Breaking News

Yearly Archives: 2021

ತಂದೆಯಿಂದಲೇ ಕಂದಮ್ಮನ ಕೊಲೆ!

ಚಿಕ್ಕೋಡಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಎರಡೂವರೆ ವರ್ಷದ ಮಗು ಬೋರ್​ವೆಲ್​ನಲ್ಲಿ ಸಿಕ್ಕಿ ಪ್ರಾಣ ಬಿಟ್ಟಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಮಗುವನ್ನು ಹೊಡೆದು ಕೊಲೆ ಮಾಡಿ ಬೋರ್​ವೆಲ್​ಗೆ  ಎಸೆದಿರುವುದಾಗಿ ಬೆಳಕಿಗೆ ಬಂದಿದೆ. ಶರತ್ ಸಿದ್ದಪ್ ಹಸರೆ (2) ಮೃತ ದುರ್ದೈವಿ. ಹೆತ್ತ ತಂದೆಯೇ ಶರತ್ ನನ್ನು ಹೊಡೆದು ಕೊಂದು ಬೋರ್​ವೆಲ್​ಗೆ ಹಾಕಿ ಮಗು ಕಾಣೆಯಾಗಿದೆ, ಬೋರ್​ವೆಲ್​ನಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದನು. ಆದರೆ …

Read More »

ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

ಬೆಂಗಳೂರು: ನಗರದ ಹೊರ ವಲಯದಲ್ಲಿ ರೇವ್ ಪಾರ್ಟಿ ನಡೆದಿರುವುದು ಮತ್ತೆ ಬೆಳಕಿಗೆ ಬಂದಿದ್ದು, ಒಟ್ಟು 20 ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರು ರೆಸಾರ್ಟ್‍ಗೆ ಎಂಟ್ರಿ ಕೊಡುತ್ತಿದ್ದಂತೆ ಯುವಕ, ಯುವತಿಯರು ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಖಾಕಿ ಪಡೆ ಹಿಡಿದಿದೆ. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಗರದ ಹೊರ ವಲಯದ ಆನೇಕಲ್ …

Read More »

100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಗಾಂಡ ಪ್ರಜೆಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಜಿಸಿ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಉಗಾಂಡ ಪ್ರಜೆಗಳು ಶನಿವಾರ ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಹಿಳೆಯರು ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ. ರಾತ್ರಿ ಕಾಲೇಜು ಒಂದರ ಕಾರ್ಯಕ್ರಮದ ನಿಮಿತ್ತ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕ್ಯಾಬ್ …

Read More »

ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ಬುದ್ಧಿವಂತ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಇಂದು 53ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾರವರು ಉಪೇಂದ್ರ ಜೊತೆಗೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ತಮ್ಮ ವಿಭಿನ್ನ ಅಭಿನಯ ಮತ್ತು ನಿರ್ದೇಶನ ಮೂಲಕವೇ ಸ್ಯಾಂಡಲ್‍ವುಡ್‍ನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಎಂದರೆ ಉಪೇಂದ್ರ. ಸಿನಿಮಾಗಳಷ್ಟೇ ಅಲ್ಲದೇ ರಾಜಕೀಯಕ್ಕೂ ಇಳಿದಿರುವ ಉಪೇಂದ್ರರವರು ಸದಾ ವಿಭಿನ್ನವಾಗಿ ಯೋಚಿಸುತ್ತಾರೆ. ಶುಕ್ರವಾರವಷ್ಟೇ ತಮ್ಮ ಮುಂದಿನ …

Read More »

ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ

ಮಡಿಕೇರಿ: ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪೆಟ್ರೋಲ್, ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪ್ರತಿ ಲೀಟರ್ ಗೆ 20 ರೂಪಾಯಿ ಕಡಿಮೆ ಆಗುತ್ತೆ. ಆದರೆ ಇದರಿಂದ ರಾಜ್ಯಗಳ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಹೀಗಾಗಿ ಜಿಎಸ್‍ಟಿ ವ್ಯಾಪ್ತಿಗೆ ತರುವುದನ್ನು ರಾಜ್ಯಗಳು ವಿರೋಧಿಸುತ್ತಿವೆ. ಆದರೆ …

Read More »

ದೇವಸ್ಥಾನ ಕೆಡವಿ ಹಿಂದೂ ಧರ್ಮಕ್ಕೆ ದ್ರೋಹ: ದಿಂಗಾಲೇಶ್ವರ ಶ್ರೀ

ಧಾರವಾಡ: ಅಧ್ಯಯನ ಮಾಡದೇ ದೇವಸ್ಥಾನ ಕೆಡವಿದ್ದು ಹಿಂದೂ ಧರ್ಮಕ್ಕೆ ಮಾಡಿದ ದ್ರೋಹ ಎಂದು ದಿಂಗಾಲೇಶ್ವರ ಶ್ರೀಗಳು ಸರ್ಕಾರದ ವಿರುದ್ಧ ಕಿಡಿಕಾರಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅಧಿಕಾರಿಗಳು ಮೈಸೂರಿನಲ್ಲಿ ದೇವಸ್ಥಾನ ಕೆಡವಿ ವಿವಾದಕ್ಕೆ ಸೃಷ್ಟಿ ಮಾಡಿದ್ದಾರೆ. ಇದರಿಂದ ಸರ್ಕಾರದಲ್ಲಿ ಎಷ್ಟು ಬುದ್ಧಿಗೇಡಿ ಅಧಿಕಾರಿಗಳು ಕೆಲಸ ಮಾಡುತಿದ್ದಾರೆ ಎಂದು ತಿಳಿಯುತ್ತಿದೆ. ಯಾವುದೇ ಅಧ್ಯಯನ ನಡೆಸದೇ ದೇವಸ್ಥಾನ ಕೆಡವಿ ಹಿಂದೂ ಧರ್ಮಕ್ಕೆ ದ್ರೋಹ ಮಾಡಿದ್ದಾರೆ ಎಂದು ಬಾಲೇಹೊಸೂರ ಮಠದ ದಿಂಗಾಲೇಶ್ವರ ಶ್ರೀಗಳು …

