Breaking News

Yearly Archives: 2021

ಅರುಣ್ ಸಿಂಗ್ ಭೇಟಿ ಮಾಡುವವರ ಲಿಸ್ಟ್ ನ್ನು ಹಂಚಿಕೊಂಡ ಯತ್ನಾಳ್

ವಿಜಯಪುರ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಬದಲಾವಣೆಯ ಕುರಿತು ಪರ, ವಿರೋಧ ಚರ್ಚೆ ಕೂಡ ನಡೆದಿದೆ. ಇದರ ಮಧ್ಯೆ ನಾಯಕತ್ವ ಬದಲಾವಣೆ ಕುರಿತು ಮಾತನಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೈಲೆಂಟಾಗಿದ್ದು, ಯಾರ ಕೈಗೂ ಸಿಗುತ್ತಿಲ್ಲ. ಇದೆಲ್ಲದರ ಮಧ್ಯೆ ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಅರುಣ್ ಸಿಂಗ್ ಭೇಟಿಗೆ ಅವಕಾಶ ಕೇಳಿಲ್ಲ ಎಂದಿದ್ದಾರೆ. ಈ ಕುರಿತು ಫೆಸ್ಬುಕ್‍ನಲ್ಲಿ ಪೋಸ್ಟ್ …

Read More »

ಗೃಹಿಣಿಯರಿಗೆ ಗುಡ್‌ ನ್ಯೂಸ್:‌ ಇಳಿಕೆಯಾಗಿದೆ ಅಡುಗೆ ಎಣ್ಣೆ ಬೆಲೆ

ಕಳೆದ ಒಂದು ತಿಂಗಳಿನಿಂದ ಅಡುಗೆ ಎಣ್ಣೆ ಬೆಲೆಗಳು ಕುಸಿಯುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಲವೆಡೆ ಅಡುಗೆ ಎಣ್ಣೆ ಬೆಲೆಗಳಲ್ಲಿ 20%ನಷ್ಟು ಇಳಿಕೆ ಕಂಡುಬಂದಿದೆ. ಅಡುಗೆ ಎಣ್ಣೆ ಬೆಲೆಗಳ ಇಳಿಕೆಯ ವಿವರ ಇಂತಿದೆ   1. ಪಾಮ್‌ ಎಣ್ಣೆಯ ಬೆಲೆ ಮೇ 7ರಂದು ರೂ.142/ಕೆಜಿ ಇದ್ದಿದ್ದು ಇಂದಿಗೆ 115 ರೂ./ಕೆಜಿಗೆ ಇಳಿದಿದೆ. 2. ಸೂರ್ಯಕಾಂತಿ ಎಣ್ಣೆಯ ಬೆಲೆಯು ಮೇ 5ರಂದು 188ರೂ./ಕೆಜಿ ಇಂದ 157 ರೂ./ಕೆಜಿಗೆ ಇಳಿದಿದೆ. 3. ಸೋಯಾ …

Read More »

ಮೂರು ಸೇತುವೆಗಳು ಜಲಾವೃತ :ಪ್ರವಾಹ ಭೀತಿಯಲ್ಲಿ ಗ್ರಾಮಸ್ಥರು

ಮಹಾಲಿಂಗಪುರ: ಬಾಗಲಕೋಟ ಜಿಲ್ಲೆಯ ಮುಧೋಳ ಮತ್ತು ನೂತನ ರಬಕ” ಬನಹಟ್ಟಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ನೀರಿಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಆದರೂ ಈ ಭಾಗದ ಜನತೆಗೆ ಪ್ರವಾಹದ ಪರಿಣಾಮ ಬೀರಿದೆ. ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಂದಾಗಿ “ರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಗುರುವಾರ “ಡಕಲ್ ಜಲಾಶಯಕ್ಕೆ ಸುಮಾರು 17114 ಕ್ಯೂಸೆಕ್ ಒಳಹರಿವು ಇದೆ. “ಡಕಲ್ ಜಲಾಶಯದಿಂದ …

