ಬೆಳಗಾವಿ: ಬೆಳಗಾವಿ ಪಟ್ಟಣದ ನಾಗರತ್ನಾ ರಾಮಗೌಡ ಎಂಬವರು ಹೆಚ್‌ಐವಿ ರೋಗವನ್ನು ಮೆಟ್ಟಿ ನಿಂತು 25 ವರ್ಷಗಳಿಂದ ಎಲ್ಲರಂತೆ ಆರೋಗ್ಯವಾಗಿದ್ದು, ಹೆಚ್ಐವಿ-ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇವರ ಈ ಧೈರ್ಯ, ಆತ್ಮವಿಶ್ವಾಸ ಹಾಗು ಅದಮ್ಯ ಛಲದ ಬದುಕನ್ನು ಮೆಚ್ಚಿ ಹತ್ತಾರು ಸಂಘಟನೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ನಾಗರತ್ನಾ ಅವರಿಗೆ 1997ರಲ್ಲಿ ಸುನೀಲ ರಾಮಗೌಡ ಎಂಬವರೊಂದಿಗೆ ವಿವಾಹವಾಗಿತ್ತು. ಆಗಿನ್ನೂ ಅವರಿಗೆ 17 ವರ್ಷ ಪ್ರಾಯ. ಮದುವೆಯಾದ 5 ತಿಂಗಳ ಬಳಿಕ ವೈದ್ಯರೊಬ್ಬನ್ನು …
Read More »Monthly Archives: ಮಾರ್ಚ್ 2022
ಗಂಡ ದೂರವಾಗಿದ್ದಕ್ಕೆ ಆಕ್ರೋಶ.. ಪಕ್ಕದ್ಮನೆಯ ಮಹಿಳೆಯ ಸೀರೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿದ ನಾರಿ!
ದೊಡ್ಡಬಳ್ಳಾಪುರ: ಆಸ್ತಿ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ನನ್ನಿಂದ ಗಂಡ ದೂರವಾಗಲು ಪಕ್ಕದ್ಮನೆಯವರೇ ಕಾರಣವೆಂದು ಪತ್ನಿ ಅಕ್ರೋಶಗೊಂಡಿದ್ದಾರೆ. ಹೀಗಾಗಿ ಪಕ್ಕದ್ಮನೆ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ಫೆಬ್ರವರಿ 28 ರ ಬೆಳಗ್ಗೆ ಈ ಘಟನೆ ನಡೆದಿದೆ. ಮೇಲ್ಜಾತಿ ಸಮುದಾಯಕ್ಕೆ ಸೇರಿದ ಮಹಿಳೆ ಕೆಳ ಸಮುದಾಯಕ್ಕೆ ಸೇರಿದ ಮಹಿಳೆಯ ಸೀರೆ ಬಿಚ್ಚಿ ಅದೇ …
Read More »ಗೋವಾದಲ್ಲಿ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ: ದಿನೇಶ್ ಗುಂಡೂರಾವ್
ಪಣಜಿ(ಗೋವಾ): ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂದು ಗೋವಾದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಫೆ.14ರಂದು ಮತದಾನ ನಡೆದಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ ಗೋವಾದಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಗೆ ಕಾಂಗ್ರೆಸ್ ಮುಕ್ತವಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಅವರು, ಬಿಜೆಪಿ ವಿರೋಧಿ ಯಾವುದೇ ಪಕ್ಷ …
Read More »ವಾಹನ ಸವಾರರೇ ಎಚ್ಚರ: ಟ್ರಾಫಿಕ್ ಪೊಲೀಸರಿಗೆ ಬಂದಿದೆ ಬಾಡಿವೋರ್ನ್ ಕ್ಯಾಮರಾ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳ ದಂಡದ ವಿಚಾರವಾಗಿ ಸಂಚಾರಿ ಪೊಲೀಸರು ಹಾಗೂ ವಾಹನ ಸವಾರರೊಂದಿಗೆ ನಡುವೆ ವಾಕ್ಸಮರ ನಡೆಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದಂಡ ಕಟ್ಟಿಸುವ ವೇಳೆ ಕೆಲ ಟ್ರಾಫಿಕ್ ಪೊಲೀಸರು ಅನುಚಿತ ವರ್ತನೆ ತೋರಿರುವ, ಮತ್ತೊಂದೆಡೆ ಸಾರ್ವಜನಿಕರು ಸಹ ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿರುವ ನಿರ್ದೇಶನಗಳು ಇವೆ. ಹೀಗಾಗಿಯೇ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಅನುಚಿತ ವರ್ತನೆ ಹಾಗೂ ಘರ್ಷಣೆಗಳಿಗೆ ಬ್ರೇಕ್ ಹಾಕಲು …
