Breaking News

Monthly Archives: ಜನವರಿ 2022

ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್; ಅಧಿಕಾರದಲ್ಲಿದ್ದಾಗ ನಿದ್ದೆ ಮಾಡಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ; ಟಾಂಗ್ ನೀಡಿದ ಸಚಿವ ಕಾರಜೋಳ

ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಾಣಹೋದರೂ ಪಾದಯಾತ್ರೆ ಬಿಡಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ, ಅದಕ್ಕಾಗಿ ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.   ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಕಾರಜೋಳ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆಗೆ ಏನೂ ಮಾಡದೇ ಗಡದ್ ಆಗಿ ನಿದ್ದೆಗೆ ಜಾರಿತ್ತು. ಈಗ ಎಚ್ಚೆತ್ತುಕೊಂಡು ಪಾದಯಾತ್ರೆ ನಾಟಕವಾಡುತ್ತಿದೆ. ಒಮಿಕ್ರಾನ್, ಕೋವಿಡ್ ಪ್ರಕರಣಗಳು …

Read More »

ಪ್ರಯಾಣಿಕರಿಗಿಂತ ಹೆಚ್ಚು ನಾಯಿಗಳೇ ಕಾಣಿಸುತ್ತಿವೆ ಬೆಳಗಾವಿ ಕೇಂದ್ರ ಬಸ್‍ನಿಲ್ದಾಣದಲ್ಲಿ

ಬೆಳಗಾವಿ ಕೇಂದ್ರ ಬಸ್‍ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ನಾಯಿಗಳೇ ಕಾಣಿಸುತ್ತಿವೆ. ಇದರಿಂದ ಪ್ರಯಾಣಿಕರು ಪ್ರತಿನಿತ್ಯ ನಾಯಿಗಳ ಭೀತಿಯಲ್ಲಿಯೇ ಓಡಾಡುವ ದುಸ್ಥಿತಿ ಅನುಭವಿಸುತ್ತಿದ್ದಾರೆ. ಹೌದು ಹಿಂಡು-ಹಿಂಡು ನಾಯಿಗಳು, ಒಂದಲ್ಲ, ಎರಡಲ್ಲ. 50ಕ್ಕೂ ಹೆಚ್ಚು ನಾಯಿಗಳ ದಂಡು ಬೆಳಗಾವಿ ಕೇಂದ್ರ ಬಸ್‍ನಿಲ್ದಾಣದಲ್ಲಿ ಬಿಡು ಬಿಟ್ಟಿದೆ. ಇಲ್ಲಿ ಪ್ರಯಾಣಿಕರಿಗಿಂತ ಹೆಚ್ಚಾಗಿ ನಾಯಿಗಳೇ ಕಾಣಿಸುತ್ತಿವೆ. ಇದೇನು ಜನರ ಬಸ್‍ಸ್ಟಾಂಡೋ ಅಥವಾ ನಾಯಿಗಳ ಬಸ್‍ಸ್ಟಾಂಡೋ ಎಂಬ ಅನುಮಾನ ಮೂಡುವಂತಾಗಿದೆ. ಪ್ರತಿನಿತ್ಯ ವೃದ್ಧರು, ಚಿಕ್ಕಮಕ್ಕಳು, ಮಹಿಳೆಯರು ಬಸ್‍ಸ್ಟಾಂಡ್‍ಗೆ ಬರುತ್ತಾರೆ, ಈ …

Read More »

ಪ್ರಧಾನಿ ಮೋದಿ ಸಮಸ್ಯೆ ಅನುಭವಿಸಿದ್ದು ಕೇವಲ 15 ನಿಮಿಷಗಳಷ್ಟೇ, ರೈತರು ಒಂದು ವರ್ಷ ಪ್ರತಿಭಟಿಸಿದ್ದರು: ಸಿಧು ವ್ಯಂಗ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ 15 ನಿಮಿಷ ಸಮಸ್ಯೆ ಎದುರಿಸಿದ್ದರು. ಆದರೆ, ರೈತರು ಒಂದು ವರ್ಷ ಪ್ರತಿಭಟಿಸಿದ್ದರು ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ವ್ಯಂಗ್ಯವಾಡಿದ್ದಾರೆ.   ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನ ಮಂತ್ರಿ ಸಾಹೇಬರ ಬಳಿ ಕೇಳು ಬಯಸುತ್ತಿದ್ದೇನೆ. ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಪ್ರತಿಭಟನೆ …

