ನವದೆಹಲಿ: 74 ನೇ ಸೇನಾ ದಿನಾಚರಣೆಯ ಅಂಗವಾಗಿ, ಖಾದಿಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಧ್ವಜವಾದ `ಸ್ಮಾರಕ ರಾಷ್ಟ್ರೀಯ ಧ್ವಜ~ವನ್ನು ಶನಿವಾರ ರಾಜಸ್ಥಾನದ ಲಾಂಗೆವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಪ್ರದರ್ಶಿಸಲಾಯಿತು.1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಕೇಂದ್ರ ಹಂತವು ಲೋಂಗೆವಾಲಾ ಆಗಿತ್ತು. ದಕ್ಷಿಣ ಕಮಾಂಡ್ ಜೈಸಲ್ಮೇರ್ ಮಿಲಿಟರಿ ನಿಲ್ದಾಣದಲ್ಲಿ 225 ಅಡಿ 150 ಅಡಿ ಗಾತ್ರದ ಧ್ವಜವನ್ನು ಅನಾವರಣಗೊಳಿಸಿತು. ಒಟ್ಟು 33,750 ಚದರ ಅಡಿ ವಿಸ್ತೀರ್ಣದ ಧ್ವಜವನ್ನು ತಯಾರಿಸಲು …
Read More »Monthly Archives: ಜನವರಿ 2022
ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆ ಬದಲಾವಣೆ
ಹುಬ್ಬಳ್ಳಿ: ಯಶವಂತಪುರ ಯಾರ್ಡ್‌ನಲ್ಲಿ ಜ. 21ರಂದು ಎಂಜಿನಿಯರಿಂಗ್ ಕೆಲಸಕ್ಕೆ ಸಂಬಂಧಿತ (ಥಿಕ್ ವೆಬ್ ಸ್ವಿಚ್‌ಗಳ) ಕಾಮಗಾರಿ ಸಲುವಾಗಿ ಲೈನ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಲಿದೆ. ಜ. 20ರಂದು ಹುಬ್ಬಳ್ಳಿ-ಬೆಂಗಳೂರು ನಿತ್ಯ ಸೇವೆಯ ಎಕ್ಸ್‌ಪ್ರೆಸ್ (17392) ರೈಲನ್ನು ಚಿಕ್ಕಬಾಣಾವರ ನಿಲ್ದಾಣದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು. ಜ. 21ರಂದು ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಡುವ ಬೆಂಗಳೂರು-ಹೊಸಪೇಟೆ ಪ್ರತಿನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ (06243) ರೈಲಿನ ಸಮಯವನ್ನು …
Read More »ಇನ್ಮುಂದೆ ‘ಕೊರೊನಾ ಟೆಸ್ಟ್’ ಗೆ ಕೊಟ್ಟವರು ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ – ರಾಜ್ಯ ಸರ್ಕಾರ ಖಡಕ್ ಆದೇಶ
ಬೆಂಗಳೂರು : ಕೊರೊನಾ ಪರೀಕ್ಷೆಗೆ ( Corona Test ) ಒಳಪಟ್ಟವರು ಕಡ್ಡಾಯವಾಗಿ ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ, ವರದಿ ಬರುವವರೆಗೂ ಹೋಮ್ ಐಸೋಲೇಷನ್ ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ( Karnataka Government ) ಮಹತ್ವದ ಸುತ್ತೋಲೆ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಐಸೋಲೇಷನ್ ( Isolation ) ಕ್ವಾರಂಟೈನ್ ನಲ್ಲಿರುವವರು ( Quarantine ) ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೆ ಅವರು ವರದಿ ಬರುವವರೆಗೂ …
Read More »ಎಂಇಎಸ್ ಪುಂಡರು ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣ
