Breaking News

Yearly Archives: 2021

ಮೈಸೂರು ಮೇಯರ್‌ ಆಯ್ಕೆ ಹಿಂದೆ ಚಾಮುಂಡೇಶ್ವರಿ ಪರ್ಯಾಯ ನಾಯಕತ್ವದ ಲೆಕ್ಕಾಚಾರ?

ಮೈಸೂರು: ಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಆರು ಜನರು ಆಕಾಂಕ್ಷಿಗಳಿದ್ದರೂ; ರುಕ್ಮಿಣಿ ಅವರನ್ನೇ ಕುಮಾರಸ್ವಾಮಿ ಆಯ್ಕೆ ಮಾಡಿದ್ದರ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೊಳಿಸುವ ತಂತ್ರಗಾರಿಕೆ ಇದೆ ಎನ್ನಲಾಗಿದೆ. ರುಕ್ಮಿಣಿ ಪತಿ ಮಾದೇಗೌಡ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀರಾಮಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜೆಡಿಎಸ್‌ ಸದಸ್ಯರು. ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭ ಮಾದೇಗೌಡರಿಗೆ ಟಿಕೆಟ್‌ ನಿರಾಕರಿಸಿದ್ದರು. ಮಾದೇಗೌಡ, ಕುಮಾರಸ್ವಾಮಿ ಬಳಿಗೆ ತೆರಳಿ ಮಾತುಕತೆ ನಡೆಸಿ ಪಕ್ಷದ ‘ಬಿ’ …

Read More »

ಖಾಸಗಿ ಶಾಲೆ ಮಾಲೀಕ ಆತ್ಮಹತ್ಯೆ! ಸಾವಿಗೂ ಮುನ್ನ ಬರೆದ ಡೆತ್​ನೋಟ್​ನಲ್ಲಿದೆ ನೋವು

ಕಲಬುರಗಿ: ವಿಷ ಸೇವಿಸಿ ಖಾಸಗಿ ಶಾಲೆಯ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಕಲಬುರಗಿಯ ವಿವೇಕಾನಂದ್ ನಗರದ ನಿವಾಸಿ ಶಂಕರ್ ಬಿರಾದರ್(43) ಮೃತ ದುರ್ದೈವಿ. ಸೇಡಂ ತಾಲೂಕಿನಲ್ಲಿ ಖಾಸಗಿ ಶಾಲೆ ಹೊಂದಿರುವ ಶಂಕರ್ ಬಿರಾದರ್, ಡೆತ್​ನೋಟ್ ಬರೆದಿಟ್ಟು ಮನೆಯಲ್ಲೇ ವಿಷ ಕುಡಿದು ಸತ್ತಿದ್ದಾರೆ. ಸಾಲಭಾದೆ ಮತ್ತು ಸಾಲಗಾರರ ಕಿರುಳಕ್ಕೆ ಬೇಸತ್ತ ಶಂಕರ್ ಬಿರಾದಾರ್ ಸಾವಿನ ಮನೆಯ ಕದ ತಟ್ಟಿದ್ದಾರೆ. ಖಾಸಗಿ ಶಾಲೆ ನಡೆಸಲು ಸಾಲ ಮಾಡಿಕೊಂಡಿದ್ದರು. ಸಾಲ ಪಾವತಿಸಿಲ್ಲ ಎಂದು …

Read More »

ಬೋಧನಾ ಶುಲ್ಕ ಕಡಿತ: ಹೈಕೋರ್ಟ್‌ ನೋಟಿಸ್

ಬೆಂಗಳೂರು: ಬೋಧನಾ ಶುಲ್ಕ ಶೇ 70ರಷ್ಟು ಮಾತ್ರ ಪಡೆಯಬೇಕು ಎಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಖಾಸಗಿ ಶಾಲೆಗಳ ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ‘ಶೇ 70ರಷ್ಟು ಶುಲ್ಕ ಸಂಗ್ರಹಿಸಬೇಕು ಮತ್ತು ಶುಲ್ಕದ ವಿವರ ಒಳಗೊಂಡ ಪಟ್ಟಿ ಪ್ರಕಟಿಸಬೇಕು. ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಿ ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಒಕ್ಕೂಟ …

Read More »

ಭಾರತೀಯ ರೈಲ್ವೆಯಿಂದ ಹೊಸ ಸೇವೆ ಆರಂಭ: ಪ್ರಯಾಣಿಕರಿಗೆ ʼಹೈಟೆಕ್ ಅನುಭವʼ ನೀಡಲು ʼವಿಸ್ಟಾಡೋಮ್ ಬೋಗಿʼಗಳ ಪರಿಚಯ

