ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಕೈಮೀರುತ್ತಿದೆ. ಈ ನಡುವೆ ಕಿರುತೆರೆ ಕಲಾವಿದ ಗಟ್ಟಿಮೇಳದ ಪವನ್ ಕುಮಾರ್ ತಮ್ಮ ಕುಟುಂಬದ ಇಬ್ಬರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೊರೊನಾದಿಂದಾಗಿ ಮರಣ ಹೊಂದಿದ್ದಾರೆ. ರಾಜ್ಯ ಸರ್ಕಾರ ಜನರ ಜೀವಕ್ಕೆ ಬೆಲೆ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಪವನ್ ತಮ್ಮ ಕುಟುಂಬದವರನ್ನು ಕಳೆದುಕೊಂಡ ದುಖಃದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಮೂಲಕ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ. ಪವನ್ ಕುಟುಂಬದಲ್ಲಿ …
Read More »Yearly Archives: 2021
ಮಗನ ಸಾವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೇಸು ಹಾಕುದಾಗಿ ಬೆದರಿಸಿದ ಖಾಸಗಿ ಆಸ್ಪತ್ರೆ
ಬೆಂಗಳೂರು: ಜ್ವರ ಎಂದು ನಗರದ ಖಾಸಗಿ ಆಸ್ಪತ್ರೆಗೆ ಸೇರಿದ ಒಬ್ಬ ಯುವಕ ಇಂದು ಮೃತಪಟ್ಟಿದ್ದಾನೆ. ಆತನ ಮರಣದ ಕುರಿತು ಆಸ್ಪತ್ರೆಯೊಂದಿಗೆ ವಿಚಾರಿಸಿದ ಯುವಕನ ಪೋಷಕರಿಗೆ ಆಸ್ಪತ್ರೆ ಸಿಬ್ಬಂದಿ ನಿಮ್ಮ ಮಗನ ಸಾವಿನ ಬಗ್ಗೆ ಕೇಳಿದರೆ ನಿಮ್ಮ ಮೇಲೆ ಕೇಸು ಹಾಕುದಾಗಿ ಬೆದರಿಕೆ ಹಾಕಿದ್ದಾರೆ. ಕೇಂದ್ರದ ಮಾಜಿ ಅಧಿಕಾರಿಯಾಗಿದ್ದ ದಿವಾಕರ್ ಕೋರೆ ಅವರ ಮಗ ಅಲೋಕ್ ಜ್ವರ ಎಂದು ಅತ್ತಿಬೆಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ನಂತರ ಆತನಿಗೆ ಕೊರೊನಾ ಪಾಸಿಟಿವ್ ಆಗಿತ್ತು. …
Read More »ವರನಟ ಡಾ.ರಾಜ್‍ಕುಮಾರ್ 92ನೇ ಜನ್ಮದಿನ ಸಂಭ್ರಮಾಚರಣೆಯನ್ನು ರಾಜ್ ಅವರ ಮೂವರು ಮಕ್ಕಳು ಒಂದೊಂದು ರೀತಿಯಾಗಿ ವಿಶೇಷವಾಗಿ ಆಚರಿಸುವ ಮೂಲಕವಾಗಿ ತಂದೆಗೆ ಪ್ರೀತಿಯನ್ನು ತೋರಿಸಿದ್ದಾರೆ.