Read More »ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ: ಮೂವರು ಸೆರೆ
ಬೆಂಗಳೂರು: ಬೆಂಗಳೂರಿನಲ್ಲಿ ಕಾರುಗಳನ್ನು ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋಪಿ, ಇಮ್ಯಾನ್ಯುಯಲ್ ಹಾಗೂ ಮೋಹನ್ ರಾಜು ಬಂಧಿತರು. ಆರೋಪಿಗಳ ಪೈಕಿ ಗೋಪಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಬೇಗೂರು ಪೊಲೀಸರಿಂದ ಬಂಧಿತನಾಗಿದ್ದು, ವಿಚಾರಣೆ ವೇಳೆ ಇಮ್ಯಾನ್ಯುಯಲ್, ಮೋಹನ್ ರಾಜು ಜೊತೆ ಸೇರಿ ಕಾರು ಕಳ್ಳತನದ ದಂಧೆಯಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದ. ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅವುಗಳಿಗೆ ಬೇರೆ ಆ್ಯಕ್ಸಿಡೆಂಟ್ ಆದ ಗುಜರಿಗೆ …
Read More »ಕಾಂಗ್ರೆಸ್ ಬಜೆಟ್ vs ಬಿಜೆಪಿ ಬಜೆಟ್: ಸದನದಲ್ಲಿ ಲೆಕ್ಕ ಬಿಡಿಸಿ ಹೇಳಿದ ಸಿದ್ದರಾಮಯ್ಯ
ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷ ಕೊನೆಯಾಗುತ್ತಾ ಬಂದಿದ್ದರೂ ಕಳೆದ ವರ್ಷದ 52 ಬಜೆಟ್ ಘೋಷಣೆಗಳಲ್ಲಿ ಕೆಲವಕ್ಕೆ ಆದೇಶ ಹೊರಡಿಸಿಲ್ಲ, ಇನ್ನು ಕೆಲವನ್ನು ಕೈಬಿಡಲಾಗಿದೆ. ಯಾವ ಉದ್ದೇಶಕ್ಕೆ ಈವರೆಗೆ ಆದೇಶ ಹೊರಡಿಸಿಲ್ಲ ಎಂದು ಸರ್ಕಾರ ಈ ಬಜೆಟ್‌ನಲ್ಲಿ ಹೇಳಬೇಕಿತ್ತು. ಅದನ್ನೂ ಸಹ ಮಾಡಿಲ್ಲ. ಇದು ಜನಪರವಾದ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ. ಆರ್ಥಿಕ ಶಿಸ್ತನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ …
Read More »ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 22ರಿಂದ ಮೇ 18ರ ತನಕ ವಿವಿಧ ಪರೀಕ್ಷೆಗಳು ನಡೆಯಲಿವೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಏಪ್ರಿಲ್, ಮೇ ತಿಂಗಳಲ್ಲಿ ನಡೆಸಲು ತಯಾರಿ ನಡೆದಿತ್ತು. ಈ ಹಿಂದೆಯೂ ಪಿಯು ಬೋರ್ಡ್ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಜೆಇಇ (JEE) ಪರೀಕ್ಷೆಯ ಮೊದಲನೆಯ ಸೆಷನ್ ಏಪ್ರಿಲ್ 16ರಿಂದ 21ರವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಆಗಿತ್ತು. ಇದೇ …
Read More »ಪಂಚರಾಜ್ಯʼಗಳ ಅಧಿಕಾರದ ಭವಿಷ್ಯ : ಯಾರಿಗೆ ಎಷ್ಟು ಸ್ಥಾನ?
