ಹುಬ್ಬಳ್ಳಿ: ಇಲ್ಲಿನ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶ್ವಸಿಯಾಗಿದ್ದಾರೆ.ಬಂಧಿತನನ್ನು ಅಶೋಕ್ ಹಲಗಿ ಎಂದು ಗುರುತಿಸಲಾಗಿದೆ. ಕಳೆದ 23ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೊಂಕಿತ ಮಹಿಳೆಯ ಮೇಲೆ ವಾರ್ಡಬಾಯ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಸೋಂಕಿತ ಮಹಿಳೆ ಪುತ್ರನಿಗೆ ಈ ಕುರಿತು ಮಾಹಿತಿ ನೀಡಿದ್ದಳು. ಘಟನೆ ಬೆಳಕಿಗೆ ಬಂದ ನಂತರ ಸೊಂಕಿತ ಮಹಿಳೆಯ …
Read More »Yearly Archives: 2021
ಸೊಂಕಿತರೊಂದಿಗೆ ವೈದ್ಯೆ ಡ್ಯಾನ್ಸ್ – ಜನರಿಂದ ಮೆಚ್ಚುಗೆ
ಚಿತ್ರದುರ್ಗ: ಆತ್ಮಸ್ಥೈರ್ಯ ತುಂಬಲು ಜಿಲ್ಲೆಯ ವೈದ್ಯರು ಸೋಂಕಿತರ ಜೊತೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಕೋವಿಡ್ ಕೇರ್ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿತರಿಗೆ ವೈದ್ಯೆ ಶೃತಿ ನೃತ್ಯ ವ್ಯಾಯಾಮ ಮಾಡಿಸುತ್ತಿದ್ದಾರೆ. ಪ್ರತಿ ದಿನ ಹಿಂದಿ ಹಾಡೋಂದಕ್ಕೆ ನೃತ್ಯ ಮಾಡಿಸುವ ವೈದ್ಯೆ ಶೃತಿ, ನಾಗಿನಿ ನಾಗಿನಿ ಹಾಡಿಗೆ ಕೊರೊನಾ ಸೋಂಕಿತರೊಟ್ಟಿಗೆ ಹೆಜ್ಜೆ ಹಾಕಿಸುವ ಮೂಲಕ ಗಮನ ಸೆಳೆದಿದ್ದಾರೆ. …
Read More »ಕೊರೊನಾ ಪಾಸಿಟಿವ್ ಇದ್ದರೂ ಅನಗತ್ಯವಾಗಿ ಕಾರಿನಲ್ಲಿ ಕುಟುಂಬ ಸಮೇತ ಓಡಾಡುತ್ತಿದ್ದ ವ್ಯಕ್ತಿ
ಚಿಕ್ಕೋಡಿ: ಕೊರೊನಾ ಪಾಸಿಟಿವ್ ಇದ್ದರೂ ಅನಗತ್ಯವಾಗಿ ಕಾರಿನಲ್ಲಿ ಕುಟುಂಬ ಸಮೇತ ಓಡಾಡುತ್ತಿದ್ದ ವ್ಯಕ್ತಿಯನ್ನು ಪೆÇಲೀಸರುವ ತಡೆದು ಆಸ್ಪತ್ರೆಗೆ ರವಾನಿಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಹುಕ್ಕೇರಿ ಸಿಪಿಐ ರಮೇಶ್ ಚಾಯಾಗೋಳ ನೇತೃತ್ವದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಪಾಸಿಟಿವ್ ಇರುವ ವ್ಯಕ್ತಿ ಕುಟುಂಬ ಸಮೇತ ಪರ ಊರಿಗೆ ತೆರಳುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪಾಸಿಟಿವ್ ಇರುವುದನ್ನ ಸ್ವತಃ ರೋಗಿಯೇ ಹೇಳುತ್ತಿದ್ದಂತೆ ಗರಂ ಆದ …
Read More »ಲಸಿಕೆ ಮ್ಯಾಜಿಕ್: ಕೊರೊನಾ ನಿಯಂತ್ರಿಸುವಲ್ಲಿ ಪರಪ್ಪನ ಅಗ್ರಹಾರ ಅಧಿಕಾರಿಗಳು ಸಕ್ಸಸ್
