Breaking News

Monthly Archives: ಏಪ್ರಿಲ್ 2022

ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ, : ಅಮಿತ್ ಶಾ

ಬೆಂಗಳೂರು: ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ಬೇರೆ ಪಕ್ಷಗಳೊಂದಿಗೂ ಚುನಾವಣಾ ಪೂರ್ವ ಹೊಂದಾಣಿಕೆ ಇಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಅವಧಿ ಪೂರ್ವ ಚುನಾವಣೆ ನಡೆಯಲ್ಲ. ಇದಕ್ಕೆ ಕಾರಣವನ್ನು ಕರೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿರುವುದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ರಾಜ್ಯ …

Read More »

ರಾಜ್ಯದಲ್ಲಿ ಲಿಂಗ ಪರಿವರ್ತನೆ ಜಾಲ ಸಕ್ರಿಯವಾಗಿದೆಯಾ? ಬಚಾವ್​ ಆಗಿ ಬಂದ ವಿಜಯನಗರ ಯುವಕನ ಕತೆಯಿದು

ವಿಜಯನಗರ: ರಾಜ್ಯದಲ್ಲಿ ಲಿಂಗ ಪರಿವರ್ತನೆ ಮಾಡುವ ಜಾಲ ಸಕ್ರಿಯವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಮಂಗಳ‌ಮುಖಿಯರ ಹುಚ್ಚಾಟಕ್ಕೆ ಹೂವಿನ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕ ಹೈರಾಣಾಗಿರುವ ಘಟನೆ ನಡೆದಿದೆ. ಹಳ್ಳಿಯಲ್ಲಿ ‌ಕೆಲಸಕ್ಕಾಗಿ‌ ಪರದಾಡೋ ಹುಡುಗರನ್ನು ಟಾರ್ಗೆಟ್ ಮಾಡ್ತಾರಂತೆ ಈ ಮಂಗಳ ಮುಖಿಯರು? ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರೆಂಬ ಆರೋಪ ಕೇಳಿಬಂದಿದೆ. ಇದೇ ರೀತಿ ಕೆಲಸ ಕೊಡಿಸುವುದಾಗಿ 19 ವರ್ಷದ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕನನ್ನು ಕರೆದುಕೊಂಡು …

Read More »

ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ:C.M. ಬೊಮ್ಮಾಯಿ

ಬೆಂಗಳೂರು: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಘೋಷಿಸಿದರು. ಇಂದು ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ …

Read More »

ವನ್ಯಜೀವಿ ಸಂರಕ್ಷಣೆಯ ಸಂದೇಶಕ್ಕೆ 249 ಕಿ.ಮೀ ಸೈಕಲ್ ತುಳಿದ ಅರಣ್ಯಾಧಿಕಾರಿ

ಮುಂಬೈ: ಅರಣ್ಯ ಅಧಿಕಾರಿಯೊಬ್ಬರಿಗೆ ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಯಾಗಿತ್ತು. ಅಧಿಕಾರ ವಹಿಸಿಕೊಳ್ಳವ ಶುಭ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸಲು 249 ಕಿ.ಮೀ ಸೈಕಲ್ ತುಳಿದು ಎಲ್ಲಡೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಅರಣ್ಯ ಅಧಿಕಾರಿ ನಾನಾ ಸಾಹೇಬ್ ಲಾಡ್ಕತ್, ಬಿರು ಬಿಸಿಲ ನಡುವೆ ಕೆಲ ಘಟ್ಟ ಪ್ರದೇಶಗಳನ್ನು ದಾಟಿ 17 ಗಂಟೆಗಳ ನಂತರ ಕೊಲ್ಲಾಪುರ ತಲುಪಿದ್ದಾರೆ. ಈ ವೇಳೆ 12 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ. ಲಾಡ್ಕತ್ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ ಸಂರಕ್ಷಣಾಧಿಕಾರಿ ಮತ್ತು …

Read More »

