ಬೆಳಗಾವಿ: ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಜಿಲ್ಲಾ ಕೋವಿಡ್ 19 ವಾರ್ ರೂಂ’ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದರು. ‘ಇಲ್ಲಿ ನೀಡಲಾಗಿರುವ ಹಲವು ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜಿಲ್ಲೆಯ ಜನರು ಮಾಹಿತಿ ಹಾಗೂ ಸಹಾಯಕ್ಕಾಗಿ ಪರದಾಡುವಂತಾಗಿದೆ. ಇದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸೂಚಿಸಿದರು. ‘ಕೋವಿಡ್ ಸಹಾಯವಾಣಿ ಸಂಖ್ಯೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ತಕ್ಷಣ ಹಾಗೂ …
Read More »Yearly Archives: 2021
ಬೆಳ್ಳಂಬೆಳ್ಳಿಗ್ಗೆ ಗಂಗಾವತಿ ನಗರಕ್ಕೆ ಕರಡಿ ಪ್ರವೇಶ: ಮೂರು ಜನರ ಮೇಲೆ ಮಾರಣಾಂತಿಕ ದಾಳಿ
ಗಂಗಾವತಿ: ಗಂಗಾವತಿ ನಗರದ ಬಳಿಗೇರ್ ಓಣಿ ಬಸ್ ನಿಲ್ದಾಣದ ಹಿಂದಿನ ಓಣಿಗೆ ಕರಡಿಯೊಂದು ನುಗ್ಗಿ ಇಬ್ಬರು ಹೆಣ್ಣುಮಕ್ಕಳು ಹಾಗೂ ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನೋರ್ವನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಘಟನೆ ಗಂಗಾವತಿಯಲ್ಲಿ ರವಿವಾರ ಬೆಳ್ಳಂಬೆಳ್ಳಿಗ್ಗೆ ಜರುಗಿದೆ. ಗಂಗಾವತಿ ಬಸ್ ಡಿಪೋ ಕಡೆಯಿಂದ ಆಗಮಿಸಿದ ಕರಡಿ ಬೆಳ್ಳಿಗ್ಗೆ ಮನೆಯ ಮುಂದೆ ಕೆಲಸ ಮಾಡುತ್ತಿದ್ದ ನಂದಾಬಾಯಿ (59 ವ), ಈಶ್ವರಮ್ಮ (60 ವ) ಹಾಗೂ ನೆಹರು ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಶೇರ್ …
Read More »ಆಮ್ಲಜನಕ ಟ್ಯಾಂಕರ್ ಗಳಿಗೆ2 ತಿಂಗಳು ಟೋಲ್ ಶುಲ್ಕ ವಿನಾಯಿತಿ
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ ಮಾಡುವ ಟ್ಯಾಂಕರ್ ಗಳಿಗೆ ಹೆದ್ದಾರಿಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ದೇಶಾದ್ಯಂತ ಕೊರೊನಾ ಸೋಂಕಿತರಿಗಾಗಿ ವೈದ್ಯಕೀಯ ಆಮ್ಲಜನಕಕ್ಕೆ ಭಾರಿ ಬೇಡಿಕೆ ಇರುವ ಕಾರಣ ತುರ್ತು ಸೇವೆ ಎಂದು ಪರಿಗಣಿಸಲಾಗಿದ್ದು, ಎರಡು …
Read More »ಬೇಡಿಕೆಗನುಗುಣವಾಗಿ ಬಾರದ ಕೊವ್ಯಾಕ್ಸಿನ್: ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ
ಬೆಂಗಳೂರು: ರಾಜ್ಯಕ್ಕೆ ಬೇಡಿಕೆಗೆ ಅನುಗುಣವಾಗಿ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಲಾಗಿದೆ. ರಾಜ್ಯಕ್ಕೆ ಬೇಡಿಕೆ ಅನುಸಾರ ಲಸಿಕೆ ಬಾರದ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಬಳಸಲು ಸರ್ಕಾರ ನಿರ್ಧರಿಸಿದೆ. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರಿಗೆ ಮಾತ್ರ ಇದೆ ಲಸಿಕೆಯನ್ನು ಎರಡನೇ ಡೋಸ್ ಪಡೆಯುವವರಿಗೆ ಕೊಡಲಾಗುತ್ತದೆ. 45 ವರ್ಷ ಮೇಲ್ಪಟ್ಟ ಮೊದಲ ಡೋಸ್ ಪಡೆಯುವವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು ಎಂದು …
Read More »ಖಾನಾಪುರ ಪಟ್ಟಣದಲ್ಲಿ ಮಂಗಳವಾರದಿಂದ ಸಂಪೂರ್ಣ ಲಾಕ್ ಡೌನ್: ಕಿರಾಣಿ, ದಿನಸಿ ಸೇರಿದಂತೆ ಎಲ್ಲ ವ್ಯಾಪಾರ-ವ್ಯವಹಾರಗಳಿಗೂ ನಿರ್ಬಂಧ
ಖಾನಾಪುರ: ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕೋವಿಡ್ ಸೊಂಕನ್ನು ಹತ್ತಿಕ್ಕಲು ಪಟ್ಟಣದಲ್ಲಿ ಮಂಗಳವಾರ ಮೇ.೧೧ರಿಂದ ಶನಿವಾರದವರೆಗೆ ಐದು ದಿನಗಳ ಕಾಲ ಎಲ್ಲ ರೀತಿಯ ವ್ಯಾಪಾರ -ವಹಿವಾಟನ್ನು ನಿಷೇಧಿಸಿ ಖಡಕ್ ಲಾಕ್ ಡೌನ್ ಘೋಷಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ಥಳೀಯ ಆಡಳಿತ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಣದ ವಿವಿಧ ಜಾತಿ, …
