ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ರಾಜ್ಯದ 400 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಥಿಯೇಟರಿಗೆ ಆಗಮಿಸಿ ಹಬ್ಬ ಮಾಡುತ್ತಿದ್ದಾರೆ. ಅಪ್ಪು ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅಪ್ಪು ಅಗಲಿದ ನೋವಿದ್ದರೂ, ಅವರ ಕೊನೆ ಸಿನಿಮಾ ಜೇಮ್ಸ್‍ನ್ನು ನೋಡುವ ಮೂಲಕ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಚಿತ್ರ …
Read More »Monthly Archives: ಮಾರ್ಚ್ 2022
ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಹೋಳಿ ಹಬ್ಬದ ತಯಾರಿ.. ರತಿ ಕಾಮಣ್ಣನ ಪ್ರತಿಷ್ಠಾಪನೆ
ಹಾವೇರಿ: ಏಲಕ್ಕಿ ಕಂಪಿನ ನಗರ ಹಾವೇರಿ ರಂಗಪಂಚಮಿಗೆ ಸನ್ನದ್ಧಗೊಳ್ಳುತ್ತಿದೆ. ಎಲ್ಲೆಲ್ಲೂ ಬಣ್ಣಗಳಿಂದ ನಳನಳಿಸುತ್ತಿದೆ. ಮಾರ್ಚ್ 19ರ ರಂಗಪಂಚಮಿಯ ಹೋಳಿ ಆಚರಣೆಗೆ ನಗರದ 21ಕಡೆ ಕಾಮರತಿಯ ಕಟ್ಟೆಗೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಕ್ಕಿಪೇಟೆ ಮಾರುಕಟ್ಟೆ, ಗದ್ದಿಗೇರ್ ಓಣಿ, ಯಾಲಕ್ಕಿ ಓಣಿ, ಪುರದ ಓಣಿ ಮತ್ತು ಮೇಲಿನ ಪೇಟೆ ಸೇರಿದಂತೆ ವಿವಿಧೆಡೆ ಈಗಾಗಲೇ ರತಿಮನ್ಮಥರ ಕಟ್ಟಿಗೆ ಮೂರ್ತಿಗಳನ್ನು ಸ್ಥಾಪಿಸಿ ಪೆಂಡಾಲಗಳನ್ನು ಹಾಕಲಾಗಿದೆ. ದಿನಕ್ಕೆ ಎರಡು ಬಾರಿ ಕಾಮರತಿಗೆ ಪೂಜೆ ಸಲ್ಲಿಸಲಾಗುತ್ತಿದ್ದು. ರತಿಮನ್ಮಥರ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಪ್ರತಿಷ್ಠಾಪಿಸಲ್ಪಟ್ಟಿವೆ. …
Read More »ಆರ್ಟಿಇ ಆ್ಯಕ್ಟ್ನಲ್ಲಿ ಬದಲಾವಣೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ: ಸಚಿವ ನಾಗೇಶ್
ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರಿಗೂ ತಾವು ಶಾಲೆಗೆ ಹೋಗಬೇಕೋ ಬಿಡಬೇಕೋ ಅನ್ನೋ ನಿರ್ಣಯ ತೆಗೆದುಕೊಳ್ಳುವ ಹಕ್ಕು ಕೊಡಲಾಗಿದೆ. ನಮ್ಮ ರಾಜ್ಯದ ಆರ್ ಟಿಇ ಪ್ರಕಾರ 8ನೇ ತರಗತಿ ತನಕ ಶಿಕ್ಷಣ ಕಡ್ಡಾಯವನ್ನಾಗಿ ಮಾಡಿದ್ದೇವೆ. ಅದರ ಮೇಲಿನ ಮಕ್ಕಳು ಶಾಲೆಗೆ ಬರಲೇಬೇಕು ಅಂತೇನೂ ಇಲ್ಲ. ಆದರೆ ಹೊಸ ಆರ್ಟಿಇ ಅಡಿಯಲ್ಲಿ 12ನೇ ತರಗತಿ ತನಕ ಮಕ್ಕಳು ಶಾಲೆಗೆ ಬರಲೇಬೇಕು ಎಂಬ ನಿಯಮವನ್ನ ತರಬೇಕೆಂಬ ಯೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ …
Read More »ವಾದ ವಿವಾದದ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐದು ದಿನದಲ್ಲಿ ಬರೋಬ್ಬರಿ 60 ಕೋಟಿ ಬಾಚಿದೆ.