ಹಲಾಲ್ ನಿಷೇಧ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ: ಶಶಿಕಲಾ ಜೊಲ್ಲೆ

ಚಿಕ್ಕೋಡಿ(ಬೆಳಗಾವಿ): ಹಲಾಲ್ ನಿಷೇಧ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ನಿಪ್ಪಾಣಿಯ ಸಮಾಧಿ ಮಠದಲ್ಲಿ ಇಂದು ಧಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಹಲಾಲ್ ಕಟ್ ನಿಷೇಧ ಮಾಡಬೇಕು ಎಂದು ಈಗಾಗಲೇ ಕೆಲ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಹಲಾಲ್ ನಿಷೇಧ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಹಲಾಲ್ ಕಟ್ ಮಾಡಿ ಮುಸ್ಲಿಂ ದೇವರಿಗೆ ಅರ್ಪಣೆ ಮಾಡುತ್ತಾರೆ ಎಂದು …

Read More »

ಬೀಳ್ಕೊಡುಗೆ ಕಾರ್ಯಕ್ರಮ,ಐಟಂ ಸಾಂಗ್‍ಗೆ ಪೊಲೀಸ್ ಅಧಿಕಾರಿಗಳು ಕುಣಿದು ಕುಪ್ಪಳಿಸಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ

ಚಾಮರಾಜನಗರ: ಐಟಂ ಸಾಂಗ್‍ಗೆ ಪೊಲೀಸ್ ಅಧಿಕಾರಿಗಳು ಕುಣಿದು ಕುಪ್ಪಳಿಸಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಡ್ಯಾನ್ಸ್‌ ಬಗ್ಗೆ ಪರ-ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೊಳ್ಳೇಗಾಲ DYSP ನಾಗರಾಜು, ಪೊಲೀಸ್ ಇನ್ಸ್‌ಪೆಕ್ಟರ್ ಶಿವರಾಜ್ ಮುದೋಳ್ PSI ಚೇತನ್ ಹಾಗು ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗಳು ನೃತ್ಯ ಮಾಡಿದ್ದಾರೆ.ಐಟಂ ಸಾಂಗ್ ಕುಣಿತದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸಬ್ ಇನ್ಸ್‍ಪೆಕ್ಟರ್ ಅಶೋಕ್ ವರ್ಗಾವಣೆ ಹಿನ್ನೆಲೆ, ಖಾಸಗಿ ರೆಸಾರ್ಟ್‍ನಲ್ಲಿ …

Read More »

ರಾಯಚೂರಿನಲ್ಲೊಂದು ಅಚ್ಚರಿ ದೇವಾಲಯ – ಯುಗಾದಿಗೆ ಮಾತ್ರ ಈಶ್ವರ ಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

ರಾಯಚೂರು: ಯುಗಾದಿ ಹಬ್ಬ ಭಾರತೀಯರ ಹೊಸ ವರ್ಷದ ಮೊದಲ ಹಬ್ಬ. ಈ ವಿಶೇಷ ದಿನದಂದು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಮಾರಟೇಶ್ವರ ದೇವಾಲಯದ ಉದ್ಬವ ಲಿಂಗಕ್ಕೆ ಸೂರ್ಯ ರಶ್ಮಿ ನೇರವಾಗಿ ಬೀಳುತ್ತದೆ. ಹೀಗಾಗಿ ಇಲ್ಲಿನ ಭಕ್ತರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.ಯುಗಾದಿ ಸಂದರ್ಭದಲ್ಲಿ ಎರಡು ಮೂರುದಿನಗಳ ಕಾಲ ಸೂರ್ಯ ರಶ್ಮಿ ಲಿಂಗದ ಮೇಲೆ ಬೀಳುತ್ತದೆ. ಆದರೆ ಹಬ್ಬದ ದಿನ ಮಾತ್ರ ಸೂರ್ಯೋದಯವಾಗುತ್ತಿದ್ದಂತೆ ನೇರವಾಗಿ ಹೊಂಗಿರಣಗಳು ಲಿಂಗದ ಮೇಲೆ ಬೀಳುತ್ತದೆ. 7ನೇ …

