ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದಲ್ಲಿ ಮಾಜಿ ಕೇಂದ್ರ ಸಚಿವ ದಿ.ಎಂ. ರಾಜಶೇಖರ ಮೂರ್ತಿರವರ ಸಮಾಧಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ದಿಲ್ಲಿಯಲ್ಲಿರುವ ಬಿಜೆಪಿ ಹೈಕಮಾಂಡ್ ವೀಕ್ಷಿಸುತ್ತಿದೆ. ರಾಜ್ಯದಲ್ಲಿ ಎಷ್ಟು ಬೇಗ ಮುಖ್ಯಮಂತ್ರಿ ಬದಲಾಗುತ್ತಾರೋ …
Read More »Yearly Archives: 2021
ಶಾಸಕ ಬಸವರಾಜು ಪಾಟೀಲ್ ಯತ್ನಾಳ್ ವಿರುದ್ಧ ಘೋಷಣೆ
ಚಾಮರಾಜನಗರ: ಮಂಗಳವಾರ ನಗರಕ್ಕೆ ಆಗಮಿಸಿದ್ದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ವಿರುದ್ಧಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಶಾಖೆಯ ಕಾರ್ಯಕರ್ತರು ಹಾಗೂ ಬಿಎಸ್‌ವೈ ಅಭಿಮಾನಿಗಳು ಘೋಷಣೆ ಕೂಗಿ, ಘೇರಾವ್ ಹಾಕುವ ಯತ್ನ ಮಾಡಿದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ದೇವರ ದರ್ಶನ ಮಾಡಿ, ದೇವಾಲಯದಿಂದ ಹೊರಬಂದು ಕಾರು ಹತ್ತುವಾಗ, 50ಕ್ಕೂ ಹೆಚ್ಚು …
Read More »ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ
ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ (98) ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಆರೋಗ್ಯ ಕಳೆದ 5 ದಿನಗಳಿಂದ ಬಿಗುಡಾಯಿಸಿತ್ತು. ಜೂನ್ 30ರಂದು ಮುಂಬೈ ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಮುಂಜಾನೆ (ಜುಲೈ 7) 7:30 ರ ಸಮಯದಲ್ಲಿ ದಿಲೀಪ್ ಕುಮಾರ್ ವಿಧಿವಾಶರಾಗಿದ್ದಾರೆ ಎಂದು ಹಿಂದೂಜಾ ಆಸ್ಪತ್ರೆಯ ವೈದ್ಯ ಡಾ. ಜಲೀಲ್ ಪಾರ್ಕರ್ …
Read More »ಯೆಸ್ ಬ್ಯಾಂಕ್‌ಗೆ ಬರೋಬ್ಬರಿ 712 ಕೋಟಿ ರೂ ವಂಚನೆ; 11 ಮಂದಿ ವಿರುದ್ಧ ಎಫ್‌ಐಆರ್
ಬೆಂಗಳೂರು, ಜುಲೈ 06: ಯೆಸ್ ಬ್ಯಾಂಕ್‌ಗೆ 712 ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣದಲ್ಲಿ ಹನ್ನೊಂದು ಮಂದಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯೆಸ್ ಬ್ಯಾಂಕ್‌ನಿಂದ ಬರೋಬ್ಬರಿ 712 ಕೋಟಿ ರೂಪಾಯಿ ಸಾಲ ಪಡೆದ ಆರೋಪಿಗಳು ಸಾಲ ಹಿಂತಿರುಗಿಸಿರಲಿಲ್ಲ. ಕಳೆದೆರೆಡು ವರ್ಷದಿಂದ ಇಎಂಐ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಯಸ್ ಬ್ಯಾಂಕ್ ಮ್ಯಾನೇಜರ್ ಆಶೀಶ್ ವಿನೋದ್ ಜೋಶಿ ಮಂಗಳವಾರ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ …
