ಹುಬ್ಬಳ್ಳಿ: ಕಪ್ಪು ಶಿಲೀಂಧ್ರ ಸೋಂಕು ಕಡಿಮೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರಿಗೆ ಉಚಿತವಾಗಿ ಸರಿಯಾದ ಚಿಕಿತ್ಸೆ ಕೊಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ನಿಂದ ಸಾವಿನ ಪ್ರಮಾಣ ಜಾಸ್ತಿ ಆಗಿಲ್ಲ. ವರ್ಷಕ್ಕೆ 10 ಜನ ಇರುತ್ತಾ ಇದ್ದರು. ಆದರೆ ಈಗ 250 ಜನ ಸೋಂಕಿತರು ರಾಜ್ಯದಲ್ಲಿ ಇದ್ದಾರೆ. ಹೀಗಾಗಿ ಅವರಿಗೆಲ್ಲ ಎಷ್ಟು ಔಷಧಿ ಬೇಕೋ ಇವೆಲ್ಲವನ್ನು ಸರ್ಕಾರ ನೀಡಲಿದೆ …
Read More »Yearly Archives: 2021
ಕೊರೊನಾ ಸೋಂಕಿಗೆ ಆಯುರ್ವೇದ ಔಷಧ : ವೈದ್ಯನ ಮನೆ ಮುಂದೆ ಮುಗಿಬಿದ್ದ ಜನರು
ಹೈದರಾಬಾದ್: ಕೊರೊನಾ ಸೋಂಕಿಗೆ ವೈದ್ಯರೊಬ್ಬರು ಆಯುರ್ವೇದ ಔಷಧವೊಂದನ್ನು ಕಂಡುಹಿಡಿದಿದ್ದು, ಔಷಧಕ್ಕಾಗಿ ಜನರು ವೈದ್ಯನ ಮನೆ ಮುಂದೆ ಮುಗಿಬಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಆಯುರ್ವೇದ ವೈದ್ಯ ಆನಂದಯ್ಯ ಎಂಬುವವರು ಕೊರೊನಾ ಸೋಂಕಿಗೆ ಔಷಧವನ್ನು ಕಂಡು ಹಿಡಿದಿದ್ದು, ಸೋಂಕಿತರ ಚಿಕಿತ್ಸೆಗಾಗಿ ಈ ಔಷಧ ನೀಡುತ್ತಿದ್ದಾರೆ. ಇನ್ನು ಔಷಧಿಗಾಗಿ ಜನರು ಆಗಮಿಸುತ್ತಿದ್ದು, ಸ್ಥಳದಲ್ಲಿ 10 ಸಾವಿರಕ್ಕೂ ಅಧಿಕ ಜನರು ಕಿಲೋಮೀಟರ್ ಗಟ್ಟಲೇ ಉದ್ದ ಸರತಿ ಸಾಲಿನಲ್ಲಿ ನಿಂತಿದ್ದು, ಈ ವಿಡಿಯೋ ಸಾಮಾಜಿಕ …
Read More »ಡಾಕ್ಟರ್ ಆದ ಫಾರ್ಮಸಿಸ್ಟ್‍ಗೆ ಖಾಕಿ ಟ್ರಿಟ್ಮೆಂಟ್ !
ಚಿತ್ರದುರ್ಗ :ಸರ್ಕಾರಿ ಆಸ್ಪತ್ರೆಯಲ್ಲಿ ಫಾರ್ಮ್ ಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ನಡೆಸುತಿದ್ದ ಖಾಸಗಿ ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಗ್ರಾಮದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವಿವೇಕಾನಂದನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಶುಕ್ರವಾರ ತಡರಾತ್ರಿ ದಾಳಿ ನಡೆಸಿದೆ. ದಾಳಿ ವೇಳೆ ಸಾವಿರಾರು ರೂ. ಮೌಲ್ಯದ ಔಷಧಿಗಳು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ …
Read More »ಕೋವಿಡ್ 19: ಖಾಸಗಿ ಆಯಂಬುಲೆನ್ಸ್‌ಗಳು ಇನ್ನು ಬೇಕಾಬಿಟ್ಟಿ ಬಾಡಿಗೆ ಹೇಳುವಂತಿಲ್ಲ!
