ಬೆಳಗಾವಿ: ED ಹೆಸರಲ್ಲಿ ಬ್ಯಾಂಕ್ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮದುಕರ್ ಸಪಳೆ ಬಂಧಿತ ಆರೋಪಿ. ಬೆಳಗಾವಿಯ ಶಾಸ್ತ್ರೀನಗರದ ನಿವಾಸಿಯಾದ ಆರೋಪಿ ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವನ ಬಳಿ ಬರುವ ಗ್ರಾಹಕರಿಗೆ ಬಣ್ಣ, ಬಣ್ಣದ ಮಾತುಗಳನ್ನ ಹೇಳಿ ಅವರ ಇನ್ಶೂರೆನ್ಸ್ ಹಣವನ್ನ ತನ್ನ ಅಕೌಂಟ್ಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ಅನ್ನೋ ಆರೋಪ ಕೇಳಿ ಬಂದಿದೆ. ಹಣ ಕಳೆದುಕೊಂಡವರು ಬಂದು ಹಣ ಕೇಳಿದರೆ …
Read More »Yearly Archives: 2021
ಕಿವಿ ಕೇಳದೇ-ಮಾತೂ ಬಾರದೇ ಪಾಕ್ನಲ್ಲಿ ಸಿಲುಕಿದ್ದ ಗೀತಾ; ಕೊನೆಗೂ ತಾಯಿ ಮಡಿಲು ಸೇರಿದ್ರು
2015ರಲ್ಲಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಸಿನಿಮಾದ ಮುನ್ನಿ ಕ್ಯಾರೆಕ್ಟರ್ಗೆ ಇಡೀ ದೇಶವೇ ಸಲಾಂ ಹೊಡೆದಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಅದಕ್ಕಿಂತ ಹೆಚ್ಚು ಸದ್ದು ಮಾಡಿದ್ದು, ಭಾರತದಿಂದ ಆಕಸ್ಮಿವಾಗಿ ಪಾಕ್ ಸೇರಿ ಅಲ್ಲಿನ ಎನ್ಜಿಓ ಒಂದರಲ್ಲಿ ರಕ್ಷಣೆ ಪಡೆದಿದ್ದ ಗೀತಾ ಎಂಬ ಹೆಸರಿನ ರಿಯಲ್ ಮುನ್ನಿ. ಈಕೆಗೆ ನಿಜವಾದ ಭಾಯಿಜಾನ್ ಆಗಿದ್ದು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್. ಪಾಕಿಸ್ತಾನದಲ್ಲಿದ್ದ ಕಿವುಡ …
Read More »ಶಿವರಾತ್ರಿಯ ವಿಶೇಷ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ಭಕ್ತಿ, ಭಾವದಿಂದ ಕೈಮುಗಿದ ಭಕ್ತರು
ಕೊಪ್ಪಳ: ಶಿವರಾತ್ರಿಯ ದಿನವಾದ ಇಂದು ಕೊಪ್ಪಳದ ಹೊರವಲಯದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಅಚ್ಚರಿಯೊಂದು ನಡೆದಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಇಂದು ದೇವಾಲಯಕ್ಕೆ ಸಾಕಷ್ಟು ಭಕ್ತರು ಆಗಮಿಸಿದ್ದರು. ಶಿವನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಾಲಯದ ಹೊರಗಿನಿಂದ ಬಂದ ನಾಗರ ಹಾವೊಂದು ಗರ್ಭಗುಡಿಯ ಒಳಗಡೆ ಪ್ರವೇಶಿಸಿದೆ. ಲಿಂಗದ ಕಡೆಗೆ ತೆರಳಿದ ಹಾವು ಅಲ್ಲಿಂದ ಕಾಣೆಯಾಗಿದೆ. ಹಾವನ್ನು ಕಂಡ ಭಕ್ತರು ಧನ್ಯತಾಭಾವದಿಂದ ಕೈಮುಗಿದಿದ್ದಾರೆ.