Read More »

ಟಿವಿ ನೋಡಲು ಬಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿಯ ಬಂಧನ

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಿವಿ ನೋಡಲು ಬಂದ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಬಂಧನ. ಶಾಲೆ ಮುಗಿಸಿ ಟಿವಿ ನೋಡಲು ಮನೆಗೆ ಬಂದಿದ್ದ ಬಾಲಕಿಯ ಮೇಲೆ ನಿತೇಶ್ ರಿತಿನ್ (19) ಲೈಂಗಿಕ ಕಿರುಕುಳ ನೀಡಿದ್ದಾನೆ.ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಜೀವ ಬೆದರಿಕೆಯನ್ನು ಇಟ್ಟಿದ್ದಾನೆ ಎಂದು ತಿಳಿದುಬಂದಿದೆ.ಪ್ರಕರಣವನ್ನು ಐಪಿಸಿ ಸೆಕ್ಷನ್ 354 447 506 ಹಾಗೂ ಪೋಕ್ಸೋ ಕಾಯಿದೆಯ ಅಡಿಯಲ್ಲಿ ದಾಖಲು ಮಾಡಲಾಗಿದೆ.

Read More »

ಜ್ಯೋತಿಷ್ಯ ಮಾತು ಕೇಳಿ ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ!

ಕೊಯಮತ್ತೂರು: ಜಿಲ್ಲೆಯಲ್ಲಿ ತಾಯಿ-ಮಗಳು ಸಾವಿನ ಸುದ್ದಿ ಸಂಚಲನ ಮೂಡಿಸುತ್ತಿದೆ. ಜ್ಯೋತಿಷಿಯೊಬ್ಬರ ಮಾತು ಕೇಳಿ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದಲ್ಲದೇ ತಾನೂ ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಡಿಯಲೂರ್ ಪಕ್ಕದಲ್ಲಿರುವ ಅಪ್ಪನಾಯಕನಪಾಳ್ಯಂ ನಡೆದಿದೆ. ಘಟನೆಯ ವಿವರ: ಅಪ್ಪನಾಯಕನಪಾಳ್ಯಂ ನಿವಾಸಿ ಧನಲಕ್ಷ್ಮಿ (58) ತನ್ನ ಅಂಗವಿಕಲ ಮಗಳು ಸುಗನ್ಯಾ (30) ಜೊತೆ ವಾಸವಿದ್ದಾರೆ. ಇವರ ಪುತ್ರ ಶಶಿಕುಮಾರ್​ಗೆ ಮದುವೆಯಾಗಿದ್ದು, ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಧನಲಕ್ಷ್ಮಿ ಜ್ಯೋತಿಷಿ ಮಾತುಗಳನ್ನು ಹೆಚ್ಚಾಗಿ ನಂಬುತ್ತಿದ್ದರು. ಈ ಕ್ರಮದಲ್ಲಿ ಧನಲಕ್ಷ್ಮಿ …

Read More »

ವೀಕೆಂಡ್ ಕರ್ಫ್ಯೂಗೆ ಕೌಂಟ್‍ಡೌನ್, ಏನಿರುತ್ತೆ ಏನಿರಲ್ಲ..?

ಬೆಂಗಳೂರು,ಜ.7 – ರಾಜ್ಯದಲ್ಲಿ ಕೊರೋನಾ ವೈರಸ್, ಓಮಿಕ್ರಾನ್ ದಿನೇದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದಲ್ಲಿ ವೀಕೆಂಡ್ ಕಫ್ರ್ಯೂ ಹೇರಿಕೆಯಾಗಿದ್ದು ಇಂದು ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಅನ್ವಯವಾಗುತ್ತದೆ. ಇಂದು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಅತ್ಯವಶ್ಯಕ ಮತ್ತು ತುರ್ತು ಕಾರ್ಯಗಳನ್ನು ಹೊರತುಪಡಿಸಿ ಜನರ ಒಡಾಟವನ್ನು ಕಟ್ಟುನಿಟ್ಟಾಗಿ ನಿಷೇಸಲು ಜಿಲ್ಲಾಡಳಿತಗಳು ಕ್ರಮ ಕೈಗೊಂಡಿವೆ. ತುರ್ತು, ಅತ್ಯವಶ್ಯಕ ಸೇವೆಗಳು ಮತ್ತು ಕೋವಿಡ್ ನಿಯಂತ್ರಣ …

