ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಸೂರ್ಯಗ್ರಹಣ : ದೇಶದಲ್ಲಿ ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ? ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮಹತ್ವದ ಸಭೆ ನಡೆಯಲಿದ್ದು, ಸೋಮವಾರದಿಂದ ಹಂತ ಹಂತವಾಗಿ …
Read More »Yearly Archives: 2021
ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣ ಭೈರೇಗೌಡ ಸೇರಿ ಇನ್ನಿತರ ಮುಖಂಡರು ಇದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡ ಸಿದ್ದರಾಮಯ್ಯ: ಕಳೆದ ವಾರ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ …
Read More »ಮುಂಬೈ ಮಳೆಗೆ ಕಟ್ಟಡ: ಕುಸಿತ ಹನ್ನೊಂದು ಸಾವು
ಮುಂಬೈ : ಮುಂಬೈನಲ್ಲಿ ಸುರಿಯುತ್ತಿರುವ ಸತತ ಮಾನ್ಸೂನ್ ಮಳೆಯಿಂದ ಮುಂಬೈ ನಗರದ ಕಟ್ಟಡವೊಂದು ಕುಸಿದು ಬಿದ್ದಿದೆ. ಮಲಾಡ್ West ನ ಈ ಕಟ್ಟಡ ಕುಸಿತಕ್ಕೆ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 15 ಹೆಚ್ಚು ಜನರನ್ನು ಇದುವರೆಗೆ ರಕ್ಷಿಸಲಾಗಿದೆ. ಕಟ್ಟಡ ಕುಸಿಯುತ್ತಿದ್ದಂತೆ ಬದಿಗೆ ಇರುವ 3 ಕಟ್ಟಡಗಳಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಕ್ಷಿಪ್ರಗತಿಯಲ್ಲಿ ಸಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಮುಂಬೈ, ಥಾಣೆ, ಪಾಲ್ಘರ್ …
Read More »ಅಲೆಮಾರಿ ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಗೋಕಾಕ: ಹಿಂದುಳಿದ ಹಾಗೂ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಇಲ್ಲಿಯ ನಗರಸಭೆ ವಾರ್ಡ ನಂ 12ರ ಸದಸ್ಯೆ ಭಾರತಿ ಶಿವಾನಂದ ಹತ್ತಿ ಅವರು ಆಸರೆಯಾಗಿದ್ದಾರೆ. ನಗರದ ಹೊರವಲಯದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ ಹಾಗೂ ನಿರ್ಗತಿಕ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸಿ ಮಾನವಿಯತೆ ಮೆರದಿದ್ದಾರೆ. ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದ ಎಪಿಎಮ್‌ಸಿ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಕುಟುಂಬದವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ …
Read More »ಮಾಜಿ ಸಿಎಂ ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಜಮೀರ್ ಅಹ್ಮದ್, ಕುಮಾರಸ್ವಾಮಿ ಪಲ್ಟಿ ಗಿರಾಕಿ, ಅವರು ಯಾವಾಗ ಬೇಕಿದ್ದರೂ ಪಲ್ಟಿ ಹೊಡೆಯುತ್ತಾರೆ ಎಂದು ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತಾರೆ. ಆದರೆ ಹೆಚ್.ಡಿ.ದೇವೇಗೌಡರು ಹಾಗಲ್ಲ, ಅವರಿಗೆ ಸಿದ್ಧಾಂತವಿದೆ. ಕುಮಾರಸ್ವಾಮಿಗೆ ಸಿದ್ಧಾಂತಗಳಿಲ್ಲ. ಅಧಿಕಾರ ಸಿಕ್ಕ ಬಳಿಕ ಪಲ್ಟಿ ಹೊಡೆಯುತ್ತಾರೆ ಎಂದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಜಮೀರ್ ಅಹ್ಮದ್, ಸರ್ಕಾರದ …
Read More »ರವಿ ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ರವಿ.ಡಿ.ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿಯಾಗಿದ್ದ ರವಿ.ಡಿ.ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‍ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಉಡುಪಿಯಲ್ಲಿ ಕರಾವಳಿ ಭದ್ರತಾ ಪೊಲೀಸ್ ಪಡೆಯ ಎಸ್‍ಪಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್‍ಪಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ. ಕೋಲಾರ ಎಸ್‍ಪಿಯಾಗಿದ್ದ ಕಾರ್ತಿಕ್ ರೆಡ್ಡಿಯವರನ್ನು ಬೆಂಗಳೂರಿನ ವೈರ್‍ಲೆಸ್ ವಿಭಾಗಕ್ಕೆ, ಸಿಐಡಿ ಎಸ್‍ಪಿಯಾಗಿದ್ದ ರಾಹುಲ್ ಕುಮಾರ್ ಶಹಪೂರ್‍ವಾಡ್ ಅವರನ್ನು ತುಮಕೂರು …
