Breaking News

Daily Archives: ಜುಲೈ 13, 2022

ಚಿಕ್ಕೋಡಿ: ನರಸಿಂಹವಾಡಿ ದತ್ತ ಮಂದಿರ ಜಲಾವೃತ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ನರಸಿಂಹವಾಡಿಯ ದತ್ತಾತ್ರೇಯ ದೇವಸ್ಥಾನ ಮಂಗಳವಾರ ನಸುಕಿನಲ್ಲಿ ಜಲಾವೃತವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.   ಈ ಎರಡೂ ನದಿಗಳ ಸಂಗಮ ಸ್ಥಾನವಾದ ನರಸಿಂಹವಾಡಿಯ ದತ್ತ ದೇಗುಲವನ್ನು ನೀರು ಸುತ್ತುವರಿದಿದ್ದು, ಪ್ರವೇಶ ಬಂದಾಗಿದೆ.

Read More »

ಬೆಳಗಾವಿ: ಯಲ್ಲಿ ಧಾರಾಕಾರ ಮಳೆ , ಈವರೆಗೆ 317 ಮನೆಗಳು ಕುಸಿದಿವೆ.

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ. ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43, ಸವದತ್ತಿ 35 ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ 19 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.   ಉಳಿದಂತೆ, ಮೂಡಲಗಿ ತಾಲ್ಲೂಕು 22, ಕಾಗವಾಡ 24, ಬೈಲಹೊಂಗಲ 19, ಹುಕ್ಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 14 ಮನೆಗಳ ಗೋಡೆಗಳು ಕುಸಿದಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದಯಾಗಿ …

Read More »