ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಈ ವಾರದ ಲಾಕ್ ಡೌನ್ ನಿಂದ ವಿನಾಯ್ತಿ ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಸಂಪೂರ್ಣ ಲಾಕ್ ಡೌನ್ ಬದಲಾಗಿ ಕೆಲವೊಂದಕ್ಕೆ ವಿನಾಯ್ತಿ ಅಥವಾ ಓಡಾಡುವ ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ನಗರದಲ್ಲಿ ಸದ್ಯಕ್ಕೆ ಶೇ.6 ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿದೆ. ಪಾಸಿಟಿವಿಟಿ ದರ ಶೇ.5 ಕ್ಕೆ ಇಳಿದರೆ ಅನ್ ಲಾಕ್ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೆ ಬಿಎಂಟಿಸಿ, ಓಲಾ, ಉಬರ್ …
Read More »Yearly Archives: 2021
ರಾಜ್ಯಾದ್ಯಂತ ಡಿಸ್ಟ್ರಿಕ್ಟ್ ರಜಿಸ್ಟ್ರಾರ್ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭ
ಬೆಂಗಳೂರು – ಕೊರೋನಾ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಸಡಿಲ ಮಾಡಲಾಗುತ್ತಿದೆ. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡಿಸ್ಟ್ರಿಕ್ಟ್ ರಜಿಸ್ಟ್ರಾರ್ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭಿಸಲು ಸರಕಾರ ಅನುಮತಿ ನೀಡಿದೆ. ಕೋವಿಡ್ ಮಾರ್ಗದರ್ಶಿ ನಿಯಮಗಳನ್ನು ಪಾಲಿಸಿ ನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಬೇಕು ಎಂದು ಕಂದಾಯ ಇಲಾಖೆ ಪ್ರಧಾನ …
Read More »27 ಲಕ್ಷ ಮಂದಿ ರೈಲ್ವೆ ಟಿಕೆಟ್ ಇಲ್ಲದೆ ಪ್ರಯಾಣ : 143.87 ಕೋಟಿ ರೂ. ದಂಡ ಸಂಗ್ರಹ
ನವದೆಹಲಿ: ಸೋಂಕಿನ ಹಿನ್ನೆಲೆಯಲ್ಲಿ ಹಲವು ನಿಯಮಗಳು ಜಾರಿ ಇದ್ದರೂ ರೈಲುಗಳಲ್ಲಿ ಟಿಕೆಟ್ ಇಲ್ಲದೆ 27 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದ ಸಚಿವಾಲಯ 2020 ಏಪ್ರಿಲ್‌ನಿಂದ ಪ್ರಸಕ್ತ ವರ್ಷ ಮಾರ್ಚ್ ವರೆಗೆ 27.57 ಲಕ್ಷ ಮಂದಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 25ಕ್ಕೂ ಕಡಿಮೆ ಪ್ರಕರಣಗಳು ಎಂದಿದೆ. ಅಷ್ಟೂ ಮಂದಿಯಿಂದ 143.87 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. …
Read More »ಲಸಿಕೆಗೆ ಕೊರತೆ ಇರುವಾಗ ಟ್ವಿಟರ್ ಬ್ಲೂ ಟಿಕ್ ಬಗ್ಗೆ ಚರ್ಚೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ
