Breaking News

Yearly Archives: 2021

ಸಚಿವರೇ ಕಮಿಷನ್ ತಿಂದಿದ್ದು ಸಾಕು, ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಕೊಡಿ, ಜನರ ಕಷ್ಟ ನೋಡಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು : ‘ಸಚಿವರೇ ಕಮಿಷನ್ ಲೆಕ್ಕ ಹಾಕಿಕೊಂಡು ಕೂತಿದ್ದೀರಾ? ಕಮಿಷನ್ ಹೊಡೆದಿದ್ದು ಸಾಕು. ಹಿಂದೆ ತಿಂದಿದ್ದು ಸಾಕು, ಮುಂದೆ ತಿನ್ನೋದು ಸಾಕು. ಆದಷ್ಟು ಬೇಗ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿಸಿ. ಜನರ ಕಷ್ಟದ ಬಗ್ಗೆ ಗಮನ ಹರಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ‘ಕೇಂದ್ರ ಸರ್ಕಾರು 18 ರಿಂದ 45 ವರ್ಷದವರು ಕೊರೋನಾ ಲಸಿಕೆ …

Read More »

ಶ್ರೀ ಕ್ಷೇತ್ರ ಮಂತ್ರಾಲಯದ ಪೀಠಾಧಿಪತಿಗಳ ಆಪ್ತ ಕೋವಿಡ್ ಗೆ ಬಲಿ

ಮಂತ್ರಾಲಯ – ಶ್ರೀ ಕ್ಷೇತ್ರ ಮಂತ್ರಾಲಯದ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರ ಆಚಾರ್  ಅವರು ದೆಹಲಿಯಲ್ಲಿ ಇಂದು ಸಾಯಂಕಾಲ 6 ಗಂಟೆಗೆ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ವಾರದ ಹಿಂದೆ ಅವರನ್ನು ದೆಹಲಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಉಪಚಾರ ಫಲಿಸದೆ ಕೊನೆಯುಸಿರೆಳೆದರು.   ಮಂತ್ರಾಲಯ ಕ್ಷೇತ್ರ ಅಭಿವೃದ್ಧಿಗೆ ಸುಯಮೀಂದ್ರ ಆಚಾರ್  ಸೇವೆ ಅನನ್ಯ.

Read More »

ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ, ಎಲ್ಲಾ ವಿವರ ಮುಂದಿನ 24 ಗಂಟೆಯಲ್ಲಿ ಮೊಬೈಲ್ ನಲ್ಲಿ ಲಭ್ಯ

 ಬೆಳಗಾವಿ –  ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ, ಸಮಾಲೋಚಕರೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಸಜ್ಜಿತ ಜಿಲ್ಲಾ ಮಟ್ಟದ ಕೋವಿಡ್ ವಾರ್ ರೂಮ್‌ನ ಸೇವೆಯು 24×7 ಕಾರ್ಯನಿರ್ವಹಿಸುವಂತೆ ತಿಳಿಸಿದರು. ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಸ್ಥಾಪಿಸಿರುವ ತಾಲ್ಲೂಕಾ ಕೋವಿಡ್ ವಾರ್ ರೂಮ್‌ಗಳಿಂದ ಪ್ರತಿದಿನ ಕೋವಿಡ್-19 ಸೋಂಕಿತರ ಹಾಗೂ ಪ್ರಾಥಮಿಕ/ದ್ವಿತೀಯ ಸಂಪರ್ಕಿತರ ಸಂಪೂರ್ಣ ವಿವರ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ಬೆಡ್‌ಗಳ ವಿವರ, ವೆಂಟಿಲೇಟರ್‌ ಹೊಂದಿರುವ ಬೆಡ್‌ಗಳ …

Read More »

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾಭಿಪ್ರಾಯ ಕಳೆದುಕೊಂಡಿದೆ.ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಉತ್ತಮ :

ಬೆಂಗಳೂರು: ನಗರ ಸ್ಥಳಿಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲವಿಗೆ ಕಾರಣರಾದ ಮತದಾರರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾಭಿಪ್ರಾಯ ಕಳೆದುಕೊಂಡಿರುವುದು ಈ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ. ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಜನತೆಯ …

Read More »

ಭದ್ರಾವತಿ ನಗರಸಭೆ ಕಾಂಗ್ರೆಸ್ ಜಯಭೇರಿ; ಬಿಜೆಪಿ, ಜೆಡಿಎಸ್ ಗೆ ತೀವ್ರ ಹಿನ್ನಡೆ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಎ. 30 ರಂದು ನಡೆಯಿತು. ಎರಡು ಕಡೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಸಂಪಾದಿಸಿದೆ. ಅಧಿಕಾರದ ಗದ್ದುಗೆಯೇರಿದೆ. ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಹಿನ್ನಡೆ ಸಾಧಿಸಿವೆ. ಭದ್ರಾವತಿ: ನಗರಸಭೆಯ 35 ರಲ್ಲಿ, 34 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಮತ್ತೆ …

Read More »

ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸೊಹೈಲ್ ಜಮಾದಾರ ಹಾಗೂ ಬಳಗ..

