Breaking News

Daily Archives: ಡಿಸೆಂಬರ್ 30, 2021

ಅರಭಾವಿ, ಕಲ್ಲೊಳ್ಳಿ, ನಾಗನೂರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ ಭರ್ಜರಿ ಜಯ. ಸಂಸದ ಈರಣ್ಣ ಕಡಾಡಿಯವರಿಗೆ ತೀವ್ರ ಮುಖಭಂಗ

ಮೂಡಲಗಿ : ಕಳೆದ ಸೋಮವಾರದಂದು ಜರುಗಿದ ತಾಲೂಕಿನ ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರೇ ಭರ್ಜರಿ ಜಯ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಕಮಾಲ, : ಮತ್ತೆ ಸಾಹುಕಾರರಿಗೆ ಜೈ ಎಂದ ಪಕ್ಷೇತರ ವಿಜಯ ಶಾಲಿ ಅಭ್ಯರ್ಥಿಗಳು.. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ 16 ಸ್ಥಾನಗಳ …

Read More »

ಬೆಳಗಾವಿಯ ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಫಲಿತಾಂಶ

ಬೆಳಗಾವಿ: 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿಯ 5 ಪುರಸಭೆ ಹಾಗೂ 11 ಪಟ್ಟಣ ಪಂಚಾಯತ್ ಚುನಾವಣೆಗಳ ಫಲಿತಾಂಶ ಈ ಕೆಳಗಿನಂತಿದೆ. 1.ಅಥಣಿ ಪುರಸಭೆ ಒಟ್ಟು ವಾರ್ಡ್‌ಗಳು – 27, ಕಾಂಗ್ರೆಸ್ – 15, ಬಿಜೆಪಿ – 9, ಜೆಡಿಎಸ್ -1, ಪಕ್ಷೇತರ – 3 2. ಹಾರೂಗೇರಿ ಪುರಸಭೆ ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 7, ಬಿಜೆಪಿ – 15, ಜೆಡಿಎಸ್ -00, …

Read More »

ಸಿಎಂ ಬೊಮ್ಮಾಯಿಗೆ ಮುಖಭಂಗ; ಹುಬ್ಬಳ್ಳಿಯಲ್ಲಿ 14 ಸ್ಥಾನ ಪಕ್ಷೇತರರ ಪಾಲು!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತವರಿನಲ್ಲೇ ಬಿಜೆಪಿ ಒಂದೂ ಸ್ಥಾನ ಗೆಲ್ಲದೇ ಆಘಾತಕ್ಕೆ ಒಳಗಾಗಿದ್ದರೆ, ಎಲ್ಲಾ 14 ಸ್ಥಾನಗಳಲ್ಲೂ ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ಎಂಕೆ ಹುಬ್ಬಳ್ಳಿಯ ಎಲ್ಲಾ 14 ಸ್ಥಾನಗಳೂ ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಬಾರಿಸಿ ರಾಜಕೀಯ ಪಕ್ಷಗಳನ್ನು ಮತದಾರ ಸಂಪೂರ್ಣವಾಗಿ ತಿರಸ್ಕರಿಸಿದ್ದಾನೆ. ಈ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಉಳಿದಂತೆ ಹಾವೇರಿಯ ಬಂಕಾಪುರ ಮತ್ತು ಗುತ್ತಲ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ …

Read More »

ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣೆ: ಕೈ ಮೇಲು, ಮುದುಡಿದ ಕಮಲ, ಜೆಡಿಎಸ್ ಪಾತಾಳ!