ದೆಹಲಿ: ಕೊರೊನಾ ಸೋಂಕು ವಿರುದ್ಧದ ಲಸಿಕೆಗೆ ಕೊರತೆ ಇರುವಾಗ, ಟ್ವಿಟರ್ನಲ್ಲಿ ಬ್ಲೂ ಟಿಕ್ ವಿಚಾರವಾಗಿ ಚರ್ಚೆಯಲ್ಲಿ ತೊಡಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಲಸಿಕೆ ಹಾಗೂ ಟ್ವಿಟರ್ ಬ್ಲೂ ಟಿಕ್ ಬಗ್ಗೆ ವ್ಯಂಗ್ಯವಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಯಾರಿಗಾದರೂ ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ನಲ್ಲಿ ಬ್ಲೂ ಟಿಕ್ಗಾಗಿ …
Read More »ದರ್ಶನ್ ಕೊಟ್ಟ ಆ ಒಂದು ಕರೆಗೆ ಅಭಿಮಾನಿಗಳಿಂದ ಬಂತು ಅಭೂತಪೂರ್ವ ಪ್ರತಿಕ್ರಿಯೆ; ಸಾಕ್ಷಿ ತೋರಿಸಿದ ಡಿ ಬಾಸ್
ನಟ ದರ್ಶನ್ ಹೇಳಿದ್ದನ್ನು ಅಭಿಮಾನಿಗಳು ಚಾಚೂತಪ್ಪದೆ ಪಾಲಿಸುತ್ತಾರೆ. ಈ ಮೊದಲು ಕರ್ನಾಟಕದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ‘ನನ್ನ ಬರ್ತ್ಡೇ ಆಚರಣೆ ಬೇಡ. ಬದಲಿಗೆ ದಿನಸಿ ತಂದುಕೊಡಿ. ಅದನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ತಲುಪಿಸುತ್ತೇವೆ’ ಎಂದು ದರ್ಶನ್ ಹೇಳಿದ್ದರು. ಇದನ್ನು ಅಭಿಮಾನಿಗಳು ಮಾಡಿದ್ದರು. ಈಗ ಕೊವಿಡ್ ಸಂದರ್ಭದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಮನವಿ ಮಾಡಿದ್ದು, ಅವರ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ 🙏ಹೃದಯಪೂರ್ವಕ ಧನ್ಯವಾದಗಳು …
Read More »ಸುಸಜ್ಜಿತ ಸಂಚಾರಿ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಲಕ್ಷ್ಮಣ ಸವದಿ
ಚಿಕ್ಕೋಡಿ: ಕೊರೊನಾ ನಿಯಂತ್ರಣಕ್ಕಾಗಿ ವಿಶೇಷವಾಗಿ ನಿರ್ಮಿಸಿರುವ ಸುಸಜ್ಜಿತ ಪ್ರಥಮ ಚಿಕಿತ್ಸೆ ಸಂಚಾರಿ ಆಸ್ಪತ್ರೆಯನ್ನು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪರಿವರ್ತನೆಗೊಳಿಸಿ ಕೊಡಲಾದ ಈ ಬಸ್ಸಿನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸಿದ ನಾಲ್ಕು ಬೆಡ್, ಒಂದು ವೆಂಟಿಲೇಟರ್ ಬೆಡ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಈ ಬಸ್ಸಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಬಸ್ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, …
Read More »7 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ಭೀಕರ ದಾಳಿ.. ಪರಿಹಾರಕ್ಕಾಗಿ ಒತ್ತಾಯ
ದಾವಣಗೆರೆ: 7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿರೋ ಶಾಕಿಂಗ್ ಘಟನೆ ದಾವಣಗೆರೆಯ ಆಜಾದ್ ನಗರದಲ್ಲಿ ನಡೆದಿದೆ. ಸಲಾಮ್ ಹಾಗೂ ತಬಸುಬ ಬಾನು ಎಂಬವರ ಮಗಳು ಕನೋಸ್ ಫಾತಿಮಾ ದಾಳಿಗೊಳಗಾದ ಬಾಲಕಿ. ಮಧ್ಯ ರಾತ್ರಿ ಮೂರು ಗಂಟೆ ಸುಮಾರಿಗೆ ಫಾತಿಮಾ ಮೇಲೆ ನಾಯಿಗಳು ದಾಳಿ ನಡೆಸಿವೆ. ಇದರಿಂದ ಬಾಲಕಿಯ ಕಾಲು, ತಲೆ ಸೇರಿದಂತೆ ಮೈತುಂಬಾ ಗಂಭೀರ ಗಾಯಗಳಾಗಿವೆ. ಫಾತಿಮಾಳನ್ನ ಸದ್ಯ ಬಾಪುಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ …
