ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಕಷ್ಟದಿಂದ ಜನರು ಪರದಾಡುತ್ತಿದ್ದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ವರಿಷ್ಠರ ಭೇಟಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಅವರೆಲ್ಲರೂ ಪವರ್ ಬೆಗ್ಗರ್ಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವ ಸಿ.ಪಿ.ಯೋಗೇಶ್ವರ್, ಬಿ.ವೈ.ವಿಜಯೇಂದ್ರ ದೆಹಲಿ ಭೇಟಿಗೆ ಕಿಡಿಕಾರಿದ ಅವರು, ಸಿಎಂ ಯಡಿಯೂರಪ್ಪನವರು ಯಾರ್ಯಾರನ್ನೋ ಎಲ್ಲೆಲ್ಲಿಂದಲೊ ಕರೆತಂದರು. ಈಗ ಅವರೇ ಎಲ್ಲವನ್ನು ಅನುಭವಿಸುತ್ತಿದ್ದಾರೆ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಿದ್ದಾರೆ ಎಂದು ವ್ಯಂಗವಾಡಿದರು. ಇದೇ ವೇಳೆ ರಾಜ್ಯ …
Read More »Yearly Archives: 2021
ತಾಲೂಕಿನ ಎಲ್ಲಾ ಪೆಟ್ರೋಲ್ ಪಂಪ್ ಮಾಲೀಕರಿಗೆ ಹಾಗೂ ಸಿಬ್ಬಂದಿಗಳಿಗೆ ಸತೀಶ್ ಶುಗರ್ಸ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಹ್ಯಾಂಡ್ ಗ್ಲೌಸ್ ವಿತರಿಸಿದ ರಾಹುಲ್ ಜಾರಕಿಹೊಳಿ
ಗೋಕಾಕ: ತಾಲೂಕಿನ ಎಲ್ಲಾ ಪೆಟ್ರೋಲ್ ಪಂಪ್ ಮಾಲೀಕರಿಗೆ ಹಾಗೂ ಸಿಬ್ಬಂದಿಗಳಿಗೆ ಸತೀಶ್ ಶುಗರ್ಸ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಮಂಗಳವಾರ ವಿತರಿಸಿದರು. ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆ ಜನರ ರಕ್ಷಣೆಗಾಗಿ ರಾಹುಲ್ ಅವರು ಮಾಸ್ಕ್, ಸ್ಯಾನಿಟೈಸರ್ ವಿತರಿಸಿ, ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಜನತೆ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಈ ಹೆಮ್ಮಾರಿ ಸೋಂಕನ್ನು ಕಟ್ಟಿಹಾಕಲು ಸಾಮಾಜಿಕ ಅನಿರ್ವಾಯ ಎಂದರು. …
Read More »ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ನಡುವೆ ಶವವಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ 7 ನರ್ಸ್ ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಸರ್ಜನ್ ಆದೇಶ
ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ನಡುವೆ ಶವವಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ 7 ನರ್ಸ್ ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಸರ್ಜನ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಜಿಲ್ಲಾ ಸರ್ಜನ್ ಡಾ.ಹುಸೇನ್ ಸಾಬ್ 7 ನರ್ಸ್ ಗಳ ವಿರುದ್ಧ ಕ್ರಮ ಕೈಗೊಂಡು, ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ತಮ್ಮ ವಿರುದ್ಧದ ಕ್ರಮಕ್ಕೆ ಕಣ್ಣೀರಿಟ್ಟ ನರ್ಸ್ ಗಳು ರಿಲಿವಿಂಗ್ …
Read More »ಶನಿವಾರ, ಭಾನುವಾರ ಮತ್ರವಲ್ಲ, ಶುಕ್ರವಾರದಿಂದಲೇ ಜಾರಿಯಾಗಲಿದೆ. ಲಾಕ್ ಡೌನ್
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಜೂನ್ 4ರಿಂದ 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವೀಕ್ ಎಂಡ್ ಲಾಕ್ ಡೌನ್ ಈ ಬಾರಿ ಶನಿವಾರ, ಭಾನುವಾರ ಮತ್ರವಲ್ಲ, ಶುಕ್ರವಾರದಿಂದಲೇ ಜಾರಿಯಾಗಲಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಕೂಡ ಅಗತ್ಯ ವಸ್ತುಗಳು ಸಿಗುವುದಿಲ್ಲ.
