ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಫೆಬ್ರವರಿ 24ರಂದು ತೆರೆಗೆ ಅಪ್ಪಳಿಸಲಿದೆ.ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಹಾಗೂ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವು ಅಂದು ಇಡೀ ವಿಶ್ವದಾದ್ಯಂತ ತೆರೆ ಕಾಣಲಿದೆ. ಅಲ್ಲದೇ, ಚಿತ್ರ ತಂಡವು ಟೀಸರ್ ನ್ನು ಕೂಡ ಬಿಡುಗಡೆ ಮಾಡಿದೆ. ಈ ಟೀಸರ್ ನಲ್ಲಿ ಕಿಚ್ಚ ಬೈಕ್ ಮೇಲೆ ಕುಳಿತುಕೊಂಡಿದ್ದಾರೆ. ಫೆ. 24ರಂದು ಈ ಜಗತ್ತಿಗೆ ಹೊಸ ಹೀರೋ …
Read More »Daily Archives: ಡಿಸೆಂಬರ್ 11, 2021
ಉತ್ತರದಲ್ಲಿ ಗಂಗಾ ಆರತಿ, ದಕ್ಷಿಣದಲ್ಲಿ ತುಂಗಾ ಆರತಿ ಪ್ರಾರಂಭವಾಗಲಿ – ಬಸವರಾಜ ಬೊಮ್ಮಾಯಿ
ಬೆಂಗಳೂರು: ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಗಂಗಾ ಆರತಿಯಂತೆಯೇ ದಕ್ಷಿಣ ಭಾರತದಲ್ಲಿ ತುಂಗಾ ಆರತಿ ಬೆಳಗಬೇಕಿದೆ. ಹೀಗಾಗಿ ತುಂಗಾ ಆರತಿ ಮಂಟಪಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ 30 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಸಿ.ಎಂ .ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹರಿಹರದ ಪಂಚಮಸಾಲಿ ಗುರುಪೀಠದ ವತಿಯಿಂದ ಜನವರಿಯಲ್ಲಿ ನಡೆಯಲಿರುವ ಹರಜಾತ್ರೆಯ ಧ್ವನಿಸುರುಳಿ, ಟಿ ಶರ್ಟ್ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಂಗಾ ಆರತಿ ಮಂಟಪಗಳ …
Read More »ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿ ರಿಲೀಸ್.! ಅಗ್ರಸ್ಥಾನದಲ್ಲಿ ʼಜೈ ಭೀಮ್ʼ
ಸಿನಿಮಾಗಳು, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುವ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅಧಿಕೃತ ಮೂಲಕ ಐಎಂಡಿಬಿ ಈ ಬಾರಿ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾದ ಟಾಪ್ 10 ಸಿನೆಮಾ ಹಾಗೂ ಟಿವಿ ಶೋಗಳ ಹೆಸರನ್ನು ಬಿಡುಗಡೆ ಮಾಡಿದೆ. ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಗೊಂಡ ಜೈ ಭೀಮ್ ಹಾಗೂ ಶೇರ್ ಷಾ ಸಿನೆಮಾ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. ಜನವರಿ 1ರಿಂದ ನವೆಂಬರ್ 29ರವರೆಗೆ …
Read More »ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು
ಪಕ್ಕದ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪಿಂಪ್ರಿಯ ನಾಲ್ವರು ಹಾಗೂ ಮುಂಬಯಿನ ಮೂವರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ. ಮುಂಬಯಿನ ಮೂವರು ಸೋಂಕಿತರೆಲ್ಲ ಪುರುಷರಾಗಿದ್ದು, 25, 37 ಹಾಗೂ 48 ವರ್ಷದವರಾಗಿದ್ದಾರೆ. ಇವರೆಲ್ಲ ದಕ್ಷಿಣ ಆಫ್ರಿಕಾ, ತಾಂಜೇನಿಯಾ ಹಾಗೂ ಇಂಗ್ಲೆಂಡ್ ನಿಂದ ಬಂದವರಾಗಿದ್ದಾರೆ. ರೋಗಿಗಳಲ್ಲಿ …
Read More »ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸ್ ಸೇವೆಯಿಂದ ಐಪಿಎಸ್ ಪೊಲೀಸ್ ಸೇವೆಗೆ ಬಡ್ತಿಹೊಂದಿದ್ದಾರೆ.
ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸ್ ಸೇವೆಯಿಂದ ಐಪಿಎಸ್ ಪೊಲೀಸ್ ಸೇವೆಗೆ ಬಡ್ತಿಹೊಂದಿದ್ದಾರೆ. ಲೋಕಾಯುಕ್ತ ಅಧಿಕ್ಷಕರಾದ ಯಶೋಧಾ ವಂಟಗೊಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ರವೀಂದ್ರ ಗಡಾದಿ ಅವರಿಗೆ ಐಪಿಎಸ್ ಪೊಲೀಸ್ ಹುದ್ದೆಹೆ ಭಡ್ತಿ ನೀಡಲಾಗಿದೆ. ಇನ್ನು ಬೆಳಗಾವಿ ಜಿಲ್ಲೆಯವರಾದ ಮಲ್ಲಿಕಾರ್ಜುನ ಬಾಲದಂಡಿ, ರವೀಂದ್ರ ಗಡಾದಿ ಅವರು ಬಡ್ತಿ ಪಡೆದಿದ್ದಾರೆ. ಬೆಳಗಾವಿಯ ಇಂಟೆಲಿಜೆನ್ಸ್ ಎಸ್ ಪಿ ಶ್ರೀ ಚನ್ನಬಸವಣ್ಣ ಲಂಗೋಟಿರವರಿಗೂ …
Read More »ಎರಡು ಪರಿಷತ್ ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ 99.97ರಷ್ಟು ಮತದಾನ
ಬೆಳಗಾವಿ ಜಿಲ್ಲೆಯಲ್ಲಿ ಎರಡು ಪರಿಷತ್ ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮತದಾನ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಎರಡು ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಪ್ರತಿಶತ 99.97ರಷ್ಟು ಮತದಾನ ನಡೆದಿದೆ. ಜಿಲ್ಲೆಯ ಸವದತ್ತಿ, ಖಾನಾಪುರ, ಕಿತ್ತೂರ್, ಬೈಲಹೊಂಗಲ, ರಾಯಬಾಗ್, ಹುಕ್ಕೇರಿ, ಮೂಡಲಗಿ, ಗೋಕಾಕ್, ನಿಪ್ಪಾಣಿ, ಚಿಕ್ಕೋಡಿ,ಕಾಗವಾಡ ತಾಲೂಕುಗಳಲ್ಲಿ ಶೇ 100ರಷ್ಟು …
Read More »ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳುವು ಮಾಡಿದ್ದ ವ್ಯಕ್ತಿ ಮತ್ತು ಮೂರ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿ
ಬೆಳಗಾವಿ – ಡಿ.7ರಂದು ಕಳ್ಳತನವಾಗಿದ್ದ ಪಾಂಗೋಳ ಗಲ್ಲಿಯ ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳುವು ಮಾಡಿದ್ದ ವ್ಯಕ್ತಿ ಮತ್ತು ಮೂರ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ : 07/12/2021 ರಂದು ಬೆಳಗಾವಿ ನಗರದ ಮಾರ್ಕೆಟ ಪೊಲೀಸ್ ಠಾಣೆಯ ವ್ಯಾಪ್ತಿಯ ಪಾಂಗೋಳ ಗಲ್ಲಿಯ ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳ್ಳತನವಾಗಿದ್ದು, ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪತ್ತೆ ಹಚ್ಚುವ …
Read More »