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಆಡಳಿತ ಪಕ್ಷ ಬಿಜೆಪಿಗೆ ಹಿನ್ನಡೆ ಉಂಟಾದರೆ, ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಜೆಡಿಎಸ್ ಪಾತಳಕ್ಕೆ ಕುಸಿದಿದೆ. ಗುರುವಾರ ನಡೆದ ಫಲಿತಾಂಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿಸಿಕೊಂಡರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಶಿಧರ ಜೊಲ್ಲೆ ಮತ್ತು ಶ್ರೀರಾಮುಲು ಮುಂತಾದ ಬಿಜೆಪಿ ನಾಯಕರಿಗೆ ತವರಿನಲ್ಲಿ ಸೋಲುಂಟಾಗಿದೆ.   ಪಟ್ಟಣ ಪಂಚಾಯಿತಿಯ 577 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 236 ಸ್ಥಾನಗಳಲ್ಲಿ …

Read More »

ರಾಜ್ಯ ಸರ್ಕಾರದ ‘ಸಚಿವ ಸಂಪುಟ ಬದಲಾವಣೆ’ ಬಗ್ಗೆ ಸ್ಪೋಟಕ ಬಾಂಬ್ ಸಿಡಿಸಿದ ‘ಬಿಜೆಪಿ ಶಾಸಕ’.!

ವಿಜಯಪುರ: ಒಂದೆಡೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ( Karnataka BJP Government ) ಸಿಎಂ ಬದಲಾವಣೆ ಇಲ್ಲ ಅಂತ ವರಿಷ್ಠರೇ ಹೇಳಿದ್ದಾರೆ. ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ( Karnataka Cabinet Expansion ) ಬಗ್ಗೆ ಯಾವುದೇ ಸುಳಿವು ಕೂಡ ಇಲ್ಲ. ಹೀಗೆ ಇರುವಾಗಲೇ ರಾಜ್ಯ ಸರ್ಕಾರದ ಸಚಿವ ಸಂಪುಟ ಬದಲಾವಣೆ ಬಗ್ಗೆ ಸ್ಪೋಟಕ ಬಾಂಬ್ ಅನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( MLA Basanagouda Patil …

Read More »

ಥಿಯೇಟರ್ ಗಳಿಗೆ ನೈಟ್ ಕರ್ಫ್ಯೂ ಬಿಸಿ; ಚಿತ್ರಮಂದಿರಗಳಲ್ಲಿ 4 ಶೋ ಮಾತ್ರ ಪ್ರದರ್ಶನ

ಬೆಂಗಳೂರು: ಹೆಚ್ಚುತ್ತಿರುವ ಒಮಿಕ್ರಾನ್ ಕಟ್ಟಿಹಾಕುವ ನಿಟ್ಟಿನಲ್ಲಿ ಇಂದಿನಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ನೈಟ್ ಕರ್ಫ್ಯೂ ಇಫೆಕ್ಟ್ ಥಿಯೇಟರ್ ಗಳಿಗೂ ತಟ್ಟಿದ್ದು, ಇಂದಿನಿಂದ ಚಿತ್ರಮಂದಿರಗಳಲ್ಲಿ 4 ಶೋ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆಯ ಶೋ ಲಾಸ್ಟ್ ಆಗಲಿದೆ. ನೈಟ್ ಕರ್ಫ್ಯೂ ಜಾರಿ ಇಂದಾಗಿ ನೈಟ್ ಶೋ ಸ್ಥಗಿತಗೊಂಡಿರುವುದರಿಂದ ಶೇ.30ರಷ್ಟು …

Read More »

ಎಚ್ಚರಿಕೆ ‌ನೀಡಿದ ಅರುಣ್ ಸಿಂಗ್; ಓಡಿದ ರೇಣುಕಾಚಾರ್ಯ

ಹುಬ್ಬಳ್ಳಿ: ಶಾಸಕ ರೇಣುಕಾಚಾರ್ಯ ಇಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಕ್ಷ್ಮವಾಗಿ ಎಚ್ಚರಿಕೆ ‌ನೀಡಿದರು. ಕ್ಯಾ ಚಲ್ ರಹಾ ಹೈ.. ರೇಣುಕಾಚಾರಿ ಎಂದು ಅರುಣ್ ಸಿಂಗ್ ಎನ್ನುತ್ತಿದ್ದಂತೆ ರೇಣುಕಾಚಾರ್ಯ ಮಾತನಾಡುವುದನ್ನು ಬಿಟ್ಟು ಅವರ ಹಿಂದೆ ಓಡಿ‌ಹೋದರು. ಅವರು ಹೋದ ಬಳಿಕ‌ ಮತ್ತೆ ‌ಮಾಧ್ಯಮದವರ ಜೊತೆ ಮಾತನಾಡಿದರು.

