ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿಯನ್ನು ವಿರೋಧಿಸಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆ ಎದುರು ಕರ್ನಾಟಕ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ‘ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ₹2 ಕೋಟಿ ವರೆಗಿನ ಕಾಮಗಾರಿಯನ್ನು ನೇರವಾಗಿ ವಹಿಸುವ ನಿಟ್ಟಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಮೀಸಲಾತಿ ಸವಲತ್ತು ದುರ್ಬಲಗೊಳಿಸುವ …
Read More »Yearly Archives: 2021
ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಶುಲ್ಕ ಸಂಗ್ರಹ: ಪರಿಶೀಲಿಸಿ ಮುಂದಿನ ನಿರ್ಧಾರ; ಗೋವಿಂದ್ ಕಾರಜೋಳ
ಬೆಂಗಳೂರು, ಮಾ.24: ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಶುಲ್ಕ ಸಂಗ್ರಹ ಹಾಗೂ ಟೋಲ್‍ಗಳಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸುವ ಸಂಬಂಧ ಪರಿಶೀಲಿಸಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿಯ ಬಾಗವಾಡಿ ಟೋಲ್‍ನಲ್ಲಿ ರೈತರಿಗೆ ಸಮಸ್ಯೆ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅಲ್ಲಿ ಬೈಪಾಸ್ ರಸ್ತೆ …
Read More »(ಬಿಜೆಪಿ) ಕೈಯಲ್ಲಿ ರಾಜ್ಯ ಸುರಕ್ಷಿತವಾಗಿರುವುದಿಲ್ಲ ಮತ್ತು ಆರ್ಥಿಕವಾಗಿ ದಿವಾಳಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬೆಂಗಳೂರು: ಇವರ (ಬಿಜೆಪಿ) ಕೈಯಲ್ಲಿ ರಾಜ್ಯ ಸುರಕ್ಷಿತವಾಗಿರುವುದಿಲ್ಲ ಮತ್ತು ಆರ್ಥಿಕವಾಗಿ ದಿವಾಳಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉತ್ತರಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಇವರು ತುಪ್ಪನಾದ್ರೂ ತಿನ್ನಲಿ, ಬೆಣ್ಣೆನಾದ್ರೂ ತಿನ್ನಲಿ. ಅಂಕಿ-ಅಂಶ ನೋಡಿದರೆ ಗೊತ್ತಾಗುವುದಿಲ್ಲವೆ’ ಎಂದು ಪ್ರಶ್ನಿಸಿದರು. ‘ಬಜೆಟ್ ಮೇಲಿನ ನಮ್ಮ ಪ್ರಶ್ನೆಗಳಿಗೆ ಯಡಿಯೂರಪ್ಪ ಅವರು ತರಾತುರಿಯಲ್ಲಿ 24 …
Read More »ಪ್ರಮಾಣಪತ್ರ ಸಿಗದೆ ಭಾವೀ ವೈದ್ಯರ ಪರದಾಟ
ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕೋ, ಬೇಡವೋ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಯಾವುದೇ ಸೂಚನೆ ನೀಡುತ್ತಿಲ್ಲ. ಕೋರ್ಸ್ ಮುಗಿಸಿ ಒಂದೂವರೆ ತಿಂಗಳು ಕಳೆದರೂ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ ಎಂದು ಎಂಬಿಬಿಎಸ್ ವಿದ್ಯಾರ್ಥಿಗಳು ದೂರಿದ್ದಾರೆ. ‘ವೈದ್ಯಕೀಯ ಪದವಿ ವ್ಯಾಸಂಗ ಮುಗಿಸಿದವರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಬಗ್ಗೆ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದೊಂದಿಗೆ ಷರತ್ತುಬದ್ಧ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. 2015ರ ಕಡ್ಡಾಯ ಸೇವಾ ತರಬೇತಿ ತಿದ್ದುಪಡಿ ಕಾಯ್ದೆಯನ್ವಯ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ …
Read More »ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ನಾಳೆ `ಭಾರತ್ ಬಂದ್’ ಗೆ ಕರೆ
ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿರುವ ರೈತ ಸಂಘಟನೆಗಳು ಮಾರ್ಚ್ 26 ರ ನಾಳೆ ಸಂಪೂರ್ಣ ಭಾರತ್ ಬಂದ್ ಗೆ ಕರೆ ನೀಡಿವೆ. ‘ 40 ರೈತ ಸಂಘಗಳ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಕಾರ್ಮಿಕ ಸಂಘಗಳು, ಸಾರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘಗಳು ಮತ್ತು ಇತರೆ ಸಾಮೂಹಿಕ ಸಂಸ್ಥೆಗಳು ಭಾರತ್ ಬಂದ್ …
