Breaking News

Yearly Archives: 2021

ಕೊಪ್ಪಳ ಜಿಲ್ಲೆ 5 ದಿನ ಕಂಪ್ಲೀಟ್ ಲಾಕ್ ಡೌನ್

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, 5 ದಿನ ಲಾಕ್ ಡೌನ್ ಜಾರಿ ಮಾಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮೇ 17ರಿಂದ ಐದು ದಿನ ಲಾಕ್ ಡೌನ್ ಜಾರಿಗೆ ನಿರ್ಧರಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಅಗತ್ಯ …

Read More »

ಸರಕಾರ ತಪಾಸಣೆ ಕಡಿಮೆಗೊಳಿಸಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎನ್ನುತ್ತಿದೆ: ಎಂ.ಬಿ.ಪಾಟೀಲ್ ಆರೋಪ

ಬೆಂಗಳೂರು, ಮೇ 15: ರಾಜ್ಯದಲ್ಲಿ ಕೊರೋನ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರಕಾರ ಮೌಖಿಕ ಆದೇಶದ ಮೂಲಕ ತಪಾಸಣೆಗಳನ್ನು ಕಡಿಮೆಗೊಳಿಸಲಾಗಿದೆ. ಕರ್ನಾಟಕದಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಅಂಕಿ ಅಂಶಗಳ ತೋರಿಸುವ ಮೂಲಕ ರಾಜ್ಯದ ಜನತೆಯ ಆರೋಗ್ಯದ ಸ್ಥಿತಿಯನ್ನು ತೀರ ಗಂಭೀರವಾಗಿಸುವತ್ತ ಸರಕಾರದ ಮುನ್ನಡೆದಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಪ್ರಕರಣಗಳು …

Read More »

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕುಟುಂಬದ ಎಲ್ಲರಿಗೂ ಕೊರೊನಾ ಸೋಂಕು

ಮೈಸೂರು, : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಇಡೀ ಕುಟುಂಬದ ಸದಸ್ಯರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದ್ದು, ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಮಾತ್ರ ನೆಗೆಟಿವ್ ವರದಿ ಬಂದಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಂದೆ-ತಾಯಿ, ಅತ್ತೆ-ಮಾವ ಹಾಗೂ ಪತಿ ಎಲ್ಲರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲರೂ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕುಟುಂಬಸ್ಥರಿಗೆಲ್ಲ ಪಾಸಿಟಿವ್ ಆಗಿದ್ದರಿಂದ ಡಿಸಿ ರೋಹಿಣಿ ಸಹ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ …

Read More »

ಶಾಕಿಂಗ್ ನ್ಯೂಸ್: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮನೆಯಲ್ಲೇ 600 ಮಂದಿ ಸಾವು..!

ಬೆಂಗಳೂರು, ಮೇ 15- ಸಮಯಕ್ಕೆ ಸರಿಯಾಗಿ ಸಿಗದ ಬೆಡ್, ಚಿಕಿತ್ಸೆ ವಿಳಂಬದಿಂದಾಗಿ ಕಳೆದ 1 ತಿಂಗಳಿಂದ ರಾಜ್ಯದಲ್ಲಿ ಸುಮಾರು 600 ರೋಗಿಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬ‌ ಆಘಾತಕಾರಿ ಸುದ್ದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ‌ಇಲಾಖೆಯಿಂದ ಹೊರಬಿದ್ದಿದೆ. ಏಪ್ರಿಲ್ 13 ರಿಂದ 30ರವರೆಗೆ ಸುಮಾರು 120 ಇದ್ದ ಸಾವಿನ ಸಂಖ್ಯೆ ಮೇ 1 ರಿಂದ ಮೇ 13ರವರೆಗೆ ಇದ್ದಕ್ಕಿದ್ದಂತೆ 479ಕ್ಕೇರಿದೆ, ಮೇ 12 ರಂದು ಅತಿ ಹೆಚ್ಚು ಸಾವು ದಾಖಲಾಗಿದ್ದು, …

Read More »

ದೇಶದ ಕೊರೊನಾ ಸ್ಥಿತಿ ಕಂಡು ಆತಂಕ ವ್ಯಕ್ತಪಡಿಸುತ್ತಿರುವ ವಿಶ್ವ ಸಂಸ್ಥೆ!