Read More »Cyber Crime ಕೇಂದ್ರ ಸರ್ಕಾರಿ ಯೋಜನೆ ಹೆಸರಲ್ಲಿ ಹಾಕಿದ್ರು ನಾಮ.. ಹುಬ್ಬಳ್ಳಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ದೋಖಾ
ನಾವು ಬ್ಯಾಂಕ್‌ನಿಂದ ಕರೆ ಮಾಡ್ತಿದ್ದೇವೆ.. ನಿಮಗೆ ಓಟಿಪಿ ಬಂದಿದ್ಯಾ.. ಓಟಿಪಿ ಬಂದಿದ್ರೆ ಹೇಳಿ.. ನಿಮಗೆ ಸ್ಪೆಷಲ್ ಆಫರ್ ಇದೆ.. ಬೇಕಾದ್ರೆ ತಗೊಳ್ಳಿ.. ಹಾಗೆ ಹೀಗೆ ಅಂತಾ ಪೂಸಿ ಹೊಡೆದು ನಿಮ್ಮ ಅಕೌಂಟ್ಗೆ ಕನ್ನ ಹಾಕ್ತಿದ್ದ ಸೈಬರ್ ಖದೀಮರು ಈಗ ಹೊಸ ಹಾದಿ ಹಿಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಸೈಬರ್ ವಂಚಕರು ಫುಲ್ ಆಯಕ್ಟಿವ್ ಆಗಿದ್ದು ಕೇಂದ್ರ ಸರ್ಕಾರ ಪುನರ್ಬಳಕೆ ಇಂಧನ ಸಚಿವಾಲಯದ ಹೆಸರಲ್ಲಿ ಧೋಖಾ ಎಸಗಿದ್ದಾರೆ. ಸೋಲಾರ್ ಪ್ಯಾನಲ್ ಚೈನ್ ಲಿಂಕ್ ಅನ್ನೋ …
Read More »ನಗರದೆಲ್ಲೆಡೆ ನಿರ್ಲಕ್ಷ್ಯದ ಓಡಾಟ ಕೋವಿಡ್ ಮರೆತ ಜನ :
ಕೋವಿಡ್ 2ನೇ ಅಲೆಯ ಪಾಸಿಟಿವಿಟಿ ದರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕಲ್ಪತರು ನಾಡು ಸಂಪೂರ್ಣ ಅನ್‌ಲಾಕ್ ಆಗಿರುವುದರಿಂದ ಜಿಲ್ಲಾದ್ಯಂತ ಜನ ಕೊರೊನಾ ಮರೆತು ಸೋಮವಾರ ಎಂದಿನಂತೆ ಸಂಚರಿಸಿದರು. 3ನೇ ಅಲೆಯ ಕೋವಿಡ್ ಸೋಂಕಿನ ಭೀತಿ ನಡುವೆಯೇ ಜಿಲ್ಲೆ 2ನೇ ಅಲೆಯ 3ನೇ ಅನ್ ಲಾಕ್ ಆಗಿದೆ. ಈಗ 3ನೇಅಲೆ ಭೀತಿಯಿದ್ದರೂ ಜಿಲ್ಲೆಯಲ್ಲಿ ಜನ ಕೋವಿಡ್ ಮರೆತು ಮಾಸ್ಕ್ಧರಿಸದೇ ಸಂಚರಿಸಿದರು. ಬಹುತೇಕ ಎಲ್ಲಾ ಅಂಗಡಿಗಳು ತೆರೆದಿದ್ದ ಹಿನ್ನೆಲೆಯಲ್ಲಿ ನಗರಸೇರಿದಂತೆ ಜಿಲ್ಲಾದ್ಯಂತ ಜನ …
Read More »ಹಡಗಿನಾಳ ಗ್ರಾಮದಲ್ಲಿ ಗರಡಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ದೈಹಿಕ ಮತ್ತು ಸದೃಢವಾಗಿ ಉಳಿಯಲು ವ್ಯಾಯಾಮ ಮುಖ್ಯವಾಗಿದ್ದು, ಪ್ರಾಚೀನ ಕಾಲದ ವೈಭವ ಮತ್ತೇ ಮರುಕಳಿಸಲು ಕುಸ್ತಿಯಂತಹ ಆಟಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ರಾಜ ಮಹಾರಾಜರ ಕಾಲದಲ್ಲಿ ಕುಸ್ತಿಗೆ ಭಾರೀ ಮಹತ್ವವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆಗಳಲ್ಲಿ ಮಾತ್ರ …
