Breaking News

Yearly Archives: 2021

ಕಿರಿಯ ವಯಸ್ಸಿನಲ್ಲಿ ವಾಯು ಸೇನೆಗೆ ಬೆಳಗಾವಿ ಯುವಕ ಆಯ್ಕೆ.

ಬೆಳಗಾವಿ:-ಸ್ಥಳೀಯ ಲಕ್ಷ್ಮೀ ನಗರದ ಯುವಕ ಗಿರೀಶ ಸದಾಶಿವ ಬಿಳ್ಳೂರ ಎನ್ ಡಿಎ ಪರೀಕ್ಷೆ ಪಾಸಾಗಿದ್ದು, ವಾಯು ಸೇನೆಯ ಪ್ಲಾಯಿಂಗ್ ಆಪೀಸರ್( ಫೈಟರ್ ಪೈಲಟ್) ಹುದ್ದೆಯನ್ನು ಅಲಂಕರಿಸಲಿದ್ದಾರೆ. ಸೇನಾಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆ ಗಿರೀಶ ಆಯ್ಕೆಯಾಗಿದ್ದು, ಶೀಘ್ರವೇ ಹೈದರಾಬಾದಿನ ದುಂಡಿಗಲ್ ಕೇಂದ್ರದಲ್ಲಿ ತರಬೇತಿ ಪಡೆದು, ಬಿದರನ ವಾಯು ನೆಲೆಯಾದ ಹೌಕ್ಸ್ (ಹಕೀಂ ಪೇಠ) ಪ್ರಥಮ ಸೇವೆ ಸಲ್ಲಿಸಿದ್ದಾರೆ. ಶನಿವಾರ ಹೈದರಾಬಾದನಲ್ಲಿ ಜರುಗಿದ ವಾಯು ಸೇನೆಯ ಉನ್ನತಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ದೇಶದ ಸೇನೆಯಲ್ಲಿಯ ಉನ್ನತ …

Read More »

ಬೆಳಗಾವಿ| 18 ವರ್ಷದ ಎಲ್ಲರಿಗೂ ಇಲ್ಲ, 45 ವರ್ಷ ಮೇಲಿನವರಿಗಷ್ಟೆ ಕೋವಿಡ್‌ ಲಸಿಕೆ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದಂತೆ ಉಚಿತ ಲಸಿಕಾ ಕಾರ್ಯಕ್ರಮದ ಅನ್ವಯ ಜಿಲ್ಲೆಯಾದ್ಯಂತ ಸೋಮವಾರದಿಂದ ಕೋವಿಡ್ ನಿರೋಧಕ ಲಸಿಕೆ ಮೇಳ ಆರಂಭವಾಗಿದೆ. ಆದರೆ, 45 ವರ್ಷ ಮೇಲಿನವರಿಗಷ್ಟೆ ಕೊಡಲಾಗುತ್ತಿದೆ. 18ರಿಂದ 44 ವರ್ಷದ ಎಲ್ಲರಿಗೂ ಲಸಿಕೆ ದೊರೆಯಲಿಲ್ಲ. ಆದ್ಯತಾ ಗುಂಪಿನಲ್ಲಿರುವ 18ರಿಂದ 44 ವರ್ಷದವರಿಗೆ ಯಥಾಪ್ರಕಾರ ಲಸಿಕಾ ಕಾರ್ಯಕ್ರಮ ನಡೆಯಿತು. ಸರ್ಕಾರದ ಘೋಷಣೆ ಆಧರಿಸಿ ಆಸ್ಪತ್ರೆಗಳಿಗೆ ಬಂದಿದ್ದ 18 ವರ್ಷ ಮೇಲಿನ ಯುವಜನರು ಲಸಿಕೆ ದೊರೆಯದೆ ಬರಿಗೈಲಿ ವಾಪಸಾಗಬೇಕಾಯಿತು. …

Read More »

ಸಾರಿಗೆ ಸಂಚಾರ ಯಥಾಸ್ಥಿತಿ – ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು : ಸದ್ಯಕ್ಕೆ 2 ಡೋಸ್ ಕೊರೋನಾ ಲಸಿಕೆ ಪಡೆದಂತ ಸಿಬ್ಬಂದಿಗಳನ್ನು ಬಳಸಿಕೊಂಡು, ಸಾರಿಗೆ ಸಂಚಾರ ಆರಂಭಿಸಲಾಗಿದೆ. ಈಗ 2 ಡೋಸ್ ಲಸಿಕೆ ಪಡೆದಂತ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ, ಸಂಚಾರ ಆರಂಭಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆಯಥಾಸ್ಥಿತಿ ಸಂಚಾರ ಆರಂಭ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ವಿಧಾನ ಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರು, BMTC ಸ್ಪಲ್ಪ …

Read More »

ಬೆಳಗಾವಿಯಲ್ಲಿ ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ ‘ಶ್ರೀಮಂತ’ ಪಾಟೀಲ; ಜನ ವಲಯದಲ್ಲಿ ಆಕ್ರೋಶ

ಬೆಳಗಾವಿ: ಜನಪ್ರತಿನಿಧಿ ಅಂದರೆ ಜನರ ಸೇವಕರು. ಆದರೆ ಸಚಿವ ಶ್ರೀಮಂತ ಪಾಟೀಲ ಮಾತ್ರ ಅಭಿಮಾನಿ ಒಬ್ಬರಿಂದ ಕಾಲಿಗೆ ಶೂ ಹಾಕಿಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನಿನ್ನೆ (ಜೂನ್ 20) ಮಧ್ಯಾಹ್ನ ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಶ್ರೀಮಂತ ಪಾಟೀಲ ಅರ್ಚಕರನ್ನು ಕರೆಸಿ ಬಾಗಿಲು ತೆಗೆಸಿದ್ದಾರೆ. ಮಾತ್ರವಲ್ಲ ಪೂಜೆಯನ್ನೂ ಮಾಡಿಸಿದ್ದಾರೆ. ಸಚಿವರು ಪೂಜಾ ಕೈಂಕರ್ಯ …

