Breaking News

Yearly Archives: 2021

ಸಂಪುಟ ರಚನೆ: ಸಂಭವನೀಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಸಚಿವ ಸಂಪುಟ ರಚನೆ ನಿಟ್ಟಿನಲ್ಲಿ ವರಿಷ್ಠರ ಸಮ್ಮತಿ ಪಡೆದು ವಾಪಸ್ ಆಗಲಿದ್ದಾರೆ. ನೂತನ ಸಚಿವರ ಲಿಸ್ಟ್ ನೊಂದಿಗೆ ಸಂಜೆ 5:40ಕ್ಕೆ ದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದು ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆ. ನಾಳೆಯೇ ಸಂಪುಟ ರಚನೆಗೆ ಮುಹೂರ್ತ ಫೈನಲ್ ಆಗಲಿದ್ದು, ಮಂಗಳವಾರ ಅಥವಾ ಬುಧವಾರ ನೂತನ ಸಚಿವರು ಪ್ರಮಾಣವಚನ …

Read More »

ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ

ನವದೆಹಲಿ, ಜುಲೈ 31: ಮುಂದಿನ ವಾರ ವಿಪಕ್ಷಗಳು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಸಂಸತ್ ಮುಂಗಾರು ಅಧಿವೇಶನವು ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಪೆಗಾಸಸ್‌ನಿಂದಲೇ ಆರಂಭವಾಗಿತ್ತು. ಆಮೇಲೆ ಕೃಷಿ ಕಾಯ್ದೆ ಸೇರಿದಂತೆ ಬೇರೆ ವಿಚಾರಗಳಿಗೆ ತಿರುಗಿತು. ಅಧಿವೇಶನ ಆರಂಭವಾಗಿ ಎರಡು ವಾರಗಳೇ ಕಳೆದರೂ ಇದುವರೆಗೂ ಸರಿಯಾಗಿ ಅಧಿವೇಶನವನ್ನು ನಡೆಸಲು ಸಾಧ್ಯವಾಗಿಲ್ಲ. ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ …

Read More »

ಕುರಿ, ಕೋಳಿ ಮಾಂಸಕ್ಕಿಂತ ಗೋಮಾಂಸ ಹೆಚ್ಚು ಸೇವಿಸಿ ಎಂದ ಬಿಜೆಪಿ ಸಚಿವ!

ಶಿಲ್ಲಾಂಗ್ : ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸುವಂತೆ ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯದ ನೂತನ ಪಶು ಸಂಗೋಪನೆ ಮತ್ತು ಪಶುವೈದ್ಯ ಖಾತೆ ಸಚಿವ ಸಣ್ಬೂರ್‌ ಶುಲ್ಲೈ ಕರೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಗೋಮಾಂಸ ಸೇವಿಸಲು ಉತ್ತೇಜಿಸುವ ಮೂಲಕ, ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರುತ್ತದೆ ಎಂಬ ಜನರಲ್ಲಿರುವ ಆತಂಕವನ್ನು ದೂರ ಮಾಡಲು ಮುಂದಾಗಿದ್ದಾರೆ. ಕಳೆದವಾರವಷ್ಟೇ ಸಚಿವರಾಗಿ …

Read More »

ಶೀಘ್ರವೇ ಈ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆಯಪ್ ಗಳ ಕಾರ್ಯ ಸ್ಥಗಿತ

ನವದೆಹಲಿ : ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗೂಗಲ್ ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದ್ದು, ಶೀಘ್ರವೇ ಸ್ಮಾರ್ಟ್ ಫೋನ್ 2.3.7 ಮತ್ತು ಕಡಿಮೆ ವರ್ಷನ್ ಆಯಂಡ್ರಾಯ್ಡ್ ಮೊಬೈಲ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆಯಪ್ ಗಳ ಕಾರ್ಯ ಸ್ಥಗಿತವಾಗಲಿದೆ.   ಸೆಪ್ಟೆಂಬರ್​ 27ರ ಆರಂಭದಿಂದ ಆಯಂಡ್ರಾಯ್ಡ್​ 2.3.7 ಮತ್ತು ಅದಕ್ಕಿಂತ ಕಡಿಮೆ ವರ್ಸನ್​ ಸ್ಮಾರ್ಟ್​ ಫೋನ್​ಗಳಲ್ಲಿ ಯಾವುದೇ ಗೂಗಲ್​ ಆಯಪ್ಸ್​ ಗಳು ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದ್ದು, ಸೆಪ್ಟೆಂಬರ್ ನಂತರವೂ ಗೂಗಗಲ್ ಆಯಪ್ …

Read More »

ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕಾರ್ಡ್ ಗೆ *ಇ-ಕೆವೈಸಿ* ಮಾಡಲಾಗುವುದು.  

