ದೆಹಲಿ: ‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿದೆ. ಇನ್ನೋರ್ವ ಆರೋಪಿ ಶಾಂತನು ಮುಲುಕ್ ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಾಳೆ (ಫೆಬ್ರವರಿ 24) ನಡೆಯಲಿದೆ. ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮಲ್ ಕಾಲೇಜಿನ …
Read More »Yearly Archives: 2021
ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್
ಬೆಂಗಳೂರು: ರಾಜ್ಯ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಲ್ಲಿಗೆ ಕರೆಸಿದ್ದು, ನಿರಾಣಿ ತನ್ನ ಮೈಸೂರು ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ದೌಡಾಯಿಸಿದ್ದಾರೆ. ಮುರುಗೇಶ್ ನಿರಾಣಿ ಅವರು ಅವರು ಇಂದು ಮೈಸೂರು ಪ್ರವಾಸದ ಯೋಜನೆ ಮಾಡಿಕೊಂಡಿದ್ದರು. ಆದರೆ ಅಮಿತ್ ಶಾ ಕರೆಯ ಬೆನ್ನಲ್ಲೇ ಪ್ರವಾಸ ಮೊಟಕುಗೊಳಿಸಿ ದಿಲ್ಲಿ ವಿಮಾನ ಏರಿದ್ದಾರೆ. ಮೈಸೂರು ಪ್ರವಾಸ ಮುಗಿಸಿ ಸಂಜೆ ದಿಲ್ಲಿಗೆ ಬರುತ್ತೇನೆ ಎಂದು ನಿರಾಣಿ ಹೇಳಿದರೂ …
Read More »ಕುಂದಾ ಬೇಡ, ಗೋಕಾಕ್ ಕರದಂಟು ಬೇಕು: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಇದು ಸತ್ಯಕ್ಕೆ ದೂರವಾದ ಸಂಗತಿ. ನಿರಾಣಿ ಅಣ್ಣ ಅಧಿಕಾರದಲ್ಲಿ ಇದ್ದು ಸಿಎಂ ಒತ್ತಡದಿಂದ ಹೇಳಿದ್ದಾರೆ. ಅವರು ಸಹ ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂಗಳವಾರ ಹೇಳಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ‘ಬಿ’ ಟೀಮ್ ನಿರಾಣಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹೋರಾಟ ಸಮಾಜದ ಕೆಲಸ ಇದು ಪಕ್ಷ ಪರ ವಿರುದ್ಧ ಇರೋ ಹೋರಾಟ …
Read More »ಪಂಚಮಸಾಲಿ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದೀರಿ: ಮೀಸಲಾತಿ ನೀಡಿ, ಋಣ ಸಂದಾಯ ಮಾಡಿ’
ಬೆಂಗಳೂರು: ರಾಜ್ಯದಲ್ಲಿ 8 ವಿವಿಧ ಸಮುದಾಯಗಳು ವಿವಿಧ ವರ್ಗಗಳ ಅಡಿಯಲ್ಲಿ ಮೀಸಲಾತಿಗಾಗಿ ಒತ್ತಾಯಿಸುತ್ತಿವೆ, ಅದರಲ್ಲೂ ಮುಖ್ಯವಾಗಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಪ್ರತಿಭಟನೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇರಿಸುಮುರುಸು ಉಂಟು ಮಾಡುತ್ತಿದೆ. ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಬೇಕೆಂದು ದಶಕಗಳ ಹಿಂದಿನಿಂದಲೂ ಪಂಚಮಸಾಲಿ ಸಮುದಾಯ ಒತ್ತಾಯ ಮಾಡುತ್ತಲೇ ಇದೆ, ಆದರೆ ಸಮಯ- ಸಂದರ್ಭ, ಅವಕಾಶವಾದಿ ರಾಜಕಾರಣದಿಂದಾಗಿ ಹೋರಾಟ ಇದ್ದಕ್ಕಿದ್ದಂತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಎಂ ಯಡಿಯೂರಪ್ಪಅವರನ್ನು ವಿವಾದಾತ್ಮಕ ಲಿಂಗಾಯತ …
Read More »ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನಿರ್ಧರಿಸಿ : ಹೊರಟ್ಟಿ
ಬೆಂಗಳೂರು,ಫೆ.23- ಯಾವುದೇ ಸಮುದಾಯಕ್ಕೆ ಮೀಸಲಾತಿ ಸಿಗುವುದಾದರೆ ಅರ್ಥಿಕ ಮಾನದಂಡದ ಮೇಲೆ ನಿರ್ಧಾರವಾಗಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೇ 1.36 ಕೋಟಿ ಬಡತನರೇಖೆಗಿಂತ ಕೆಳಗಿರುವ ಬಡವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ ಎಷ್ಟು ಮಂದಿ ಬಡವರಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮೀಸಲಾತಿ ನೀಡುವುದು ಸೂಕ್ತ ಎಂದು ಸಲಹೆ ಮಾಡಿದರು. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಮೀಸಲಾತಿಗಾಗಿ ಹೋರಾಟಗಳು …
