ವಿಜಯಪುರ (ಜ. 13): ಬ್ಲ್ಯಾಕ್ಮೇಲ್ ಮಾಡುವ ಮೂವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಕೂಡ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಸಿಎಂ ವಿರುದ್ಧ ಹರಿಹಾಯ್ದ ಅವರು, ಕೆಲವರು ಸಿಡಿ ತೋರಿಸಿ ಹೆದರಿಸಿ, ಸಚಿವ ಸ್ಥಾನ ಪಡೆದಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಸವಾಲ್ ಹಾಕಿದರು. ಪ್ರಧಾನಿ ನರೇಂದ್ರ …
Read More »Yearly Archives: 2021
ನೈತಿಕತೆ ಇದ್ದರೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲ
ವಿಜಯಪುರ (ಜನವರಿ. 13); ಸಿಎಂ ವೀರಶೈವ ಲಿಂಗಾಯಿತರ ಹೆಸರಿನಲ್ಲಿ ಕೇಂದ್ರ ನಾಯಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಮನಸ್ಲಿಲ್ಲದಿದ್ದರೂ ಸಚಿವ ಸಂಪುಟಕ್ಕೆ ಮೂರು ಜನರನ್ನು ಸೇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್ನೆ ಬ್ಲ್ಯಾಕ್ಮೇಲ್ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ …
Read More »ಯಡಿಯೂರಪ್ಪ ಕ್ಯಾಬಿನೆಟ್ ಸೇರಿದ ಸಪ್ತ ಸಚಿವರು
ಬೆಂಗಳೂರು (ಜ. 13): ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕಾರ್ಯಕ್ಕೆ ಕಡೆಗೂ ಅಂತ್ಯ ಸಿಕ್ಕಿದ್ದು, ರಾಜಭವನದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಏಳು ಜನ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ 3:50ಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯ ಆರಂಭವಾಗಿದ್ದು, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಸಂಪುಟ ದರ್ಜೆ ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ ಬೆಳಗಾವಿಯ ಹುಕ್ಕೇರಿ ಶಾಸಕ …
Read More »ಫೇಸ್‍ಬುಕ್, ಟ್ವಿಟರ್ ನಂತರ ಯೂಟೂಬ್ ಸರದಿ, ಟ್ರಂಪ್ ವಿಡಿಯೋಗಳಿಗೆ ತಡೆ
ವಾಷಿಂಗ್ಟನ್,ಜ.13- ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಂದರ್ಭ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಿಂದಲೂ ಡೊಲಾನ್ಡ್ ಟ್ರಂಪ್ ಅವರನ್ನು ಹೊರ ಹಾಕುವ ಪ್ರಕ್ರಿಯೆಗಳು ಬಿರುಸಿನಿಂದ ನಡೆಯುತ್ತಿವೆ. ವಾಷಿಂಗ್ಟನ್‍ನ ಕ್ಯಾಪಿಟಲ್ ಹೀಲ್ಸ್‍ನ ಹೊರಗೆ ನಡೆದ ಹಿಂಸಾಚಾರದ ಬಳಿಕ ಫೇಸ್‍ಬುಕ್ ಮತ್ತು ಟ್ವಿಟರ್ ಟ್ರಂಪ್ ಅವರ ಖಾತೆಯನ್ನು ಅಮಾನತುಗೊಳಿಸಿದ್ದವು. ಪರ್ಯಾಯವಾಗಿ ಟ್ರಂಪ್ ಟೀಮ್ ಹಾಗೂ ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆಯಲು ಪ್ರಯತ್ನ ಮಾಡಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ. ಪೇಸ್‍ಬುಕ್ ಕಳೆದ 6ದಿನಗಳಿಂದಲೂ ಟ್ರಂಪ್ ಅವರ …
Read More »ಸ್ಥಾನ ಪಡೆಯಲು ಅನ್ಯ ಮಾರ್ಗ ಅನುಸರಿಸದೆ ಪಕ್ಷಕ್ಕೆ ನಿಷ್ಠೆ ಮತ್ತು ವಿಚಾರಕ್ಕೆ ಬದ್ಧತೆ ಇರುವ ಕಾರ್ಯಕರ್ತರಿಗೆ ಇಂದಿನ ದಿನಮಾನಗಳಲ್ಲಿ ಸ್ಥಾನವಿಲ್ಲ: ಅಭಯ ಪಾಟೀಲ
ಬೆಳಗಾವಿ – ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರಕಾರದ ನಡೆಯ ಬಗ್ಗೆ ಬೆಳಗಾವಿ ಶಾಸಕ ಅಭಯ ಪಾಟೀಲ ತೀವ್ರ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಇವೆಲ್ಲ ತಾತ್ಕಾಲಿಕ ಎನ್ನುವ ಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಚಾರಕ್ಕೆ ಬದ್ಧತೆ ಮತ್ತು ಪಕ್ಷಕ್ಕೆ ನಿಷ್ಠೆ ಇದು ದೌರ್ಭಲ್ಯವಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನೂ ಬಿಜೆಪಿಗೆ ಮತ್ತು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ತೀವ್ರ ನೋವು ತೋಡಿಕೊಂಡ ಶಾಸಕ ಅಭಯ ಪಾಟೀಲ …
Read More »ಬ್ರಾ ವಿಚಾರಕ್ಕೆ ಜಗಳವಾಡಿದ ಪತ್ನಿಯಿಂದ ಡಿವೋರ್ಸ್ಗೆ ಡಿಮ್ಯಾಂಡ್..!