Read More »ಯುವತಿಯರೊಂದಿಗೆ ಯುವಕರು ಕೆಆರ್‌ಎಸ್ ಹಿನ್ನೀರಿನಲ್ಲಿ ಮೋಜು-ಮಸ್ತಿ
ಮಂಡ್ಯ: ಲಾಕ್‍ಡೌನ್ ಅನ್ನು ಲೆಕ್ಕಿಸದೆ ಯುವಕರು ಕೆಆರ್‌ಎಸ್ ಹಿನ್ನೀರಿನಲ್ಲಿ ಯುವತಿಯರೊಂದಿಗೆ ಪಾರ್ಟಿ ನಡೆಸಲು ಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕರು-ಯುವತಿಯರನ್ನು ಕರೆದುಕೊಂಡು ಮೋಜು-ಮಸ್ತಿ ಮಾಡಲು ಬಂದಿದ್ದಾರೆ. ಈ ವೇಳೆ ಇದನ್ನು ಕಂಡ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಕೆಆರ್‍ಎಸ್ ಪೊಲೀಸ್ ಠಾಣೆಗೆ ಈ ಬಗ್ಗೆ …
Read More »ತಿಂಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ: ಜೂನ್ 26ರವರೆಗೆ ಅವಕಾಶ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ, ಮೇ ತಿಂಗಳ ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್-1 ಸಲ್ಲಿಸಲು ಗಡುವನ್ನು ಜೂನ್ 26ರವರೆಗೆ ವಿಸ್ತರಣೆ ಮಾಡಲಾಗಿದೆ. ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಜಿಎಸ್‌ಟಿ ಮಂಡಳಿಯು ನೀಡಿರುವ ವಿವಿಧ ವಿನಾಯಿತಿಗಳ ಕುರಿತು ಸರಣಿ ಟ್ವೀಟ್ ಮಾಡಿದೆ. ವಹಿವಾಟು ನಡೆಸುವವರು ನಿರ್ದಿಷ್ಟ ತಿಂಗಳಿನಲ್ಲಿ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮುಂದಿನ ತಿಂಗಳಿನ 11ನೇ ತಾರೀಕಿನ ಒಳಗಾಗಿ ಜಿಎಸ್‌ಟಿಆರ್-1ರಲ್ಲಿ …
Read More »ಪಾಸಿಟಿವಿಟಿ ರೇಟ್ ಶೇ.5ರೊಳಗೆ ಬರುವವರೆಗೆ ಲಾಕ್ ಡೌನ್ ಮುಂದುವರಿಸಲು ಸಿದ್ದರಾಮಯ್ಯ ಆಗ್ರಹ
ಬೆಂಗಳೂರು : ಟೆಸ್ಟಿಂಗ್ ಪಾಸಿಟಿವಿಟಿ ರೇಟ್ ಶೇ.5ರೊಳಗೆ ಬರುವವರೆಗೆ ಲಾಕ್ ಡೌನ್ ಮುಂದುವರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪಾಸಿಟಿವಿಟಿ ರೇಟ್ ಶೇ. 5ರೊಳಗೆ ಬರುವ ವರೆಗೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಅವರು ತಿಳಿಸಿದ್ದಾರೆ. ಲಾಕ್ ಡೌನ್ ಮತ್ತಿತರ ವಿಷಯದಲ್ಲಿ ತಜ್ಞರ ಸಲಹೆಯನ್ನು ಸರ್ಕಾರ ಚಾಚೂತಪ್ಪದೆ ಪಾಲಿಸಬೇಕು. ಎಲ್ಲರಿಗೂ ಲಸಿಕೆ ಹಾಕುವುದೊಂದೇ ಕೊರೊನಾದಿಂದ ದೂರ ಇರುವ ಮಾರ್ಗ. 12 ವರ್ಷದೊಳಗಿನ ಮಕ್ಕಳನ್ನು …
Read More »ಬೆಂಗಳೂರಲ್ಲಿ ಜೂನ್ 7ರಿಂದ ಬಿಎಂಟಿಸಿ ಬಸ್ ಸಂಚಾರ