Read More »

ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 1 ಲಕ್ಷದ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಕ್ಷಣ ಕ್ಷಣಕ್ಕೂ ಕಾಡುತ್ತಿದೆ ಒಮಿಕ್ರಾನ್ ಆತಂಕ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,17,100 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ ರೇಟ್ ಶೇ.7.74ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 302 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 483178 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 371363 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 30836 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ …

Read More »

ಪ್ರಧಾನಿ ಮೋದಿ ಭದ್ರತಾ ಲೋಪ; ಸೋಮವಾರ ‘ಸುಪ್ರೀಂ’ ಆದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್​ ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಆದೇಶ ನೀಡುವುದಾಗಿ ತಿಳಿಸಿ ತೀರ್ಪನ್ನ ಕಾಯ್ದಿರಿಸಿದೆ. ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಹೈಕೋರ್ಟ್ ​ರಿಜಿಸ್ಟರ್ ಜನರಲ್ ನೇಮಿಸಿ ಆದೇಶ ಹೊರಡಿಸಿದೆ. ಸದ್ಯಕ್ಕೆ ಯಾವುದೇ ಕ್ರಮ ಬೇಡ ​ರಿಜಿಸ್ಟರ್ ಜನರಲ್​ ಆಫ್​ ಪಂಜಾಬ್​ & ಹರಿಯಾಣ ಹೈಕೋರ್ಟ್​ ನೇಮಕ ಮಾಡಿ ಆದೇಶ ಹೊರಡಿಸಿದೆ. ಇವರಿಗೆ …

Read More »

ಪರಿಹಾರ ಮೊತ್ತ ಸ್ವೀಕರಿಸಲು ನಿರಾಕರಣೆ ಮಾಡುತ್ತಿರುವ COVID-19 ಮೃತ ಕುಟುಂಬಸ್ಥರು

ಬೆಂಗಳೂರು: Covid Death: ಈ ಹಿಂದೆ ಸರ್ಕಾರ ಕೋವಿಡ್-19 (Covid-19) ರಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಿದ್ದು, ವಿಳಂಬವಾದರೂ ಪರಿಹಾರ ಮೊತ್ತ ಬ್ಯಾಂಕ್ ಖಾತೆಗೆ ಜಮಾವಣೆ ಆಗಲು ಪ್ರಾರಂಭ ಆಗಿದೆ. ಆಶ್ಚರ್ಯ ಎಂದರೆ ಅನೇಕ ಕುಟುಂಬದವರು ಪರಿಹಾರ ಸ್ವೀಕಾರ ಮಾಡಲು ನಿರಾಕರಿಸುತ್ತಿದ್ದಾರೆ.   ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವ ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್-19 (Covid-19) ಸೋಂಕಿನಿಂದ ಮೃತಪಟ್ಟರೆ ರಾಜ್ಯ ಸರ್ಕಾರ ₹1 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. …

Read More »

ಕೊರೊನಾ 3ನೇ ಅಲೆ ತಡೆಯಲು ಸಾಧ್ಯವಿಲ್ಲ: ಆರೋಗ್ಯ ಸಚಿವ ಕೆ.ಸುಧಾಕರ್

ಕೊರೊನಾ ಮೂರನೇ ಅಲೆ ಬಂದಿದ್ದು, ಇದನ್ನು ತಡೆಯಲು ಸಾಧ್ಯವಿಲ್ಲ. ಅಲೆಯ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 3ನೇ ಅಲೆ ಒಮ್ಮೆಲೆ ತಡೆಯಲು ಸಾಧ್ಯವಿಲ್ಲ. ದಿನೇದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಒಮ್ಮೆಲೆ ತಡೆಯಲು ಆಗುವುದಿಲ್ಲ ಎಂದರು. ಒಂದು ದೇಶ, ಒಂದು ರಾಜ್ಯದಲ್ಲಿ ಲಸಿಕೆ ಪಡೆದರೆ ಕೊರೊನಾ ತಡೆಯಲು ಸಾಧ್ಯವಿಲ್ಲ. ವಿಶ್ವದ ಎಲ್ಲರೂ ಲಸಿಕೆ ಪಡೆದಾಗ ಮಾತ್ರ ತಡೆಯಲು …

Read More »