ನವದೆಹಲಿ : ಭಾರತ ದೇಶದಲ್ಲಿ ಕೊರೊನಾ ಸ್ಥಿತಿ ಭೀಕರವಾಗುತ್ತಿದೆ. ಅಲ್ಲಿನ ಕೆಲವು ರಾಜ್ಯಗಳಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳು ಆತಂಕ ಮೂಡಿಸುತ್ತಿವೆ. ಇದನ್ನು ಗಮನಿಸಿದರೆ ಎರಡನೇ ವರ್ಷ ಇನ್ನೂ ಭಯನಕವಾಗಿರುವ ಬಗ್ಗೆ ಎಚ್ಚರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಆತಂಕ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಕುರಿತು ಮಾತನಾಡಿ, ಭಾರತದ ಪರಿಸ್ಥಿತಿಗೆ ವಿಶ್ವ ಸಂಸ್ಥೆ ಸ್ಪಂದಿಸುತ್ತಿದೆ. ಸಾವಿರಾರು ಆಕ್ಸಿಜನ್ ಕಾನ್ಸಟ್ರೇಟರ್ ಗಳು, ಮೊಬೈಲ್ ಫೀಲ್ಡ್ …

Read More »

ರೆಮ್‌ಡಿಸಿವಿರ್‌ ಸಂಗ್ರಹಿಸುವವರ ವಿರುದ್ಧ ಗೂಂಡಾ ಕಾಯ್ದೆ: ಸ್ಟಾಲಿನ್‌ ಎಚ್ಚರಿಕೆ

ಚೆನ್ನೈ: ‘ಕೋವಿಡ್‌ ಚಿಕಿತ್ಸೆಗೆ ಬಳಸಲಾಗುತ್ತಿರುವ ರೆಮ್‌ಡಿಸಿವಿರ್‌ ಔಷಧಿಯನ್ನು ಸಂಗ್ರಹಿಸುವುದು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶನಿವಾರ ಹೇಳಿದರು. ‘ಕೋವಿಡ್‌ ಪ್ರಸರಣವನ್ನು ತಡೆಯಲು ಹೇರಲಾಗಿರುವ ಲಾಕ್‌ಡೌನ್‌ ಎಂಬ ‘ಕಹಿ ಗುಳಿಗೆ’ಯನ್ನು ಸಾರ್ವಜನಿಕರು ಸ್ವೀಕರಿಸಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವು ಸಮಾಜ ಘಾತುಕ ವ್ಯಕ್ತಿಗಳು ರೆಮ್‌ಡಿಸಿವಿರ್‌ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಆಮ್ಲಜನಕ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಯಲ್ಲಿ …

Read More »

ಆರ್ಡರ್​ ಮಾಡಿದ್ದ ಮೌಥ್​​ವಾಶ್ ಬಂದಿದ್ದು ರೆಡ್​ಮಿ ನೋಟ್​ 10 ಫೋನ್​

ಮುಂಬೈ: ಆನ್​ಲೈನ್​ ಶಾಪಿಂಗ್​ ಅಮೇಜಾನ್​.ಕಮ್​ನಲ್ಲಿ ಕೊಲ್ಗೇಟ್​ ಮೌಥ್​​ವಾಶ್ ಆರ್ಡರ್​ ಮಾಡಿದ್ದ ಮುಂಬೈ ನಿವಾಸಿ, ಡೆಲಿವರಿ ಬಾಯ್​ ತಂದುಕೊಂಡ ಆರ್ಡರ್​ ಪ್ಯಾಕೇಜ್​ ತೆರೆದಾಗ ಅಚ್ಚರಿಯೇ ಕಾದಿತ್ತು. ಲೋಕೇಶ್​ ದಗಾ ಅವರು ತಾವು ಮೌಥ್​ವಾಶ್​ ಬುಕ್​ ಮಾಡಿದ್ದಾಗಿ ಅದಕ್ಕೆ ಸಂಬಂಧಿಸಿ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನನ್ನ ಆರ್ಡರ್​ ಬದಲಾವಣೆ ಆಗಿರುವುದಾಗಿ ಸೆಕ್ಯುರಿಟಿ ಗಾರ್ಡ್​ ತಿಳಿಸಿದರು. ಪ್ಯಾಕೇಜ್​ ಚಿಕ್ಕದಾಗಿದ್ದರಿಂದ ನನಗೂ ಆಶ್ಚರ್ಯವಾಯಿತು. ತೆಗೆದು ನೋಡಿದಾಗ ಮೌಥ್​ವಾಶ್​ ಬದಲು ರೆಡ್​ಮಿ ನೋಟ್​ 10 …