ಬೆಂಗಳೂರು: ವರನಟ ಡಾ.ರಾಜ್‍ಕುಮಾರ್ 92ನೇ ಜನ್ಮದಿನ ಸಂಭ್ರಮಾಚರಣೆಯನ್ನು ರಾಜ್ ಅವರ ಮೂವರು ಮಕ್ಕಳು ಒಂದೊಂದು ರೀತಿಯಾಗಿ ವಿಶೇಷವಾಗಿ ಆಚರಿಸುವ ಮೂಲಕವಾಗಿ ತಂದೆಗೆ ಪ್ರೀತಿಯನ್ನು ತೋರಿಸಿದ್ದಾರೆ. ನಟನೆ ಸರಳತೆ, ವ್ಯಕ್ತಿತ್ವದ ಮೂಲಕವಾಗಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ರಾಜ್‍ಕುಮಾರ್ ಅವರಿಗೆ ಅವರು ಮಕ್ಕಳು ದೊಡ್ಡ ಅಭಿಮಾನಿಗಳಾಗಿದ್ದಾರೆ. ತಾವು ಮಾಡುವ ಯಾವುದೇ ಕೆಲಸಗಳಿಗೆ ರಾಜ್‍ಮಕ್ಕಳು ತಮ್ಮ ತಂದೆಯನ್ನು ನೆನೆಯುತ್ತಾರೆ. ನಾವು ನಮ್ಮ ತಂದೆಗೆ ದೊಡ್ಡ ಅಭಿಮಾನಿಗಳು ಎಂದು ಆಗಾಗ ಹೇಳುತ್ತಿರುತ್ತಾರೆ. ರಾಜ್‍ಕುಮಾರ್ ಅವರ …
Read More »ನಿಯಮ ಉಲ್ಲಂಘಿಸಿದರೆ ಲಾಠಿ ಚಾರ್ಜ್
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ. ರಾತ್ರಿ 9ಗಂಟೆಯಿಂದ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಇರಲಿದೆ. ಇದೀಗ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ನೀಡಿದ್ದ ಸಮಯ ಮುಗಿದಿದ್ದು, ದಿನಸಿ, ತರಕಾರಿ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಮನೆಯಿಂದ ಯಾರೊಬ್ಬರು ಹೊರಬರದಂತೆ ಎಚ್ಚರಿಕೆ ನಿದಲಾಗಿದೆ. ಅನಗತ್ಯವಾಗಿ ಜನರು ಓಡಾಟ ನಡೆಸಿದರೆ ಲಾಠಿ …
Read More »ಸೋಂಕಿತರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡುವುದು ಸಾಧ್ಯವಿಲ್ಲ:ಆರೋಗ್ಯ ಸಚಿವ ಡಾ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನ ಸ್ಥಿತಿ ಆತಂಕಕಾರಿಯಾಗಿದೆ. ದಿನದಿಂದ ದಿನಕ್ಕೆ ಆಕ್ಟಿವ್ ಕೇಸ್ ಗಳು ಹೆಚ್ಚುತ್ತಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾದಿದ ಅವರು, ಕೊರೊನಾ ವೈರಸ್ ತನ್ನ ಸ್ವಭಾವವನ್ನೇ ಬದಲಿಸಿದೆ. ವೈರಾಣು ನಮ್ಮ ಜೊತೆ ಚೆಸ್ ರೀತಿ ಆಟವಾದುತ್ತಿದೆ. ಮೊದಲ ಅಲೆಯಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ಇದು ಹೊಸ ಕಾಯಿಲೆ, ವೈರಸ್ ಆಗಿ ಪರಿವರ್ತನೆಗೊಳ್ಳುತ್ತಿದೆ …
Read More »ವೀಕೆಂಡ್ ಕರ್ಫ್ಯೂ ಸೋಮವಾರ ಮುಗಿಯುತ್ತಿದ್ದಂತೆಯೇ ವಾರಪೂರ್ತಿ ಕರ್ಫ್ಯೂ ಮುಂದುವರೆಸಲು ರಾಜ್ಯ ಸರ್ಕಾರ ಚಿಂತನೆ?
ಬೆಂಗಳೂರು: ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ವೀಕೆಂಡ್ ಕರ್ಫ್ಯೂ ಸೋಮವಾರ ಮುಗಿಯುತ್ತಿದ್ದಂತೆಯೇ ವಾರಪೂರ್ತಿ ಕರ್ಫ್ಯೂ ಮುಂದುವರೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ವೀಕೆಂಡ್ ಅಲ್ಲ ವಾರಪೂರ್ತಿ ಕರ್ಫ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ …
Read More »ಮೋದಿಗೆ ಕೈ ಮುಗಿದು ಮನವಿ ಮಾಡಿದ ಸಿಎಂ! ಏಕೆ ಈ ರೀತಿ ಮಾಡಿದರು?
