Breaking News

Yearly Archives: 2021

ಕೋವಿಡ್ ನಿಯಂತ್ರಣ ವೈಫಲ್ಯ: ವಿಜಯಪುರ ಡಿಎಚ್‌ಒ ಡಾ.ಯರಗಲ ಕಡ್ಡಾಯ ರಜೆ

ವಿಜಯಪುರ: ಕೋವಿಡ್ ಎರಡನೇ ಅಲೆಯ ವೇಗ ಹೆಚ್ಚಿದ್ದು, ಸೋಂಕು ನಿಯಂತ್ರಣ ವಿಷಯದಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದಲ್ಲಿ ವಿಜಯಪುರ ಡಿಎಚ್‌ಒ ಡಾ.ರಾಜಕುಮಾರ ಯರಗಲ ಅವರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಯ. ಶಿವಶಂಕರ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಡಾ.ರಾಜಕುಮಾರ ಅವರನ್ನು ಕಡ್ಡಾಯ ರಜೆ ಮೇಲೆ …

Read More »

ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಪಾಲರ ಹುದ್ದೆಗಾಗಿ ಲಂಚ ನೀಡಿರುವುದು ದುರದೃಷ್ಟಕರ!

ಬೆಂಗಳೂರು: ಉನ್ನತ ಹುದ್ದೆಗಳನ್ನು ಕೊಡಿಸುವುದಾಗಿ ಗಣ್ಯ ವ್ಯಕ್ತಿಗಳನ್ನು ನಂಬಿಸಿ ವಂಚಿಸಿದ್ದ ಆ‌ರೋಪದಲ್ಲಿ ಬಂಧಿತನಾಗಿರುವ ಯುವರಾಜ್‌ ಸ್ವಾಮಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ನ್ಯಾಯಪೀಠ, ಜಾಮೀನು ನೀಡಲು ನಿರಾಕರಿಸಿದೆ. ಅಲ್ಲದೆ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರೇ ರಾಜ್ಯಪಾಲರ ಹುದ್ದೆಗಾಗಿ ಅರ್ಜಿದಾರನಿಗೆ ಲಂಚ ನೀಡಿರುವುದು ದುರದೃಷ್ಟಕರ, ಇದರಿಂದ ನ್ಯಾಯಮೂರ್ತಿಯ ಹುದ್ದೆಯ ಘನತೆ ಕುಗ್ಗಿರುವುದಲ್ಲದೆ, ರಾಜ್ಯಪಾಲರ ಹುದ್ದೆಯ ಘನತೆಗೂ ಕುಂದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪೊಲೀಸರು …

Read More »

ಕೋವಿಡ್ ರೋಗಿಗಳ ಪಾಲಿಗೆ ‘ಹೀರೋ’ : ಆಯಂಬುಲೆನ್ಸ್ ಚಾಲಕನಾದ ಖಳನಟ ಅರ್ಜುನ್ ಗೌಡ

ಬೆಂಗಳೂರು: ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ದೇಶ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ. ಆದರೆ, ಇಲ್ಲೊಬ್ಬ ಚಂದನವನದ ನಟ ಆಯಂಬುಲೆನ್ಸ್ ಚಾಲಕನಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಶಿವರಾಜ್ ಕುಮಾರ್ ನಟನೆಯ ರುಸ್ತುಂ, ಯುವರತ್ನ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿರುವ ಅರ್ಜುನ್, ಈಗ ರಿಯಲ್ ಲೈಫಿನಲ್ಲಿ ಹೀರೋ ಆಗಿದ್ದಾನೆ. ಇವರು ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲು ಆಯಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ …

Read More »

18 ವರ್ಷ ಮೇಲ್ಪಟ್ಟವರು ನಾಳೆ ಲಸಿಕೆಗಾಗಿ ಆಸ್ಪತ್ರೆಗೆ ಬರಬೇಡಿ: ಸಚಿವ ಸುಧಾಕರ್

ಬೆಂಗಳೂರು: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ.1ರಿಂದಲೇ ಕೋವಿಡ್ ಲಸಿಕೆ ನೀಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಲು ನಾಳೆ ಆಸ್ಪತ್ರೆಗಳಿಗೆ ಬರಬೇಡಿ. ನಮಗೆ ಕಂಪೆನಿಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬೇಕಾದಷ್ಟು ಲಸಿಕೆ ತಲುಪಿಲ್ಲ. ಯಾವಾಗ ಲಸಿಕೆ ಬರುತ್ತಿದೆ ಎಂಬ ಮಾಹಿತಿಯೂ ಇಲ್ಲ ಎಂದರು. ಹೀಗಾಗಿ ಲಸಿಕೆ ಪಡೆಯಲು 18ರಿಂದ 45 ವರ್ಷದವರೆಗಿನವರು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡವರು …

