ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಆಗಾಗ ಜೋರಾಗಿ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರ ರಾತ್ರಿಯಿಂದಲೂ ವರ್ಷಧಾರೆ ಮುಂದುವರಿದಿದೆ. ಮೂಡಲಗಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಪರಿಣಾಮ, ಮೂಡಲಗಿ- ಸುಣದೋಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಕೆಳಹಂತದ ಸೇತುವೆ ಇದಾಗಿದ್ದು, ಅದರ ಮೇಲೆಯೇ ಅಪಾಯ ಲೆಕ್ಕಿಸದೆ ಜನರು ಸಂಚರಿಸುತ್ತಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ತೀರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತಡರಾತ್ರಿ ಮಳೆಯಿಂದಾಗಿ …
Read More »Daily Archives: ಮೇ 20, 2022
ವಿಧಾನಪರಿಷತ್ ಚುನಾವಣೆ| ಮುಹೂರ್ತ ಪ್ರಕಾರ ನಾಮಪತ್ರ ಸಲ್ಲಿಸಿದ ಹಣಮಂತ ನಿರಾಣಿ
ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಹಣಮಂತ ನಿರಾಣಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರಿಗೆ 2 ಸೆಟ್ ನಾಮಪತ್ರಗಳನ್ನು ಶುಕ್ರವಾರ ಸಲ್ಲಿಸಿದರು. ಅವರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖಂಡ ಆರ್.ಎಸ್. ಮುತಾಲಿಕ್, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಮೊದಲಾದವರು …
Read More »ಏಣಗಿ ಬಾಳಪ್ಪ ಕುರಿತ ಕೃತಿ ಮೇ 22ರಂದು ಬಿಡುಗಡೆ
ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ, ರಂಗ ಸಂಪದ ಹಾಗೂ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯ 8ನೇ ಮುದ್ರಣದ ಬಿಡುಗಡೆ ಸಮಾರಂಭವನ್ನು ಇಲ್ಲಿನ ರಾಣಿ ಚನ್ನಮ್ಮ ವೃತ್ತ ಸಮೀಪದ ಕನ್ನಡ ಸಾಹಿತ್ಯ ಭವನದಲ್ಲಿ ಮೇ 22ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್ ಬಿಡುಗಡೆ ಮಾಡಲಿದ್ದಾರೆ. …
Read More »ರಾಜಧಾನಿಯಲ್ಲಿ ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ದುರ್ಮರಣ, ನಾಲ್ವರ ಸ್ಥಿತಿ ಗಂಭೀರ,
ಬೆಂಗಳೂರು: ಪಾದಾಚಾರಿ ( pedestrian ) ಗಳ ಮೇಲೆ ಕಾರು ಹರಿದು ಹೋಗಿ ಓರ್ವ ದುರ್ಮರಣ ಹೊಂದಿದ ಘಟನೆ ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದು ಹೋಗಿದ್ದಲ್ಲದೆ, ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಪಘಾತ (Accident)ದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ (28) ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಚಿನ್, ಶಿವರಾಜು, ಶೈಲೇಂದ್ರ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ …
Read More »ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು:
ಬೆಂಗಳೂರು, ಮೇ 20: ಮಳೆಯಿಂದ ಹಾನಿಯಾಗಿರುವ ರಾಜಧಾನಿಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಹೈಕಮಾಂಡ್ ನಿಂದ ತುರ್ತು ಬುಲಾವ್ ಬಂದಿದೆ. ಇಂದು ಮಧ್ಯಾಹ್ನದ ನಂತರ ಸಿಎಂ ದೆಹಲಿಗೆ ಹೊರಡಲಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಕಚೇರಿಯಿಂದಲೇ ದೂರವಾಣಿ ಕರೆ ಬಂದಿದ್ದು, ಇಂದು ಸಂಜೆ ನಡ್ಡಾ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗುವ ಸಾಧ್ಯತೆಯಿದೆ. ಜೊತೆಗೆ, ಅಪಾಯಿಂಟ್ಮೆಂಟ್ ಸಿಕ್ಕಿದರೆ ಅಮಿತ್ ಶಾ ಅವರನ್ನೂ ಬೊಮ್ಮಾಯಿ …