Read More »

ಮೂಡಲಗಿಗೆ ನವೆಂಬರ್ ಅಂತ್ಯದೊಳಗೆ ಉಪ ನೋಂದಣಿ ಕಛೇರಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಗೆ ನವೆಂಬರ್ ಅಂತ್ಯದೊಳಗೆ ಉಪ ನೋಂದಣಿ ಕಛೇರಿ : ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಭರವಸೆ ನೀಡಿದ ಸಿಎಂ ಬೊಮ್ಮಾಯಿ ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿರುವ ಉಪ ನೋಂದಣಿ ಕಛೇರಿಯನ್ನು ನವೆಂಬರ್ ಅಂತ್ಯದೊಳಗೆ ಪ್ರಾರಂಭಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಮೂಡಲಗಿ …

Read More »

ಯುವ ವಕೀಲರಿಗೆ ಮೋಹನ್ ಶಾಂತನಗೌಡರ್ ಸ್ಫೂರ್ತಿ : ಸಿಎಂ ಬೊಮ್ಮಾಯಿ

ಬೆಂಗಳೂರು,ಸೆ.18- ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮೋಹನ್ ಶಾಂತನಗೌಡರ್ ಸಾಧನೆ ಯಾವಾಗಲೂ ಶಾಶ್ವತವಾಗಿದ್ದು, ಯುವ ವಕೀಲರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ಶ್ರೀ ಮೋಹನ್ ಶಾಂತನಗೌಡರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಳಹಂತದಿಂದ ಬಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೇರಿದರೂ ಮೋಹನ್ ಶಾಂತನಗೌಡರ್ ಎಂದಿಗೂ ಹಮ್ಮುಬಿಮ್ಮು ತೋರಿದವರಲ್ಲ. ಯಾವಾಗಲೂ ಸಾಮಾನ್ಯರಂತೆ …

Read More »

ಮಹಿಳಾ ಕಾನ್ ಸ್ಟೇಬಲ್ ಗೆ ಸಿನಿಮಾ, ಮಾಡೆಲಿಂಗ್ ನಲ್ಲಿ ಬಂಪರ್ ಅವಕಾಶ!

ಉತ್ತರ ಪ್ರದೇಶ ಆಗ್ರಾದ ಮಹಿಳಾ ಕಾನ್‌ಸ್ಟೇಬಲ್ ಪ್ರಿಯಾಂಕಾ ಶರ್ಮಾ ಬಂದೂಕು ಹಿಡಿದು ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಬಹಳ ವೈರಲ್ ಆಗಿತ್ತು. ಕೊನೆಗೆ ಆ ಕಾನ್‌ಸ್ಟೇಬಲ್ ಅನ್ನು ಕೆಲಸದಿಂದ ಅಮಾನತು ಮಾಡಲಾಯ್ತು. ಸರ್ವೀಸ್‌ ಪಿಸ್ತೂಲು ಹಿಡಿದುಕೊಂಡು, ‘ಉತ್ತರ ಪ್ರದೇಶದಲ್ಲಿ ಐದು ವರ್ಷದ ಹುಡುಗರು ಸಹ ಪಿಸ್ತೂಲು ಚಲಾಯಿಸುತ್ತಾರೆ” ಎಂದು ಸ್ಟೈಲ್‌ ಆಗಿ ವಿಡಿಯೋ ಒಂದನ್ನು ಮಾಡಿದ್ದರು. ಇದು ಉತ್ತರ ಪ್ರದೇಶ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಪ್ರಿಯಾಂಕಾ …

Read More »

ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’: ರಸ್ತೆಯಾಗುವವರೆಗೂ ಮದುವೆಯಾಗಲ್ಲ ಎಂದ ಯುವತಿಗೆ ಡಿಸಿ ಭರವಸೆ

ದಾವಣಗೆರೆ: ‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’. ತಮ್ಮ ಊರಿಗೆ ರಸ್ತೆ ಮಾಡಿಕೊಡುವವರೆಗೂ ತಾನು ಮದುವೆಯಾಗಲ್ಲ ಎಂದು ಪಟ್ಟುಹಿಡಿದು, ರಸ್ತೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದ ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿಯ ಹೆದ್ನೆ ರಾಂಪುರದ ಯುವತಿ ಆರ್.ಡಿ. ಬಿಂದು ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ನೀಡಿದ ಭರವಸೆಯ ಮಾತುಗಳಿವು. ಊರಿಗೆ ರಸ್ತೆ, ವಾಹನ ಸೌಕರ್ಯವಿಲ್ಲದೆ ಮದುವೆಗಳೂ ಆಗದ ಸ್ಥಿತಿ ಇದ್ದು, ಪ್ರತಿಯೊಬ್ಬರೂ ಸವಾಲುಗಳ ಮಧ್ಯಯೇ ಬದುಕುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಇಲ್ಲವೆಂಬ …

Read More »