ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೈನಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡ ಹೊರವಲಯದ ಯರಿಕೊಪ್ಪ ಬೈಪಾಸ್ ಬಳಿ ಉಂಟಾದ ಈ ಅಪಘಾತದಲ್ಲಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹೈದರಾಬಾದ್ ಆರ್ಮಿ ಸೆಂಟರ್ನಲ್ಲಿ ನಾಯಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಸಂತರಾಜ್ (45) ಮೃತಪಟ್ಟ ಸೈನಿಕ. ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ. ಇಂದು ಬೆಂಗಳೂರಿನಿಂದ ಇವರು ತಮ್ಮ ಊರಾದ ಬೆಳಗಾವಿಗೆ ಹೋಗುತ್ತಿದ್ದಾಗ ಧಾರವಾಡ ಹೊರವಲಯದ ಯರಿಕೊಪ್ಪ …
Read More »Daily Archives: ಜನವರಿ 30, 2022
ಪ್ರೊ ಕಬಡ್ಡಿ: ಮರಳಿ ಅಗ್ರಸ್ಥಾನ ಅಲಂಕರಿಸಿದ ದಬಾಂಗ್ ದಿಲ್ಲಿ
ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿದ್ದ ದಬಾಂಗ್ ದಿಲ್ಲಿ ಶನಿವಾರ ಗೆಲುವಿನ ಲಯಕ್ಕೆ ಮರಳಿದೆ. ಗುಜರಾತ್ ಜೈಂಟ್ಸ್‌ಗೆ 41-22 ಅಂತರದ ಸೋಲುಣಿಸಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ (48 ಅಂಕ). ಬೆಂಗಳೂರು ಬುಲ್ಸ್ ದ್ವಿತೀಯ ಸ್ಥಾನಕ್ಕೆ ಇಳಿಯಿತು (46 ಅಂಕ). ಇದು 14 ಪಂದ್ಯಗಳಲ್ಲಿ ದಿಲ್ಲಿ ಸಾಧಿಸಿದ 8ನೇ ಗೆಲುವು. ನಾಯಕ ನವೀನ್ ಕುಮಾರ್ ಗೈರಲ್ಲೂ ಗೆದ್ದು ಬಂದದ್ದು ತಂಡದ ಆತ್ಮವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಜೋಗಿಂದರ್ ನರ್ವಾಲ್ ದಿಲ್ಲಿ ತಂಡವನ್ನು …
Read More »ಸ್ಯಾಂಡಲ್ ವುಡ್ ನಟ ಕಂ ನಿರ್ಮಾಪಕನ ವಿರುದ್ದ ರೇಪ್ ಕೇಸ್..!
ಬೆಂಗಳೂರು: ಮದುವೆಯಾಗುತ್ತೇನೆಂದು ನಂಬಿಸಿ ನಟಿಯೊಬ್ಬರಿಗೆ ವಂಚನೆ ಮಾಡಿರುವ ಆರೋಪದಡಿ ಸ್ಯಾಂಡಲ್ ವುಡ್ ನಟ ಹಾಗೂ ನಿರ್ಮಾಪಕನನ್ನು ಬಂಧಿಸಲಾಗಿದೆ. ವಿಷನ್ 2023′ ಎಂಬ ಸಿನಿಮಾದ ಹೀರೋ ಕಮ್ ನಿರ್ಮಾಪಕ ಆಗಿರುವ ಹರ್ಷವರ್ಧನ್ ಟಿ.ಜಿ. ಅಲಿಯಾಸ್ ವಿಜಯ ಭಾರ್ಗವ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದ್ದು, ನಟಿಯ ದೂರಿನ ಅನ್ವಯ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಕಳೆದ ಎರಡು ವರ್ಷಗಳಿಂದಲೂ ತಮಗೆ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಸಂತ್ರಸ್ತ ನಟಿ ತಿಳಿಸಿದ್ದಾರೆ. …
Read More »ಖಾಸಗಿ ಸಂಸ್ಥೆಗಳಿಗೆ ಗೋಮಾಳ? ಹೊಸ ನೀತಿ ರೂಪಿಸಲು ಮುಂದಾದ ರಾಜ್ಯ ಸರಕಾರ