ಬೆಳಗಾವಿಯಲ್ಲಿ ಗಡಿ ವಿವಾದದ ಹೆಸರಿನಲ್ಲಿ ಬೆಂಕಿ ಹಚ್ಚುವ ನಾಡದ್ರೋಹಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಿದರೂ ಕೂಡ ಇನ್ನು ಅವರಿಗೆ ಅರಿವು ಬಂದಿಲ್ಲ. ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವ ಎಂಇಎಸ್ ಪುಂಡರು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ಕನ್ನಡ ನಾಮಫಲಕಕ್ಕೆ ಮಸಿ ಬಳೆಯುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಕೆಲಸ ಮಾಡಿದ್ದಾರೆ. ಹೌದು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಫಲಕಕ್ಕೆ ಎಂಎಇಸ್ ಪುಂಡರು ಮಸಿ …
Read More »ಬೆಳಗಾವಿಯಲ್ಲಿ ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ನಿಗೂಢ ಸಾವನ್ನಪ್ಪಿದ್ದಾ
ಬೆಳಗಾವಿ: ಬೆಳಗಾವಿಯಲ್ಲಿ ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ನಿಗೂಢ ಸಾವನ್ನಪ್ಪಿದ್ದಾರೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ್ (13 ತಿಂಗಳು), ಮಧು ಉಮೇಶ್ ಕುರಗುಂದಿ (14 ತಿಂಗಳು) ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ(1.5) ಮೃತ ದುರ್ದೈವಿಗಳು. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ ಸಿಬ್ಬಂದಿ ಮಕ್ಕಳಿಗೆ ಚುಚ್ಚುಮದ್ದು ನೀಡಿದ್ದರು. ಈ ವೇಳೆ ಅಸ್ವಸ್ಥಗೊಂಡಿದ್ದ ಮಗುವಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜನವರಿ 13ರಂದು ಒಂದು …
Read More »ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ಜ್ವರ
ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ಜ್ವರದಿಂದ ಬಳಲುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಈ ಸಮಸ್ಯೆಗೂ ಕೋವಿಡ್ ಲಕ್ಷಣಗಳಿಗೂ ಸಾಮ್ಯತೆ ಇರುವುದರಿಂದ ಕೆಲವರು ಆತಂಕಪಡುವುದು ಕಂಡುಬರುತ್ತಿದೆ. ಆದರೆ, ಎಲ್ಲ ಜ್ವರ, ಗಂಟಲು ನೋವುಗಳು ಕೋವಿಡ್ ಅಲ್ಲ. ಹೆಚ್ಚಿನವು ಸಾಮಾನ್ಯ ಶೀತ, ಜ್ವರವೇ ಆಗಿರುತ್ತದೆ. ಹಾಗಾಗಿ ಯಾರೂ ಆತಂಕಪಡಬೇಕಾಗಿಲ್ಲಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ”ಶೀತ, ಕೆಮ್ಮು, ಮೈಕೈ ನೋವು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 10ರಲ್ಲಿ ಏಳು …
Read More »ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಈಗ ರಾಮ ಸಿಂಹನ್
ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಮತ್ತು ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೆಲವು ತಿಂಗಳ ಹಿಂದೆಯೇ ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರವಾಗಲು ಪೂರ್ವಸಿದ್ಧತೆ ಕೈಗೊಂಡಿದ್ದರು. ಇಸ್ಲಾಂನಲ್ಲಿರುವ ಕಟ್ಟುಪಾಡುಗಳಿಂದ ಕಿರಿಕಿರಿಗೆ ಒಳಪಟ್ಟಿರುವ ನಾನು ಮುಕ್ತತೆಯ ಧರ್ಮವನ್ನು ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ತಮ್ಮ ಹೆಸರನ್ನು ರಾಮ ಸಿಂಹನ್ ಎಂದು ಬದಲಿಸಿಕೊಂಡಿದ್ದಾರೆ. ಸನಾತನ ಹಿಂದೂ ಧರ್ಮಕ್ಕೆ ಪುರೋಹಿತರ ಸಮ್ಮುಖದಲ್ಲಿ ಪತ್ನಿ ಲೂಸಿ ಜೊತೆಗೆ ಮತಾಂತರಗೊಂಡಿದ್ದಾರೆ.