ವಾದ ವಿವಾದದ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐದು ದಿನದಲ್ಲಿ ಬರೋಬ್ಬರಿ 60 ಕೋಟಿ ಬಾಚಿದೆ. ಈ ಮಾದರಿಯ ಸಿನಿಮಾಗಳಲ್ಲೇ ಅತೀ ಕಡಿಮೆ ಸಮಯದಲ್ಲಿ ಇಷ್ಟೊಂದು ಗಳಿಕೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಕಾರಣವಾಗಿದೆ. ಈ ಕುರಿತು ಬಾಲಿವುಡ್ ಖ್ಯಾತ ಟ್ರೇಡ್ ಅನಾಲಿಸಿಸ್ಟ್ ಟ್ವೀಟ್ ಕೂಡ ಮಾಡಿದ್ದು, ಆಯಾ ದಿನದ ಗಳಿಕೆಯ ಲೆಕ್ಕ ಕೊಟ್ಟಿದ್ದಾರೆ. ಮೊದಲ ದಿನ 3.55 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದ್ದರೆ, …
Read More »ಬಲವಂತದ ಬಂದ್ ಆಚರಣೆ ಸರಿಯಲ್ಲ – ರಸ್ತೆಗಿಳಿದರೆ ಕಾನೂನು ಕ್ರಮ: ಕಮಲ್ ಪಂತ್ ಎಚ್ಚರಿಕೆ!
ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಮಲ್ ಪಂತ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಬುಧವಾರದಂದು ಸಭೆ ನಡೆಸಿದರು. ನಗರದಲ್ಲಿ 144 ಸೆಕ್ಷನ್ ಜಾರಿಯಿದ್ದರೂ ಬಂದ್ ಕರೆ ನೀಡಿರುವುದು ಸರಿಯಲ್ಲ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದು, ರಸ್ತೆಯಲ್ಲಿ ಜನರನ್ನು ಗುಂಪು ಗೂಡಿಸುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು …
Read More »ಹಾವೇರಿ: ಸಹಾಯಕ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ,30 ಎಲ್‌ಐಸಿ ಪಾಲಿಸಿಗಳು ಪತ್ತೆ
ಹಾವೇರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಕೇಶಪ್ಪ ಆರೇರ ಅವರ ಕಚೇರಿ ಮತ್ತು ಮನೆ ಸೇರಿದಂತೆ ಏಕಕಾಲದಲ್ಲಿ ನಾಲ್ಕು ಕಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ನಗರದ ಬಸವೇಶ್ವರ ನಗರ ಬಿ ಬ್ಲಾಕ್‌ನ 16ನೇ ಕ್ರಾಸ್‌ನಲ್ಲಿರುವ ಸ್ವಂತ ಮನೆ; ಹಾವೇರಿ ಎಪಿಎಂಸಿ ಕಚೇರಿ ಹಾಗೂ ಸ್ವಗ್ರಾಮ ಹಾನಗಲ್ ತಾಲ್ಲೂಕಿನ ಡೊಳ್ಳೇಶ್ವರದ ಸಹೋದರರ ಮನೆಗಳ ಮೇಲೆ ಒಟ್ಟು …
Read More »ಮಣಿಪುರದಲ್ಲಿ ಬಿರೆನ್ ಸಿಂಗ್, ಗೋವಾದಲ್ಲಿ ಸಾವಂತ್ ಸಿಎಂ ಆಗಿ ಮುಂದುವರಿಕೆ ಸಾಧ್ಯತೆ
ನವದೆಹಲಿ: ಮಣಿಪುರದಲ್ಲಿ ಎನ್. ಬಿರೆನ್ ಸಿಂಗ್ ಹಾಗೂ ಗೋವಾದಲ್ಲಿ ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಗೋವಾದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಹೊಸ ಸರ್ಕಾರ ರಚನೆಯ ಸಂಬಂಧ ಪ್ರಮೋದ್ ಸಾವಂತ್ …