Read More »

ಗಮನಿಸಿ: ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ

ಬೆಂಗಳೂರು: ಕೋವಿಡ್ -19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಿ, ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ಎಪ್ರಿಲ್ 15 ರೊಳಗಾಗಿ …

Read More »

ಕೋವಿಡ್-19: ಪರೀಕ್ಷಾ ವರದಿ ವಿಳಂಬ, ಆತಂಕದಲ್ಲಿಯೇ ದಿನ ದೂಡುತ್ತಿರುವ ಬೆಂಗಳೂರು ಜನತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದು, ಈ ನಡುವೆ ಅಲ್ಪ ಸ್ವಲ್ಪ ಲಕ್ಷಣಗಳು ಕಂಡು ಬಂದರೂ ಆತಂಕಕ್ಕೊಳಗಾಗುತ್ತಿರುವ ಜನರು ಸ್ಥಳೀಯ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳಿಗೆ ತೆರಳಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಈ ನಡುವೆ ಲ್ಯಾಬ್ ಗಳ ವರದಿ ತಡವಾಗಿ ಬರುತ್ತಿದ್ದು, ಇದು ಜನತೆಯ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ನಗರದಲ್ಲಿ ಸೋಂಕು ಹೆಚ್ಚಾದಂತೆ ಲ್ಯಾಬ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಹಲವು ಲ್ಯಾಬ್ ಗಳು ಪರೀಕ್ಷಾ …

Read More »

ಕೊರೊನಾ ಪ್ರಕರಣಗಳಲ್ಲಿ ದೇಶದ ಟಾಪ್ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಬೆಂಗಳೂರು: ಕೊರೊನಾ ಪ್ರಕರಣಗಳಲ್ಲಿ ದೇಶದ ಟಾಪ್ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹೀಗಿದ್ರೂ ರಾಜ್ಯದ ಜನಕ್ಕೆ ಸ್ವಲ್ಪವೂ ಸೀರಿಯಸ್‍ನೆಸ್ ಬಂದಿಲ್ಲ. ಮೊದಲ ದಿನ ಜನತಾ ಕರ್ಫ್ಯೂ ಸಕ್ಸಸ್ ಮಾಡಿದ ಜನ, ಎರಡನೇ ದಿನ ಕ್ಯಾರೆ ಅನ್ಲಿಲ್ಲ. ಹಾಗಾದ್ರೆ ರಾಜ್ಯದಲ್ಲಿ ಜನತಾ ಲಾಕ್‍ಡೌನ್ ಮುಂದುವರಿಯುತ್ತಾ..? ಹೀಗೊಂದು ಸುಳಿವನ್ನ ಸರ್ಕಾರವೇ ನೀಡಿದೆ. ರಾಜ್ಯದಲ್ಲಿ ಜನತಾ ಕರ್ಫ್ಯೂ ಇಷ್ಟಕ್ಕೆ ಮುಗಿಯುವ ಲಕ್ಷಣ ಕಾಣಿಸ್ತಿಲ್ಲ. ಮೇ 12ಕ್ಕೆ ಅಂತ್ಯವಾಗಬೇಕಿರುವ ಜನತಾ ಲಾಕ್‍ಡೌನ್ ಅನ್ನು ಮೇ 19ವರೆಗೆ …

Read More »

ಪಾಸಿಟಿವ್ ಇದ್ದರೂ ವಿಷಯ ಮುಚ್ಚಿಟ್ಟು ಕೆಲಸಕ್ಕೆ ಬರುತ್ತಿದ್ದ ಫಾರ್ಮಾಸಿಸ್ಟ್; ಜಿಲ್ಲಾಧಿಕಾರಿಯಿಂದ ಅಮಾನತು ಆದೇಶ

ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರತೆ ವೈದ್ಯಕೀಯ ವ್ಯವಸ್ಥೆಗೆ ಸವಾಲೊಡ್ಡಿದ್ದು ಸೋಂಕು ಹರಡದಂತೆ ತಡೆಗಟ್ಟುವುದಕ್ಕೆ ಸರ್ಕಾರ ಕಠಿಣ ನಿಯಮಾವಳಿಗಳ ಮೊರೆ ಹೋಗಿದೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದ್ದ ವ್ಯಕ್ತಿಯೇ ಬೇಜವಾಬ್ದಾರಿತನದಿಂದ ವರ್ತಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಮುಧೋಳ ತಾಲ್ಲೂಕು ಆಸ್ಪತ್ರೆಯ ಮುಖ್ಯ ಫಾರ್ಮಾಸಿಸ್ಟ್ ನಂದಕುಮಾರ ಬೋನಗೇರಿ ಎಂಬುವವರು ಕೊರೊನಾ ಪಾಸಿಟಿವ್ ಇದ್ದರೂ ವಿಷಯ ಮುಚ್ಚಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಲ್ಲರನ್ನೂ ಅಪಾಯಕ್ಕೆ ಸಿಲುಕಿಸಿದ್ದಾರೆ. …

Read More »

ಪ್ರಾಣ ಉಳಿಸಬೇಕಾದವನೇ ರೆಮಿಡಿಸಿವಿರ್ ಬ್ಲಾಕ್ ಮಾಡಿ ಅರೆಸ್ಟ್ ಆದ

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ ರೆಮಿಡಿಸಿವಿರ್​​​ಅನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಆಸ್ಪತ್ರೆಯ ಸ್ಟಾಪ್ ನರ್ಸ್ ಮತ್ತು ಆಯುರ್ವೇದ ಆಸ್ಪತ್ರೆಯ ವೈದ್ಯನೊಬ್ಬನ ಸೇರಿದಂತೆ ಆರು ಮಂದಿಯ ಬಂಧನವಾಗಿದ್ದು, ಒಟ್ಟು 18 ರೆಮಿಡಿಸಿವಿರ್ ಇಂಜಕ್ಷನ್​​ಗಳನ್ನು ಸಿಸಿಬಿ ಅಧಿಕಾರಿಗಳು ಸೀಜ್​ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಸುನಾಮಿ ದಿನೇ ದಿನೇ ವ್ಯಪಿಸುತ್ತಿದ್ದು, ವೈದ್ಯರು, ರೋಗಿಗಳು ರೆಮ್ಡೆಸಿವಿರ್ ಪಡೆಯಲು ಪರದಾಡುವಂತಾಗಿದೆ. ವಾರಗಳ ಕಾಲ ಅಲೆದರೂ ಔಷಧಿ …

Read More »

ಪಳಗಿದ ರಾಜಕಾರಣಿಗಳಿಗೆ ಮತದಾನದ ದಿನವೇ ಜನರ ನಾಡಿಮಿಡಿತ ಅರ್ಥ ,ಫಲಿತಾಂಶಕ್ಕೂ ಮುನ್ನವೇ ಮಂದಹಾಸ ಬೀರಿದ ಸತೀಶ್ ಜಾರಕಿಹೊಳಿ!

ಪಳಗಿದ ರಾಜಕಾರಣಿಗಳಿಗೆ ಮತದಾನದ ದಿನವೇ ಜನರ ನಾಡಿಮಿಡಿತ ಅರ್ಥವಾಗುತ್ತದೆ ಎನ್ನುವ ಮಾತಿದೆ. ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿನ್ನೆ (ಏ 17) ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮತದಾನದ ಪ್ರಮಾಣ ಹೆಚ್ಚಾದರೆ ಒಂದು ಪಕ್ಷಕ್ಕೆ ಗೆಲುವು, ಕಮ್ಮಿಯಾದರೆ ಇನ್ನೊಂದು ಪಕ್ಷಕ್ಕೆ ಸೋಲು ಎನ್ನುವ ಲೆಕ್ಕಾಚಾರ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ. ಇದಕ್ಕೆ, ಕೊಡಬಹುದಾದ ಉದಾಹರಣೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯ ನಾಲ್ಕು ಲೋಕಸಭಾ ಕ್ಷೇತ್ರದ …

Read More »