ಬೆಂಗಳೂರು: ಪರಪ್ಪನ ಅಗ್ರಹಾರದ ಕೈದಿಗಳಿಗೆ ಕಳೆದ ಒಂದು ತಿಂಗಳಿನಿಂದ ಹಂತ ಹಂತವಾಗಿ ಕೊರೊನಾ ಲಸಿಕೆ ನೀಡಲಾಗ್ತಿದೆ. ಈಗಾಗಲೇ 2500ಕ್ಕೂ ಹೆಚ್ಚು ಕೈದಿಗಳಿಗೆ ಮೊದಲ ಡೋಸ್ ವ್ಯಾಕ್ಸಿನೇಷನ್ ಮುಗಿದಿದೆ. ಇದರ ಬೆನ್ನಲ್ಲೇ ಜೈಲಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಅಂತ ಹೇಳಲಾಗ್ತಿದೆ. ಜೈಲಿನಲ್ಲಿ ನೂರಕ್ಕೂ ಹೆಚ್ಚಿದ್ದ ಕೊರೊನಾ ಸೋಂಕಿನ ಪ್ರಮಾಣ ಈಗ ದಿಢೀರ್ ಇಳಿಕೆಯಾಗಿದೆ. ಕೇವಲ 12 ಮಂದಿ ವಿಚಾರಣಾಧೀನ ಕೈದಿಗಳು ಮಾತ್ರ ಈಗ ಸೋಂಕಿತರಾಗಿದ್ದಾರೆ ಅಂತ ತಿಳಿದುಬಂದಿದೆ. ಜೈಲಧಿಕಾರಿಗಳು ಕೈಗೊಂಡ ಕ್ರಮಗಳು …
Read More »ಕಿಲ್ಲರ್ ಕೊರೊನಾ ಸೋಂಕಿಗೆ ಸ್ಯಾಂಡಲ್ವುಡ್ ನಟ ‘ಅಜಯ್ ರಾವ್’ ಮೇಕಪ್ ಮ್ಯಾನ್ ಬಲಿ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಸಾವಿರಾರು ಮಂದಿ ಹೆಮ್ಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ಕಿಲ್ಲರ್ ಕೊರೊನಾ ಸೋಂಕಿಗೆ ಸ್ಯಾಂಡಲ್ವುಡ್ ನಟ ಅಜಯ್ ರಾವ್ ಮೇಕಪ್ ಮ್ಯಾನ್ ಜಯರಾಮ್ ಮೃತಪಟ್ಟಿದ್ದಾರೆ. ಈ ಕುರಿತು ನಟ ಅಜಯ್ ರಾವ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಯರಾಮನ್ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದರು, ಕಳೆದ 11 ವರ್ಷಗಳದಿಂದ ನನ್ನ ಜೊತೆ ಕೆಲಸ ಮಾಡುತ್ತಿದ್ದರು. …
Read More »ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಚಿತ್ರದುರ್ಗದಲ್ಲಿ ಪತ್ತೆ
ಚಿತ್ರದುರ್ಗ, ಜೂನ್ 1: ಕೊರೊನಾ ಸೋಂಕಿನ ನಂತರ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್‌ನಂತಹ ನಾನಾ ಸೋಂಕಿನ ಸುಳಿಗೆ ಜನ ಸಿಲುಕುತ್ತಿದ್ದು, ಈಗ ಚರ್ಮ ಫಂಗಸ್‌ನ್ನು ಎದುರಿಸುವಂತಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ದೇಶದ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಚಿತ್ರದುರ್ಗದ 54 ವರ್ಷದ ರೋಗಿಯಲ್ಲಿ ಸ್ಕಿನ್ ಮ್ಯೂಕರ್ ಮೈಕೋಸಿಸ್ ಪತ್ತೆಯಾಗಿದೆ ಎಂದು ಇಎನ್‌ಟಿ ತಜ್ಞ ಡಾ.ಪ್ರಹ್ಲಾದ್ ತಿಳಿಸಿದ್ದಾರೆ. 54 ವರ್ಷದ ಪಂಚಾಕ್ಷರಪ್ಪ ಒಂದು ತಿಂಗಳ ಹಿಂದೆ …
Read More »ಬೆಂಗಳೂರಲ್ಲಿ ಸೋಂಕು ನಿವಾರಕ ಸಿಂಪಡಣೆಗೆ ತಡೆ