Read More »ಕ್ಷುಲ್ಲಕ ರಾಜಕಾರಣ ಮಾಡುವವರನ್ನು ಕ್ಷೇತ್ರದ ಜನತೆ ಸಹಿಸಲ್ಲ: ಹೆಬ್ಬಾಳ್ಕರ್ ಎಚ್ಚರಿಕೆ
ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 4 ವರ್ಷದಿಂದ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನಗತ್ಯವಾಗಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕ್ಷೇತ್ರದ ಜನರು ಕಿವಿಗೊಡುವುದಿಲ್ಲ. ಜನರಿಗೆ ಅಭಿವೃದ್ಧಿ ಬೇಕಾಗಿದೆಯೇ ಹೊರತು ರಾಜಕೀಯವಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಕ್ಷೇತ್ರದ ವಿವಿಧೆಡೆ ಮಂಗಳವಾರ ರಸ್ತೆ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ನಾನು ರಾಜಕಾರಣವನ್ನು ಚುನಾವಣೆಗಷ್ಟೇ …
Read More »ಕಾಂಗ್ರೆಸ್ ಲೋಫರ್ ಪಾರ್ಟಿ: ಯತ್ನಾಳ್
ಕಾಂಗ್ರೆಸ್ ಲೋಫರ್ ಪಾರ್ಟಿ ಎಂದು ಕಾಂಗ್ರೆಸ್ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ವಿಜಯಪುರ ನಗರದ ತೊರವಿ ಎಲ್.ಟಿ ನಂ 4ರಲ್ಲಿ ಮಾದ್ಯಮಗಳಿಗೆ ಯತ್ನಾಳ್ ಈ ರೀತಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಲೋಫರ್ ಪಾರ್ಟಿ ಎಂದು ಇತ್ತಿಚೆಗೆ ಬಿಜೆಪಿಗೆ ಬ್ರೋಕರ್ ಪಾರ್ಟಿ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗೆ ಯತ್ನಾಳ್ ಟಾಂಗ್ ನೀಡಿದರು. ಬಿಜೆಪಿಗೆ ಬ್ರೋಕರ್ ಎಂದವರಿಗೆ ಕಾಂಗ್ರೆಸ್ ಲೋಫರ್ ಪಾರ್ಟಿ ಅನ್ನೋದು …
Read More »ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿ ಬ್ಯಾಟ್ ಹಿಡಿದು ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಹೆಬ್ಬಾಳಕರ್,
ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಂದನಹೊಸೂರ ಗ್ರಾಮದ ಪವರ್ ಸ್ಟಾರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿಗಳನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಸಂಜೆ ಉದ್ಘಾಟಸಿದರು. ಈ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ನೀಡಲಾಗುತ್ತಿದೆ. ಬ್ಯಾಟ್ ಹಿಡಿದು ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಹೆಬ್ಬಾಳಕರ್, ರಾಜಕೀಯಕ್ಕಷ್ಟೇ ಅಲ್ಲ ಕ್ರೀಡೆಗೂ ಸೈ ಎಂದು ತೋರಿಸಿದರು. ಕಲಹೊತ್ತು ಕ್ರಿಕೆಟ್ ಆಡಿ ಕ್ರೀಡಾಪಟುಗಳನ್ನು …
Read More »
Laxmi News 24×7