Read More »270 ಆಕ್ಸಿಜನ್ ಬೆಡ್ ಆರಂಭಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವುದನ್ನು ಮನಗೊಂಡ ಜಿಲ್ಲಾಡಳಿತ ಸೋಂಕಿತರ ಚಿಕಿತ್ಸೆಗಾಗಿ 270 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಗೆ ನಿರ್ಧರಿಸಿದೆ. ಇದಲ್ಲದೇ, ಕೋವಿಡ್‌ಗಾಗಿ ಸದ್ಯ ಕೊಪ್ಪಳ ಮೆಡಿಕಲ್ ಕಾಲೇಜಿನ 142 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಬೆಡ್‌ಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಮೊದಲ ಅಲೆ ಹಾಗೂ ಎರಡನೆ ಅಲೆಯಲ್ಲಿ ಆರಂಭಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಇರಲಿಲ್ಲ. ಕ್ರಮೇಣ ಸೋಂಕಿನ ಆರ್ಭಟವು ಜೋರಾಗುತ್ತಿದ್ದು, ಅದರೊಟ್ಟಿಗೆ ಸಾವಿನ ಸಂಖ್ಯೆಯು ದಿನೇ …
Read More »ಕೋವಿಡ್ ನಿರ್ವಹಣೆ: ಸರ್ಕಾರದ ವೈಫಲ್ಯಕ್ಕೆ ಖಂಡಿಸಿ ಆನ್‌ಲೈನ್ ಚಳವಳಿ
ವಿಜಯಪುರ: ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ಶನಿವಾರ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸಲಾಯಿತು. ಕೋವಿಡ್‌ನಿಂದ ಹಳ್ಳಿ, ನಗರಗಳಲ್ಲಿ ಸಾಕಷ್ಟು ಜನರ ಸಾವು ನೋವುಗಳನ್ನು ಸಂಭವಿಸುತ್ತಿದ್ದರೂ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು. ರಾಜಧಾನಿ ಬೆಂಗಳೂರಿನಿಂದ ಹಿಡಿದು ತಾಲ್ಲೂಕು ಮಟ್ಟದವರೆಗೆ ಆಮ್ಲಜನಕ, ಹಾಸಿಗೆ, ಔಷಧ, ಅಂಬುಲೆನ್ಸ್, …
Read More »‘ಸಿಟಿ ಸ್ಕ್ಯಾನ್’ ಮಾಡಿಸುವ ರೋಗಿಗಳಿಗೆ ಬಿಗ್ ಶಾಕ್ : ‘ಸಿಟಿ ಸ್ಕ್ಯಾನಿಂಗ್’ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದ ಆದೇಶ
ಬೆಂಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ಗೆ ರೂ.1,500 ದರ ನಿಗದಿ ಪಡಿಸಿದ್ದ ರಾಜ್ಯ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ. ಹೌದು, ಸಿಟಿ ಸ್ಕ್ಯಾನ್ ಮಾಡಿಸುವ ರೋಗಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಹೆಚ್ ಆರ್ ಸಿ ಸ್ಕ್ಯಾನ್ ರೇಟ್ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ನಿನ್ನೆ ಎಲ್ಲರಿಗೂ ಸಿಟಿ ಸ್ಕ್ಯಾನ್ ಗೆ 1,500 ರೂಪಾಯಿ ದರ ನಿಗದಿ ಮಾಡಿದ್ದ ಸರ್ಕಾರ ಇದೀಗ ಮತ್ತೊಂದು ಆದೇಶದಲ್ಲಿ ಬಿಪಿಎಲ್ ಕಾರ್ಡ್ …
Read More »ಚಿಕ್ಕ-ಪುಟ್ಟ ಅಪರಾಧಗಳಿಗೆ ಬಂಧಿಸ್ಬೇಡಿ, ಜೈಲಿನಲ್ಲಿ ಜನದಟ್ಟಣೆ ಆಗ್ತಿದೆ : ಪೊಲೀಸರಿಗೆ ಸುಪ್ರೀಂ ಸೂಚನೆ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಆಗತ್ಯವಿದ್ದರೇ ಮಾತ್ರ ಬಂಧಿಸಿ ಎಂದು ಪೊಲೀಸರಿಗೆ ಸೂಚಿಸಿರುವ ಸುಪ್ರೀಂಕೋರ್ಟ್, ಅಗತ್ಯವಿಲ್ಲದಿದ್ರೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಉಳ್ಳ ಅಪರಾಧಗಳಲ್ಲಿ ಆರೋಪಿಗಳನ್ನ ಬಂಧಿಸಬೇಡಿ. ಇನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ರಚಿಸಿರುವ ಉನ್ನತ ಸಮಿತಿಗಳಿಗೆ ಸೋಂಕಿಗೆ ಒಳಪಡುವ ಅಪಾಯವಿರುವ ಕೈದಿಗಳನ್ನ ಗುರುತಿಸಿ ಎಂದಿದೆ. ಇನ್ನು …
Read More »ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ
ನಿನ್ನೆ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ದೆಹಲಿಗೆ ಹೋಗಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಎಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ.ವೈ. ವಿಜಯೇಂದ್ರ, ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ಸರಕಾರದಿಂದ ಬಂದಿಲ್ಲದಿದ್ದರೂ ಪಕ್ಷದ ಮೂಲಗಳ ಪ್ರಕಾರ ಕೇಂದ್ರದ ನಾಯಕರು ಮೂರ್ನಾಲ್ಕು …
Read More »