ಬೆಂಗಳೂರು, ಮೇ 31; ಬೆಂಗಳೂರು ಜನರ ಜೀವನಾಡಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿದೆ. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್ ಜೂನ್ 7ರ ಸೋಮವಾರ ಬೆಳಗ್ಗೆ 6ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದುವರೆಸುವ ಕುರಿತು ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆಯಾದರೂ ಹಲವು ವಿನಾಯಿತಿ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಜನದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲು ಬಿಎಂಟಿಸಿ ಮುಂದಾಗಿದೆ. ಈ ಕುರಿತು ನೌಕರರಿಗೂ ನಿರ್ದೇಶನ ನೀಡಲಾಗಿದೆ. …
Read More »5 ಜಿ ನೆಟ್ವರ್ಕ್ ಸ್ಥಾಪನೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜುಹಿ ಚಾವ್ಲಾ
ನವದೆಹಲಿ : ಈಗಾಗಲೇ ದೇಶದ ಎಲ್ಲೆಡೆ 4 ಜಿ ವೈರ್ಲೆಸ್ ನೆಟ್ವರ್ಕ್ ಪ್ರಚಲಿತದಲ್ಲಿದೆ. ಆದರೆ ಇದನ್ನು ಇನ್ನೂ ಉತ್ತಮಗೊಳಿಸುವ ಹಿನ್ನೆಲೆಯಲ್ಲಿ 5ಜಿ ನೆಟ್ವರ್ಕ್ ಗಳನ್ನು ತರುವ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತವೆ. 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪನೆ ಮಾಡುವುದರ ವಿರುದ್ಧ ಅನೇಕ ಪರಿಸರವಾದಿಗಳು ಧ್ವನಿ ಎತ್ತಿದ್ದರು ಮತ್ತು ಇದನ್ನು ವಿರೋಧಿಸಿದ್ದರು. ಇದೀಗ ಇದರ ವಿರುದ್ಧ ಬಾಲಿವುಡ್ ಖ್ಯಾತ ನಟಿ ಪರಿಸರವಾದಿ ಜುಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5 …
Read More »46 ವರ್ಷ ವಯಸ್ಸಿನ ಅಂಧ ವ್ಯಕ್ತಿ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ.
ಝಾಂಗ್ ಹೋಂಗ್ ಎಂಬ 46 ವರ್ಷ ವಯಸ್ಸಿನ ಅಂಧ ವ್ಯಕ್ತಿ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ. ಚೀನಾ ಮೂಲದ ಇವರು ನೇಪಾಳ ಕಡೆಯಿಂದ ಪರ್ವತ ಹತ್ತಿ ದಾಖಲೆ ಬರೆದಿದ್ದಾರೆ. ಇಡೀ ಏಷ್ಯಾದಲ್ಲೇ ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಅನ್ನೋ ಬಿರುದು ಪಡೆದಿದ್ದು, ವಿಶ್ವದಲ್ಲಿ ಮೌಂಟ್ ಎವರೆಸ್ಟ್ ಏರಿದ 3ನೇ ಅಂಧ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಝಾಂಗ್ ಹೋಂಗ್, ಗಟ್ಟಿ ಮನಸ್ಸೊಂದಿದ್ರೆ ನಿನ್ ಕೈಲಿ ಆಗಲ್ಲ ಅನ್ನೋ ವಿಚಾರವನ್ನು …
Read More »