Read More »

ತೈಲ ಬೆಲೆ ಏರಿಕೆ ಎಫೆಕ್ಟ್: ಅಕ್ಕಿ ದರದಲ್ಲಿ ಕ್ವಿಂಟಲ್‌ಗೆ ದಿಢೀರ್‌ 200 ರೂ. ಹೆಚ್ಚಳ

ಬೆಂಗಳೂರು: ತೈಲಬೆಲೆಯ ಏರಿಕೆ ಎಫೆಕ್ಟ್ ಈಗ ಅಕ್ಕಿ ವ್ಯಾಪಾರದ ಮೇಲೆ ಬೀರಿದೆ.ಕಳೆದ ಕೆಲವು ದಿನಗಳಿಂದ ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ತೈಲ ಬೆಲೆ ಗಗನ ಮುಖವಾಗಿದ್ದು ಆ ಹಿನ್ನೆಲೆಯಲ್ಲಿ ಭಿನ್ನ ತಳಿಯ ಅಕ್ಕಿಯ ಬೆಲೆ ಪ್ರತಿ ಕ್ವಿಂಟಾಲ್‌ನ ನಿಗದಿತ ಬೆಲೆಗಿಂತ ದಿಢೀರ್‌ ಆಗಿ 200ರೂ. ಏರಿಕೆಯಾಗಿದೆ. ಜನತಾ ಕರ್ಫ್ಯೂ ಮಾರ್ಗಸೂಚಿ ತೆರವಾಗುತ್ತಿದಂತೆ ಇದರ ಬಿಸಿ ಶ್ರೀಸಾಮಾನ್ಯರಿಗೆ ತಟ್ಟಿದೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ಹಿಂದೆ ಕೋಲಂ (ಬುಲೆಟ್‌ ರೈಸ್‌ )ಅಕ್ಕಿ …

Read More »

ಸಂತೋಷ್ ಹೆಗ್ಡೆಗೂ ಸೈಬರ್ ವಂಚಕರ ಕರೆ: ಪ್ರಕರಣ ದಾಖಲು

ಬೆಂಗಳೂರು: ದಿನೇ ದಿನೇ ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದರ ನಡುವೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೂ ವಂಚಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ದೂರವಾಣಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ವಂಚನೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಸಂಬಂಧ ಸ್ವತಃ ಸಂತೋಷ್ ಹೆಗ್ಡೆ ಅವರು ದೂರು ನೀಡಿದ್ದಾರೆ. ದೂರು ಏನು?: ಜೂ.14ರ ಸಂಜೆ 6 ಗಂಟೆಗೆ ಸಂತೋಷ್ ಹೆಗ್ಡೆ ಅವರ ಮೊಬೈಲ್‍ಗೆ ಕರೆ …

Read More »

ಜುಲೈ ತಿಂಗಳಾಂತ್ಯಕ್ಕೆ ಬೆಂಗಳೂರು ನಗರಕ್ಕೆ ಹೊಸ ಕಮೀಷನರ್ ನೇಮಕ?

ಬೆಂಗಳೂರು,: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನ ಪೊಲೀಸ್ ಆಯುಕ್ತರು ಕೂಡ ಬದಲಾಗುವ ಮಾಹಿತಿ ಚರ್ಚೆಗೆ ನಾಂದಿ ಹಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗಾಗಿ ಪೈಪೋಟಿ ಶುರುವಾಗಿದೆ. ನೂತನ ನಗರ ಪೊಲೀಸ್ ಆಯುಕ್ತರು ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಎರಡನೇ ಸಲ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ …

Read More »

2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ , ಮತ್ತೆ ಸಿಎಂ ನಾವೇ: H.D.K.