ಸಣ್ಣ ಸಣ್ಣ ವಿಚಾರಕ್ಕೆ ಡಿವೋರ್ಸ್ ತೆಗೆದುಕೊಂಡ ಅದೆಷ್ಟೂ ದಂಪತಿಯ ಕತೆಯನ್ನ ನಾವು ಕೇಳಿದ್ದೇವೆ. ಚೀನಾದಲ್ಲೂ ದಂಪತಿ ನಡುವೆ ಬ್ರಾ ವಿಚಾರಕ್ಕಾಗಿ ಶುರುವಾದ ಜಗಳ ಡಿವೋರ್ಸ್ವರೆಗೆ ಹೋಗಿ ತಲುಪಿದೆ. ತನ್ನ ಪತಿ ಚಿಕ್ಕ ಸೈಜ್ ಬ್ರಾ ತಂದಿದ್ದಕ್ಕೆ ಕೋಪಗೊಂಡ ಪತ್ನಿ ರಾದ್ದಾಂತ ಎಬ್ಬಿಸಿದ್ದು ಮಾತ್ರವಲ್ಲದೇ ವಿಚ್ಚೇದನ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಚೀನಾದ ಗುಂಜಾವೋ ಪ್ರಾಂತ್ಯದ ನಿವಾಸಿಗಳಾದ ಲುವೋ ಹಾಗೂ ಯಾಂಗ್ …
Read More »ಮೈಸೂರು: ಜ. 14ರಂದು ‘ಸೀತಾ ಸ್ವಯಂವರ’ ನಾಟಕ ಪ್ರದರ್ಶನ
ಮೈಸೂರು: ಸುಬ್ಬಯ್ಯನಾಯ್ಡು ಅಭಿನಯ ರಂಗ ತರಬೇತಿ ಶಿಬಿರದ ಕಲಾವಿದರು ನಟಿಸಿರುವ ‘ಸೀತಾ ಸ್ವಯಂವರ’ ನಾಟಕ ಪ್ರದರ್ಶನವು ಜ. 14ರಂದು ಸಂಜೆ 6.30ಕ್ಕೆ ರಂಗಾಯಣದ ‘ವನರಂಗ’ದಲ್ಲಿ ನಡೆಯಲಿದೆ. ಇದು ಕೊರೊನಾ ಲಾಕ್‌ಡೌನ್ ನಂತರ ರಂಗಾಯಣದ ಮೊದಲ ಹೊಸ ನಾಟಕ ಎನಿಸಿದೆ. ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್‌ನ ಅಧ್ಯಕ್ಷ ಎನ್.ವಿ.ಫಣೀಶ್ ನಾಟಕದ ಕರಪತ್ರ ಬಿಡುಗಡೆ ಮಾಡಲಿದ್ದಾರೆ. ಎಂ.ಎಲ್.ಶ್ರೀಕಂಠೇಗೌಡ ಅವರ ಈ ನಾಟಕದ ರಂಗ ವಿನ್ಯಾಸವನ್ನು ಎಚ್.ಕೆ.ದ್ವಾರಕನಾಥ್ ನಿರ್ವಹಿಸಿದ್ದು, ಜೀವನ್‌ಕುಮಾರ್ ಬಿ ಹೆಗ್ಗೂಡು …
Read More »ನಾನು ಮಾಡಿದ ತಪ್ಪೇನು: ಸಿಎಂಗೆ ಎಚ್. ನಾಗೇಶ್ ಪ್ರಶ್ನೆ? ರಾಜಿನಾಮೆ ನೀಡಲು ಒಪ್ಪಿಗೆ
ಬೆಂಗಳೂರು: ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ. ವಿಧಾನ ಸೌಧದಲ್ಲಿ ಮಾತನಾಡಿದ ಅವರು, ರಾಜಿನಾಮೆಗೆ ಕಾರಣ ಹೇಳಿಲ್ಲ, ಆದರೆ ಸಚಿವ ಸ್ಥಾನಕ್ಕೆ ಸಮಾನಾಂತರವಾದ ಹುದ್ದೆ ನೀಡುತ್ತಾರಂತೆ, ಸಿಎಂ ಮಾತಿಗೆ ಬೆಲೆಕೊಟ್ಟು ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಜಿನಾಮೆ ಕೊಡುವಂತ ತಪ್ಪು ನಾನೇನು ಮಾಡಿಲ್ಲ, ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ, ಹೀಗಿದ್ದರೂ ಜನರಲ್ ಆಗಿ ರಾಜಿನಾಮೆ ಕೊಡಲು …
Read More »ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು : ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು, ಇದೇ ವೇಳೆ ಅವರು ಮಾತನಾಡಿ, ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಒಂದು ವೇಳೇ ತಿನ್ನಬೇಕು ಅಂತ ಅನ್ನಿಸಿದರೇ ತಿನ್ನುವೇ, ಆಹಾರ ಪದ್ದತಿ ನನ್ನ ಹಕ್ಕು, ಅದನ್ನು ಯಾರು ಕೂಡ ಪ್ರಶ್ನೆ …
Read More »ನಮ್ಮ ಟೀಂ ನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕು.: ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ: ನಮ್ಮ ಟೀಂ ನ ಇನ್ನೂ ಹಲವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಮಾರ್ಚ್-ಏಪ್ರಿಲ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನರಚನೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ. ಈಗ ಸಚಿವ ಸ್ಥಾನ ಕೈತಪ್ಪಿದವರಿಗೆ ಆಗ ಸ್ಥಾನ ಸಿಗುವ ವಿಶ್ವಾಸವಿದೆ ಎಂದೂ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಇಂದು 7 ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದು, ಮಾರ್ಚ್-ಏಪ್ರಿಲ್ಲ್ ನಲ್ಲಿ ನಡೆಯಲಿರುವ ಸಂಪುಟ ಪುನಾರಚನೆಯಲ್ಲಿ ಇಂದು ಸಚಿವ ಸ್ಥಾನ …
Read More »