ಬೆಂಗಳೂರು, ಜೂನ್ 01; ಬಿಬಿಎಂಪಿ ವಿಮಾನದ ಮೂಲಕ ಬೆಂಗಳೂರು ನಗರದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡುವ ಪ್ರಯೋಗಕ್ಕೆ ತಾತ್ಕಾಲಿಕ ತಡೆ ನೀಡಿದೆ. ನಗರದ ಆಯ್ದ ಪ್ರದೇಶದಲ್ಲಿ ಇದನ್ನು ಜಾರಿಗೊಳಿಸಬೇಕಿತ್ತು. ಸೋಮವಾರದಿಂದ ಬುಧವಾರದ ತನಕ ನಗರದ ಆಯ್ದ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡಲು ಏರಿಯಲ್ ವರ್ಕ್ಸ್ ಏರೋ ಎಲ್‍ಎಲ್‍ಪಿ ಸಂಸ್ಥೆಯ ಮುಂದಾಗಿತ್ತು. ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಸೂಚನೆ ಅನ್ವಯ ಪ್ರಾಯೋಗಿಕ ಯೋಜನೆಗೆ ತಡೆ ನೀಡಲಾಗಿದೆ. ಕೆಲವು …
Read More »ಸಿದ್ದರಾಮಯ್ಯಗೆ ತೀವ್ರ ಜ್ವರ: ಮಣಿಪಾಲ್‌ಗೆ ದಾಖಲು
ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ಮುಂದಿನ ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿ ಪಡೆಯಲಿದ್ದು, ಅವರು ಮಂಗಳವಾರ ಮತ್ತು ಬುಧವಾರ ಭಾಗವಹಿಸಲಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಿದ್ದರಾಮಯ್ಯ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ನೆಗೆಟಿವ್ ವರದಿ ಬಂದಿದೆ’ ಎಂದು ಆಪ್ತ ಮೂಲಗಳು ಮಾಹಿತಿ …
Read More »ಸೆಕೆಂಡ್ ಡೋಸ್ 12 ವಾರದಿಂದ 1 ತಿಂಗಳಿಗೆ ಇಳಿಕೆ, ವಿದೇಶಕ್ಕೆ ಹೋಗುವವರಿಗೆ ಲಸಿಕೆ
ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮತ್ತು ವ್ಯಾಸಂಗ ಮಾಡುವವರಿಗೆ ಕೊರೋನಾ ಲಸಿಕೆಯನ್ನು ಆದ್ಯತೆಯ ಮೇಲೆ ನೀಡಲಾಗುತ್ತದೆ. ಇಂದಿನಿಂದ ಆದ್ಯತಾ ಗುಂಪಿನವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಡಿಸಿಎಂ, ಲಸಿಕೆ ಕಾರ್ಯಪಡೆ ಅಧ್ಯಕ್ಷ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಇಂದು 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡಲಿದ್ದು, ಲಸಿಕೆ ಪಡೆಯಲು ಆಧಾರ್ ಕಾರ್ಡ್, ಪಾಸ್ಪೋರ್ಟ್, ವಿದೇಶದಲ್ಲಿರುವ ತಮ್ಮ ಕೆಲಸ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು …
Read More »ಸಿಎಂ ಬದಲಾವಣೆ ಚರ್ಚೆ ನಡುವೆ ವಿಜಯೇಂದ್ರ ದಿಢೀರ್ ದೆಹಲಿ ಪ್ರಯಾಣ
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬೆನ್ನಲ್ಲೇ ತಮ್ಮ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಸಿಎಂ ಬದಲಾವಣೆ ನಿಟ್ಟಿನಲ್ಲಿ ಯೋಗೇಶ್ವರ್ ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬೆಳವಣಿಗೆಗಳ ನಡುವೆಯೇ ಸಿ.ಪಿ.ಯೋಗೇಶ್ವರ್ …
Read More »