Read More »

ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ – ಶಾಸಕ, ಡಿಎಚ್‍ಒಗೆ ತರಾಟೆ

ಧಾರವಾಡ: ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ ತೊರಿದ ಶಾಸಕ ಹಾಗೂ ಡಿಎಚ್‍ಒ ಮೇಲೆ ಅಳ್ನಾವರ ಪಟ್ಟಣ ಪಂಚಾಯತಿ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಧಾರವಾಡ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆಯಲ್ಲಿ ಅಳ್ನಾವರದಲ್ಲಿ ನಡೆದಿದ್ದ ಸಭೆಯಲ್ಲಿ ಪಟ್ಟಣದಲ್ಲಿ ಹೆಚ್ಚಾಗಿರುವ ಕೊರೊನಾ ಬಗ್ಗೆ ಪ್ರಸ್ತಾಪಿಸಿದ ಪಟ್ಟಣ ಪಂಚಾಯತಿ ಸದಸ್ಯರು, ಈಗ ಬಂದು ಸಭೆ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ. ತಾಲೂಕು ಕೇಂದ್ರವಾಗಿದ್ದರೂ ಆರೋಗ್ಯ …

Read More »

Dharwad 2 ವಾರದಲ್ಲಿ ಒಂದೇ ಗ್ರಾಮದ 13 ಜನ ಸಾವು- ದೇವರ ಮೊರೆ ಹೋದ ಗ್ರಾಮಸ್ಥರು

ಧಾರವಾಡ: ಕೇವಲ ಎರಡು ವಾರದಲ್ಲಿ ಒಂದೇ ಗ್ರಾಮದ 13 ಜನ ಸಾವನ್ನಪ್ಪಿದ್ದು, ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ತಾಲೂಕಿನ ಮನಸೂರ ಗ್ರಾಮದಲ್ಲಿ ಎರಡು ವಾರದಲ್ಲಿ 13 ಜನ ಸಾವನ್ನಪ್ಪಿದ್ದು, ಇದರಲ್ಲಿ 2 ಜನ ಕೋವಿಡ್‍ದಿಂದ ಸಾವನ್ನಪ್ಪಿದರೆ, 11 ಜನ ಇತರೆ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಭಯ ಪಡುತಿದ್ದಾರೆ. ಮನೆ ಬಾಗಿಲು ಹಾಕಿಕೊಂಡು ಜನ ಭಯದಿಂದಲೇ ಒಳಗೆ ಕುಳಿತಿದ್ದಾರೆ. ಮತ್ತೊಂದೆಡೆ …

Read More »

ಎರಡು ಡೋಸ್ ಪಡೆದಿದ್ದ ಹುಕ್ಕೇರಿ ಮೂಲದ ಮಂಗಳೂರು ಪೊಲೀಸ್ ಬಲಿ

ಮಂಗಳೂರು: ಎರಡು ಡೋಸ್ ಲಸಿಕೆ ಪಡೆದಿದ್ದ ಮಂಗಳೂರಿನ ಪೊಲೀಸ್ ಸಿಬ್ಬಂದಿ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಮಂಗಳೂರು ಮೀಸಲು ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಶಿಂಗೆ ಮೃತಪಟ್ಟವರು. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇವರು ಮಾಜಿ ಸೈನಿಕರು. ಕೊರೊನಾ ಪಾಸಿಟಿವ್ ಬಂದಿದ್ದ ಇವರು ಕಳೆದ ಎರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹುಅಂಗಾಂಗ ವೈಫಲ್ಯಗೊಂಡು ಬಳಲುತ್ತಿದ್ದ ಇವರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರು. ಇವರ ಸಾವಿಗೆ ಕೊರೋನಾ …

Read More »