Read More »

ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂದ್ರೆ ಈ ತಪ್ಪುಗಳನ್ನು ಮಾಡಬೇಡಿ

ನಾವು ಏನನ್ನಾದರೂ ಮಾಡಲು ಸಾಧ್ಯವಿಲ್ಲ ಅಥವಾ ಅದನ್ನು ಮಾಡದಿರಲು ನಾವು ಸಾಮಾನ್ಯವಾಗಿ ಕಾರಣಗಳನ್ನು ನೀಡುವುದು ಸರಿಯಲ್ಲ.     ಬರೀ ನೆಪಗಳನ್ನು ನೀಡಿ ಕೆಲಸದಿಂದ ತಪ್ಪಿಸಿಕೊಳ್ಳಬೇಡಿ. ಅದೇ ರೀತಿ ಅನೇಕರು ಯಾವುದೋ ಒಂದು ವಿಷಯದಿಂದ ತಪ್ಪಿಸಿಕೊಳ್ಳಬೇಕಾದರೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದು ನಿಮ್ಮನ್ನ ಹಿಂದಕ್ಕೆಳೆಯಲು ಕಾರಣವಾಗುತ್ತದೆ.   ಬಹುತೇಕ ಎಲ್ಲರೂ ಕೆಲವು ವಿಚಾರಗಳ ಕಾರಣ ಬ್ಯೂಸಿಯಾಗಿದ್ದಾರೆ. ಒತ್ತಡ ಸಾಮಾನ್ಯ. ಇದನ್ನ ಹೆಚ್ಚು ಯೋಚಿಸುತ್ತಾ ಕುಳಿತಿರಬಾರದು. ಜೀವನದಲ್ಲಿ ಮುನ್ನಡೆಯುವಲ್ಲಿ …

Read More »

ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಲ್ಲಿ ಗೆಲುವು? ಇಲ್ಲಿದೆ ಮಾಹಿತಿ

ಬೆಂಗಳೂರು : ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆ ಹಾಗೂ 57 ಗ್ರಾಮಪಂಚಾಯಿತಿಗಳ ಚುನಾವಣೆಯ ಫಲಿತಾಂಶ (Karnataka ULB Election Results) ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಶುರುವಾಗಿದೆ. ಕೊಲ್ಹಾರ ಪಟ್ಟಣ ಪಂಚಾಯತಿ ವಾರ್ಡ್ ನಂಬರ್ 10 ರಲ್ಲಿ ಹಾಗೂ ವಾರ್ಡ್ ನಂಬರ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.   ಯಾದಗಿರಿ ಕಕ್ಕೇರಾ ಪುರಸಭೆ ನಾಲ್ಕು ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೊಪ್ಪಳ …

Read More »

ಆರೋಗ್ಯ ವಿಮೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಲಿಸಿದಾರರಿಗೆ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಭರಿಸಲು ವಿಮೆ ಕಂಪನಿಗಳು ಮೆಡಿಕ್ಲೇಮ್ ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಅನಿರೀಕ್ಷಿತವಾಗಿ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಪರಿಹಾರದ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವ ಅಂಶ ಸರಿಯಲ್ಲ. ಆರೋಗ್ಯ ವಿಮೆ ನಿರಾಕರಣೆ ಸಲ್ಲದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರೋಗ್ಯ ಅನಿರೀಕ್ಷಿತವಾಗಿ ಬರಬಹುದು. ಅನಿರೀಕ್ಷಿತ ಆರೋಗ್ಯಕ್ಕೆ ವಿಮೆ ಕ್ಲೇಮ್ ನಿರಾಕರಣೆ ಕುರಿತಂತೆ ಒಪ್ಪಂದದಲ್ಲಿ ಸ್ಪಷ್ಟನೆ ಇಲ್ಲದಿದ್ದರೆ, ಅದನ್ನು ತಿರಸ್ಕರಿಸುವಂತಿಲ್ಲ …

Read More »