Read More »ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡದ ಬಿಸಿ ತಟ್ಟಲಿದೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 2,298 ಜನರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಜಾರಿ ಮಾಡಿದೆ. ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡದ ಬಿಸಿ ತಟ್ಟಲಿದೆ. ಸಭೆ, ಸಮಾರಂಭ, ರ್ಯಾಲಿ ಆಯೋಜಕರಿಗೆ ಹಾಗೂ ಹೋಟೆಲ್ ಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ 10,000 ರೂ ದಂಡ ವಿಧಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. * …
Read More »ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅಮಾನತು
ಬೆಳಗಾವಿ – ಆಸ್ತಿ ನೊಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೊಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅವರನ್ನು ಅಮಾನತುಗೊಳಿಸಲಾಗಿದೆ. 2015-18 ಅವಧಿಯಲ್ಲಿ ಒಟ್ಟೂ 9 ದಸ್ತಾವೇಜುಗಳಿಂದ 1299.12 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಮುದ್ರಾಂಕ ಶುಲ್ಕ 12,78,79,056 ಹಾಗೂ ನೊಂದಣಿ ಶುಲ್ಕ 12,91,707 ರೂ. ಕಡಿಮೆ ಆಕರಿಸಲಾಗಿತ್ತು. ಈ ಬಗ್ಗೆ ವಿಷ್ಣುತೀರ್ಥ ಅವರಿಗೆ ನೋಟೀಸ್ …
Read More »ಲೋಕಸಭಾ ಉಪಚುನಾವಣಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಫೈನಲ್:
ಬೆಂಗಳೂರು: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬೆಳಗಾವಿ ಉಪಚುನಾವಣೆ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಸತೀಶ್ ಜಾರಕಿಹೊಳಿಯೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದರು. ಕೆಲ ದಿನಗಳ ಹಿಂದೆ ಬೆಳಗಾವಿ ಲೋಕಸಭಾ ಉಪಚುನಾವಣಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಫೈನಲ್ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದೀಗ ಅಧಿಕೃತವಾಗಿ ಸತೀಶ್ ಜಾರಕಿಹೊಳಿ ಹೆಸರನ್ನು ಘೋಷಿಸಿದ್ದಾರೆ. ಇದೇ ವೇಳೆ ಬಜೆಟ್ ಮೇಲಿನ ಚರ್ಚೆ …
Read More »ಗೋಕಾಕ: ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸುತ್ತಿರುವುದು.
ಗೋಕಾಕ: ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ಅಬಲಿ ಎಂಬ ಸ್ಥಿತಿ ಮೀರಿ ಸಾಧನೆಯತ್ತ ದಾಪುಗಾಲು ಹಾಕುತ್ತಿದ್ದಾಳೆ ಎಂದು ಡಾ: ದೀಪಾ ತುಬಾಕಿ ಹೇಳಿದರು. ಬುಧವಾರದಂದು ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಕುಟುಂಬ ಮತ್ತು ವೃತ್ತಿ ನಿಭಾಯಿಸುತ್ತಾ ಮಹಿಳೆ ಸಾಧನೆಯತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ: ಜ್ಯೋತಿಲಕ್ಷ್ಮೀ ವಾಲಿ, ಡಾ: ವಿಜಯಲಕ್ಷ್ಮೀ ಪಲೋಟಿ, …
Read More »ಗೋಕಾಕ: ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.
ಗೋಕಾಕ: ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿಘ್ನಹಾರ ಪಾಟೀಲ, ಸಚೀನಗೌಡ, ರಾಕೇಶ ಕೊಳದುರ್ಗಿ ಇವರು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಪ್ರಾಯೋಗಿಕ ವಿಭಾಗದಲ್ಲಿ ಚಿನ್ನ, ಲಿಖಿತ ವಿಭಾಗದಲ್ಲಿ ಬೆಳ್ಳಿಯ ಪದಕಗಳನ್ನು ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಚೇರಮನ್ ಲಖನ ಜಾರಕಿಹೊಳಿ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಸಿ.ಬಿ.ಪಾಗದ, ತರಬೇತಿದಾರ ಅಮೃತ ಕದ್ದು ಸೇರಿದಂತೆ …
Read More »