Read More »ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆಗೆ ಸಜ್ಜು
ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 3000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅವರಿಗೆ ಇನ್ನು 72 ರನ್ ಬೇಕಿದೆ. ಇದುವರೆಗೆ 85 ಟಿ20 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 2928 ರನ್ ಗಳಿಸಿದ್ದಾರೆ. ಟಿ20ಯಲ್ಲಿ …
Read More »ನ್ನಡ ಫಲಕಗಳಿಗೆ ಮಸಿ ಬಳಿದ ಎಂಇಎಸ್, ಶಿವಸೇನೆ ಕಾರ್ಯಕರ್ತರು: ಹಲವರು ಪೊಲೀಸ್ ವಶಕ್ಕೆ
ಬೆಳಗಾವಿ, : ನಾಲ್ಕೈದು ದಿನಗಳ ಹಿಂದೆಯಷ್ಟೇ ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಭಗವಾ ಧ್ವಜ ಹಾರಿಸಲು ವಿಫಲ ಯತ್ನ ನಡೆಸಿದ್ದ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಮತ್ತೆ ಗುರುವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡದ ಫಲಕಗಳಿಗೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ. ಶಿವಸೇನೆ ಮುಖಂಡ ಸಂಜಯ್ ಪವಾರ್ ಹಾಗೂ ಅವರ ಬೆಂಬಲಿಗರು ಕನ್ನಡದ ಬೋರ್ಡ್ ಗಳಿಗೆ ಮಸಿ ಬಳಿದಿದ್ದಾರೆ. ಕೊಲ್ಲಾಪುರದ ಮಹಾಲಕ್ಷ್ಮೀ ಮಂದಿರ ಬಳಿ ಈ ಕೃತ್ಯ ಎಸಗಿದ್ದಾರೆ. ಕನ್ನಡದ ಬೋರ್ಡ್ …
Read More »ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿಗೆ ಕೊಡಬೇಕು: ಶ್ರೀಮಂತ ಪಾಟೀಲ
ಬೆಳಗಾವಿ: ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿಗೆ ಕೊಡಬೇಕು. ಈ ಬಗ್ಗೆ ನಾನು ಸಹ ಸಿಎಂಗೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಶ್ರೀಮಂತ್ ಪಾಟೀಲ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿದಂತೆ ಸಿಡಿ ಪ್ರಕರಣದ ಬಗ್ಗೆ ಆದಷ್ಟು ಬೇಗ ಉನ್ನತ ಮಟ್ಟದ ತನಿಖೆಯಾಗಬೇಕು. ರಮೇಶ್ ಒಳ್ಳೆಯ ಮನುಷ್ಯ. ನನ್ನ ಅಭಿಪ್ರಾಯದಂತೆ ಅವರಿಗೆ ಕ್ಲೀನ್ ಚಿಟ್ ಸಿಗಬಹುದು. ಹೀಗಾಗಿ, ಸಮಗ್ರ ತನಿಖೆ ಆಗಬೇಕು. ಪ್ರಕರಣದಲ್ಲಿ ಯಾರಿದ್ದಾರೋ …
Read More »ಮೇ. 17 ರಿಂದ ಕೇದಾರನಾಥ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತ
ಡೆಹ್ರಾಡೂನ್ : ಮೇ. 17 ರಿಂದ ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥದಲ್ಲಿರುವ ಶಿವನ ದೇವಸ್ಥಾನ ಭಕ್ತರಿಗೆ ಮುಕ್ತವಾಗಲಿದೆ ಎಂದು ಉತ್ತರಾಖಂಡ ಚಾರ್ ಧಾಮ್ ದೇವಸ್ಥಾನಂ ವ್ಯವಸ್ಥಾಪಕ ಮಂಡಳಿ ತಿಳಿಸಿದೆ. ಮೇ. 14 ರಂದು ಶಿವನ ವಿಗ್ರಹವನ್ನು ಓಂಕಾರೇಶ್ವರ ದೇವಾಲಯದಿಂದ ಹೊರ ತೆಗೆದು, ಮೇ. 17 ರಿಂದ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಕೇದಾರನಾಥ ದೇವಾಸ್ಥಾನವನ್ನು ಕಳೆದ ವರ್ಷ ನವೆಂಬರ್ 16 ರಂದು ಮುಚ್ಚಲಾಗಿತ್ತು. ಕಳೆದ ವರ್ಷ ನವೆಂಬರ್ 19 ರಂದು …
Read More »ಕಮಲ -ಕೈ TWITTER ಫೈಟ್
ಬೆಂಗಳೂರು, – ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವಾಗ್ವಾದ ನಡೆದಿದೆ. ಬಿಜೆಪಿ ಒಡೆದ ಮನೆಯಲ್ಲ, ಛಿದ್ರಗೊಂಡು ಜೋಡಿಸಲಾಗದ ಮಡಕೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಶೋಕಾಸ್ ನೋಟಿಸ್ ಕಥೆ ಏನಾಯ್ತು ಎಂಬ ವರದಿಯನ್ನು ಲಗತ್ತಿಸಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಬಿಜೆಪಿ ನಡೆಸುತ್ತಿರುವ ಯಡಿಯೂರಪ್ಪ ಮುಕ್ತ ಬಿಜೆಪಿ ಅಭಿಯಾನದ ಮುಖವಾಣಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಬಿಜೆಪಿ …
Read More »ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿ.ಡಿ.ಯು ಇತ್ತು, ಅದೇನಾಯ್ತು? ವಾಟಾಳ್ ನಾಗರಾಜ್ ಹೊಸ ಬಾಂಬ್
ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿ.ಡಿ.ಯು ಇತ್ತು, ಅದೇನಾಯ್ತು? ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ. ಬಜೆಟ್ ನಲ್ಲಿ ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಶಾಸನ ಸಭೆಯಲ್ಲೇಕೆ ಚರ್ಚೆ ಆಗಲಿಲ್ಲ? ಸಿಎಂ ಯಡಿಯೂರಪ್ಪ ಶಾಸನ ಸಭೆಯನ್ನು ತಮ್ಮ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಸ್ಪೀಕರ್ ಸಿಎಂ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಸಮರ್ಥ ವಿರೋಧ …
Read More »ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಸಮಾಜದಿಂದಲೇ ಬಹಿಷ್ಕಾರ
ಹುಬ್ಬಳ್ಳಿ: ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಮುಖಂಡರೊಬ್ಬರನ್ನು ಜಮಾತ್‍ನಿಂದ ಹೊರ ಹಾಕಿದ್ದು, ನನಗೆ ನ್ಯಾಯ ಕೊಡಿಸಬೇಕು. ಬಹಿಷ್ಕಾರ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮಾಜದ ಮುಖಂಡ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ನಗರದ ಮುಲ್ಲಾ ಓಣಿಯ ಅಬ್ದುಲ್ ಮುನಾಫ್ ಐನಾಪುರಿ ಅವರು ಮಾರ್ಚ್ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ತಮ್ಮನ್ನು ಜಮಾತ್‍ನವರು ಹೊರ ಹಾಕಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸಿದ್ದು, …
Read More »