Read More »ಆನ್‌ಲೈನ್ ಶಿಕ್ಷಣ ಸರಿಯಲ್ಲ.: ಬಸವರಾಜ ಹೊರಟ್ಟಿ
ಬೆಂಗಳೂರು: ಆನ್‌ಲೈನ್ ಶಿಕ್ಷಣ ಸರಿಯಲ್ಲ. ಆನ್‌ಲೈನ್ ಶಿಕ್ಷಣ ನಗರ ಪ್ರದೇಶಗಳಿಗೆ ಸೂಕ್ತವಾಗುತ್ತೆ. ಗ್ರಾಮೀಣ ಭಾಗದ ಮಕ್ಕಳಿಗೆ ಇದರಿಂದ ಅನುಕೂಲವಿಲ್ಲ. ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಇರಲ್ಲ, ಮೊಬೈಲ್ ಇರಲ್ಲ. ಹೀಗೆ ಹಲವು ಸಮಸ್ಯೆಗಳು ಇರುವುದರಿಂದ ಸರಿಯಾಗಲ್ಲ. ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತ ಮಕ್ಕಳು ಕಲಿಯುತ್ತಾರೆ. ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ ಎಂದು ಬೆಂಗಳೂರಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಹೇಳಿಕೆ ನೀಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ 1ರಿಂದ 9ನೇ ತರಗತಿವರೆಗೆ ರಜೆ ಹಿನ್ನೆಲೆ …
Read More »ಬಿಸಿಸಿಐ ಜತೆಗಿನ ಜಟಾಪಟಿ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಮುಳುವಾಯಿತೇ?
ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟೆಸ್ಟ್ ಗೆದ್ದರೂ, ಸರಣಿ ಗೆಲುವಿನ ಅಪೂರ್ವ ಅವಕಾಶ ಕೈಚೆಲ್ಲಿದ ಭಾರತ ತಂಡಕ್ಕೆ ಶನಿವಾರ ಸಂಜೆ ಮತ್ತೊಂದು ಆಘಾತ ಎದುರಾಯಿತು. ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವ ಮೂಲಕ ಕ್ರಿಕೆಟ್ ವಲಯದಲ್ಲಿ ಅಚ್ಚರಿ-ಆಘಾತ ಮೂಡಿಸಿದ್ದಾರೆ. ಟೆಸ್ಟ್ ನಾಯಕರಾಗಿ ಇನ್ನಷ್ಟು ಸಮಯ ಮುಂದುವರಿಯುವ ಒಲವು ಹೊಂದಿದ್ದ 33 ವರ್ಷದ ಕೊಹ್ಲಿ ಅವರ ಈ ದಿಢೀರ್ ನಿರ್ಧಾರದ ಹಿಂದಿನ ಕಾರಣ ಏನಿರಬಹುದು ಎಂಬ ಗೊಂದಲ ಅವರ ಅಭಿಮಾನಿಗಳಲ್ಲಿ …
Read More »ಸರ್ಕಾರಿ ಶಾಲೆಯಲ್ಲಿ ಕಲಿತು ಸತತ ಮೂರು ಹುದ್ದೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗಳಿಗೆ ಮಾದರಿಯಾದ ಅಲಖನೂರ ಗ್ರಾಮದ ರೈತನ ಮಗಳು ಮಂಜುಳಾ ನಿಲಜಗಿ
ಸರ್ಕಾರಿ ಶಾಲೆಯಲ್ಲಿ ಕಲಿತು ಸತತ ಮೂರು ಹುದ್ದೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗಳಿಗೆ ಮಾದರಿಯಾದ ಅಲಖನೂರ ಗ್ರಾಮದ ರೈತನ ಮಗಳು ಮಂಜುಳಾ ನಿಲಜಗಿ ಹೌದು ರಾಯಬಾಗ ತಾಲೂಕಿನ ಅಲಖನೂರ ಸದಾಶಿವ ನಗರದ ಒಬ್ಬ ಯುವತಿ ತಂದೆ ತಾಯಿ ಅನಕ್ಷರಸ್ಥರಿದ್ದರು ಶಿಕ್ಷಕರ ಹಾಗೂ ತಂದೆತಾಯಿಗಳ ಮಾರ್ಗದರ್ಶನದಲ್ಲಿ ಡಿಆರಎಫ, ಆರಎಫಓ ಹಾಗೂ ಎಸಿಎಫ್ ಹೀಗೆ ತರಬೇತಿ ಮುಗಿಸುವ ಮುನ್ನ ಒಂದರಮೇಲೊಂದು ಸತತ ಮೂರು ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾಳೆ. …
Read More »