Read More »ಸ್ವಿಮ್ಮಿಂಗ್ ಪೂಲ್ ನಿರ್ಮಾಣದ ಬಗ್ಗೆ ಉತ್ತರ ಕೊಟ್ಟ ಸಿಂಧೂರಿ
ಮೈಸೂರು: ನಿರ್ಗಮಿತ ಮೈಸೂರು ಡಿ.ಸಿ ರೋಹಿಣಿ ಸಿಂಧೂರಿ ಕಳೆದ ಒಂದು ತಿಂಗಳಿನಿಂದ ಹಲವು ವಿಚಾರಗಳಲ್ಲಿ ಜನಪ್ರತಿನಿಧಿಗಳ ಆರೋಪಗಳಿಗೆ ಗುರಿಯಾಗಿದ್ದರು. ಅದ್ರಲ್ಲಿ ಜಿಲ್ಲಾಧಿಕಾರಿಯ ಸರ್ಕಾರಿ ನಿವಾಸದಲ್ಲಿ ಹೈಟೆಕ್ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿಸಿದ ವಿಚಾರವೂ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸಿಂಧೂರಿ ಸರ್ಕಾರಕ್ಕೆ ಉತ್ತರ ಕೊಟ್ಟಿದ್ದಾರೆ. ಡಿಸಿ ಮನೆ ಬಳಿ ಸ್ವಿಮ್ಮಿಂಗ್‌ಪೂಲ್ ನಿರ್ಮಾಣ ಮಾಡಬೇಕೆಂಬುದು ಐದು ವರ್ಷಗಳ ಹಿಂದಿನ ಯೋಜನೆ ಎಂದು ನಿಖಾಧಿಕಾರಿ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಅವರಿಗೆ ರೋಹಿಣಿ …
Read More »ಸರ್ಕಾರವೇ ಗೋಹತ್ಯೆ ಮಾಡುತ್ತಿದೆ: ಎಚ್‌ಡಿಕೆ ಆರೋಪ
ಬೆಂಗಳೂರು: ರಾಸುಗಳಿಗೆ ಕಾಲು-ಬಾಯಿ ರೋಗಕ್ಕೆ ಲಸಿಕೆ ನೀಡದೆ ಇರುವುದರಿಂದ ಅವು ನರಳಾಡಿ ಸಾಯುವ ಸನ್ನಿವೇಶ ನಿರ್ಮಾಣವಾಗಿದೆ. ಲಸಿಕೆ ಅಭಿಯಾನ ನಡೆಸದೆ ಸರ್ಕಾರವೇ ಗೋಹತ್ಯೆಗೆ ಕಾರಣವಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕಳೆದ ಅಕ್ಟೋಬರ್‌ನಲ್ಲಿ ಕಾಲು-ಬಾಯಿ ರೋಗಕ್ಕೆ ಲಸಿಕೆ ಅಭಿಯಾನ ನಡೆಯಬೇಕಿತ್ತು. ಕೆಂದ್ರ ಸರ್ಕಾರ ಅಭಿಯಾನ ನಡೆಸಿಲ್ಲ. ರಾಜ್ಯ ಸರ್ಕಾರವೂ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ’ ಎಂದು …
Read More »ಪೆಟ್ರೋಲ್ ಗರಿಷ್ಠ ದರ; 2ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ!
ಕಾರವಾರ, ಜೂನ್ 06; ದೇಶದಲ್ಲಿ ತೈಲ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಹಲವು ಕಡೆ ಪೆಟ್ರೋಲ್ ದರ ಸಾರ್ವಕಾಲಿಕ ಏರಿಕೆಯಾಗಿ 100 ರೂ. ಗಡಿ ದಾಟಿದೆ. ಕರ್ನಾಟಕದಲ್ಲಿ ಕೂಡ ಹಲವು ಜಿಲ್ಲೆಗಳಲ್ಲಿ ದರ ಸೆಂಚುರಿ ಬಾರಿಸುವ ಹೊಸ್ತಿಲಲ್ಲಿದ್ದು, ಚಿಕ್ಕಮಗಳೂರಿನಲ್ಲಿ ಈಗಾಗಲೇ ಲೀಟರ್‌ಗೆ 100.06 ರೂ.ನಂತೆ ಬೆಲೆ ಇದೆ. ಇದರ ನಂತರದ ಸ್ಥಾನದಲ್ಲಿ ಉತ್ತರ ಕನ್ನಡವಿದ್ದು, ಕಾರವಾರದಲ್ಲಿ 99.57 ರೂ.ಗೆ ಬಂದುಮುಟ್ಟಿದೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಗಡಿ …
Read More »
Laxmi News 24×7