಿ, ನೇಜ, ನಾಗರಾಳ ಹಾಗೂ ಸುತ್ತ ಮುತ್ತಲಿನ 23 ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 31218 ಎಕರೆ ಜಮೀನುಗಳಿಗೆ 139.55 ಕೋಟಿ ರೂ. …

Read More »

ಪ್ರವೀಣ್ ಕೊಲೆ ಇಡೀ ಹಿಂದೂಗಳಿಗೆ ಅಪಮಾನ: ಧನಂಜಯ್ ಜಾಧವ್

ಕರಾವಳಿ ಪ್ರದೇಶದ ಬಿಜೆಪಿ ನಾಯಕ ಪ್ರವೀಣ್ ನೆಟ್ಟೂರ ಕೊಲೆ ಮಾಡಿದವರನ್ನು ಎನ್‍ಕೌಂಟರ್ ಮಾಡಬೇಕೆಂದು ಬೆಳಗಾವಿಯ ಬಿಜೆಪಿಯ ಗ್ರಾಮೀಣ ಮಂಡಲಾಧ್ಯಕ್ಷರಾದ ಧನಂಜಯ್ ಜಾಧವ್ ತಮ್ಮದೇ ಆದ ಸರಕಾರಕ್ಕೆ ಆಗ್ರಹಿಸಿದ್ದಾರೆ. ಕರಾವಳಿ ಪ್ರದೇಶದ ಬಿಜೆಪಿ ನಾಯಕ ಪ್ರವೀಣ್ ನೆಟ್ಟೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಹೇಳಿಕೆಯೊಂದನ್ನು ನೀಡಿರುವ ಧನಂಜಯ್ ಜಾಧವ್‍ರವರು, ಕರಾವಳಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟೂರ ಕೊಲೆಯಾಗಿದೆ. ಇವರ ಕೊಲೆ ಎಲ್ಲಾ ಹಿಂದೂಗಳಿಗೆ ತುಂಬಾ ಅವಮಾನಕರ ಸಂಗತಿಯಾಗಿದೆ. ಈ ರೀತಿಯ …

Read More »

ಬಳೆ ತೊಟ್ಟುಕೊಳ್ಳಿ , ಬಿಜೆಪಿ ನಾಯಕರೇ.. ನೀವು ಗಂಡಸರಾ..?

ಬೆಂಗಳೂರು: ಬಳೆ ತೊಟ್ಟುಕೊಳ್ಳಿ , ಬಿಜೆಪಿ ನಾಯಕರೇ.. ಹೀಗಂತ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರೆ ನಾಯಕರ ಫೋಟೋ ಹಾಕಿ ಭಜರಂಗದಳ ಕಾರ್ಯಕರ್ತರು ಪೋಸ್ಟ್ ಹಾಕುವ ಸಾಮಾಜಿಕ ಜಾಲತಾಣದಲ್ಲಿ ಸಿಟ್ಟು ಹೊರಹಾಕ್ತಿದ್ದಾರೆ.   ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಭಜರಂಗದಳದ ಫೇಸ್ ಬುಕ್‌ನಲ್ಲಿ ಬಳೆ ತೊಟ್ಟುಕೊಳ್ಳಿ,ಬಿಜೆಪಿ ನಾಯಕರೇ.. ಇನ್ನೆಷ್ಟು ಹಿಂದೂಗಳ ಬಲಿದಾನವಾಗಬೇಕು?ನಿಮ್ಮನ್ನು ಗಂಡಸರು ಎಂದು ಆರಿಸಿದೆವು..ಆದರೆ ನೀವು..? ಎಂದೆಲ್ಲಾ ಬರೆದು ಫೋಸ್ಟ್ …

Read More »

ಸಿದ್ದರಾಮೋತ್ಸವ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್​..?

ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಪದೇ ಪದೇ ಕಾರ್ಮೋಡ ಆವರಿಸ್ತಿದೆ. ಪಕ್ಷದ ವೇದಿಕೆಯಲ್ಲಿ ಸಮಾರಂಭ ಮಾಡ್ತೀವಿ ಎನ್ನುತ್ತಿದ್ದ ಸಿದ್ದು ಬೆಂಬಲಿಗರಿಗೆ, ಡಿಕೆಶಿ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಕೈ ನಾಯಕರ ನಡುವಿನ ಕಲಹ, ಮತ್ತೊಮ್ಮೆ ಸ್ಪೋಟಗೊಂಡಿದೆ. ಕಾರ್ಯಕ್ರಮವನ್ನ ಹೈಜಾಕ್ ಮಾಡುವ ಪ್ರಯತ್ನಗಳೂ ನಡೀತಿವೆ. ಈ ನಡುವೆ ಸಿದ್ದು ಅಂಡ್ ಟೀಂ ವಿರುದ್ದ ಎಐಸಿಸಿ ನಾಯಕರು ಗರಂ ಆಗಿದ್ದಾರೆ. ಸಿದ್ದರಾಮೋತ್ಸವಕ್ಕೆ ಪದೇ ಪದೇ ವಿಘ್ನಗಳು ಎದುರಾಗ್ತಾನೇ ಇದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇ.ಡಿ …

Read More »

ವಿಕ್ರಾಂತ್ ರೋಣ’ ಸಿನಿಮಾ ರಿವ್ಯೂ ಔಟ್..!‌ ಜಗತ್ತಿನಾದ್ಯಂತ ಕಿಚ್ಚನ ಸುನಾಮಿ..

ಅಬ್ಬಬ್ಬಾ.. ಎಲ್ಲಿ ನೋಡಿದ್ರೂ ಬರೀ ‘ವಿಕ್ರಾಂತ್ ರೋಣ’.. ‘ವಿಕ್ರಾಂತ್ ರೋಣ’ .. ‘ವಿಕ್ರಾಂತ್ ರೋಣ’.. ಅರೆರೆ ಇದು ಇರಲೇಬೇಕಲ್ವಾ..? ಯಾಕಂದ್ರೆ ‘ವಿಕ್ರಾಂತ್ ರೋಣ’ ಇಟ್ಟಿರೋ ಹವಾ ಅಂತಹದ್ದು. ಇದು ಬರೀ ಹವಾ ಮಾತ್ರ ಅಲ್ಲ ಕನ್ನಡ ಸಿನಿಮಾಗಳ ತಾಕತ್ತು ಈ ‘ವಿಕ್ರಾಂತ್ ರೋಣ’ ಎನ್ನಬಹುದು. ಯಾಕಂದ್ರೆ ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಸಿನಿಮಾದ ರಿವ್ಯೂವ್‌ ಔಟ್‌ ಆಗಿದ್ದು, ‘ವಿಕ್ರಾಂತ್ ರೋಣ’ ಸುನಾಮಿ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ.     ‘ವಿಕ್ರಾಂತ್ ರೋಣ’ ಪದ ಕಿವಿಗೆ …

Read More »