Read More »ಕಾಂಗ್ರೆಸ್ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಮುನ್ನವೇ ರಾಜಕೀಯ ಜ್ವರ ಆರಂಭವಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜತೆಗೆ ಸಮಾಜಸೇವಕರು ಲಗ್ಗೆ ಇಟ್ಟಿದ್ದಾರೆ. ವಿವಿಧ ಪಕ್ಷಗಳ ಹಾಲಿ ಶಾಸಕರು ಮತ್ತೂಮ್ಮೆ ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಸಮಾಜ ಸೇವೆ ನೆಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ರಾಜಕೀಯ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸನ್ನದ್ಧರಾಗಿದ್ದಾರೆ. …
Read More »ಜೆಡಿಎಸ್ ತೊರೆದು ಬಿಜೆಪಿ ಸೇರುವ ಅನಿರ್ವಾಯತೆ ನನಗಿರಲಿಲ್ಲ: ಹೊರಟ್ಟಿ
ಹುಬ್ಬಳ್ಳಿ: ಬಿಜೆಪಿಗೆ ಸೇರುವ ಹಾಗೂ ಜೆಡಿಎಸ್ ತೊರೆಯುವ ಅನಿವಾರ್ಯತೆ ನನಗಿರಲಿಲ್ಲ. ನನ್ನ ಕ್ಷೇತ್ರದ ಶಿಕ್ಷಕರು, ಹಿತೈಷಿಗಳು ಬಿಜೆಪಿ ಸೇರ್ಪಡೆಯಾಗುವ ಬಲವಾದ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ. ಎಲ್ಲೇ ಇದ್ದರೂ ಪಕ್ಷದ ಶಿಸ್ತು, ನಿಯಮಗಳಿಗೆ ಬದ್ಧನಾಗಿರುವೆ ಎಂದು ವಿಧಾನ ಪರಿಷತ್ತು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಶುಕ್ರವಾರ ಇಲ್ಲಿನ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …
Read More »ಅಕ್ಕನ ಮದುವೆಗೆ ಬರುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ರೈಲಿನಡಿ ಸಿಲುಕಿ ಸಾವು
ರಾಯಚೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಯುವಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ನಗರದ ಜಹೀರಾಬಾದ್ ನಿವಾಸಿ ವೆಂಕಟೇಶ್ ಮೃತ ಯುವಕನಾಗಿದ್ದಾನೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾಬ್ಯಾಸ ಮಾಡುತ್ತಿದ್ದ ವೆಂಕಟೇಶ್, ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೆದಾರ್ ಸಂಪತ್‌ಕುಮಾರ್ ಎಂಬುವರ ಮಗನಾಗಿದ್ದ. ಅಕ್ಕನ ಮದುವೆಗೆಂದು ಗುರುವಾರ ರಾತ್ರಿ ಬೆಂಗಳೂರಿನಿಂದ ರೈಲಿನ ಮೂಲಕ ರಾಯಚೂರಿಗೆ ಬರುತ್ತಿದ್ದ. ರೈಲು ಬೆಳಗಿನ ಜಾವ 3ರಿಂದ 4 ಗಂಟೆಯ …
Read More »ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶ: 1,201 ಹುದ್ದೆಗಳು ಖಾಲಿ..!
ಬೆಂಗಳೂರು : ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಪೂರ್ವ ರೈಲ್ವೆ ಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು apprenticeshipindia.org ನಲ್ಲಿ ಅಪ್ರೆಂಟಿಸ್‌ಶಿಪ್ ಇಂಡಿಯಾದ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸ ಬಹುದು. ಒಟ್ಟು 1,201 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 20, 2022 …
Read More »ಪಕ್ಕದ್ಮನೆ ಆಂಟಿ ಮೇಲೆ ಕಣ್ಣು ಹಾಕಿದ ಕಿರಾತಕ, ಗಂಡನಿಗೆ ಕೆಲ್ಸ ಕೊಡಿಸಿ ಆಸೆ ತೀರಿಸಿಕೊಂಡ:
ಹುಬ್ಬಳ್ಳಿ: ಪಕ್ಕದ ಮನೆಯ ಮಹಿಳೆಯೊಬ್ಬಳ ಮೇಲೆ ಕಣ್ಣು ಹಾಕಿದ ಕಿರಾತಕನೊಬ್ಬ ಆಕೆಯ ಗಂಡನನ್ನು ತನ್ನ ಮನೆಯ ಕಾರು ಚಾಲಕನನ್ನಾಗಿ ಮಾಡಿಕೊಂಡು, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಮೌಲಾಸಾಬ್ ಮಹ್ಮದ್ ಸಾಬ್ ಹುಲಸೂರ ಎಂಬ ಕಾಮುಕನ ವಿರುದ್ಧ ಮಹಿಳೆ ಈಗ ದೂರು ದಾಖಲಿಸಿದ್ದಾರೆ. ಮಹಿಳೆಗಿಂತಲೂ ಚಿಕ್ಕವನಾಗಿರುವ ಮೌಲಾಸಾಬ್ ಆಕೆಯ ಮೇಲೆ ಕಣ್ಣು ಹಾಕಿ ಹೇಗಾದರೂ ಅವಳನ್ನು ತನ್ನವಳನ್ನಾಗಿಸಿಕೊಳ್ಳುವ …
Read More »
Laxmi News 24×7