ಮಂಡ್ಯ: 2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷ ಹೋರಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ, ನಿಮ್ಮ ಗೌರವಯುತ ಬದುಕು, ನಾಡಿನ ಸಮಸ್ಯೆ ಬಗೆಹರಿಸಲು. ರಾಷ್ಟ್ರೀಯ ಪಕ್ಷಗಳು ಕಿತ್ತಾಟದಲ್ಲಿ ತೊಡಗಿದ್ದು, ರಾಜ್ಯದ ಸಂಪತ್ತು ಲೂಟಿ ಮಾಡಲು ಹೊರಟಿವೆ ಎಂದು ವಾಗ್ದಾಳಿ ನಡೆಸಿದರು.   ರಾಜ್ಯ ಬಿಜೆಪಿ …

Read More »

ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಪ್ರಿಯಾಂಕ್‌ ಖರ್ಗೆ ಕಿಡಿ

ಕಲಬುರ್ಗಿ: ‘ಜಿಲ್ಲೆಯ ಜನಸಂಖ್ಯೆಯಲ್ಲಿ ಇನ್ನೂ ಕೇವಲ ಶೇ 10ರಷ್ಟು ಮಂದಿಗೆ ಮಾತ್ರ ಕೋವಿಡ್‌ ಲಸಿಕೆ ನೀಡಲಾಗಿದೆ. ಅದರಲ್ಲೂ ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಕಿಡಿ ಕಾರಿದರು. ‘ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸೇನಾನಿಗಳಿಗೇ ಪೂರ್ಣವಾಗಿ ಲಸಿಕೆ ನೀಡಿಲ್ಲ. ಇನ್ನು ನಾಗರಿಕರಿಗೆ ಯಾವಾಗ ನೀಡುತ್ತಾರೆ? ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಕಲಬುರ್ಗಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳಿದ್ದೇ ಈ ಹಿನ್ನಡೆಗೆ ಕಾರಣ’ …

Read More »

ಬಿ.ಎಸ್.ಯಡಿಯೂರಪ್ಪ ಅವರು ನಿವೃತ್ತಿ ಪಡೆಯುವ ಸಮಯ ಬಂದಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ನಿವೃತ್ತಿ ಪಡೆಯುವ ಸಮಯ ಬಂದಿದೆ ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಈ ಹಿಂದೆ ಶ್ರೀಗಳು ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಿದ್ದರು. ಕೇಂದ್ರ ನಾಯಕತ್ವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕಿಳಿಸಿದರೆ, ಪಕ್ಷವನ್ನು ಹೃದಯಾಳದಿಂದ ಸ್ವಾಗತಿಸುತ್ತೇವೆ. ಯಡಿಯೂರಪ್ಪ ಅವರ ವಯಸ್ಸಿನಿಂದಾಗಿ ಹಲವರಿಗೆ ಅಧಿಕಾರ ತಪ್ಪಿ ಹೋಗುತ್ತಿದೆ. ಹೀಗಾಗಿ ಅವರು ನಿವೃತ್ತಿ ಪಡೆದುಕೊಳ್ಳಲು ಸಮಯ ಬಂದಿದೆ ಎಂದು …

Read More »

ನಾಯಕತ್ವ ಬದಲಾವಣೆ ಧ್ವನಿ ಎತ್ತಿ ಉಸ್ತುವಾರಿ ಬಂದ್ರೂ ಭೇಟಿಯಾಗದ ಯತ್ನಾಳ್

ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ನಾನು ಅವಕಾಶ ಕೇಳಿಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿರುವ ಅರುಣ್ ಸಿಂಗ್ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು, ಸಚಿವರು, ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅನೇಕರು ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಹೇಳಿದ್ದು, ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತ್ರ ಅರುಣ್ ಸಿಂಗ್ ಭೇಟಿಗೆ ಸಮಯವನ್ನು ಕೇಳಿಲ್ಲ. ನಾಯಕತ್ವ ಬದಲಾವಣೆ …

Read More »