ನವದೆಹಲಿ : ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಕೇಜ್ರಿವಾಲ್ ಅವರು ಕೊರೊನಾ ಹೆಚ್ಚಾಗಿರುವ ಹತ್ತು ರಾಜ್ಯಗಳ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪ್ರಧಾನಿಯಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಪರಿಸ್ಥಿತಿ ನೋಡಿ, ನನಗೆ ನಿದ್ದೆ ಬರುತ್ತಿಲ್ಲ. ಒಂದೊಂದು ಸಾವು ನನ್ನನ್ನು ಕಾಡುತ್ತಿದೆ ಎಂದು ಗದ್ಗದಿತರಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್ ತಯಾರಿಸುವ ಘಟಕ …
Read More »ಬಿಜೆಪಿ ಶಾಸಕ ಸುರೇಶ್ ಕರೊನಾ ಮಹಾಮಾರಿಗೆ ಬಲಿ
ಲಖನೌ: ಕರೊನಾ ಮಹಾಮಾರಿಯಿಂದ ಮೃತಪಡುತ್ತಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಸಾಗಿದೆ. ಇದೀಗ ಉತ್ತರ ಪ್ರದೇಶದ ಲಖನೌ ಪಶ್ಚಿಮ ಕ್ಷೇತ್ರದ ಶಾಸಕ ಸುರೇಶ್ ಶ್ರೀವಾತ್ಸವ್ ಅವರು ಕರೊನಾಕ್ಕೆ ಬಲಿಯಾಗಿದ್ದಾರೆ. ಇವರಿಗೆ 76 ವರ್ಷ ವಯಸ್ಸಾಗಿತ್ತು.15 ದಿನಗಳ ಹಿಂದೆ ಇವರಿಗೆ ಕರೊನಾ ಸೋಂಕು ತಗುಲಿರುವುದು ತಿಳಿದಿತ್ತು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಕಳೆದ ವಾರ ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ. ಇವರ ನಿಧನಕ್ಕೆ ಅನೇಕ ಗಣ್ಯರು …
Read More »ʼಆಮ್ಲಜನಕದ ಪೂರೈಕೆʼಗೆ ಅಡ್ಡಿಪಡಿಸುವವರನ್ನ ಗಲ್ಲಿಗೇರಿಸುತ್ತೇವೆ: ದೆಹಲಿ ಹೈಕೋರ್ಟ್
ನವದೆಹಲಿ: ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಆಮ್ಲಜನಕ ಪೂರೈಕೆಯಲ್ಲಿ ಅಡಚಣೆಯನ್ನು ಉಂಟು ಮಾಡಿದ್ರೆ, ‘ನಾವು ಆ ವ್ಯಕ್ತಿಯನ್ನ ಗಲ್ಲಿಗೇರಿಸುತ್ತೇವೆ’ ಎಂದು ದೆಹಲಿ ಹೈಕೋರ್ಟ್ ಶನಿವಾರ ಹೇಳಿದೆ. ಮಹಾರಾಜ ಅಗ್ರಸೆನ್ ಆಸ್ಪತ್ರೆಯ ಅರ್ಜಿಯ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ರೇಖಾ ಪಲ್ಲಿ ಅವ್ರ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಗಂಭೀರ ಅನಾರೋಗ್ಯದ ಕೊರೊನಾ ರೋಗಿಗಳಿಗೆ ಆಮ್ಲಜನಕದ ಕೊರತೆಯ ಬಗ್ಗೆ ಆಸ್ಪತ್ರೆ ಹೈಕೋರ್ಟ್‌ಗೆ ಮೊರೆ ಹೋಗಿತ್ತು. …
Read More »ಬೆಳಗಾವಿ: ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಸಾವು
ಬೆಳಗಾವಿ: ಮಳೆಯಿಂದ ರಕ್ಷಿಸಿಕೊಳ್ಳಲು ಗಿಡದ ಕೆಳಗೆ ನಿಂತಾಗ ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ನಗರದ ಕಣಬರ್ಗಿ ರಸ್ತೆಯ ಸುರಭಿ ಹೊಟೇಲ್ ಹಿಂಬಾಗದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಮೂಲ ಬೈಲಹೊಂಗಲ ತಾಲೂಕಿನ ಹೋಗರ್ತಿಯ, ಸದ್ಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳದಲ್ಲಿ ನೆಲೆಸಿದ್ದ ಪ್ರಕಾಶ ಕರೆಪ್ಪ ವ್ಯಾಪಾರಗಿ(44) ಹಾಗೂ ಗೋಕಾಕ ತಾಲೂಕಿನ ರಾಜನಕಟ್ಟೆ ಗ್ರಾಮದ ಭರಮಪ್ಪ ಭೀಮಪ್ಪ ಬಾದರವಾಡಿ(39) ಎಂಬಾತರು ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಈ ಇಬ್ಬರೂ ಸುರಭಿ …
Read More »