ನವದೆಹಲಿ : ಪಂಚರಾಜ್ಯಗಳಲ್ಲಿ ಚುನಾವಣೆಗಳು ಮುಗಿದಿದ್ದು, ವಿವಿಧ ಸಂಸ್ಥೆಗಳಿಂದ ನಡೆಯಲ್ಪಟ್ಟ ಬಹು ನಿರೀಕ್ಷಿತ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿವೆ. ಹಾಗಾದ್ರೆ, ಈ ಚುನಾವಣೋತ್ತರ ಫಲಿತಾಂಶ ಹೇಳೋದೇನು? ರಾಜ್ಯ ರಾಜ್ಯದಲ್ಲಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ? ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದ್ದು, ಯೋಗಿ ಪುನರಾಗಮನವಾಗಲಿದೆ ಎಂದು ಮ್ಯಾಟ್ರಿಜ್ ಭವಿಷ್ಯ ನುಡಿದಿದ್ದಾರೆ. ಸಮೀಕ್ಷೆಯ ಪ್ರಕಾರ, ಎಸ್ ಪಿ 119-134 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಬರಲಿದೆ. ಉತ್ತರ …
Read More »ಜೀವನದಲ್ಲಿ ಬೇಸರಗೊಂಡು ಸಾವಿಗೂ ಮೊದಲೇ ಸಮಾಧಿ ಸಿದ್ಧಪಡಿಸಿಕೊಂಡ ವ್ಯಕ್ತಿ!
ದಾವಣಗೆರೆ: ಸಾಮಾನ್ಯವಾಗಿ ವ್ಯಕ್ತಿ ಸಾವನ್ನಪ್ಪಿದ ನಂತರ ಗುಂಡಿ ತೋಡಿ ಮಣ್ಣು ಮಾಡ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಜೀವನದಲ್ಲಿ ಜುಗುಪ್ಸೆಗೊಂಡು ತನ್ನ ಮರಣಕ್ಕೂ ಮೊದಲೇ ಸಮಾಧಿಯನ್ನು ತಯಾರಿಸಿಕೊಂಡಿದ್ದಾರೆ. ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದ ನಿವಾಸಿ ತಿಪ್ಪಣ್ಣರಾವ್ ಎಂಬುವವರು ಜೀವನದಲ್ಲಿ ಬೇಸರಗೊಂಡು ಸಾವಿನ ಮೊದಲೇ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. 70 ವರ್ಷದ ತಿಪ್ಪಣ್ಣ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಮಾಧಿಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮರಳಿ ಮಣ್ಣಿಗೆ ಎಂದು ಹೆಸರಿಟ್ಟಿದ್ದಾರೆ. ಇನ್ನೊಬ್ಬರ ಹಂಗಿಗಾಗಿ …
Read More »ಇವರಿಬ್ಬರು ಆತನನ್ನು ಒಂದು ವರ್ಷ ಸತಾಯಿಸಿದ್ದರು; ಕೊನೆಗೂ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದರು..
ಚಿತ್ರದುರ್ಗ: ಇವರಿಬ್ಬರು ಆತನನ್ನು ಒಂದು ವರ್ಷ ಕಾಲ ಸತಾಯಿಸಿದ್ದರು. ಆದರೆ ಇಂದು ಕೊನೆಗೂ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹೀಗೆ ಸಿಕ್ಕಿಬಿದ್ದವರ ಹೆಸರು ಸುಷ್ಮಾರಾಣಿ ಮತ್ತು ಜಯಲಕ್ಷ್ಮಿ. ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಗ್ರಾಮ ಪಂಚಾಯತಿ ಪಿಡಿಒ ಸುಷ್ಮಾರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಬಂಧಿತ ಆರೋಪಿಗಳು. ಇವರು ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಸುರೇಶ್ ಎಂಬ ವ್ಯಕ್ತಿಯ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದರು. ಸುರೇಶ್ …
Read More »
Laxmi News 24×7