ನವದೆಹಲಿ: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಪ್ರಯಾಣದ ಅನುಭವವನ್ನ ಸ್ಮರಣೀಯ ಮತ್ತು ಆರಾಮದಾಯಕ ಆಗಿಸೋಕೆ ಕಾಲಕಾಲಕ್ಕೆ ಹೊಸ ಸೌಲಭ್ಯಗಳನ್ನ ತರುತ್ತಿದೆ. ಸಧ್ಯ ರೈಲ್ವೇ ವಿಸ್ಟಾಡೋಮ್ ಬೋಗಿಗಳನ್ನ ಪರಿಚಯಿಸಿದ್ದು, ಇದು ಯುರೋಪಿಯನ್ ಶೈಲಿಯಲ್ಲಿ ತಯಾರಾಗಿದೆ. ಇದರಲ್ಲಿ ಪ್ರಯಾಣಿಕರು ಆರಾಮದಾಯಕವಷ್ಟೇ ಅಲ್ಲ ಹೈಟೆಕ್ ಪ್ರಯಾಣವನ್ನೂ ಆನಂದಿಸ್ಬೋದು. ಹೊಸ ವಿಸ್ಟಾಡೊಮ್ʼನ್ನ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿರ್ಮಿಸಿದ್ದು, ವಿಸ್ಟಾಡೊಮ್ ಪ್ರವಾಸಿ ತರಬೇತುದಾರರು ಯುರೋಪಿಯನ್ ಶೈಲಿಯ ತರಬೇತುದಾರರಾಗಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ತಾಂತ್ರಿಕವಾಗಿ ಸುಧಾರಿತ ಸೌಲಭ್ಯಗಳನ್ನ …

Read More »

ಧಾರವಾಡ; ಮಾಸ್ಕ್ ಹಾಕದಿದ್ದರೆ ಮತ್ತೆ ದಂಡ ಕಟ್ಟಲು ಸಿದ್ಧರಾಗಿ

ಧಾರವಾಡ, ಫೆಬ್ರವರಿ 25: “ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಿಂದ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿಯನ್ನು ಹೊಂದಿರಬೇಕೆಂದು” ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಕೊರೊನಾ ನಿಯಂತ್ರಣ, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ ಮತ್ತು ಮದುವೆ, ಸಭೆ, ಸಮಾರಂಭಗಳಿಗೆ ಮಾರ್ಷಲ್‍ಗಳ ನೇಮಕಾತಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ಬಸ್, ರೈಲು, ಲಾರಿ ಮೂಲಕ ಹಾಗೂ …

Read More »

ಪೆಟ್ರೋಲ್‌ – ಡಿಸೇಲ್‌ – ಗ್ಯಾಸ್‌ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್

ಬೆಂಗಳೂರು: ಪೆಟ್ರೋಲ್-ಡೀಸೆಲ್, ಗ್ಯಾಸ್ ಸಿಲಿಂಡರ್ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲು ಮುಂದಾಗಿದೆ. ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದೆ ಪ್ರಸ್ತಾಪ ಇಡಲು ನಿರ್ಧರಿಸಿದೆ.   ಬಸ್ ಪ್ರಯಾಣ ದರ ಹೆಚ್ಚಳ ಕುರಿತು ಸುಳಿವು ನೀಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಹಾಗಾಗಿ ಬಸ್ …

Read More »

‘ವಿಶ್ವದ ಅತಿ ಉದ್ದದ ಪ್ಲಾಟ್ಫಾರ್ಮ್’ ಹೆಗ್ಗಳಿಕೆಗೆ ಪಾತ್ರವಾಗಿದೆ ಶ್ರೀ ಸಿದ್ಧರೂಧ ಸ್ವಾಮಿ ರೈಲ್ವೆ ನಿಲ್ದಾಣ