ಗೋಕಾಕ: ಮೆ ಒಂದು ಇಂದು ಎಲ್ಲರಿಗೂ ಕಾರ್ಮಿಕ ದಿನಾಚರಣೆ ಆದ್ರೆ ಇಂದು ಗೋಕಾಕ ನಲ್ಲಿ ಹಾಗೂ ಸಾಹುಕಾರರ ಅಭಿಮಾನಿ ಗಳಿಗೆ ಒಂದು ವಿಶೇಷ ವಾದ ದಿನ ಹೌದು ಇಂದು ಮಾಜಿ ಸಚಿವರು ಹಾಗೂ ಗೋಕಾಕ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬ ಇಂದು ಅವರ್ ಸಾವಿರಾರು ಅಭಿಮಾನಿಗಳು ಅವರಿಗೆ ಶುಭ ಹಾರೈಕೆ ಕೋರುವ ದಿನ . ಕಾರ್ಮಿಕರ ದಿನಾ ಚರಣೆ ಯಂದೆ ಶ್ರೀ ರಮೇಶ್ ಜಾರಕಿಹೊಳಿ ಅವರ …

Read More »

ಕೊರೋನಾ ಕರ್ತವ್ಯ ನಿರತರಿಗಾಗಿ ಸಾರಿಗೆ ಸೌಲಭ್ಯ – ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು : ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ವಿಧಿಸಿದ್ದರು ಸಹ ಕೋವಿಡ್ ಗೆ ಸಂಬಂಧಪಟ್ಟ ಸೇವಾ ಚಟುವಟಿಕೆಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳ ಸೇವೆಗೆ ಅಗತ್ಯವಾದಲ್ಲಿ ಬಸ್ಸುಗಳನ್ನು ಒದಗಿಸಲು ನಾಲ್ಕೂ ನಿಗಮಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಇಡೀ ರಾಜ್ಯವೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ …

Read More »

ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯ

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ಎಂಟು ಹಂತಗಳ ಸುದೀರ್ಘ ಅಸೆಂಬ್ಲಿ ಚುನಾವಣೆ ಇಂದು ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ಆದೇಶದಂತೆ, ಮತದಾನ ಮುಗಿದ ನಂತರವಷ್ಟೇ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸಬಹುದಾಗಿದೆ. ವಿವಿಧ ವಾಹಿನಿಗಳು ಜಂಟಿಯಾಗಿ ಪಶ್ಚಿಮ ಬಂಗಾಳದಲ್ಲಿ ವಿಜಯ ಸಾಧ್ಯತೆ ಯಾರಿಗೆ ಎನ್ನುವುದರ ಬಗ್ಗೆ ಫಲಿತಾಂಶವನ್ನು ನೀಡುತ್ತಿದೆ. ಕೆಲವು ವಾಹಿನಿಗಳು ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೇರುತ್ತಾರೆ ಎಂದಿವೆ. ಇನ್ನು ಕೆಲವು ವಾಹಿನಿಗಳು ಅತಂತ್ರ ಫಲಿತಾಂಶ ಬರಲಿದೆ ಎನ್ನುವ ವರದಿಯನ್ನು ಪ್ರಕಟಿಸುತ್ತಿದೆ. ಒಟ್ಟು …

Read More »

8 ಕೋಟಿ ವಲಸೆ ಕಾರ್ಮಿಕರಿಗೆ ಊಟ, ಸಾರಿಗೆ ವ್ಯವಸ್ಥೆಗಾಗಿ ಮನವಿ

ಕೋವಿಡ್ 19 ಕಾರಣದಿಂದ ವಲಸೆ ಮತ್ತು ಅಪಾಯದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಪಡಿತರ ಮತ್ತು ಆಹಾರ ಭದ್ರತೆಯ ಜೊತೆಗೆ ಕನಿಷ್ಠ ದರದಲ್ಲಿ ತವರಿಗೆ ಮರಳಲು ಅನುಕೂಲ ಕಲ್ಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿದೆ. ಸಾಮಾಜಿಕ ಕಾರ್ಯಕರ್ತರಾದ ಹರ್ಷ್‌ ಮಂದರ್‌, ಅಂಜಲಿ ಭಾರದ್ವಾಜ್‌ ಮತ್ತು ಜಗದೀಪ್‌ ಚೊಕ್ಕರ್‌ ಅವರು ಸುಪ್ರೀಂ ಕೋರ್ಟ್‌ಗೆ ತುರ್ತು ಮನವಿ ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರಗಳು ವಿಕೇಂದ್ರೀಕೃತ ರೀತಿಯಲ್ಲಿ ಲಾಕ್‌ಡೌನ್‌ ಮತ್ತು ಕರ್ಫ್ಯೂ …

Read More »

ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನ್, ಲ್ಯಾಬ್ ಸಮಸ್ಯೆಗಳನ್ನು ಬಗೆಹರಿಸಿ : ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ : ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೇ ಸಿಟಿ ಸ್ಕ್ಯಾನ್ ಮಷೀನ್ ಕೆಟ್ಟುನಿಂತಿದೆ. ಲ್ಯಾಬ್ ಗಳ ಸಮಸ್ಯೆ ಇದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಕೂಡಲೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದ್ದಾರೆ. ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ರವರ ನೇತೃತ್ವದಲ್ಲಿ ನಡೆದ ಕೋವಿಡ್ …

Read More »