*ದಿನಾಂಕ 01:08:21 ರಿಂದ 10:08:21 ರ ವರೆಗೆ* ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕಾರ್ಡ್ ಗೆ *ಇ-ಕೆವೈಸಿ* ಮಾಡಲಾಗುವುದು.   *ಇ-ಕೆವೈಸಿ ಎಂದರೇನು?* ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ನ ಜೋಡಣೆಯ ಉದ್ದೇಶದಿಂದ ಪಡೆಯುವ ಬೆರಳಚ್ಚು ಆಗಿದೆ.   *ಇ-ಕೆವೈಸಿ ಏಕೆ ಮಾಡಿಕೊಳ್ಳಬೇಕು?* ಒಂದು ವೇಳೆ ಇ-ಕೆವೈಸಿ ಆಗದ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕುವ ಅಥವಾ ಪಡಿತರ ನಿಲ್ಲಿಸುವ ಸಂಭವವಿರುವುದರಿಂದ …

Read More »

ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್​ ಬಗ್ಗೆ ಡಾ. ರಾಜ್​ ಮೊಮ್ಮಗಳ ಮನದ ಮಾತು

ಡಾ. ರಾಜ್​ಕುಮಾರ್​ (Dr Rajkumar) ಮೊಮ್ಮಗಳು ಧನ್ಯಾ ರಾಮ್​ಕುಮಾರ್​ (Dhanya Ramkumar) ನಟನೆಯ ಮೊದಲ ಸಿನಿಮಾ ‘ನಿನ್ನ ಸನಿಹಕೆ’ (Ninna Sanihake) ಆ.20ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ತಾತ ಇರಬೇಕಿತ್ತು ಎಂದು ಅವರು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಡಾ. ರಾಜ್​ ಜೊತೆ ಕಳೆದ ಬಾಲ್ಯದ ದಿನಗಳನ್ನು ಧನ್ಯಾ ರಾಮ್​ಕುಮಾರ್​ ಮೆಲುಕು ಹಾಕಿದ್ದಾರೆ. ‘ತಾತ ನನ್ನನ್ನು ಕ್ಯೂಟ್​ ಆಗಿ ಅಮ್ಮೆ ಎಂದು ಕರೆಯುತ್ತಿದ್ದರು. ನನ್ನನ್ನು ಮಾತ್ರ ಅವರು ಹಾಗೆ ಕರೆಯುತ್ತಿದ್ದರು. …

Read More »

ಕೋಮು ಸೌಹಾರ್ದ: ಅನಾಥೆಯನ್ನು ಮಗಳಂತೆ ಪೋಷಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ

ವಿಜಯಪುರ: ತಂದೆ, ತಾಯಿ, ಅಜ್ಜಿ ಎಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿಯೊಬ್ಬಳನ್ನು (Hindu) ಮಗಳಂತೆಯೇ ಸಾಕಿದ ಮುಸ್ಲಿಂ (Muslim) ವ್ಯಕ್ತಿ ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ (Marriage) ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ. ಕಳೆದ 13 ವರ್ಷಗಳ ಹಿಂದೆ ಬಾಲಕಿಯ ತಂದೆ ತಾಯಿ ಮೃತಪಟ್ಟಿದ್ದರು. ಬಳಿಕ ಆಕೆ ಅಜ್ಜಿಯೊಂದಿಗೆ ವಾಸವಿದ್ದಳು. ಆದರೆ ಕೆಲಕಾಲದ ನಂತರ ಅಜ್ಜಿಯೂ ತೀರಿಕೊಂಡಿದ್ದರಿಂದ ದಿಕ್ಕಿಲ್ಲದೇ ಅನಾಥಳಾಗಿದ್ದಳು. ಈ ಸಂದರ್ಭದಲ್ಲಿ ಪತ್ನಿ …

Read More »

ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ

ಮೈಸೂರು : ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವವರಿಗೆ ಮಾತ್ರ ಅವಕಾಶಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸಂಘಟಿಸುವ ಕುರಿತು ಸಭೆ ನಡೆಸಿದ ಅವರು ಬಿಜೆಪಿ ಪಕ್ಷದ ಆಡಳಿತದ ಕುರಿತು ಕಿಡಿಕಾರಿದ್ದಾರೆ. ಪೋನ್ ದುರ್ಬಳಕೆ ಸ್ಪೈ ಆರೋಪ ವಿಚಾರದಲ್ಲಿ ಮಾತನಾಡಿದ ಅವರು ಚುನಾಯಿತ ಸರ್ಕಾರವನ್ನು ಬೀಳಿಸಲು ಬಳಸಿದೆ ಎಂದು ಆರೋಪಿಸಿದರು, ಸರಕಾರ ಕಳೆದ ಎರಡು …

Read More »

ಉತ್ತರ ಪ್ರದೇಶ ಚುನಾವಣೆ ಹಿನ್ನಲೆ ಮೀಸಲಾತಿ: ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಾಠ!

ಬೆಂಗಳೂರು, ಜು. 31: ಮೀಸಲಾತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ “ಮೀಸಲಾತಿ ಕುರಿತು ನಮಗೆ ಪಾಠ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. “ಈ ಹಿಂದೆ ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರವಿದ್ದಾಗ ಹಿಂದುಳಿದ ವರ್ಗಕ್ಕೆ ಮೀಸಲು ಕೊಡುವ ಬಗ್ಗೆ ಎಐಸಿಸಿ ಅಧ್ಯಕ್ಷೆ …

Read More »

ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ

ಬೆಂಗಳೂರು: ಮೇಕೆದಾಟು ವಿಚಾರವಾಗಿ ಆಗಸ್ಟ್ 5ರಂದು ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಕೆಡಾರ್‍ನ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕ ಸಿಂಗಂ ಅಂತಲೇ ಹೆಸರಾಗಿದ್ದ ಅಣ್ಣಾಮಲೈಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಅವರು ಅವರ ಕೆಲಸ ಮಾಡುತ್ತಾರೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. …

Read More »