ಬೆಂಗಳೂರು, ಮೇ 22: ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ನಲುಗಿರುವ ಸಂದರ್ಭದಲ್ಲಿ ಕೆಲ ಖಾಸಗೀ ಆಯಂಬುಲೆನ್ಸ್‌ಗಳು ಅಕ್ಷರಶಃ ಸುಲಿಗೆಗೆ ಇಳಿದಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಖಾಸಗೀ ಆಯಂಬುಲೆನ್ಸ್‌ಗಳಿಗೆ ರಾಜ್ಯಸರ್ಕಾರ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ. ಎರಡು ವಿಭಾಗದಲ್ಲಿ ಆಯಂಬುಲೆನ್ಸ್‌ಗಳಿಗೆ ದರವನ್ನು ನಿಗದಿ ಪಡಿಸಲಾಗಿದೆ. ಸಾಮಾನ್ಯ ಆಯಂಬುಲೆನ್ಸ್‌ಗಳಿಗೆ (ಪೇಶೆಂಟ್ ಟ್ರಾನ್ಸ್‌ಪೋರ್ಟ್ ಆಯಂಬುಲೆನ್ಸ್)ಮೊದಲ 10 ಕಿ.ಮೀಟರ್‌ಗಳಿಗೆ 1500 ರೂಪಾಯಿ ಗರಿಷ್ಟದರವನ್ನು ನಿಗದಿಗೊಳಿಸಲಾಗಿದೆ. 10 ನಂತರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ …
Read More »ಶಿವಮೊಗ್ಗ: ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿನಿಂದ ಒಬ್ಬರು ಸಾವು
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 11 ಜನರಿಗೆ ಕಪ್ಪು ಶಿಲೀಂಧ್ರ ಕಾಯಿಲೆ ಇರುವುದು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಶಿವಮೊಗ್ಗ ತಾಲೂಕಿನವರು. ಇದೇ ಕಾಯಿಲೆಯಿಂದ ಬಳಲುತ್ತಿರುವ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಆದರೆ, ಕಪ್ಪು ಶಿಲೀಂಧ್ರ ಕಾಯಿಲೆಯಿಂದಲೇ ಮೃತಪಟ್ಟಿರುವುದನ್ನು ಆಸ್ಪತ್ರೆ ಆಡಳಿತ ಮಂಡಳಿ ದೃಢಪಡಿಸಿಲ್ಲ. ಕಪ್ಪು ಶಿಲೀಂಧ್ರ ರೋಗಿಗಳ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಗಂಗಾಧರ್ ನೇತೃತ್ವದಲ್ಲಿ ಏಳು ತಜ್ಞ ವೈದ್ಯರನ್ನು ಒಳಗೊಂಡ ತಂಡ ರಚಿಸಲಾಗಿದೆ. …
Read More »ಧಾರವಾಡ: ಸುಮಾರು 15 ಸಾವಿರ ಮೃತದೇಹಗಳ ವಿಧಿ ವಿಧಾನ ಮಾಡಿದ್ದ ಮುಸ್ತಾಕ್ ಅಹ್ಮದ್ ನಿಧನ
ಧಾರವಾಡ: ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಕೊಡುಗೆಯಾಗಿ ನೀಡಿದ್ದ ಅಂಬ್ಯುಲೆನ್ಸ್ ಮೂಲಕ ಕಳೆದ 21 ವರ್ಷಗಳಲ್ಲಿ ಸುಮಾರು 15 ಸಾವಿರ ಮೃತದೇಹಗಳನ್ನು ಸಾಗಿಸಿ ಅವುಗಳ ಅಂತಿಮ ವಿಧಿ ವಿಧಾನ ಮಾಡಿದ್ದ ಮುಸ್ತಾಕ್ ಅಹ್ಮದ್ ಖಾತ್ರಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಮುಸ್ತಾಕ್ ಅಹ್ಮದ್ ಖಾತ್ರಿಗೆ ‘ಮರಳಿ ಮಣ್ಣಿಗೆ’ ಎಂಬ ಅಂಬ್ಯುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಿತ್ತು. ಕಳೆದ 21 ವರ್ಷಗಳಿಂದ ಈ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ …
Read More »ನಿರ್ದೇಶಕ ಆರ್.ಚಂದ್ರು ಮತ್ತು ‘ಕಬ್ಜ’ ಚಿತ್ರತಂಡದಿಂದ 1ಲಕ್ಷ ರೂ. ನೆರವು
ಕೊರೊನಾ ಸಂಕಷ್ಟಕ್ಕೆ ಅನೇಕರು ನೆರವು ನೀಡುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಮಂದಿ ಹಣ, ಆಕ್ಸಿಜನ್, ವೆಂಟಿಲೇಟರ್, ಫುಡ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳ ನೆರವು ನೀಡುತ್ತಿದ್ದಾರೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ಕಲಾವಿದರು ಮಾನವೀಯ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಸಿನಿ ಕಾರ್ಮಿಕರ ಕಷ್ಟಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಿದ್ದಾರೆ. …
Read More »ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಹಿರಿಯ ಅಧಿಕಾರಿಗಳೇ ಕಾರ್ಯಾಚರಣೆಗಿಳಿದಿದ್ದಾರೆ.
ಬೆಳಗಾವಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಇಂದಿನಿಂದಲೇ ಕಠಿಣ ರೂಲ್ಸ್ ಗಳು ಜಾರಿಗೆ ಬಂದಿವೆ. ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಸಿಎಂ ಯಡಿಯೂರಪ್ಪ ಸೂಚಿಸಿದ ಬೆನ್ನಲ್ಲೇ ಫೀಲ್ಡಿಗಿಳಿದ ಪೊಲೀಸರು ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಸಂಪೂರ್ಣ ಲಾಕ್ ಡೌನ್ ಜಾರಿಯಾಗಿದ್ದು, ಹಾಲು, ಔಷಧ ಹೊರತುಪಡಿಸಿ ಬೇರೆ ಯಾವುದಕ್ಕೂ ಅವಕಾಸ ನೀಡಲಾಗಿಲ್ಲ. ಆಸ್ಪತ್ರೆಗೆ ತೆರಳುವವರು ಮಾತ್ರ ರಸ್ತೆಗೆ ಇಳಿಯಲು …
Read More »ಬಿಟಿಪಿಎಸ್‌ನ 60 ಸಿಬ್ಬಂದಿಗೆ ಕೋವಿಡ್!
ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೂ (ಬಿಟಿಪಿಎಸ್) ಮಹಾಮಾರಿ ಕೋವಿಡ್ ಸೋಂಕು ಆವರಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ. ಕೇಂದ್ರದಲ್ಲಿನ ಮೂರು ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಶೇ.50ರಷ್ಟುಸಿಬ್ಬಂದಿ ಕೆಲಸ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸುತ್ತೋಲೆಹೊರಡಿಸಿದ್ದರೂ ಮೇಲಧಿಕಾರಿಗಳುಜಾರಿಗೊಳಿಸದಿರುವುದು ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕಿನ ಆತಂಕ ದಿನೇದಿನೆ ಹೆಚ್ಚುತ್ತಿದೆ. ಕೇಂದ್ರದ ವಿವಿಧ ಘಟಕಗಳಲ್ಲಿ ಕರ್ತವ್ಯನಿರ್ವಹಿಸುವ 60ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ …
Read More »ಲಾಕ್‍ಡೌನ್, ಬೇಸರ ಕಳೆಯಲು ಮೀನು ಹಿಡಿಯಲು ತೆರಳಿದ ಇಬ್ಬರೂ ನೀರುಪಾಲು
ಕಾರವಾರ: ಲಾಕ್‍ಡೌನ್ ನಲ್ಲಿ ಬೇಸರ ಕಳೆಯಲೆಂದು ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಆಘಾತಕಾರಿ ಘಟನೆ ಅಂಕೋಲಾ ತಾಲೂಕಿನ ಬಸಾಕಲ್ ಗುಡ್ಡದ ಸಮೀಪ ನಡೆದಿದೆ. ಅಂಕೋಲಾದ ಬೆಳಾಬಂದರ್ ನಿವಾಸಿ ಸಂದೀಪ ಬೀರಪ್ಪ ನಾಯ್ಕ (30), ಚೇತನ ನಾಗೇಶ ನಾಯ್ಕ (23) ನೀರುಪಾಲಾದವರಾಗಿದ್ದು, ಸಂದೀಪ ನಾಯ್ಕ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾದ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲಿದ್ದು ಬೇಸರಗೊಂಡಿದ್ದ ಇಬ್ಬರು ಯುವಕರು ಮೀನು ಹಿಡಿಯಲೆಂದು ಬಸಾಕಲ್ ಸಮೀಪ …
Read More »
Laxmi News 24×7