Read More »ಲಂಚಪಡೆಯುತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ
ಚಿತ್ರದುರ್ಗ: ಲಂಚಪಡೆಯುತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾ.ಪಂ ಪಿಡಿಓ ಶ್ರೀನಿವಾಸ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮನೆಯ ಇ-ಸ್ವತ್ತು ಹಾಗೂ ಜಾಬ್ ಕಾರ್ಡ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮದ ಗುರುಶಾಂತಪ್ಪ ಎಂಬುವರ ಬಳಿ ಪಿಡಿಓ ಶ್ರೀನಿವಾಸ್ ಅವರು, 2ಸಾವಿರ ರೂಪಾಯಿ ಲಂಚ ಕೊಟ್ಟರೆ ಮಾತ್ರ, ತಮ್ಮ ಕೆಲಸ …
Read More »ಬ್ರಾಹ್ಮಣರಿಗೂ ಜಾತಿ ಪ್ರಮಾಣಪತ್ರ ಸಿಕ್ಕಿದ್ದು ನಮ್ಮ ಸರ್ಕಾರದಿಂದ: ಕಂದಾಯ ಸಚಿವ ಆರ್ ಅಶೋಕ್
ಬೆಂಗಳೂರು, ಜು. 05: “ಬ್ರಾಹ್ಮಣ ಸಮುದಾಯದಲ್ಲಿ ಎಲ್ಲಾ ಬ್ರಾಹ್ಮಣರು ಶ್ರೀಮಂತರಾಗಿಲ್ಲ, ಅನೇಕರು ಬಡವರು ಇದ್ದಾರೆ. ನಾವು ಅವರಿಗೆ ಸಹಾಯ ಮಾಡಬೇಕಾಗಿದೆ” ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದ ಬ್ರಾಹ್ಮಣ ಸಮುದಾಯದ ಒಂದು ಸಾವಿರ ಜನರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. “ಜನರು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಮತ್ತು ನನಗೆ ಮತ ಹಾಕಿದ್ದಾರೆ. …
Read More »ಹೆಚ್.ಡಿ.ಕೆ. ಗೂಂಡಾರಾಜ್ ನಂತೆ ವರ್ತಿಸುತ್ತಿದ್ದಾರೆ; ಯಾವ ಬೆದರಿಕೆಗೂ ಬಗ್ಗಲ್ಲ; ಮಾಜಿ ಸಿಎಂ ವಿರುದ್ಧ ಮತ್ತೆ ಕಿಡಿಕಾರಿದ ಸಂಸದೆ
ಬೆಂಗಳೂರು: ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಡಿಯೋ ಇದೆ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಯಾವ ಆಡಿಯೋ ಇದ್ದರೂ ಈಗ್ಲೇ ಬಿಡುಗಡೆ ಮಾಡಲಿ ಚುನಾವಣೆವರೆಗೆ ಕಾಯುವುದೇಕೆ ? ಎಂದು ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಹೆಚ್.ಡಿ.ಕೆ ಅವರ ಯಾವ ಸವಾಲನ್ನಾದರೂ ನಾನು ಎದುರಿಸಲು ಸಿದ್ಧ. ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಇಲ್ಲದ ಆರೋಪ ಮಾಡುತ್ತಿದ್ದಾರೆ. ಓರ್ವ ಮಾಜಿ ಸಿಎಂ …
Read More »