Read More »

ಹುಬ್ಬಳ್ಳಿ: ಒಂದೇ ಕಾಲಿನ ಅಪರೂಪದ ಮಗು ಜನನ

ಹುಬ್ಬಳ್ಳಿ, ಜೂನ್ 21: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಅಪರೂಪದ ಮಗುವಿನ ಜನನವಾಗಿದೆ. ಈ ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರದಾಡಿದ್ದು, ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದೆ. ಹಳೇ ಹುಬ್ಬಳ್ಳಿಯ ಮಹಿಳೆ ಒಬ್ಬರು ಹೆರಿಗೆ ನೋವು ಕಾಣಿಕೊಂಡ ಕಾರಣ ಕಿಮ್ಸ್ ಆಸ್ಪತ್ರೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿತ್ತು. ವಿಚಿತ್ರ ರೀತಿಯಲ್ಲಿ ಒಂಟಿ ಕಾಲಿನ ಮಗು ಜನಿಸಿದ್ದು, ಆಸ್ಪತ್ರೆಯ ವೈದ್ಯರಿಗೂ ಸಹ ಅಚ್ಚರಿ ಮೂಡುವಂತೆ ಮಾಡಿದೆ. ಆದರೆ, ಕೆಲವೇ ಹೊತ್ತಿನ …

Read More »

ಮತ್ತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವ ಕಾರಣ ಉಡುಪಿ, ಶಿವಮೊಗ್ಗ ಸೇರಿದಂತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದ ಅನ್ ಲಾಕ್ ಪ್ರಕ್ರಿಯೆಗೆ ಒಳಪಟ್ಟ 16 ಜಿಲ್ಲೆಗಳೊಂದಿಗೆ ಉಡುಪಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ …

Read More »

2024ರ ಸಾರ್ವತ್ರಿಕ ಚುನಾವಣೆ ಗುರಿ: ಎರಡನೇ ಬಾರಿ ಶರದ್ ಪವಾರ್, ಪ್ರಶಾಂತ್ ಕಿಶೋರ್ ಚರ್ಚೆ

ಮುಂಬಯಿ: ಭಾರತೀಯ ಜನತಾ ಪಕ್ಷದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ 2024ರ ಚುನಾವಣೆಯ ಪೂರ್ವಸಿದ್ಧತೆಗಾಗಿ ಎರಡು ವಾರಗಳ ಅವಧಿಯಲ್ಲಿ ಚುನಾವಣಾ ನೀತಿ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಎನ್ ಸಿಪಿ ಮುಖಂಡ ಎರಡನೇ ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂಬಯಿಯ ಶರದ್ ಪವಾರ್ ನಿವಾಸದಲ್ಲಿ ಜೂನ್ 11ರಂದು ಕಿಶೋರ್ ಜತೆ ಚರ್ಚೆ ನಡೆಸಿದ ನಂತರ ಇದೀಗ ದೆಹಲಿಯಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ …

Read More »

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ: ಸಚಿವ ಗೋಪಾಲಯ್ಯ

ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ.10 ರಷ್ಟು ಹೆಚ್ಚು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಲಾಕ್ ಡೌನ್ ಆದ ಮೇಲೆ ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಅಬಕಾರಿ ಇಲಾಖೆಗೆ …

Read More »

ಲೋಂಡಾ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕೆಲಕಾಲ ಜಲಾವೃತ

ಖಾನಾಪುರ: ಶನಿವಾರ ಇಡೀ ದಿನ ಸತತ ವರ್ಷಧಾರೆಯ ಪರಿಣಾಮ ತಾಲ್ಲೂಕಿನ ಲೋಂಡಾ ಗ್ರಾಮದ ಬಳಿ ಹರಿಯುವ ಪಾಂಡರಿ ನದಿಯಲ್ಲಿ ಪ್ರವಾಹವೇರ್ಪಟ್ಟಿದ್ದರಿಂದ ಲೋಂಡಾ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕೆಲಕಾಲ ಜಲಾವೃತಗೊಂಡ ಘಟನೆ ಸಂಭವಿಸಿದೆ. ಶನಿವಾರ ಮಧ್ಯಾಹ್ನದ ಬಳಿಕ ಲೋಂಡಾ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಂಡರಿ ನದಿಯ ನೀರು ಹರಿದುಬಂದಿದ್ದರಿಂದ ಕೆಳ ಸೇತುವೆ, ಪ್ರವೇಶದ್ವಾರ, ರೈಲ್ವೆ ಹಳಿಗಳು, ಮೊದಲ ಪ್ಲಾಟ್ ಫಾರ್ಮ್ ಸೇರಿದಂತೆ ರೈಲು ನಿಲ್ದಾಣ ಮತ್ತು ಅಕ್ಕಪಕ್ಕದ …

Read More »

ಕೊರೊನಾ ಗಂಡಾಂತರ ಕಾಲದಲ್ಲಿ ನಮ್ಮ ದೇಶದ ಯೋಗ ಭರವಸೆಯ ಆಶಾ ಕಿರಣವಾಗಿದೆ : ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ಗಂಡಾಂತರ ಕಾಲದಲ್ಲಿ ನಮ್ಮ ದೇಶದ ಯೋಗ ಭರವಸೆಯ ಆಶಾ ಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾತನಾಡಿದ ಅವರು, ಭಾರತದಲ್ಲಿ ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೂ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ, ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂದರು. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು …

Read More »