Read More »ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ
ಪೆಟ್ರೋಲ್-ಡೀಸೆಲ್ ದರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈಗಿನ ಸನ್ನಿವೇಶಕ್ಕೆ ಹೊಣೆ ಎಂಬುದು ನಿಮಗೆ ಗೊತ್ತಿದೆಯಾ? ಅದು ಹೇಗೆ ಅಂತೀರಾ? ಪೆಟ್ರೋಲ್ ಮೂಲ ಬೆಲೆ ಎಷ್ಟು, ಅದಕ್ಕೆ ಏನೆಲ್ಲಾ ತೆರಿಗೆ- ವೆಚ್ಚ ಬಿದ್ದ ಮೇಲೆ ಇಷ್ಟು ದೊಡ್ಡ ಮೊತ್ತ ಬೀಳುತ್ತದೆ ಎಂಬ ಲೆಕ್ಕಾಚಾರ ನಿಮ್ಮ ಮುಂದಿದೆ. ಓದಿ, ನೋಡಿ… ಭಾರತದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು …
Read More »ಬಜೆಟ್ ಅಧಿವೇಶನ ಮಾರ್ಚ್ 4ರಿಂದ ವಿಧಾನಸಭೆಯಲ್ಲಿ ಆರಂಭ
ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನವು ಮಾರ್ಚ್ 4ರಿಂದ ಆರಂಭವಾಗಲಿದ್ದು, ಇದು ಮಾ.31ರ ತನಕ ಮುಂದುವರಿಯಲಿದೆ. ಮಾರ್ಚ್ 8ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ಮಂಡಿಸಲಿರುವರು. ಈ ಬಗ್ಗೆ ಶಾಸಕಾಂಗದ ಕಾರ್ಯದರ್ಶಿ ಎಂ.ಕೆ. ವಿಜಯಲಕ್ಷ್ಮೀ ಅವರು ಅಧಿಸೂಚನೆ ಜಾರಿ ಮಾಡಿರುವರು. ಮಾ.4 ಮತ್ತು 5ರಂದು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆಯು ನಡೆಯಲಿದೆ. ಇದು ಈ ಬಜೆಟ್ ಅಧಿವೇಶನದ ಆಕರ್ಷಣೆಯಾಗಿರಲಿದೆ.
Read More »ಅವಮಾನ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ ಹಿರಿಯ ನಟ ಜಗ್ಗೇಶ್..!
ಬೆಂಗಳೂರು, ಫೆ.23- ನನ್ನನ್ನು ಹೀಯಾಳಿಸುವ ಮೂಲಕ 40 ವರ್ಷದ ಕಲಾಸೇವೆಯನ್ನು ಅಪಮಾನ ಮಾಡಿದ್ದೀರಾ, ನಾನು ಏನೂ ತಪ್ಪು ಮಾಡಿಲ್ಲ, ಯಾರಿಗೂ ಹೆದರಿ ಓಡಿ ಹೋಗುವುದಿಲ್ಲ. ಚಿತ್ರರಂಗದಲ್ಲಿ ರೌಡಿಸಂ ಅನ್ನು ಪ್ರೋತ್ಸಾಹಿಸುವ ಕೆಲಸ ಬೇಡ ಎಂದು ಹಿರಿಯ ನಟ ನವರಸನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಮಾರು 14 ನಿಮಿಷ 47 ಸೆಕೆಂಡ್‍ನ ವಿಡಿಯೋ ಮೂಲಕ ತಮಗಾದ ಅವಮಾನ, ನೋವುಗಳನ್ನು ಹೊರಹಾಕಿದ್ದಾರೆ.ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ …
Read More »ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ‍್ಯಾಲಿ
ಬೆಂಗಳೂರು, ಜ.23- ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯವರು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ಖಂಡಿಸಿದರು.ಶೇ.30ರಷ್ಟು ಶುಲ್ಕ ಕಡಿತ ಮಾಡಿರುವುದರಿಂದ ಖಾಸಗಿ ಶಾಲೆಗಳವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ವತಿಯಿಂದ ಮೆಜಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಸಾವಿರಾರು ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ್ಯಾಲಿ ನಡೆಸಿ ಸರ್ಕಾರ ಈ ಕ್ರಮವನ್ನು …
Read More »ತನ್ನ ಪ್ರಾಣ ಪಣಕ್ಕಿಟ್ಟು ಚಿರತೆಯೊಂದಿಗೆ ಸೆಣಸಾಡಿ ಅಮ್ಮನ ಪ್ರಾಣ ಕಾಪಾಡಿದ ‘ಸಾಹಸಿ ಯುವಕ’
ಹಾಸನ : ಮಲೆನಾಡಿನಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಸಾಹಸಿ ಯುವಕನೊಬ್ಬ ತನ್ನ ಜೀವ ಲೆಕ್ಕಿಸದೇ ಚಿರತೆಯೊಂದಿಗೆ ಸೆಣಸಾಡಿ ತನ್ನ ತಾಯಿಯ ಪ್ರಾಣ ಉಳಿಸಿದ್ದಾನೆ. ಹೌದು, ಹಾಸನ ಜಿಲ್ಲೆಯ ಅರಸೀಕೆರೆಯ ಬೈರಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಲ್ಲಿ ಗಾಯಗೊಂಡ ಮಗ ಹಾಗೂ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕಿರಣ್ ಹಾಗೂ ಆತನ ತಾಯಿ ಚಂದ್ರಮ್ಮ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ …
Read More »