Read More »ಬೆಂಗಳೂರು: ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ-ನಾಲ್ವರ ಬಂಧನ
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸೈಯದ್ ತಜ್ಮುಲ್ (54), ಸಲೀಂ ಪಾಷಾ (48), ರಫೀ ಉಲ್ಲಾ ಶರೀಫ್ (45) ಹಾಗೂ ನಾಸೀರ್ ಪಾಷಾ (34) ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 8 ಕೋಟಿ ರೂ ಬೆಲೆಬಾಳುವ 6ಕೆಜಿ 700 ಗ್ರಾಂ ತೂಕದ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡುಗೊಂಡನಹಳ್ಳಿ …
Read More »ಪೊಲೀಸರಿಗೆ ಹಾಫ್ ಡೋಸ್ ಹಾಕಿ ಡಾಕ್ಟ್ರಮ್ಮ ದೋಖಾ- ಲಸಿಕೆ ಹಾಕಿಸಿಕೊಂಡವರಿಗೆ ಆತಂಕ
ಕೊರೊನಾ ವ್ಯಾಕ್ಸಿನ್ ಅನ್ನ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೈದ್ಯೆ ಪುಷ್ಪಿತಾಳ ಇನ್ನೊಂದು ಕರ್ಮಕಾಂಡ ಬಯಲಾಗಿದೆ. ಮಂಜುನಾಥ ನಗರ ಆರೋಗ್ಯಕೇಂದ್ರದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡ ಕೊರೊನಾ ವಾರಿಯರ್ ಗಳಿಗೆ ಮತ್ತು ನಾಗರೀಕರಿಗೆ ಭಯ ಅವರಿಸಿದೆ. ಬೆಂಗಳೂರಿನಲ್ಲಿ ಹಾಫ್ ಡೋಸ್ ಇಂಜೆಕ್ಷನ್ ಕರ್ಮಕಾಂಡ ಬಯಲಾಗಿದೆ. ಕೊರೊನಾ ವಾರಿಯರ್ಸ್ ಪೊಲೀಸರಿಗೂ ಹಾಫ್ ಡೋಸ್ ವ್ಯಾಕ್ಸಿನ್ ಹಾಕಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹಗಲಿರುಳೆನ್ನದೇ ಜೀವ ಒತ್ತೆಯಿಟ್ಟು ಕೆಲಸ ಮಾಡೋ ಕೊರೊನಾ ವಾರಿಯರ್ಸ್ಗೆ ದೋಖಾ ಮಾಡಲಾಗಿದೆ. …
Read More »ನಿತ್ಯಾನಂದ ಭಾರತದಲ್ಲಿ ಕಾಲಿಟ್ಟ ಬಳಿಕವೇ ಕೊರೊನಾ ನಿರ್ಮೂಲನೆ; ಕೈಲಾಸವಾಸಿ ಭವಿಷ್ಯವಾಣಿ..!
ನವದೆಹಲಿ: ಭಾರತ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಸ್ವಯಂ ಘೋಷಿತ ದೇವ ಮಾನವ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. 2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ನಿತ್ಯಾನಂದ ಸದ್ಯ ಈಕ್ವೆಡಾರ್ ದ್ವೀಪವೊಂದನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿ ಅಲ್ಲಿಯೇ ನೆಲೆಸಿದ್ದಾರೆ. ಈ ನಡುವೆ ನಿತ್ಯಾನಂದ ತನ್ನ ಹೊಸ ವೀಡಿಯೊ ಒಂದನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನಾನು ಭಾರತಕ್ಕೆ ಕಾಲಿಟ್ಟರೆ ಮಾತ್ರ ದೇಶದಲ್ಲಿ …
Read More »ಶಾಲಾರಂಭಕ್ಕೆ ದಿನ ನಿಗದಿ, ನಿರ್ಧಾರವಾಗದ ಶುಲ್ಕ : ಜೂ. 15ರಿಂದ ದಾಖಲಾತಿ; ಜು.1ರಿಂದ ತರಗತಿ
ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ದಾಖಲಾತಿ, ಶಾಲಾರಂಭದ ದಿನಾಂಕ ಪ್ರಕಟಿಸಿದ್ದರೂ ಶುಲ್ಕದ ಗೊಂದಲವನ್ನು ಮಾತ್ರ ಸರಕಾರ ಬಗೆಹರಿಸಿಲ್ಲ. 2020-21ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಬೋಧನ ಶುಲ್ಕದಲ್ಲಿ ಶೇ. 30ರಷ್ಟು ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ. ಜೂ. 15ರಿಂದ ದಾಖಲಾತಿ ಆರಂಭವಾಗಿ, ಜು. 1ರಿಂದ ತರಗತಿಗಳು ಪ್ರಾರಂಭ ವಾಗಲಿವೆ. ಆದರೆ ಹೆತ್ತವರು ಶುಲ್ಕ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರತ್ಯಕ್ಷ ತರಗತಿಗಳು ನಡೆಯದೆ ಇರುವುದರಿಂದ ಪೂರ್ಣ ಶುಲ್ಕ …
Read More »