ಬೆಂಗಳೂರು: ಗೋಮಾಳ ಸಹಿತ ವಿವಿಧ ಬಗೆಯ ಸರಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಲು ನೀತಿಯೊಂದನ್ನು ತರಲು ರಾಜ್ಯ ಸರಕಾರ ಮುಂದಾಗಿದ್ದು, ಅದಕ್ಕಾಗಿ ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ. ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಸರಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವ ನೀತಿ ರೂಪಿಸಬೇಕಾಗಿದೆ. ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಸರಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವ ನೀತಿ …
Read More »(ರಮೇಶ್ ಜಾರಕಿಹೊಳಿ) ಪರಿಶ್ರಮದಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಇವರೆಲ್ಲಾ ಸಚಿವ ಸ್ಥಾನವನ್ನು ಅನುಭವಿಸುತ್ತಿರುವುದು ಎನ್ನುವ ಅರಿವಿರಲಿ”: :ಬಾಲಚಂದ್ರ ಜಾರಕಿಹೊಳಿ
ರಾಜ್ಯ ರಾಜಕಾರಣದಲ್ಲಿ ಮಹತ್ವದ ಭಾಷ್ಯ ಬರೆಯುವ ಬೆಳಗಾವಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಜೆಪಿಯದ್ದೇ ಪಾರುಪತ್ಯ. ಕಾಂಗ್ರೆಸ್ ನಾಯಕರು ಕಮಲದ ಭದ್ರಕೋಟೆಯನ್ನು ಅದೆಷ್ಟೋ ಬಾರಿ ಭೇದಿಸಲು ಹೊರಟರೂ ಅದು ಸಾಧ್ಯವಾಗಿರಲಿಲ್ಲ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನಿಂದಾಗಿ, ಪಕ್ಷದ ವರಿಷ್ಠರಿಗೆ ರಾಜ್ಯದ ಹಲವು ನಾಯಕರು ಉತ್ತರ ಕೊಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಜಿಲ್ಲೆಯ ಬಿಜೆಪಿ ಇಬ್ಬಾಗದತ್ತ ಸಾಗುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ದ ಸ್ವಪಕ್ಷೀಯರು ದೆಹಲಿ ಮಟ್ಟಕ್ಕೆ ದೂರು ಕೊಡಲು …
Read More »ಒಂದ ಲಕ್ಷ ಕೊಟ್ಟರ ಐದು ಲಕ್ಷ ಕೊಡ್ತಿದ್ದ ಡಕಾಯಿತರು ಅಂದರ್
ಬೆಂಗಳೂರು: ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಗುಂಪನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು(Karnataka Police) ಬಂಧಿಸಿದ್ದಾರೆ. ನಟರಾಜ್, ಬಾಲಾಜಿ, ವೆಂಕಟೇಶ, ರಾಕೇಶ್ ಬಂಧಿತ ಆರೋಪಿಗಳು. ನಕಲಿ ನೋಟಿನ ಕಂತೆ ಮೊಬೈಲ್‌ನಲ್ಲಿ(Mobile) ವಿಡಿಯೋ ಮಾಡಿ ಹೂಡಿಕೆದಾರರಿಗೆ ತೋರಿಸಿ ಆಫರ್ ನೀಡುತ್ತಿದ್ದ ಆರೋಪಿಗಳು, ಕೆಲವೇ ದಿನಗಳಲ್ಲಿ ಹಣ(Money) ಡಬಲ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಹೂಡಿಕೆದಾರರು ಹಣ ಕೊಡಲು ಹೋದಾಗ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಆರೋಪಿಗಳಿಂದ 20 ಕೋಟಿ ಮೊತ್ತದ ನಕಲಿ ನೋಟು, 2 …
Read More »