Read More »

ಪ್ರಕೃತಿಯೇ ಸಂಭ್ರಮಿಸುವ ಹಬ್ಬ ಯುಗಾದಿ

Ugadi Special 2022 : ಹಿಂದೂ ಸಂಪ್ರದಾಯದಲ್ಲಿ ಈ ಯುಗಾದಿಗೆ ಅದರದೇ ಆದ ಮಹತ್ವದ ಸ್ಥಾನಮಾನವಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವ ಈ ಹಬ್ಬ ಯುಗಾದಿ, ಹೊಸ ವರ್ಷ, ಗುಡಿಪಾಡ್ವಾ ಹೀಗೆ ಅನೇಕ ನಾಮಗಳನ್ನು ಹೊತ್ತು ನಿಂತಿದೆ.ಯುಗಾದಿ ಸಮೀಪಿಸುತ್ತಿದೆ ಎಂದರೆ ಸಾಕು, ಪ್ರಕೃತಿಯಲ್ಲಿ ಏನೋ ಒಂದು ಹೊಸತನ, ಹೊಸ ಚೈತನ್ಯ,ಹೊಸ ಹುರುಪು, ಮರಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸಿದಾಗ ಮನಸ್ಸಿಗೆ ಸಂತಸ ನೀಡುತ್ತದೆ, ಅಂತಹ ಬದಲಾವಣೆಯ ಪ್ರಕೃತಿಯನ್ನು ಕಣ್ತುಂಬಿಕೊಳ್ಳಲು ಎರಡು …

Read More »

ಗುಜರಾತ್​ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಆಮ್ ಆದ್ಮಿ

ಕೇಜ್ರಿವಾಲ್​ ಮತ್ತು ಭಗವಂತ್ ಮಾನ್ ಇಬ್ಬರೂ ಇಂದು ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಂದ 2 ಕಿಮೀ ದೂರದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಕ್ಕೆ ಪಕ್ಷ ತಿರಂಗ ಯಾತ್ರಾ ಎಂದು ಹೆಸರಿಟ್ಟುಕೊಂಡಿದೆ.ದೆಹಲಿ: ಅರವಿಂದ್​ ಕೇಜ್ರಿವಾಲ್(Arvind Kejriwal)​ಅವರ ಆಮ್​ ಆದ್ಮಿ ಪಕ್ಷ(Aam Aadmy Party)ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಪಂಜಾಬ್​ ರಾಜ್ಯವನ್ನು ಗೆದ್ದುಕೊಂಡಿದೆ. ಇದೀಗ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್​​ನಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಲು …

Read More »

ನಕ್ಸಲ್ ನಾಯಕಿ ಸಾವಿತ್ರಿಯನ್ನು ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಚಿಕ್ಕಮಗಳೂರು: ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದು, ಸುಮಾರು 1 ದಶಕದಿಂದ ಭೂಗತರಾಗಿ ಇತ್ತೀಚೆಗೆ ಕೇರಳದಲ್ಲಿ ಬಂಧಿತರಾಗಿರುವ ಸಾವಿತ್ರಿ(37) ಅವರನ್ನು ಶುಕ್ರವಾರ ಶೃಂಗೇರಿಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶುಕ್ರವಾರ ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಾವಿತ್ರಿ ಅವರನ್ನು ಶೃಂಗೇರಿ ಪಟ್ಟಣದ ನ್ಯಾಯಾಲಯದ ಆವರಣಕ್ಕೆ ಕರೆ ತಂದ ಪೊಲೀಸರು ಕೆಲ ಹೊತ್ತಿನ ಬಳಿಕ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಅವರ ಮುಂದೆ ಹಾಜರುಪಡಿಸಿದರು. ವಿಚಾರಣೆ ಬಳಿಕ ನ್ಯಾಯಾಧೀಶರು ಆರೋಪಿ ಸಾವಿತ್ರಿ ಅವರನ್ನು ಎ.8ರವರೆಗೆ …

Read More »