ಹುಬ್ಬಳ್ಳಿ: ನೈರುತ್ಯ ರೈಲ್ವೆಯ (ಎಸ್‌ಡಬ್ಲ್ಯುಆರ್) ಶ್ರೀ ಸಿದ್ಧರೂಧ ಸ್ವಾಮಿ ರೈಲ್ವೆ ನಿಲ್ದಾಣವು ವಿಶ್ವದ ಅತಿ ಉದ್ದದ ವೇದಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಿಲ್ದಾಣವು ದವಾಂಗೆರೆ / ಬೆಂಗಳೂರು ಮತ್ತು ಗದಗ್‌ನಿಂದ ಒಂದು ಬದಿಯಲ್ಲಿ ಎರಡು ಮಾರ್ಗಗಳನ್ನು ಹೊಂದಿದೆ ಮತ್ತು ಇನ್ನೊಂದು ಬದಿಯಲ್ಲಿ ಲೋಂಡಾ ಕಡೆಗೆ ಒಂದು ಮಾರ್ಗವನ್ನು ಹೊಂದಿದೆ, ಅಲ್ಲಿ ರೈಲ್ವೆ ಮಾರ್ಗವು ಗೋವಾ ಮತ್ತು ಮಹಾರಾಷ್ಟ್ರದ ಕಡೆಗೆ ಶಾಖೆಗಳನ್ನು ಹೊಂದಿರುತ್ತದೆ. ಜಿಎಂ / ಎಸ್‌ಡಬ್ಲ್ಯುಆರ್ ಅಜಯ್ ಕುಮಾರ್ …

Read More »

ಬಿಎಂಟಿಸಿ ಪ್ರಯಾಣ ದರ ಏರಿಸಲು ಪ್ರಸ್ತಾವನೆ ಬಂದಿದೆ: ಲಕ್ಷ್ಮಣ ಸವದಿ

ಬೆಂಗಳೂರು: ಬಿಎಂಟಿಸಿ ಪ್ರಯಾಣ ದರ ಏರಿಸುವ ಬಗ್ಗೆ ನಿಗಮದಿಂದ ಪ್ತಸ್ತಾವನೆ ಬಂದಿದ್ದು, ಈ ಸಂಬಂಧ ಮುಖ್ಯಮಂತ್ರಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ತಿಳಿಸಿದರು. ಉಳಿದ ನಿಗಮಗಳಲ್ಲಿ ಕಳೆದ ವರ್ಷವೇ ಶೇ 13 ರಷ್ಟು ಏರಿಕೆ ಮಾಡಲಾಗಿದೆ. ಬಿಎಂಟಿಸಿ ಶೇ 18 ರಿಂದ ಶೇ 20 ರಷ್ಟು ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಷ್ಟು ಪ್ರಮಾಣ ಏರಿಕೆ ಸಾಧ್ಯವಿಲ್ಲ. ಪ್ರಯಾಣಿಕರಿಗೆ ಹೊರೆ ಆಗದಂತೆ ಏರಿಕೆ ಗೆ ಮನವಿ ಮಾಡಲಾಗುವುದು. ಅಂತಿಮ ನಿರ್ಧಾರ …

Read More »

ಪರೀಕ್ಷೆ ಇಲ್ಲದೆ 9 ರಿಂದ 11ನೇ ತರಗತಿಯ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಸರ್ಕಾರ!

ಚೆನ್ನೈ : ಕೊರೊನಾ ಮಹಾಮಾರಿಯಿಂದಾಗಿ ಪ್ರಸಕ್ತ ಸಾಲಿನ 9, 10 ಹಾಗೂ ಪ್ರಥಮ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ, ಉತ್ತೀರ್ಣಗೊಳಿಸಿ ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ. ಅಲ್ಲಿನ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಶೈಕ್ಷಣಿಕ ಕ್ಷೇತ್ರದ ಮೇಲೆ ಮಹಾಮಾರಿ ತನ್ನ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ, ಶಿಕ್ಷಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಪಠ್ಯದಲ್ಲಿಯೂ ಕಡಿತಗೊಳಿಸಲಾಗಿದೆ. …

Read More »

ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ

ನವದೆಹಲಿ: ತೈಲ ಕಂಪೆನಿ ಇಂಡಿಯನ್ ಆಯಿಲ್ ಕಂಪೆನಿಯು ಫೆಬ್ರವರಿಯಲ್ಲಿ ಮೂರನೇ ಸಲ ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆ ಮಾಡಿದೆ. ಪ್ರತೀ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 769ರಿಂದ 794ಕ್ಕೆ ಏರಿಕೆ ಮಾಡಿದೆ. ಇದಕ್ಕೆ ಮೊದಲು ಫೆಬ್ರವರಿ 4 ಮತ್ತು 14ರಂದು ಬೆಲೆ ಏರಿಕೆ ಮಾಡಲಾಗಿತ್ತು. ಡಿಸೆಂಬರ್ ನಲ್ಲಿ ಕೂಡ ಎರಡು ಸಲ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಂಡರ್ …

Read More »